Link copied!
Sign in / Sign up
0
Shares

ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಣಿಸುವ ಕಿವಿ ನೋವಿಗೆ ತಜ್ಞರ ಸುಲಭ ಸಲಹೆಗಳು

ಚಳಿಗಾಲ, ಹೆಸರು ಹೇಳುವಂತೆ ವಾತಾವರಣ ಕೂಡ ಚಳಿಯಾಗಿ ಇರುತ್ತದೆ, ಅಂದರೆ ತೇವಾಂಶದಿಂದ ಕೂಡಿರುತ್ತದೆ. ಬೆಳಗ್ಗೆ ಏಳಲು ಕಷ್ಟ, ಸಂಜೆ ಚಳಿಗೆ ಬಿಸಿ ಬಿಸಿ ಕುರುಕಲು ತಿಂಡಿ ಬಯಸುವುದು ಸಾಮಾನ್ಯ. ಆದರೆ ತೇವಾಂಶ ಸೂಕ್ಷ್ಮ ಜೀವಿಗಳಿಗೆ ಅನುಕೂಲವಾಗುವುದರಿಂದ ನಮ್ಮ ದೇಹದ ಮೇಲೆ ಅಂದರೆ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಇವುಗಳಿಂದ ಸೋಂಕು ಮತ್ತು ರೋಗ ಹರಡುವ ಸಾಧ್ಯತೆಗಳು ಹೆಚ್ಚಾಗುತ್ತದೆ.

ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಆರೋಗ್ಯ ಸಮಸ್ಯೆಗಳು ನೆಗಡಿ, ಕೆಮ್ಮು, ಜ್ವರ, ಶೀತ, ಮೈಕೈ ನೋವು, ಉರಿಯೂತ ಹಾಗೂ ಕಿವಿ ಸೆಳೆತ. ತೇವಾಂಶದಿಂದ ಬ್ಯಾಕ್ಟೀರಿಯಾಗಳು ಹುಟ್ಟಿಕೊಳ್ಳುತ್ತವೆ. ಇವು ನಿಧಾನವಾಗಿ ವಿವಿಧ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಅದರಲ್ಲಿ ಕಿವಿನೋವು ಎನ್ನುವ ಸಮಸ್ಯೆಯು ತುಂಬಾ ಸಾಮಾನ್ಯ. ಜೊತೆಗೆ ಸಹಿಸಲಾರದಷ್ಟು ನೋವನ್ನು ಇದು ನೀಡುತ್ತದೆ. ಕಿವಿ ನೋವು ಎನ್ನುವ ಸಮಸ್ಯೆಯಿಂದ ಮುಕ್ತಿ ಪಡೆಯಲು ಇಲ್ಲಿ ಸಲಹೆಗಳನ್ನು ನೀಡಲಾಗಿದೆ.

೧.ಕಿವಿಯೊಳಗೆ ಗಾಳಿ ಹೋಗದಂತೆ ನೋಡಿಕೊಳ್ಳಿ

ಈ ಚಳಿಗಾಲದಲ್ಲಿ ತೇವಾಂಶ ಹೆಚ್ಚಿರುವ ಕಾರಣ ಶೀತ ಗಾಳಿ ಕಿವಿಯೊಳಗೆ ಪ್ರವೇಶಿಸಿದರೆ ಕಿವಿಯೊಳಗೆ ಬ್ಯಾಕ್ಟೀರಿಯಾ ಬೆಳವಣಿಗೆಗೆ ಸಹಾಯವಾಗುತ್ತದೆ ಮತ್ತು ಇದು ನೋವಿನ ಜೊತೆ ಕಿರಿಕಿರಿ ಉಂಟುಮಾಡುತ್ತದೆ. ಹಾಗಾಗಿ ಕಿವಿಯನ್ನು ಬಟ್ಟೆಯಿಂದ ಅಥವಾ ಹತ್ತಿಯಿಂದ ಮುಚ್ಚಿ ಬೆಚ್ಚಗಿರಿಸಿಕೊಳ್ಳಿ.

೨.ಆರೋಗ್ಯಕರ ಆಹಾರ ಸೇವನೆ

ಆರೋಗ್ಯಕರ ಆಹಾರ ಸೇವನೆಯು ಬಹಳ ಮುಖ್ಯ, ವಿಶೇಷವಾಗಿ ಚಳಿಗಾಲದಲ್ಲಿ ಸೂಕ್ತ ಆಹಾರ ಸೇವನೆಯ ವಿಧಾನವನ್ನು ನಾವು ಅರಿತಿರಬೇಕು. ಸೂಕ್ತ ಆಹಾರದ ಆಯ್ಕೆಯಿಂದ ಸೋಂಕನ್ನು ತಡೆಗಟ್ಟಬಹುದು. ಪೌಷ್ಟಿಕ ಮತ್ತು ಚಳಿಗಾಲಕ್ಕೆ ಸೂಕ್ತ ಆಹಾರವನ್ನು ಸೇವಿಸುವುದರಿಂದ ದೇಹದಲ್ಲಿ ರಕ್ತಸಂಚಲನೆ ಸರಾಗವಾಗಿ ಆಗುವುವಂತೆ ಮಾಡುತ್ತದೆ ಮತ್ತು ಬ್ಯಾಕ್ಟಿರಿಯ ವಿರುದ್ದ ಹೋರಾಡಲು ಶಕ್ತಿ ನೀಡುತ್ತದೆ.

೩.ನೈರ್ಮಲ್ಯ

ನೀವು ಆರೋಗ್ಯಕರವಾಗಿ ಉಳಿಯಲು ಮತ್ತು ಸೋಂಕಿನಿಂದ ಪಾರಾಗಲು ಬಯಸಿದರೆ ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಆಹಾರ ಅಥವಾ ತಿನಿಸುಗಳನ್ನು ಸೇವಿಸುವ ಮೊದಲು ನಿಮ್ಮ ಕೈಗಳನ್ನು ತೊಳೆಯುವುದರಿಂದ ಶೀತ ಮತ್ತು ಅಲರ್ಜಿಯನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ. ಶೀತ ಮತ್ತು ಅಲರ್ಜಿಯ ಕಾರಣದಿಂದಾಗಿ ದ್ರವಗಳು ಕಿವಿಗೆ ಸಿಕ್ಕಿಬೀಳುತ್ತವೆ ಮತ್ತು ಕಿವಿ ಸೋಂಕುಗಳಿಗೆ ಕಾರಣವಾಗಬಹುದು. ಇದು ಕಿವಿಯ ನೋವಿಗೆ ಕಾರಣವಾಗಬಹುದು ಮತ್ತು ಕೇಳುವಲ್ಲಿ ತೊಂದರೆ ಉಂಟುಮಾಡಬಹುದು.

೪.ಸರಿಯಾದ ನಿದ್ರೆ

ಆರೋಗ್ಯಕರ ಆಹಾರದ ಜೊತೆಗೆ ಉತ್ತಮ ನಿದ್ರೆ ಮಾಡುವುದು ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ದೇಹದ ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಬ್ಯಾಕ್ಟಿರಿಯ ವಿರುದ್ಧ ಹೋರಾಡಲು ನಿದ್ರೆ ಸಹಾಯ ಮಾಡುತ್ತದೆ. ಕಿವಿ ಮತ್ತು ಸೋಂಕುಗಳಿಗೆ ಯಾವುದೇ ರೀತಿಯ ಕಿರಿಕಿರಿಯನ್ನು ತಡೆಗಟ್ಟಲು ಶೀತ, ಕೆಮ್ಮು, ಅಲರ್ಜಿಗಳು ಮತ್ತು ಜ್ವರವನ್ನು ದೂರವಿರಿಸಲು ಇದು ಬಹಳ ಮುಖ್ಯ.

೫.ಧೂಮಪಾನದಿಂದ ದೂರವಿರಿ

ಮಹಿಳೆಯರು ಮತ್ತು ಮಕ್ಕಳು ಧೂಮಪಾನ ಮಾಡುವುದಿಲ್ಲ ಇದನ್ನು ಏಕೆ ನಮಗೆ ಇಲ್ಲಿ ವಿವರಿಸಿದ್ದಾರೆ ಎಂದು ಯೋಚಿಸಬೇಡಿ, ಧೂಮಪಾನ ಮಾಡುವವರ ಪಕ್ಕ ಅದರ ವಾಸನೆ ಸೇವಿಸುವುದು ನಿಮ್ಮ ಮೇಲೆ ಪರಿಣಾಮ ಬೀರುತ್ತದೆ. ಚಳಿಗಾಲದಲ್ಲಿ ಧೂಮಪಾನ ಮಾಡುವುದರಿಂದ ಯುಸ್ಟಾಚಿಯನ್ ಟ್ಯೂಬ್‌ಗೆ ಉರಿಯೂತ ಉಂಟಾಗುವ ಸಾಧ್ಯತೆಗಳಿರುತ್ತವೆ, ಇದು ನಿಮ್ಮ ಕೇಳುವಿಕೆಯ ಮೇಲೆ ಪರಿಣಾಮ ಬೀರಬಹುದು. ಸಮಯಕ್ಕೆ ಸರಿಯಾಗಿ ಕಾಳಜಿ ವಹಿಸದಿದ್ದಲ್ಲಿ ಇದು ಶಾಶ್ವತ ಕಿವುಡುತನಕ್ಕೆ ಕಾರಣವಾಗಬಹುದು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon