ಬ್ಯುಸಿ ಅಮ್ಮಂದಿರಿಗೆ 15 ನಿಮಿಷದಲ್ಲೇ ತಯಾರಿಸಬಹುದಾದ ರುಚಿ ರುಚಿ ರೆಸಿಪಿಗಳು!
ಒತ್ತಡದ ಜೀವನ ಶೈಲಿಯಿಂದ ಬ್ಯುಸಿಯಾಗಿರುವ ತಾಯಂದಿರೇ, ಇಲ್ಲಿದೆ ನೋಡಿ ನಿಮಗೊಂದು ಸಿಹಿ ಸುದ್ದಿ. ಈಗಿನ ಸೂಪರ್-ತಾಯಂದಿರು, ನಿತ್ಯ ಕೆಲಸಕ್ಕೆ ಹೋಗುವುದರಿಂದ ಹಿಡಿದು, ಮಕ್ಕಳ ಪಾಲನೆ ಪೋಷಣೆ, ಮನೆಯ ಕೆಲಸಗಳನ್ನು ನಿಭಾಯಿಸಿಕೊಂಡು ಹೋಗುವ ಸಾಮರ್ಥ್ಯ ಉಳ್ಳವರು ಇವರು. ಇಷ್ಟೆಲ್ಲಾ ಕೆಲಸಗಳ ಮಧ್ಯೆ ಮನೆಯವರ ಆರೋಗ್ಯ ಕಾಪಾಡುವುದು, ಅಡಿಗೆ ಮಾಡುವುದು, ಆಫೀಸ್ ನ ಇತರೆ ಕೆಲಸಗಳ ಮಧ್ಯೆ, ಅಡಿಗೆ ಮಾಡಲು ಹೆಚ್ಚು ಸಮಯವನ್ನು ನಿಗಧಿಪಡಿಸುವುದು ಕಷ್ಟಸಾಧ್ಯ. ಯೋಚಿಸದಿರಿ, ನಿಮ್ಮ ಕೆಲಸಗಳನ್ನು ಸುಲಭಗೊಳಿಸಲು ನಾವು ನಿಮಗೆ ೫ ಸುಲಭವಾಗಿ ಮನೆಯಲ್ಲೇ ತಾಯರಿಸಬಹುದಾದ, ಆರೋಗ್ಯಕರ ತಿನಿಸುಗಳನ್ನು ಹೇಳಿಕೊಡುತ್ತೇವೆ.
೧. ಹಣ್ಣುಗಳು ಹಾಗು ಮೊಸರಿನ ತಿನಿಸು

ಒಂದು ಪಾತ್ರೆಗೆ, ಸ್ವಲ್ಪ ನಿಂಬೆ ಹಣ್ಣಿನ ರಸ ಹಾಗು ಜೀನುತುಪ್ಪವನ್ನು ಹಾಕಿ, ಅದಕ್ಕೆ ಬ್ಲೂ ಬೆರಿ ಹಾಗು ಅನಾನಸ್ ಹಣ್ಣನ್ನು ಮಿಶ್ರಣ ಮಾಡಿ, ಒಂದೆಡೆ ಇಡಿ. ನಂತರ, ನಿಮ್ಮ ಮನೆಯಲ್ಲಿರುವ ಗಾಜಿನ ಲೋಟಗಳನ್ನು ಹೊರಗೆ ಇಡಿ. ಲೋಟದ ಕಾಲು ಭಾಗದಷ್ಟು, ಸಿಹಿ ಮೊಸರು ಅಥವಾ ಗ್ರೀಕ್ ಯೋಗರ್ಟ್ ಅನ್ನು ಹಾಕಿ. ನಂತರ, ಮೇಲೆ ಹೇಳಿದ ಮಿಶ್ರಣವನ್ನು ಲೋಟಕ್ಕೆ ಹಾಕಿ. ಇದರ ಮೇಲೆ ದಾಳಿಂಬೆ ಬೀಜವನ್ನು ಉದುರಿಸಿ, ಬೊಂಬಾಟ್ ತಿನಿಸನ್ನು ಸವಿಯಲು ಸಿದ್ದರಾಗಿ.
೨. ಶ್ರಿಂಪ್, ಅಡಿಗೆ ಈರುಳ್ಳಿ ಹಾಗು ಪಾಲಕ್ ಸೊಪ್ಪಿನ ಪಾಸ್ಟಾ

ಅಂಗಡಿಯಲ್ಲಿ ಸಿಗುವ ಇಟಾಲಿಯನ್ ಪಾಸ್ಟಾವನ್ನು ನೀರಿನಲ್ಲಿ ಬೇಯಿಸಿಕೊಳ್ಳಿ. ನಂತರ, ಒಂದು ಬಾಣಲೆಗೆ ಬೆಣ್ಣೆ ಹಾಗು ಅಡಿಗೆ ಈರುಳ್ಳಿ/eschalot ಅನ್ನು ಹಾಕಿ, ಚೆನ್ನಾಗಿ ಬೇಯಿಸಿಕೊಳ್ಳಿ. ಇದಕ್ಕೆ ಶ್ರಿಂಪ್ ಹಾಗು ನಿಂಬೆ ಹಣ್ಣಿನ ತುರಿಯನ್ನು ಹಾಕಿ ಬೇಯಿಸಿ. ಇದನ್ನು ಚೆನ್ನಾಗಿ ಕಯ್ಯಾಡಿಸುತ್ತಾ ಇರಬೇಕು. ನಂತರ, ಬೇಯಿಸಿದ ಪಾಸ್ಟಾವನ್ನು ಮಿಶ್ರಣ ಮಾಡಿ, ಇದಕ್ಕೆ ಸ್ವಲ್ಪ ಕ್ರೀಂ ಹಾಗು ಪಾಲಕ್ ಸೊಪ್ಪನ್ನು ಮೇಲೆ ಉದುರಿಸಿ, ಸವಿಯಿರಿ.
೩. maggi ಹಾಗು ಬೆಣ್ಣೆಯ ವ್ರಾಪ್

ಇದು ನಿಮ್ಮ ಮಕ್ಕಳ ಅಚ್ಚು ಮೆಚ್ಚಿನ ತಿಂಡಿಯಾಗಬಹುದು. maggiಯನ್ನು ನೀವು ಇಷ್ಟ ಪಡುವ ತರಕಾರಿಯ ಜೊತೆಗೆ ಸೇರಿಸಿ, ಬೇಯಿಸಿಕೊಳ್ಳಿ. ಒಂದು ಚಪಾತಿಗೆ, ಮೇಲೆ ಚೆನ್ನಾಗಿ ಬೆಣ್ಣೆ/ತುಪ್ಪ ಸವರಿ maggi ಹಾಗು ತರಕಾರಿಯ ಮಿಶ್ರಣವನ್ನು ಅದರೊಳಗೆ ಸೇರಿಸಿ, ವ್ರಾಪ್ ರೀತಿ ಸುತ್ತಿ, ಮಕ್ಕಳಿಗೆ ನೀಡಿ. ಇದು ಆರೋಗ್ಯಕಾರಿ ಹಾಗು ರುಚಿಕಾರಿಯು ಹೌದು. maggi ಇಷ್ಟವಿಲ್ಲದೆ ಇರುವವರು, ಅದರ ಬದಲಿಗೆ ಬೇರೆ ನೂಡಲ್ಸ್ ಕೂಡ ಬಳಸಬಹುದು.
೪. ಕಡಲೆ ಕಾಯಿ ಬೆಣ್ಣೆ, ಮಾರ್ಷ್ಮಾಲೋ ಹಾಗು ಬಾಳೆಹಣ್ಣಿನ ಸ್ಯಾಂಡ್ವಿಚ್

೨ ಬ್ರೆಡ್ ಸ್ಲೈಸ್ ಗಳನ್ನು ತೆಗೆದುಕೊಳ್ಳಿ. ಅದಕ್ಕೆ ಕಡಲೇಕಾಯಿ ಬೆಣ್ಣೆ(peanut butter)ಅನ್ನು ಸವರಿ, ಅದರೊಳಗೆ ಮಾರ್ಷ್ಮಾಲೋ( ಒಂದು ಕುರುಚಲು ಸಸ್ಯದಿಂದ ಮಾಡಿದ ಮಿಠಾಯಿ) ಹಾಗು ಬಾಳೆ ಹಣ್ಣನ್ನು ಸಣ್ಣ-ಸಣ್ಣ ತುಂಡುಗಳನ್ನಾಗಿ ಮಾಡಿ ಅದರೊಳಗೆ ಹಾಕಿ. ನಂತರ, ಈ ಬ್ರೆಡ್ ಅನ್ನು ಕಂದು ಬಣ್ಣ ಬರುವ ಹಾಗೆ ಎರಡು ಬದಿ ತವಾದ ಮೇಲೆ ಬೇಯಿಸಿ ಅಥವಾ ಗ್ರಿಲ್ ಮಾಡಿ. ಇದನ್ನು ಮುಂಜಾನೆಯ ಉಪಹಾರ ಅಥವಾ ಸಂಜೆಯ snacks ರೀತಿ ಮಕ್ಕಳಿಗೆ ನೀಡಿ.
೫. ಕ್ವಿಕ್ ಬ್ರೌನ್ನ್ ಬ್ಯಾಗ್ burritos

ಪಿಂಟೋ ಕಾಳುಗಳನ್ನು ನೀರಿನಲ್ಲಿ ನೆನೆ ಹಾಕಿ, ಅದು ಮೆತ್ತಗಾದ ನಂತರ ಒಂದೆಡೆ ತೆಗೆದಿಡಿ. ಒಂದು ತವಕ್ಕೆ ಆಲಿವ್ ಎಣ್ಣೆ, ಪಿಂಟೋ ಕಾಳುಗಳು, ಸಾಲ್ಸಾ, ಖಾರದ ಪುಡಿ, ಜೀರಿಗೆ ಪುಡಿಯನ್ನು ಹಾಕಿ ಹುರಿದುಕೊಳ್ಳಿ. ಪಿಂಟೋ ಕಾಳುಗಳನ್ನು ಚೆನ್ನಾಗಿ ಮಾಶ್ ಮಾಡಿಕೊಳ್ಳಿ. ಈ ಮಿಶ್ರಣ ಒಣಗಿದ ಹಾಗೆ ಕಂಡರೆ, ಸ್ವಲ್ಪ ನೀರನ್ನು ಮಿಶ್ರಣ ಮಾಡಿ, ಬೇಯಿಸಿಕೊಳ್ಳಿ. ಅಂಗಡಿಯಲ್ಲಿ ಸಿಗುವ tortillas( ಒಂದು ರೀತಿಯ ಚಪಾತಿ) ಯೊಳಗೆ ಮಿಶ್ರಣ ಹಾಕಿ, ಅದಕ್ಕೆ ಸ್ವಲ್ಪ ಬೆಣ್ಣೆ ಯನ್ನು ಉದುರಿಸಿ, ಅದರ ತುದಿಯನ್ನು ಸೀಲ್ ಮಾಡಿ, ನಂತರ ಸೇವಿಸಿ.
ಮೇಲೆ ಹೇಳಿದ, ಬಾಯಿ ನೀರೂರಿಸುವ quick ತಿನಿಸುಗಳು, ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರು, ಬಂಧು-ಮಿತ್ರರೊಂದಿಗೆ ಶೇರ್ ಮಾಡಿ.
