Link copied!
Sign in / Sign up
45
Shares

ವೀಕ್ಷಿಸಿ : ನಿಮ್ಮ ಮಗುವಿನ ಕಿವಿಯೊಳಗೆ ಹುಳ ಸೇರಿಕೊಂಡರೆ ಏನು ಮಾಡಬೇಕು?

ಮಕ್ಕಳು ತಮ್ಮ ಹೊಟ್ಟೆ, ಕಿವಿ, ನೋವು ನೋಯುತ್ತಿದೆ ಎಂದು ಗೋಳಿಟ್ಟಾಗ ಕೆಲವೊಮ್ಮೆ ನಾವು ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ಕೆಲವೊಮ್ಮೆ ಮಕ್ಕಳು ನಮ್ಮ ಗಮನ ಅವರ ಕಡೆ ಸೆಳೆಯಲು ಇರುವುದಕ್ಕಿಂತ ಹೆಚ್ಚಿಗೆಯೇ ತೋರಿಸಿಕೊಳ್ಳುತ್ತಾರೆ. ಆದರೆ ಪ್ರತಿ ಸಂದರ್ಭದಲ್ಲೂ ಹಾಗೆ ಇರುವುದಿಲ್ಲ. ಕೆಲವೊಮ್ಮೆ ನಿಮ್ಮ ಮಕ್ಕಳಿಗೆ ನಿಜವಾಗಿಯೂ ಶೀಘ್ರ ಸಹಾಯ ಬೇಕಿರುತ್ತದೆ. ಇಲ್ಲಿಯೂ ಒಂದು ಮಗು ಹಾಗೆ ತನ್ನ ಕಿವಿ ನೋಯುತ್ತಿದೆ ಎಂದು ಅಳುತ್ತಾ ಅಮ್ಮನೆಡೆಗೆ ಓಡಿ ಬಂದಿತು. ಅದೃಷ್ಟವಶಾತ್, ಅಮ್ಮ ತಾತ್ಸಾರ ಮಾಡಲಿಲ್ಲ. ಆದರೆ ಅಲ್ಲಿ ಆಗಿದ್ದೇನು ಗೊತ್ತಾ? ಈ ವಿಡಿಯೋ ನೋಡಿ ಗೊತ್ತಾಗುತ್ತದೆ. 

 
ಮಗುವಿನ ಕಿವಿಯೊಳಗೆ ಹುಳ ಸೇರಿಕೊಂಡರೆ ಏನು ಮಾಡಬೇಕು?

ಕಿವಿಯೊಳಗೆ ಹುಳ ಅಥವಾ ಇರುವೆ ಸೇರಿದರೆ ಅದೊಂದು ಭಯ ಹುಟ್ಟಿಸುವ ಸನ್ನಿವೇಶವಾಗುತ್ತದೆ. ಸಣ್ಣಪುಟ್ಟ ಹುಳಗಳು, ಜಿರಳೆ ಮರಿಗಳು, ಗೊದ್ದಗಳು, ತಿಗಣೆಗಳು ನೀವು ಮಲಗಿರುವಾಗ ಅಥವಾ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಕೊಂಡಾಗ ನಿಮ್ಮ ಕಿವಿಯೊಳಗೆ ಸೇರಿಕೊಳ್ಳಬಹುದು. ತಜ್ಞರ ಪ್ರಕಾರ ಈ ಜೀವಿಗಳು ತಮ್ಮನ್ನು ತಾವು ಬೆಚ್ಚಗೆ ಅಥವಾ ಸುರಕ್ಷಿತವಾಗಿ ಇಟ್ಟುಕೊಳ್ಳಲು ಕಿವಿಯನ್ನು ಸೇರಿಕೊಳ್ಳುತ್ತವೆ. ಕಾರಣ ಏನೇ ಇರಲಿ, ಕಿವಿಯೊಳಗೆ ಹುಳ ಸೇರಿಕೊಂಡಿದೆ ಎಂದರೆ ಅದಕ್ಕಿಂತ ಅಹಿತಕರ ಅನುಭವ ಇನ್ನೊಂದಿಲ್ಲ. ನೀವು ನಿಮ್ಮ ಕಿವಿಗೆ ಹಾನಿಯಾಗುವುದು, ಸೋಂಕಾಗುವುದು ಅಥವಾ ಶ್ರವಣ ಶಕ್ತಿ ಕಳೆದುಕೊಳ್ಳುವುದನ್ನು ತಪ್ಪಿಸಲು ಇದನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಹೊರತೆಗೆಯಬೇಕು.

ಆದರೆ ಕಿವಿಯು ತುಂಬಾನೇ ಸೂಕ್ಷ್ಮವಾದ ಭಾಗವದರಿಂದ ನೀವು ಏನೋ ಮಾಡಲು ಹೋಗಿ ಇನ್ನೊಂದೇನೋ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ನಿಮ್ಮ ಕಿವಿಯೊಳಗಿಂದ ಹುಳವನ್ನು ಹೊರತೆಗೆಯುವ ಭರದಲ್ಲಿ ಏನಾದರು ಚೂಪಾದ ಅಥವಾ ಗಟ್ಟಿಯಾದ ಸಾಧನವನ್ನು ನಿಮ್ಮ ಕಿವಿಯ ಒಳಗಿಳಿಸಿದರೆ, ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಅಂತಹ ಸಮಯದಲ್ಲಿ ನೀವು ದೃತಿಗೆಡದೆ ಏನು ಮಾಡಬೇಕೆಂಬುದು ನಾವು ಇಲ್ಲಿ ತಿಳಿಸಿದ್ದೇವೆ ಮತ್ತು ಅದನ್ನೇ ವಿಡಿಯೋ ಅಲ್ಲೂ ತೋರಿಸಲಾಗಿದೆ, ತಿಳಿದುಕೊಳ್ಳಿ.

ಒಂದು ವೇಳೆ ನಿಮ್ಮ ಕಿವಿಯಲ್ಲಿ ಹುಳು ಸೇರಿಕೊಂಡಿದ್ದರೆ, ನೀವು ನೋವು, ಊತ, ರಕ್ತಸ್ರಾವ ಅಥವಾ ತುರಿಕೆ ಅನುಭವಿಸಬಹುದು. ಈ ಸಮಯದಲ್ಲಿ ನೀವು ಗಾಬರಿ ಆಗಬಾರದು. ನೀವು ಒದ್ದಾಡಿದರೆ ಹುಳುವು ಮತ್ತಷ್ಟು ಒಳಗೆ ಅವಿತು ಕೂರಬಹುದು ಅಥವಾ ಇನ್ನೂ ಕೆಳಗೆ ಹೋಗಬಹುದು.

ನಂತರ, ಮೊದಲಿಗೆ ನಿಮ್ಮ ಕಿವಿಯೆಲುಬನ್ನು ಎಳೆದು ಹಿಡಿಕೊಂಡು ನಿಮ್ಮ ಕಿವಿಯ ಭಾಗದ ಕಡೆ ತಲೆಯನ್ನು ಬಗ್ಗಿಸಿ. ನಿಮ್ಮ ಕಿವಿಯೆಲುಬನ್ನು ಹಿಡಿದು ಜಗ್ಗಿ ಅಲ್ಲಾಡಿಸಿ. ಒಂದು ವೇಳೆ ಹುಳು ಮೇಲ್ಭಾಗದಲ್ಲೇ ಇದ್ದರೆ ಹೊರಬರುತ್ತದೆ. ಇಲ್ಲವೆಂದರೆ ಹುಳುವು ಆಳದಲ್ಲಿ ಕುಳಿತಿದೆ ಎಂದರ್ಥ. ಈ ಸಮಯದಲ್ಲಿ ನೀವು ಒಂದು ಟಾರ್ಚ್ ಅನ್ನು ತೆಗೆದುಕೊಂಡು ನಿಮ್ಮ ಕಿವಿಯ ಒಳಗೆ ಬಿಡಿ. ಆಗ ಹುಳುವು ಆಚೆ ಹಾರಿಕೊಂಡು ಬರಬಹುದು.

ಒಂದು ವೇಳೆ ಆಗಲೂ ಹುಳುವು ಹೊರಬರದೆ ಇದ್ದರೆ, ನಿಮ್ಮ ಮನೆಯಲ್ಲಿರುವ ಬೇಬಿ ಆಯಿಲ್ ಅಥವಾ ಆಲಿವ್ ಆಯಿಲ್ ಅನ್ನು ನಿಮ್ಮ ಕಿವಿಯಲ್ಲಿ ಬಿಟ್ಟುಕೊಳ್ಳಿ. ಅದು ಹುಳುವನ್ನು ಕೊಳ್ಳುತ್ತದೆ. ಇದು ಹುಳುವು ನಿಮ್ಮ ಕಿವಿ ತಮಟೆಗೆ ಮತ್ತಷ್ಟು ಹಾನಿ ಮಾಡುವುದನ್ನು ತಪ್ಪಿಸುತ್ತದೆ.

ಇದಾದ ನಂತರ ಸ್ವಲ್ಪ ಬೆಚ್ಚಗಿನ ನೀರಿಗೆ ಉಪ್ಪನ್ನು ಬೆರೆಸಿ ಅದನ್ನು ನಿಮ್ಮ ಕಿವಿಯೆಲುಬು ಎಳೆದು ಹಿಡಿದಿಟ್ಟುಕೊಂಡು, ಒಂದೆರೆಡು ಹನಿಗಳನ್ನ ಕಿವಿಯೊಳಗೆ ಬಿಟ್ಟುಕೊಳ್ಳಿ.. ಹೀಗೆ ಉಪ್ಪುನೀರು ಬಿಟ್ಟಮೇಲೆ ನಿಮ್ಮ ತಲೆಯನ್ನು ಟೇಬಲ್ ಮೇಲೆ ವರಗಿಸಿ ಇಡಿ. ಆಗ ಹುಳುವು ಹೊರಬರುತ್ತದೆ. ಇದನ್ನ ವಿಡಿಯೋ ಅಲ್ಲೂ ಸವಿವರವಾಗಿ ಹೇಳಲಾಗಿದೆ. ವೀಕ್ಷಿಸಿ.

ಒಂದು ವೇಳೆ ಇವೆಲ್ಲದರ ನಂತರವೂ ಹುಳುವು ಹೊರಬರಲಿಲ್ಲ ಮತ್ತು ನಿಮ್ಮ ಕಿವಿಯ ಸ್ಥಿತಿ ಮತ್ತಷ್ಟು ಕೆಡುತ್ತಾ ಹೋದರೆ, ನೀವು ಬೇರೆ ಇನ್ನ್ಯಾವುದೇ ವಿಧಾನವನ್ನ ಪ್ರಯೋಗಿಸದೆ ವೈದ್ಯರ ಬಳಿ ತೆರಳಿ.
Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon