Link copied!
Sign in / Sign up
1
Shares

ಉದ್ಯೋಗಸ್ಥ ತಾಯಿಯ ತಪ್ಪಿಸ್ಥತ್ತ ಮನೋಭಾವದೊಂದಿಗೆ ವ್ಯವಹರಿಸುವುದು

ತಾಯಿಯಾದ ನಂತರ , ಕೆಲಸಕ್ಕೆ ಮರಳಿ ಹೋಗುವುದರ ಕುರಿತು ಯೋಚಿಸಲು ಪ್ರಾರಂಭಿಸಿದಾಗ ಸಮಾಜವು ತಪ್ಪಿತಸ್ಥರೆಂದು ಭಾವಿಸುತ್ತದೆ. ಆದರೆ ನಿಮ್ಮ ವೃತ್ತಿಜೀವನವನ್ನು ಮುಂದುವರಿಸುವುದು ಮತ್ತು ನೀವು ಇಷ್ಟಪಡುವದನ್ನು ಮಾಡುವುದು ನಿಮ್ಮಲ್ಲಿ ತಪ್ಪಿತಸ್ಥ ಮನೋಭಾವವನ್ನು ಉಂಟುಮಾಡಬಾರದು . ವಾಸ್ತವವಾಗಿ,  ನಿಮ್ಮ ಕುಟುಂಬಕ್ಕೆ ನೀವು ಹೇಗೆ ಕೊಡುಗೆಯನ್ನು ನೀಡುತ್ತಿದ್ದೀರೆಂಬುದನ್ನು ನೀವು ಗಮನಿಸಿದಾಗ ನಿಮ್ಮಲ್ಲಿ ನಿಜವಾಗಿಯೂ ಅದ್ಭುತವಾದ ಭಾವನೆ ಮೂಡಬೇಕು. ನಿಮ್ಮ ಕೆಲಸದ ಬಗ್ಗೆ ನೀವು ಸಪ್ಪೆಯಾಗಿ ಭಾವಿಸಿದಾಗ, ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳಿವೆ:

೧.ನೀವು ಸರಿಯಾದ ಆಯ್ಕೆ ಮಾಡಿದ್ದೀರಿ

ನೀವು ತಪ್ಪಾಗಿರಬಹುದು ಎಂದು ಯೋಚಿಸಲು ಪ್ರಾರಂಭಿಸಿದಾಗ, ನೀವು ಯಾಕೆ ಪ್ರಾರಂಭಿಸಿದಿರಿ ಎಂಬುದನ್ನು ನೆನಪಿಸಿಕೊಳ್ಳಿ. ಹಣಕಾಸಿನ ಕಾರಣಗಳಿಗಾಗಿ ಅಥವಾ ನಿಮ್ಮ ವೃತ್ತಿಜೀವನವನ್ನು ಮುಂದುವರಿಸಲು ನೀವು ಬಯಸಿದ್ದರಿಂದ, ನಿಮ್ಮ ನಿರ್ಧಾರದಲ್ಲಿ  ದೃಢವಾಗಿ ಹೆಜ್ಜೆ ಇರಿಸಿ .ನೀವು ಕೆಲಸದಲ್ಲಿರುವಾಗ ನಿಮ್ಮ ಮಗುವನ್ನು ಆರೈಕೆ ಮಾಡುವವರೊಂದಿಗೆ ಬಿಟ್ಟರೆ, ನೀವು ಅವರನ್ನು ನೇಮಿಸಿಕೊಳ್ಳುವಲ್ಲಿ ಸರಿಯಾದ ಆಯ್ಕೆ ಮಾಡಿದ್ದೀರಿ ಎಂದು ನಂಬಿ. ನಿಮ್ಮ ಸ್ವಂತ ನಿರ್ಧಾರಗಳಲ್ಲಿ ನಂಬಿಕೆ ನಿಮ್ಮ ಜೀವನವನ್ನು ಸುಲಭಗೊಳಿಸುತ್ತದೆ.

೨.ಇತರರಿಗೆ ಅವಕಾಶ ನೀಡಿ

ನಿಮ್ಮ ಮಗುವು ಶಾಲೆಯಲ್ಲಿ ದೊಡ್ಡ ಸಮಾರಂಭವನ್ನು/ಪ್ರದರ್ಶನವನ್ನು ಹೊಂದಿದ್ದಾಗ ಜೊತೆಗೆ ನೀವು ಕಚೇರಿಯಲ್ಲಿ ದೊಡ್ಡ ಸಭೆಯನ್ನು ಹೊಂದಿರುವ ಸನ್ನಿವೇಶವೂ ಎದುರಾಗಬಹುದು .ನೀವು ಎರಡರಲ್ಲೂ  ರಾಜಿ ಮಾಡಿಕೊಳ್ಳಬೇಕಾಗಿಲ್ಲ. ನಿಮ್ಮ ಪಾಲುದಾರ, ನಿಮ್ಮ ಉತ್ತಮ ಸ್ನೇಹಿತ, ನಿಮ್ಮ ಮಗುವಿನ ಅಜ್ಜಿಯರನ್ನು ಅಥವಾ ಯಾವುದೇ ಸಂಬಂಧಿಕ / ಸ್ನೇಹಿತರನ್ನು  ನಿಮ್ಮ ಸ್ಥಾನವನ್ನು  ತುಂಬಲು ಕೇಳಿಕೊಳ್ಳಿ. ಇದು ನಿಮ್ಮ ಮಗುವಿಗೆ ಅವರ ಸಂಬಂಧಿಕರು / ನಿಮ್ಮ ಸ್ನೇಹಿತರನ್ನು ತಿಳಿಯಲು ಮತ್ತು ಅವರಿಗೆ ನಿಮ್ಮ ಮಗುವಿನೊಂದಿಗೆ ಸಮಯ ಕಳೆಯಲು ಅವಕಾಶವನ್ನು ನೀಡುತ್ತದೆ. ಅವರು ಶಾಲೆಯಲ್ಲಿ ನಿಮ್ಮ ಮಗುವನ್ನು ಬಿಡಬಹುದು, ಅವರನ್ನು  ದೊಡ್ಡ ಪ್ರದರ್ಶನಕ್ಕಾಗಿ ತಾಲೀಮು ಮಾಡಿಕೊಳ್ಳಲು ಮತ್ತು ತಯಾರಿಸಲು ಸಹಾಯ ಮಾಡುತ್ತಾರೆ. ಸಮಾರಂಭದ  ಬಹಳಷ್ಟು ಚಿತ್ರಗಳು ಮತ್ತು ವೀಡಿಯೊಗಳನ್ನು ಅವರು ತೆಗೆದುಕೊಳ್ಳುತ್ತಿದ್ದರೆ, ನೀವು ಮನೆಯಲ್ಲಿ ಮತ್ತೆ ಪ್ರದರ್ಶನವನ್ನು ಪುನಃ ಪಡೆದುಕೊಳ್ಳಬಹುದು.

೩.ನಿಮ್ಮ ಕದನಗಳನ್ನು ಆರಿಸಿ

ನೀವು ಉದ್ಯೋಗಸ್ಥ ಜೀವನ ಮತ್ತು ಮನೆಯ ಜೀವನವನ್ನು ಆಯ್ಕೆ ಮಾಡಿಕೊಳ್ಳಬೇಕಾದ ಸನ್ನಿವೇಶ ಎದುರಾದಾಗ ನೀವು ಅವುಗಳನ್ನು ತೂಗಬೇಕು ಮತ್ತು ನೀವು ಯಾವುದನ್ನು ತ್ಯಜಿಸಬಹುದು ಎಂದು ಮಾಪನ ಮಾಡಿಕೊಳ್ಳಬೇಕು.ನಿಮ್ಮ ಪುಟ್ಟ ಮಗುವಿಗೆ ನಿಮ್ಮ ಅಗತ್ಯ ಬೆಳಗ್ಗೆಯಿದ್ದಲ್ಲಿ ,ದಿನದ ಆರೈಕೆ ಮಾಡುವ ಶಿಶುವಿಹಾರದಲ್ಲಿ ಅವರನ್ನು ಬಿಟ್ಟುಬರಲು ಬೆಳಿಗ್ಗೆ ಕೆಲವು ನಿಮಿಷಗಳ ತಡವಾಗಿ ಬಿಡಿ ಮತ್ತು ಅವರು ನೆಲೆಗೊಳ್ಳುವಂತೆ ಮಾಡಿ .ನೀವು ಅದನ್ನು ಮಾಡಲು ಕೆಲವು ನಿಮಿಷಗಳ ಹೆಚ್ಚುವರಿ ಕೆಲಸದಲ್ಲಿ ಉಳಿಯಬಹುದು.

೪.ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಿ

ಕೆಲವೊಮ್ಮೆ, ಕೆಲಸದ ಜೀವನ ಮತ್ತು ಕುಟುಂಬದ ನಡುವೆ ಆರಿಸುವುದು ಕಷ್ಟ.ಸರಿಯಾದ ವಿಷಯ ಮತ್ತು ಪ್ರಜ್ಞಾವಂತ ವಿಷಯದ ನಡುವೆ ನೀವು ಆರಿಸಬೇಕಾದ ದಿನಗಳು ಇರುತ್ತವೆ.ನೀವು ಭಾವನಾತ್ಮಕ ಅಥವಾ ನಿರಾಶೆಗೊಂಡರೆ, ದುಃಖ ಮತ್ತು ಕೋಪವನ್ನು ಅನುಭವಿಸುವುದು ಸರಿ ಎಂದು ತಿಳಿಯಿರಿ. ಆ ಭಾವನೆಗಳನ್ನು ಇಟ್ಟುಕೊಳ್ಳುವುದನ್ನು ನೀವು ತಪ್ಪಿಸಬೇಕು. ಅದರ ಬಗ್ಗೆ ತಿಳಿಸಿ ಮತ್ತು ಅದರ ಬಗ್ಗೆ ಸ್ನೇಹಿತರೊಂದಿಗೆ ಮಾತನಾಡಿ.

೫.ನಿಮ್ಮ ಆಶೀರ್ವಾದವನ್ನು ಎಣಿಸಿ

ನೀವು ಮಂಕಾಗಿ ಭಾವಿಸುತ್ತಿರುವಾಗ, ಯಾವಾಗಲೂ ನಿಮ್ಮ ಆಶೀರ್ವಾದವನ್ನು ಎಣಿಸಲು ಮರೆಯದಿರಿ. ಪ್ರತಿಯೊಬ್ಬರೂ ಕುಟುಂಬವನ್ನು ಹೊಂದಿಲ್ಲ ಮತ್ತು ಪ್ರತಿಯೊಬ್ಬರೂ ಕೆಲಸ ಹೊಂದಿಲ್ಲ. ಕೆಲಸದ ಜೀವನವು ಕಠಿಣವಾಗಿರಬಹುದು ಆದರೆ ಕೊನೆಯಲ್ಲಿ, ಇದು ಎಲ್ಲ ಹೋರಾಟಗಳನ್ನೂಫಲಪ್ರದವಾಗಿ  ಮಾಡುತ್ತದೆ - ಅದನ್ನು ನಿರಾಕರಿಸುವಂತಿಲ್ಲ. ಆದ್ದರಿಂದ, ಸಕಾರಾತ್ಮಕವಾಗಿ ಉಳಿಯಿರಿ ಮತ್ತು ಕಷ್ಟಪಡುವುದನ್ನು ಹೊರದಬ್ಬಿ.

೬.ನಿಮ್ಮನ್ನು ಕೆಳಗೆ ತರಲು ಕೆಲವರು ಪ್ರಯತ್ನಿಸುತ್ತಾರೆ

ನೀವು ಏನು ಮಾಡಿದ್ದರೂ, ನೀವು ಏನು ಮಾಡುತ್ತಿರುವಿರಿ ಎಂಬುದು ಅವರ ಸ್ವಂತ ಸದಾಚಾರದ ಪ್ರಕಾರ ಸರಿಯಾಗಿಲ್ಲ ಎಂದು ಹೇಳುವ ಮೂಲಕ ನಿಮ್ಮನ್ನು ಕೆಳಗೆ ತರಲು ಪ್ರಯತ್ನಿಸುವ ಜನರಿರುತ್ತಾರೆ.ಮತ್ತೆ, ನೀವು ಕೆಲಸ ಮಾಡಲು ಪ್ರಾರಂಭಿಸಿದ ಕಾರಣವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವ ಮೂಲಕ ಈ ಸನ್ನಿವೇಶಗಳನ್ನು ಹೊಂದಿಸಿಕೊಳ್ಳಲು ಪ್ರಯತ್ನಿಸಿ .ನೀವು ಎಲ್ಲಿಯವರೆಗೆ ಒಳ್ಳೆಯ ತಾರ್ಕಿಕ ಮತ್ತು ನೀವು ಪ್ರಾರಂಭಿಸಿದ್ದಕ್ಕಾಗಿ ಬಲವಾದ ಧೋರಣೆಯನ್ನು ಹೊಂದಿರುತ್ತೀರಿ ಅಲ್ಲಿಯವರೆಗೆ ನಿಮ್ಮನ್ನು ಯಾವುದೂ ತಡೆಯಲಾರದು.

೭.ಅದು ನಿಮ್ಮನ್ನು ಅವರಿಸಿಕೊಳ್ಳುವಂತೆ ಮಾಡದಿರಿ

ಮನೆಯಲ್ಲಿ ಮತ್ತು ಕೆಲಸದಲ್ಲೂ ನರಕದ ಒತ್ತಡ ಬಹಳಷ್ಟು ಇರುತ್ತದೆ ಎಂಬುವುದನ್ನು  ವಾಸ್ತವವಾಗಿ ನಿರಾಕರಿಸುವಂತಿಲ್ಲ. ವಾರದ ದಿನಗಳಲ್ಲಿ ನೀವು ಅವರೊಂದಿಗೆಏಕೆ ಸಮಯವನ್ನು ಕಳೆಯುತ್ತಿಲ್ಲ  ಎಂಬುದನ್ನು ತಿಳಿದುಕೊಳ್ಳಲು ಮಕ್ಕಳು ಚಿಕ್ಕವರಾಗಿರಬಹುದು. ವಾರಾಂತ್ಯದಲ್ಲಿ ಯೋಜಿತ  ಕುಟುಂಬದ ಪ್ರವಾಸ ಅಥವಾ ಸರಳವಾಗಿ ಕುಟುಂಬದೊಂದಿಗೆ ಗುಣಮಟ್ಟದ ಸಮಯಕ್ಕಾಗಿ ಭಾನುವಾರವನ್ನು ಅರ್ಪಿಸಿ. ಈ ರೀತಿಯಾಗಿ, ನಿಮ್ಮ ಸಮಯ ಮತ್ತು ಕೆಲಸದ ನಡುವೆ ನಿಮ್ಮ ಸಮಯವನ್ನು ವಿಭಜಿಸಲು ನೀವು  ಉತ್ತಮ ಕೆಲಸ ಮಾಡುತ್ತಿದ್ದ್ದೀರಿ ಎಂದು ನಿಮ್ಮ ಮಗು ತಿಳಿಯುತ್ತದೆ. ಇದರ  ಹೊರತಾಗಿಯೂ, ನೀವು ಮಂಕಾಗಿ ಭಾವಿಸುವ ದಿನಗಳು ಇರುತ್ತವೆ - ವಿಶೇಷವಾಗಿ ನಿಮ್ಮ ಮಗು ಅಮ್ಮನ  ಜೊತೆ ಸಾಕಷ್ಟು ಸಮಯ ಕಳೆಯಲು ಪಡೆಯದ ಬಗ್ಗೆ ಅಳಬಹುದು . ಇದನ್ನು ಕುರಿತು ನಿಮ್ಮ ಪತಿಯೊಂದಿಗೆ ಮಾತನಾಡುವುದು ಒಳ್ಳೆಯದು. ಅವರು ಕೆಲಸ ಮಾಡುವ ಪೋಷಕರಾಗಿದ್ದರೆ ನಿಮ್ಮ ನಿರಾಶೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon