Link copied!
Sign in / Sign up
5
Shares

ಈ 5 ಮನೆಮದ್ದುಗಳು ಮತ್ತು ಕಾರಣಗಳು ನಿಮಗೆ ಗೊತ್ತಿದ್ದರೆ ನಿಮ್ಮ ಮಕ್ಕಳು ಇನ್ನೆಂದೂ ಕಿವಿನೋವು ಎನ್ನಲ್ಲ!

ಬಹುತೇಕ ಜನರು ತಮ್ಮ ಕಿವಿಯ ನೋವಿನ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಒಮ್ಮೆ ನೋವು ಜಾಸ್ತಿ ಆಯಿತೆಂದರೆ, ಕಿವಿಯೊಳಗೆ ಯಾವುದೋ ಭೂತ ಕೂತು ನೋವು ನೀಡುತ್ತಿದೆಯೇನೋ ಅನಿಸಲು ಶುರುವಾಗುತ್ತದೆ. ಕಿವಿ ನೋವು ತುಂಬಾ ನೋವುದಾಯಕ ಆಗಿರುತ್ತದೆ. ವಿಶೇಷವೆಂದರೆ ಇದು ವಯಸ್ಕರರಿಗಿಂತ ಮಕ್ಕಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಕಿವಿ ನೋವು ಸ್ಥಿರವಾಗಿ ಇರಬಹುದು ಅಥವಾ ಬಂದು, ಹೋಗುವುದು ಮಾಡಬಹುದು. ಇದು ಉರಿಯುವಂತಹ ನೋವು, ಅಥವಾ ಮೆತ್ತನೆ ಅಥವಾ ತೀಕ್ಷ್ಣವಾಗಿ ಒತ್ತುವಂತಹ ನೋವು ಆಗಿರಬಹುದು. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿಮಗೆ ತಿಳಿಸಲೆಂದೇ ನಾವು ಇಂದು ಈ ಲೇಖನ ಬರೆಯುತ್ತಿದ್ದೇವೆ. ಇದನ್ನು ಓದಿ, ಇದರ ಸಂಪೂರ್ಣ ಲಾಭ ಪಡೆದುಕೊಳ್ಳಿ.

 

ಕಿವಿ ನೋವಿಗೆ ಕಾರಣಗಳು

ಕಿವಿ ನೋವು ಹೇಗೆ ಜನರಿಗೆ ಬೇರೆ ಬೇರೆ ರೀತಿಯಲ್ಲಿ ಪರಿಣಾಮಗಳನ್ನ ಉಂಟುಮಾಡಬಹುದೋ, ಅದೇ ರೀತಿ ಕಿವಿ ನೋವು ಉಂಟಾಗಲು ಬೇರೆ ಬೇರೆ ಕಾರಣಗಳಿವೆ. ಕೆಲವೊಂದು ಕಾರಣಗಳು ನೇರವಾಗಿ ಕಿವಿಯ ಮೇಲೆಯೇ ಪರಿಣಾಮ ಬೀರುವಂತವಾದರೆ, ಇನ್ನೂ ಕೆಲವು ಕಾರಣಗಳು ಕಿವಿಯ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಪರಿಣಾಮ ಬೀರುವಂತವು. ಕಿವಿ ನೋವಿಗೆ ಸಾಮಾನ್ಯವಾಗಿ ಕಾರಣವಾಗುವಂತಹ ಕೆಲವೊಂದು ಅಂಶಗಳು ಇವೆ. ಅವುಗಳ ಪಟ್ಟಿ ಇಲ್ಲಿದೆ ನೋಡಿ :

೧. ನಿಮ್ಮ ಕಿವಿತಮಟೆಯ ಆಳದಲ್ಲಿ ದ್ರವ್ಯ ಉತ್ಪತ್ತಿ ಸೇರಿಕೊಳ್ಳುತ್ತಿರುವುದು. ಇದು ವಯಸ್ಕರಿಗಿಂತ ಮಕ್ಕಳಿಗೆ ಹೆಚ್ಚು ಕಾಟ ನೀಡುವಂತದ್ದು.

೨. ಕಿವಿತಮಟೆಯ ಹೊರಗೆ, ಅಂದರೆ ಕಿವಿಯ ನಾಳದಲ್ಲಿ ಎಲ್ಲಾದರೂ ಸೋಂಕು ಉಂಟಾಗಿದ್ದರೆ.

೩. ಕಿವಿಯ ನಾಳದಲ್ಲಿ ಇರುವ ಯಾವುದಾದರೂ ಕೂದಲಿನ ಕೋಶಕಕ್ಕೆ ಸೋಂಕು ತಗುಲುವುದು.

೪. ಕಿವಿಯೊಳಗೆ ಚೂಪಾದ ವಸ್ತುಗಳನ್ನ ಇಟ್ಟುಕೊಂಡಿದ್ದರಿಂದ ಕಿವಿಯ ನಾಳದೊಳಗೆ ಹಾನಿ ಉಂಟಾಗಿರುವುದು.

೫. ಕಿವಿಯ ನಾಳದಲ್ಲಿರುವ ಯಾವುದೋ ಗುಳ್ಳೆ.

೬. ಗಂಟಲು ಸೋಂಕು (ಟಾನ್ಸಿಲ್ಸ್) ಅಥವಾ ಶೀತ.

೭. ದವಡೆ ನೋವು.

೮. ದವಡೆಯ ಕೊನೆಯಲ್ಲಿ ಹಲ್ಲು ಹುಟ್ಟುತ್ತಿದ್ದರೆ.

೯. ಮೌಖಿಕ ನರಗಳಿಗೆ ನೋವಾಗುವುದು.

 

ಕಿವಿ ನೋವಿನ ಲಕ್ಷಣಗಳು

ಕಿವಿ ನೋವಿನ ಜೊತೆಗೆ ಕಿವಿಯಲ್ಲಿ ಸೋಂಕು ಉಂಟಾಗಿದ್ದರೆ, ಶಿಶುಗಳಲ್ಲಿ ಮತ್ತು ಮಕ್ಕಳಲ್ಲಿ ತುಂಬಾನೇ ತೊಂದರೆ ಉಂಟಾಗುತ್ತದೆ. ಇದರ ಲಕ್ಷಣಗಳು ಯಾವುದೆಂದು ನಾವು ಪಟ್ಟಿ ಮಾಡಿದ್ದೇವೆ ಓದಿ.

೧. ಮಗುವಿನ ದೇಹವು ಬೆಚ್ಚಗಾಗುತ್ತದೆ ಮತ್ತು ಅವರು ತುಂಬಾ ಸಿಡಿಮಿಡಿಗೊಳ್ಳಲು ಶುರು ಮಾಡುತ್ತಾರೆ.

೨. ಮಕ್ಕಳು ತಮ್ಮ ಕಿವಿಯನ್ನು ಎಳೆದುಕೊಳ್ಳಲು, ಒತ್ತಿಕೊಳ್ಳಲು ಶುರು ಮಾಡುತ್ತಾರೆ.

೩. ಶಿಶುಗಳು ಬೇಕಾದಷ್ಟು ಹಾಲು ಕುಡಿಯುವುದಿಲ್ಲ ಮತ್ತು ಮಕ್ಕಳಲ್ಲಿ ಹಸಿವು ಇಲ್ಲದಂತೆ ಆಗುತ್ತದೆ.

೪. ದೇಹದ ತಾಪಮಾನ 38 ಡಿಗ್ರಿ ದಾಟಿರುತ್ತದೆ.

೫. ಕಿವಿ ಸ್ಪಷ್ಟವಾಗಿ ಕೇಳಿಸುವುದಿಲ್ಲ.

೬. ಮೂಗು ಸೋರುವುದು ಮತ್ತು ಕೆಮ್ಮುವುದು.

೭. ತುಲನೆ ಕಾಯ್ದುಕೊಳ್ಳುವುದರಲ್ಲಿ ತೊಂದರೆ.

 

ಕಿವಿ ನೋವಿಗೆ ಮನೆಮದ್ದುಗಳು

 

೧. ಆಲಿವ್ ಆಯಿಲ್

ಆಲಿವ್ ಆಯಿಲ್ ಇಂದ ಅನೇಕ ಉಪಯೋಗಗಳು ಇದ್ದು, ಜನರು ಕಿವಿ ನೋವಿನಿಂದ ಮುಕ್ತಿ ಪಡೆಯಲು ಇದರ ಉಪಯೋಗವನ್ನು ಮಾಡಿಕೊಳ್ಳಬೇಕು. ಆಲಿವ್ ಆಯಿಲ್ ಅನ್ನು ಸ್ವಲ್ಪವೇ ಬೆಚ್ಚಗೆ ಮಾಡಿ, 3-4 ಹನಿಗಳಷ್ಟು ಎಣ್ಣೆಯನ್ನು ನಿಮ್ಮ ಕಿವಿಯ ನಾಳದೊಳಗೆ ಬಿಟ್ಟುಕೊಳ್ಳಿ. ಪರ್ಯಾಯವಾಗಿ ನೀವು ಹತ್ತಿಯ ಉಂಡೆಯನ್ನು ಆಯಿಲ್ ಅಲ್ಲಿ ಎದ್ದು, ಅದನ್ನು ನಿಮ್ಮ ಕಿವಿಯ ತೂತಿನ ಮೇಲೆ ಒತ್ತಿಕೊಳ್ಳಬಹುದು.

 

೨. ಬೆಳ್ಳುಳ್ಳಿ

ಬೆಳ್ಳುಳ್ಳಿ ಅಲ್ಲಿರುವ ಆಂಟಿಬಯೋಟಿಕ್ ಮತ್ತು ನೋವು ನಿವಾರಕ ಗುಣಗಳು ನೀವು ಕಿವಿ ನೋವಿನಿಂದ ಮುಕ್ತಿ ಪಡೆಯಲು ಸಹಾಯ ಮಾಡಬಹುದು.

ಒಂದು ಚಮಚದಷ್ಟು ಜೇಜ್ಜಿದ ಬೆಳ್ಳುಳ್ಳಿಯನ್ನು ತವಾದ ಮೇಲೆ ಎರಡು ಚಮಚ ಎಳ್ಳಿನ ಎಣ್ಣೆಯಿಂದ ಉರಿಯಿರಿ. ನಂತರ ಅದನ್ನು ತಣ್ಣಗೆ ಮಾಡಿ, ಎಣ್ಣೆಯನ್ನು ಹಿಂಡಿ, ಬೇರೆ ಮಾಡಿ. ಹೀಗೆ ಬೇರ್ಪಡಿಸಿದ ಆ ಎಣ್ಣೆಯ 2-3 ಹನಿಗಳನ್ನು ನಿಮ್ಮ ಕಿವಿಯ ನಾಳದೊಳಗೆ ಬಿಟ್ಟುಕೊಳ್ಳಿ. ಒಂದು ವೇಳೆ ನಿಮ್ಮ ಮನೆಯಲ್ಲಿ ಎಳ್ಳಿನ ಎಣ್ಣೆ ಇಲ್ಲವೆಂದರೆ, ಬೆಳ್ಳುಳ್ಳಿಯ ಕೆಲವು ಎಸೆಲುಗಳನ್ನೇ ಜೇಜ್ಜಿ, ಅದರ ರಸವನ್ನು ಕಿವಿಯೊಳಗೆ ಬಿಟ್ಟುಕೊಳ್ಳಿ.

 

೩. ಈರುಳ್ಳಿ

ಮೊದಲು ಈರುಳ್ಳಿಯನ್ನು ತುರಿದುಕೊಂಡು ಅಥವಾ ಸಣ್ಣದಾಗಿ ಕತ್ತರಿಸಿಕೊಂಡು, ಅದರಿಂದ ಈರುಳ್ಳಿ ರಸವನ್ನು ಹೊರತೆಗೆಯಿರಿ. ನಂತರ ಆ ರಸದ 2-3 ಹನಿಗಳನ್ನು ನೋವುತ್ತಿರುವ ನಿಮ್ಮ ಕಿವಿಯೊಳಗೆ ಬಿಟ್ಟುಕೊಳ್ಳಿ. ಇದನ್ನು ದಿನಕ್ಕೆ 2-3 ಬಾರಿ ಮಾಡಿ.

 

೪. ಶುಂಠಿ

ಶುಂಠಿ ಉರಿತವನ್ನು ಕಡಿಮೆ ಮಾಡುವುದರಲ್ಲಿ ದೊಡ್ಡ ಸಹಾಯ ಮಾಡುತ್ತದೆ. ಶುಂಠಿಯಿಂದ ರಸವನ್ನು ಹೊರತೆಗೆದು, ಆ ರಸವನ್ನು ನೇರವಾಗಿ ನಿಮ್ಮ ಕಿವಿಯೊಳಗೆ ಬಿಟ್ಟುಕೊಳ್ಳುವುದರಿಂದ ಕಿವಿ ನೋವು ಕಡಿಮೆ ಆಗುತ್ತದೆ ಮತ್ತು ಉರಿತ ಶಮನಗೊಳ್ಳುತ್ತದೆ.

ಪರ್ಯಾಯವಾಗಿ, ನೀವು ಒಂದು ಸ್ಪೂನ್ ಅಷ್ಟು ತುರಿದ ಶುಂಠಿಯನ್ನು ಎರಡು ಚಮಚದಷ್ಟು ಆಲಿವ್ ಆಯಿಲ್ ಅಲ್ಲಿ ಬೆರೆಸಿ. ಬೆರೆಸಿದ ನಂತರ 5-10 ನಿಮಿಷಗಳ ಕಾಲ ಎಣ್ಣೆಯು ಶುಂಠಿಯ ಸತ್ವವನ್ನು ಹೀರಿಕೊಳ್ಳಲು ಕಾಲವಕಾಶ ಕೊಡಿ. ನಂತರ ಈ ಎಣ್ಣೆಯ ಕೆಲವು ಹನಿಗಳನ್ನು ನಿಮ್ಮ ಕಿವಿಯೊಳಗೆ ಬಿಟ್ಟುಕೊಳ್ಳಿ.

 

೫. ಬೇವು

ಕೆಲವಷ್ಟು ಬೇವಿನ ಎಲೆಗಳನ್ನು ಚೆನ್ನಾಗಿ ರುಬ್ಬಿಕೊಂಡು ರಸವನ್ನು ಹೊರತೆಗೆಯಿರಿ. ನಂತರ, ಕೆಲವಷ್ಟು ಹನಿಗಳಷ್ಟು ರಸವನ್ನು ನಿಮ್ಮ ಕಿವಿಯೊಳಗೆ ಬಿಟ್ಟುಕೊಳ್ಳಿ ಇದು ನೈಸರ್ಗಿಕ ಇಯರ್ ಡ್ರಾಪ್ಸ್ ಆಗಿ ಕೆಲಸ ಮಾಡುತ್ತದೆ.

ನಂತರ, ಒಂದು ಹತ್ತಿಯ ಉಂಡೆಯನ್ನು ಈ ಬೇವಿನ ರಸದಲ್ಲಿ ಅದ್ದಿ ಹಿಂಡಿಕೊಳ್ಳಿ. ಆ ಹತ್ತಿಯ ಉಂಡೆಯನ್ನು ನೋವುತ್ತಿರುವ ನಿಮ್ಮ ಕಿವಿಯ ತೂತಿನ ಮೇಲೆ ಇಟ್ಟುಕೊಳ್ಳಿ. ಕೆಲವು ನಿಮಿಷಗಳ ಕಾಲ ಅದು ಹಾಗೆ ಇರಲಿ. ನಂತರ ಅದನ್ನು ತೆಗೆದುಹಾಕಿರಿ.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon