Link copied!
Sign in / Sign up
2
Shares

ಮಕ್ಕಳನಿದ್ರೆಯಲ್ಲಿ ಕೆಟ್ಟ ಕನಸು ಅಥವಾ ದುಃಸ್ವಪ್ನ : ಕಾರಣ ಮತ್ತು ಪರಿಹಾರ

ನೀವು ರಾತ್ರಿ ಮಲಗಿರುವಿರಿ ನಿಮ್ಮ ಮಗುವು ಹಠಾತ್ ಆಗಿ ನಿಮ್ಮನ್ನು ತಬ್ಬಿಕೊಂಡು ಕೂಗಿಕೊಳ್ಳುವುದು ನಿಮ್ಮನ್ನು ಗಾಬರಿ ಮತ್ತು ಭಯಪಡುವಂತೆ ಮಾಡುತ್ತದೆ. ಆ ಕ್ಷಣ ನಿಮಗೆ ಏನಾಗಿದೆ ಎಂಬುದೇ ನಿಮಗೆ ತಿಳಿಯುವುದಿಲ್ಲ ಸ್ವಲ್ಪ ಸಮಯದ ನಂತರ ನೀವು ಊಹಿಸಬಹುದು ನಿಮ್ಮ ಮಗುವು ಕೆಟ್ಟ ಕನಸಿನಿಂದ ಹೆದರಿದೆ ಎಂದು. ಮಕ್ಕಳಲ್ಲಿ ಕೆಟ್ಟ ಕನಸು ಬೀಳುವುದು ಸಾಮಾನ್ಯ. ಅದಕ್ಕೆ ಕಾರಣ ಮತ್ತು ಅದನ್ನು ಸರಿಪಡಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯಿರಿ.

ದುಃಸ್ವಪ್ನ ಎಂದರೇನು?

ಮಗುವು ಗಾಢವಾಗಿ ನಿದ್ರೆ ಮಾಡುವಾಗ ಎದ್ದುಕಾಣುವಂತೆ ಬೀಳುವ ಕನಸೇ ದುಃಸ್ವಪ್ನ ಅಥವಾ ಕೆಟ್ಟ ಅಥವಾ ಭಯಂಕರ ಕನಸು. ನಂತರ ಮಕ್ಕಳು ಅದನ್ನು ನೆನಪಿಸಿಕೊಳ್ಳಬಹುದು, ಮತ್ತು ಕನಸು ಕಂಡ ಮರುದಿನ ಅವರು ಅಷ್ಟು ಲವಲವಿಕೆ ಇಂದ ಇರುವುದಿಲ್ಲ. ಬೇಸರವಾಗಿರುವಂತೆ ಅವರು ಕಾಣುವರು. ಮಕ್ಕಳು ಅದನ್ನು ಬೆಳಗ್ಗೆ ನಿಮಗೆ ವಿವರಿಸುವರು ಆದರೆ ನವಜಾತ ಶಿಶುಗಳು ಅದನ್ನು ನಿಮಗೆ ಹೇಳಲು ಯಾವುದೇ ಮಾರ್ಗವಿಲ್ಲ.

ಮಕ್ಕಳಲ್ಲಿ ದುಃಸ್ವಪ್ನ ಬೀಳಲು ಕಾರಣಗಳು

ಕೆಟ್ಟ ಕನಸು ಬೀಳುವುದು ಮಗುವು ನಡೆಯುವಾಗ ತನ್ನ ಸುತ್ತ ಸಂಭವಿಸುವ ಘಟನೆಗಳ ಆಧಾರದ ಮೇಲೆ ನೇರವಾಗಿ ಅವಲಂಬಿತವಾಗಿದೆ. ಅದಕ್ಕೆ ಕೆಲುವು ಕಾರಣಗಳು

೧.ತೊಂದರೆ ಅನುಭವಿಸಿದ ಅಥವಾ ಭಯದ ವಾತಾವರಣ

ಮಗುವು ಬೆಳೆಯುತ್ತಿದ್ದಂತೆ ತನ್ನ ಸುತ್ತ ನಡೆಯುವ ಘಟನೆಯನ್ನು ಅರಿತುಕೊಳ್ಳಲು ಪ್ರಯತ್ನಿಸುವುದು, ಮಗುವು ತೆವಳುವಾಗ ಅಥವಾ ಹೊರಗೆ ಕರೆದುಕೊಂಡು ಹೋಗಿದ್ದಾಗ ಎಲ್ಲಾದರೂ ಕೆಟ್ಟ ಘಟನೆ ಅಥವಾ ಭಯ ತರಿಸುವಂತಹ ದೃಶ್ಯವನ್ನು ನೋಡಿದರೆ, ಅಥವಾ ಭಯದ ವಾತಾವರಣದಲ್ಲಿ ಸ್ವಲ್ಪ ಸಮಯ ಕಳೆದಿದ್ದರೆ ಮಗುವು ಆ ರಾತ್ರಿ ಕೆಟ್ಟ ಕನಸನ್ನು ಅನುಭವಿಸುವುದು.

೨.ಔಷಧಿ

ಕೆಲವು ಔಷಧಿಗಳನ್ನು ಔಷಧ-ಪ್ರೇರಿತ ದುಃಸ್ವಪ್ನ ಎಂದು ಕರೆಯಲಾಗುವ ಕೆಟ್ಟ ಕನಸುಗಳಿಗೆ ಇವುಗಳು ಕಾರಣವಾಗಬಹುದು. ಹೆಚ್ಚಿನ ಸಂದರ್ಭಗಳಲ್ಲಿ, ಔಷಧಿ ನೀಡುವುದನ್ನು ನಿಲ್ಲಿಸಿದರೆ ಅಥವಾ ಔಷಧಿ ಕೊಡುವುದರ ಡೋಸೇಜ್ (ಪ್ರಮಾಣದಲ್ಲಿ) ಬದಲಾವಣೆ ಮಾಡುವುದರಿಂದ ಮಗುವು ದುಃಸ್ವಪ್ನದಿಂದ ವಿಶ್ರಾಂತಿ ಪಡೆಯುವುದು.

೩.ಒತ್ತಡ ಮತ್ತು ಆತಂಕ

ನಿಮ್ಮ ಮಗುವು ಯಾವುದೊ ವಿಷಯದಲ್ಲಿ ಒತ್ತಡ ಅಥವಾ ಆತಂಕವನ್ನು ಅನುಭವಿಸುತ್ತಿರಬಹುದು. ಇದು ನಿಮ್ಮ ಮಗುವು ದುಃಸ್ವಪ್ನವನ್ನು ಕಾಣಲು ಕಾರಣವಾಗುತ್ತದೆ.

೪.ಸುಸ್ತಾಗುವುದು

ತೀವ್ರವಾದ ನಿದ್ದೆಯ ಅಭಾವವು ದಣಿವು ಮತ್ತು ಆಯಾಸವನ್ನು ಉಂಟುಮಾಡುತ್ತದೆ, ಇದು ನಿದ್ರೆ ಮತ್ತು ಎಚ್ಚರ ಚಕ್ರವನ್ನು ಶಿಶುಗಳಲ್ಲಿ ಅಡ್ಡಿಪಡಿಸುತ್ತದೆ, ಮತ್ತು ಮಗುವಿನ ಮೆದುಳು ಋಣಾತ್ಮಕ ಕನಸನ್ನು ಬೀಳುವಂತೆ ಮಾಡುತ್ತದೆ, ಇದು ದುಃಸ್ವಪ್ನವಾಗಿ ಬದಲಾಗುತ್ತದೆ.

೫.ಮಲಗುವ ಮುನ್ನ ಹೆಚ್ಚು ಊಟ ಮಾಡುವುದು

ರಾತ್ರಿ ಮಲಗುವ ಮುನ್ನ ಅಥವಾ ರಾತ್ರಿ ಹೆಚ್ಚು ಊಟವನ್ನು ಅಥವಾ ಆಹಾರವನ್ನು ಸೇವಿಸುವುದು ವಯಸ್ಕರಲ್ಲಿ ದುಃಸ್ವಪ್ನ ಬೀಳಲು ಕಾರಣವಾಗುತ್ತದೆ. ಇದು ಮಕ್ಕಳಿಗೆ ಅನ್ವಯಿಸುವುದೇ ಎಂಬುದು ಸರಿಯಾಗಿ ತಿಳಿದಿಲ್ಲ, ಅನ್ವಯಿಸಿದರೆ ಅದು ಘನ ಆಹಾರವನ್ನು ಸೇವಿಸುವವರಿಗೆ ಮಾತ್ರ ಅನ್ವಯಿಸುತ್ತದೆ.

ಮಕ್ಕಳು ಕೆಟ್ಟ ಕನಸು ಕಾಣುತ್ತಿರುವುದರ ಲಕ್ಷಣಗಳು

ಥಟ್ಟನೆ ಮತ್ತು ತಕ್ಷಣ ಇದ್ದಕ್ಕಿದ್ದಹಾಗೆ ಎಚ್ಚರಗೊಳ್ಳುವುದು

ನೋಡಲು ಭಯಗೊಂಡವನಂತೆ ಕಾಣುವುದು

ಮತ್ತೆ ಮಲಗಲು ಭಯವನ್ನ ವ್ಯಕ್ತಪಡಿಸುವುದು

ಇದನ್ನು ಸರಿಪಡಿಸುವುದು ಹೇಗೆ?
೧.ಭರವಸೆ, ಧೈರ್ಯ ಮತ್ತು ಅಪ್ಪಿಕೊಳ್ಳಿ

ಪೋಷಕರ ದ್ವನಿ ಬಿಟ್ಟು ಬೇರೆ ಯಾವುದೇ ಕೂಡ ಮಗು ಹೆದರಿದ ಸಮಯದಲ್ಲಿ ಸಮಾಧಾನಪಡಿಸಲು ಸಾಧ್ಯವಿಲ್ಲ. ನಿಮ್ಮ ಮಗುವಿನ ಪಕ್ಕ ಮಲಗಿ ಮಗುವು ಚೆನ್ನಾಗಿ ನಿದ್ರೆ ಮಾಡುವವರೆಗು ಮಗುವಿನ ಪಕ್ಕದಲ್ಲೇ ಇರಿ. ಶಿಶುಗಳು ಮಾತನ್ನು ಅಷ್ಟಾಗಿ ಈ ಸಮಯದಲ್ಲಿ ಅರ್ಥಮಾಡಿಕೊಳ್ಳದ ಕಾರಣ ಅವರನ್ನು ಅಪ್ಪಿಕೊಳ್ಳುವುದು ಒಳ್ಳೆಯದು, ಇದರಿಂದ ಅವರಲ್ಲಿ ನನ್ನ ಜೊತೆ ನನ್ನ ಪೋಷಕರು ಇವರು ಎಂಬ ನಂಬಿಕೆ ಮತ್ತು ಧೈರ್ಯ ಬರುವುದು.

೨.ಮಗುವಿನ ಮನಸ್ಥಿತಿಯನ್ನು ಬದಲಿಸಿ

ಮಗುವು ನಿಮ್ಮನ್ನು ನೋಡಿ, ಸ್ವಲ್ಪ ಅದರಿಂದ ಹೊರಬಂದ ಮೇಲೆ ಇದು ಬರಿ ಕೆಟ್ಟ ಕನಸು ಎಂದು ವಿವರಿಸಿ. ಅದು ನಿಜವಾಗಿ ಆಗುವ ಹಾಗೆ ಕಾಣಿಸುತ್ತದೆ ಅದರಿಂದ ಯಾವುದೇ ಅಪಾಯ ಇಲ್ಲ ಎಂಬುದನ್ನು ಅರ್ಥಮಾಡಿಸಿ.

ತಮಾಷೆ ಅಥವಾ ಖುಷಿಯ ವಿಷಯಗಳನ್ನು ಹೇಳುವ ಮೂಲಕ ಮಗುವಿಗೆ ಅದನ್ನು ಮರೆಯುವಂತೆ ಮಾಡಿ.

ನಿಮ್ಮ ಮಗುವಿಗೆ ಏನನ್ನಾದರು ಆರಾಮದಾಯಕವಾಗಿರುವುದನ್ನು ನೀಡಿ ಇದು ನಿನ್ನನ್ನು ರಕ್ಷಿಸುತ್ತದೆ ಎಂದು ಹೇಳಿ. ಮತ್ತು ಇದರಿಂದ ನಮಗೆ ಏನು ತೊಂದರೆ ಆಗದು, ದೈರ್ಯವಾಗಿ ಮಲಗು ಎಂದು ಹೇಳಿ.

೩.ಮಗು ಮಲಗುವವರೆಗೆ ಜೊತೆಗಿರಿ

ಮಗುವು ಮಲಗುವ ಮುನ್ನ ನೀವು ಹೊರಟರೆ ಮಗುವು ರಾತ್ರಿಪುರ ಭಯದಲ್ಲಿ ಕಾಲ ಕಳೆಯಬಹುದು. ಮಗುವಿಗೆ ಧೈರ್ಯ ಮತ್ತು ನಂಬಿಕೆ ಬರುವಂತೆ ಮಾಡಿ.

೪.ಬೆಳಗ್ಗೆ ಮಗುವಿನ ಜೊತೆ ಕೆಟ್ಟ ಕನಸಿನ ಬಗ್ಗೆ ಮಾತನಾಡಬೇಡಿ

ನೇರವಾಗಿ ಬೆಳಗ್ಗೆ ಮಗುವನ್ನು ಆ ವಿಷಯದ ಬಗ್ಗೆ ಕೇಳಬೇಡಿ. ರಾತ್ರಿ ಚೆನ್ನಾಗಿ ನಿದ್ರೆ ಮಾಡಿದ, ಮದ್ಯ ಏನಾದರು ಎಚ್ಚರಗೊಂಡಿದೆಯೇ? ಎಂದು ಕೇಳಿ, ನಿಮ್ಮ ಮಗುವು ಅದನ್ನು ಪುನಃ ನೆನಪು ಮಾಡಿಕೊಳ್ಳುವಂತೆ ಮಾಡಬೇಡಿ. ಮಗುವು ತಾನಾಗೇ ಅದರ ಬಗ್ಗೆ ಮಾತನಾಡಿದರೆ ಅದನ್ನು ಮಗುವಿನ ತಲೆಯಿಂದ ಸಂಪೂರ್ಣವಾಗಿ ತಗೆಯಲು ಪ್ರಯತ್ನಿಸಿ.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon