Link copied!
Sign in / Sign up
1
Shares

ಹೊಸದಾಗಿ ತಾಯಿಯಾದವರಿಗೆ, ನೀವು ಕೇಳಬಾರದ ೫ ಪ್ರಶ್ನೆಗಳು

ನಿಮ್ಮ ಗೆಳತಿಗೆ ಇತ್ತೀಚಿನ ದಿನಗಳ್ಳಲ್ಲಿ ಮಗು ಜನಿಸಿದೆ. ನೀವು ಅವರನ್ನು ಮಾತನಾಡಿಸಿ, ಮಗುವಿನ ಯೋಗ ಕ್ಷೇಮ ವಿಚಾರಿಸಲೆಂದು ಹೋಗುವಿರಿ, ಆದರೆ ಯಾವ ರೀತಿಯ ಪ್ರಶ್ನೆಗಳ್ಳನ್ನು ಕೇಳಬೇಕು ಎಂದು ಕಕ್ಕಾಬಿಕ್ಕಿಯಾಗಿದ್ದೀರಾ?

ಎಷ್ಟೇ ಆತ್ಮೀಯ ಸ್ನೇಹಿತೆಯಾಗಿದ್ದರೂ, ಕೆಲವೊಮ್ಮೆ ನೀವು ಅವರ ಖಾಸಗಿ ವಿಷಯಗಳ್ಳನ್ನು ಕೇಳಿದಾಗ  ಅಥವಾ ಅವರಿಗೆ ಸಲಹೆ ನೀಡಿದಾಗ, ಕಿರಿಕಿರಿ ಅನ್ನಿಸುತ್ತದೆ. ನೀವು ನಿಮ್ಮ ಸ್ನೇಹಿತೆಯ ಬಳಿ ಯಾವ ಪ್ರಶ್ನೆಯನ್ನು ಕೇಳಬೇಕು/ ಕೇಳಬಾರದು ಎಂಬುದನ್ನು ತಿಳಿದುಕೊಳ್ಳಬೇಕಾದರೆ ಮುಂದೆ ಓದಿ.

ಯಾವ ಯಾವ ಪ್ರಶ್ನೆಗಳ್ಳನ್ನು ನೀವು ಕೇಳಲೇಬಾರದು ಎಂಬ ಪಟ್ಟಿ ಇಲ್ಲಿದೆ.
೧. ಮಗುವಿಗೆ ಪ್ರತಿನಿತ್ಯ ಹಾಲು ಕುಡಿಸುತ್ತಿದ್ದೀರಾ?

ಆಹಾ! ನಗು ಬಂತಾ?. ಹೌದು ಕೆಲವೊಮ್ಮೆ ಮಗುವನ್ನು ನೋಡಲು ಹೋದ ಮಹಿಳೆಯರು ಈ ರೀತಿಯ ಪ್ರಶ್ನೆಯನ್ನು ಕೇಳುವುದು ಹೊಸದೇನಲ್ಲ. ಶೇಖಡ ೯೦% ತಾಯಂದಿರಿಗೆ , ಅವರ ಜೀವನದ್ದಲ್ಲಿ ಇಂತಹ ಅನುಭವವಾಗದಿರಲು ಸಾಧ್ಯವಿಲ್ಲ. ಮಗುವಿನ ಬಗ್ಗೆ, ಹೆಚ್ಚಿನ ಕಾಳಜಿ, ಪ್ರೀತಿ ತಾಯಿಯಲ್ಲದೆ ಬೇರೆ ಯಾರಿಗೆ ಇರಲು ಸಾಧ್ಯ ನೀವೇ ಹೇಳಿ. ಆದ್ದರಿಂದ ಈ ರೀತಿಯ ಪ್ರಶ್ನೆಯನ್ನು ಕೇಳಿ, ಅವರ ಹಾಸ್ಯಕ್ಕೆ ಗುರಿಯಾಗದಿರಿ.

೨.  ಕೆಲಸಕ್ಕೆ ಮತ್ತೆ ಯಾವಗ ಹೋಗುತ್ತೀರಾ?

ನೀವು ನಿಮ್ಮ ಗೆಳತಿಗೆ ಎಷ್ಟೇ ಒಳ್ಳೆಯ ಸ್ನೇಹಿತೆಯಾಗಿದ್ದರೂ, ಕೆಲವೊಂದು ಬಾರಿ ಎಲ್ಲಾ ವಿಷಯಗಳಿಗೆ ಮೂಗು ತೂರಿಸದೆ ಇದ್ದಾರೆ ಒಳ್ಳೆಯದು. ನೀವು ಒಳ್ಳೆಯ ಉದ್ದೇಶದಿಂದಲೇ ಕೇಳಿದ್ದರು, ಕೆಲಸದ ವಿಷಯವನ್ನು ಚರ್ಚಿಸುವುದಕ್ಕೆ ಇದು ಒಳ್ಳೆಯ ಸಮಯವಲ್ಲ. ನಿಮ್ಮ ಗೆಳತಿ ತಾವಾಗೆಯೇ, ಕೆಲಸಕ್ಕೆ ಹೋಗುವುದ್ದನ್ನು ನಿಮ್ಮೊಂದಿಗೆ ಹಂಚಿಕೊಂಡರೆ, ನಂತರ ನೀವು ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ. ಇಲ್ಲವಾದ್ದಲ್ಲಿ, ನೀವು ಅವರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆಗಳು ಹೆಚ್ಚು.

೩. ಎರಡನೇ ಮಗು ಯಾವಾಗ?

ನಿಮ್ಮ ದಿನವನ್ನು ನೀವಾಗಿಯೇ ಹಾಳು ಮಾಡಿಕೊಳ್ಳುವ ಮನಸಿದ್ದರೆ, ಈ ಪ್ರಶ್ನೆಯನ್ನು ಕೇಳಿ. ಪ್ರಸವದ ನೋವು, ನಿದ್ರೆಯಿಲ್ಲದ ರಾತ್ರಿಗಳು, ದಿನಚರಿಯಲ್ಲಿ ಬದಲಾವಣೆ, ಮಾನಸಿಕ ಒತ್ತಡ ಇತ್ಯಾದಿ. ಇವೆಲ್ಲವುದರ ಮಧ್ಯೆ ಈಗಾಗಲೇ ಸಾಕಷ್ಟು ಆಯಾಸಗೊಂಡ ತಾಯಿಗೆ , ಈ ರೀತಿಯ ಪ್ರಶ್ನೆಗಳ್ಳನ್ನು ಕೇಳಿದಾಗ, ಸಹಜವಾಗಿ ನಿಮ್ಮ ಮೇಲೆ ರೇಗುತ್ತಾರೆ. ಮಗುವಾದ ಬಳಿಕ ಅವರ ಜೀವನದ್ದಲ್ಲಿ ಸಾಕಷ್ಟು ಬದಲವಾಣೆಗಳಾಗಿರುತ್ತದೆ, ಅವುಗಳಿಗೆ ಹೊಂದಿಕೊಳ್ಳಲು ಅವರಿಗೆ  ಸ್ವಲ್ಪ  ಸಮಯವನ್ನು ನೀಡಿ.

೪. ಸಂಭೋಗ ಮತ್ತೆ ಪ್ರಾರಂಭಿಸಿದ್ದೀರಾ?

ಅವರ ಜೀವನದ್ದಲ್ಲಿ ಹೊಸದಾಗಿ ತಾಯಿಯ ಜವಾಬ್ಧಾರಿಯನ್ನು ನಿಭಾಯಿಸಲು ಒದ್ದಾಡುತ್ತಿರುವ ಸಮಯದ್ದಲ್ಲಿ, ನೀವು ಈ ರೀತಿಯ ಪ್ರಶ್ನೆಗಳ್ಳನ್ನು ಕೇಳುವುದು ಸಮಂಜಸವಲ್ಲ. ಮಗುವಿನ ಪೋಷಣೆ, ಪ್ರಸವದ ನಂತರದ ನೋವು, ಹೊಸ  ಜೀವನ ಇವೆಲ್ಲವುದರ ಮಧ್ಯೆ ಏಕಾಂತಕ್ಕೆ ಸಮಯ ಎಲ್ಲಿಂದ ಸಿಗಬೇಕು ಹೇಳಿ? ಹಾಗಾಗಿ ಈ ತರಹದ ಪ್ರಶ್ನೆಗಳನ್ನು ಕೇಳುವುದು ಸೂಕ್ತವಲ್ಲ.

೫. ಅವನು/ಅವಳು ಒಳ್ಳೆಯ ಮಗುವೇ?

ಯಾವ ಪೋಷಕರು ಸಹ ಈ ಪ್ರಶ್ನೆಗೆ ಬಹುಶಃ ಉತ್ತರಿಸುವುದ್ದಿಲ್ಲ. ಅವರಿಗೆ ಅವರ ಮಗು ಎಷ್ಟು ಗಲಾಟೆ ಮಾಡಿದರೂ, ಅದು ಅವರ ಕರುಳಿನ ಮುದ್ದಿನ ಕೂಸಾಗಿರುತ್ತದೆ. ಕೆಲವು ದಿನಗಳು ತ್ರಾಸದಾಯಕವಾಗಿದ್ದರು, ಮಗುವಿನ ನಗು ಎಲ್ಲವನ್ನು  ಮರೆಸುತ್ತದೆ. ಹೀಗೆ ಮಗುವನ್ನು ನೋಡಿಕೊಳ್ಳುವ ವಿಷಯದ್ದಲ್ಲಿ ಸಲಹೆಗಳ್ಳನ್ನು ನೀಡಿ, ನಿಮ್ಮ ಬುದ್ಧಿವಂತಿಕೆಯ ಪ್ರದರ್ಶನ ಮಾಡಲು ಹೋಗಿ ಪೇಚಿಗೆ ಸಿಲುಕಬೇಡಿ.

ಹಾಗದರೆ ಯಾವ ರೀತಿಯ ಪ್ರಶ್ನೆಗಳ್ಳನ್ನು ಕೇಳಬೇಕು ಎಂದು ನೀವು ಯೋಚಿಸುತ್ತಿದ್ದೀರಾ? ಮುಂದೆ ಓದಿ.

-ಬೇಡದ ಪ್ರಶ್ನೆಗಳ್ಳನ್ನು ಕೇಳುವ ಬದಲು,ನಿಮ್ಮ ಗೆಳತಿಗೆ ಯಾವ ರೀತಿಯ ಸಹಾಯದ ಅಗತ್ಯತೆಯಿದೆ ಎಂದು ಅವರಿಂದಲೇ ತಿಳಿದುಕೊಳ್ಳಿ. ಸಣ್ಣ ಪುಟ್ಟ ಮನೆಯ ಕೆಲಸದ್ದಲ್ಲಿ ಭಾಗಿಯಾಗಿ, ಅಂಗಡಿಯಿಂದ  ಸಾಮಾನು ತಂದುಕೊಡುವುದು ಮುಂತಾದ ಕೆಲಸಗಳಿಗೆ ನಿಮ್ಮ ಕೈ ಜೋಡಿಸಿ.

- ಅವರ ಮಗು ಯಾವುದ್ದನ್ನು ಹೊಸದಾಗಿ ಕಲಿತಿದೆ ಎಂದು ಕೇಳಿ. ಹೀಗೆ ಮಾಡುವುದರಿಂದ ನಿಮ್ಮ ಗೆಳತಿ ನಿಮ್ಮೊಂದಿಗೆ ಹೆಚ್ಚು ಆತ್ಮೀಯರಾಗುತ್ತಾರೆ. ಮಕ್ಕಳ ಫೋಟೋ ಅಥವಾ ವೀಡಿಯೋ ನೋಡಿ, ನೀವು ಸಂತೋಷವನ್ನು ವ್ಯಕ್ತ ಪಡಿಸಿದರೆ ಸಾಕು, ಪೋಷಕರು ಆನಂದದ ಅಲೆಯಲ್ಲಿ ತೇಲುತ್ತಾರೆ.

- ಅವರಿಗಾಗಿ  ರುಚಿಕರವಾದ ಅಡಿಗೆ ಮಾಡಿ ಅಥವಾ ಅವರೊಂದಿಗೆ ಕೆಲ ಕಾಲ ಹೊರಗೆ ಹೋಗಿ  ಸಮಯ ಕಳೆಯಿರಿ. ಇದರಿಂದ ನಿಮ್ಮ ಗೆಳತಿಗೆ, ನೀವು ಮನಸ್ಪೂರ್ವಕವಾಗಿ  ಸಹಾಯ ಮಾಡಲು ಬಂದಿದ್ದೀರಿ ಎಂಬುದು ಅರಿವಾಗುತ್ತದೆ.

- ಸಣ್ಣ ಉಡುಗೊರೆಯೊಂದ್ದನ್ನು ಅವರಿಗಾಗಿ ನೀಡಿ.

- ಹೂವಿನ ಗುಚ್ಛದೊಂದಿಗೆ, ಒಂದು ಸಣ್ಣ ಪ್ರೀತಿಯಿಂದ ಬರೆದ ಪತ್ರವನ್ನು ನೀಡಿ. ಹೂವಿನ ಪರಿಮಳ ಮನಸ್ಸನ್ನು ತಿಳಿಗೊಳಿಸುತ್ತದೆ.

- ಇದೆಲ್ಲವುದ್ದಕ್ಕಿಂತ ಒಳ್ಳೆಯ ಉಪಾಯಾವೇನೆಂದರೆ, ಬೇಡದ ಸಲಹೆಗಳ್ಳನ್ನು ನೀಡದೆ, ಸುಮ್ಮನೆ ಮೌನವಾಗಿ ಕುಳಿತುಕೊಳ್ಳುವುದು ಒಳ್ಳೆಯದು. ಮಗುವಿನ ತಂದೆ ತಾಯಿಗಳಿಗೆ ಮಾತನಾಡಲು ಅವಕಾಶ ನೀಡಿ. ಹೀಗೆ ಮಾಡುವುದರಿಂದ ನಿಮ್ಮ ಗೆಳತಿಯು,

ನಿಮ್ಮೊಂದಿಗೆ ತನ್ನ ಮಗುವಿನ ಆಗಮನದ ಕ್ಷಣಗಳ್ಳನ್ನು ಹಂಚಿಕೊಂಡು ಮತ್ತಷ್ಟು ಖುಷಿ ಪಡುತ್ತಾರೆ.

ಈ ಲೇಖನ ನಿಮಗೆ ಉಪಯುಕ್ತವೆನಿಸಿದರೆ, ನಿಮ್ಮಂತೆ ಮಗುವಿನ ಆರೋಗ್ಯದ ಬಗ್ಗೆ ಕಾಳಜಿವಹಿಸುವ ಸಾವಿರಾರು ತಾಯಂದಿರೊಂದಿಗೆ ಇದನ್ನು ಹಂಚಿಕೊಳ್ಳಿ.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon