Link copied!
Sign in / Sign up
30
Shares

ಕೆಳ ಹೊಟ್ಟೆಯ ಮತ್ತು ತೊಡೆಯ ಭಾಗದಲ್ಲಿನ ಕೊಬ್ಬು ಕರಗಿಸಲು ಏನು ಮಾಡಬೇಕು?

ಪ್ರತಿಯೊಂದು ಹೆಣ್ಣು ತನ್ನದೇ ಆದ ರೀತಿಯಲ್ಲಿ ಸುಂದರವಾಗಿರುತ್ತಾಳೆ. ಪ್ರತಿಯೊಂದು ಹೆಣ್ಣಿಗೂ ತನ್ನದೇ ಆದ ಮೌಖಿಕ ಲಕ್ಷಣಗಳು ಮತ್ತು ವೇಷಶೈಲಿ ಇರುತ್ತದೆ. ನೀವು, ಹೌದು ನೀವೇ - ತುಂಬಾ ಸುಂದರವಾಗಿದ್ದೀರ. ಆದರೆ, ಈ ಭೂಮಿಯ ಮೇಲೆ ಯಾವ ಹೆಣ್ಣು ಕೂಡ ತನ್ನ ಸೌಂದರ್ಯದ ಬಗ್ಗೆ ಸಂಪೂರ್ಣ ಸಂಬಂಧ ಹೊಂದಿರುವುದಿಲ್ಲ. ತನ್ನ ನೋಟದ ಬಗ್ಗೆ ಪ್ರತಿ ಹೆಣ್ಣಿಗೂ ಕನಿಷ್ಠಪಕ್ಷ ಒಂದಾದರೂ ಅಭದ್ರತೆಯ ಭಾವ ಇದ್ದೇ ಇರುತ್ತದೆ. ಆದರೆ ಬಹಳಷ್ಟು ಹೆಂಗಸರು ತಮ್ಮ ಬಗ್ಗೆ ತಾವು ಅಭದ್ರತೆಯ ಭಾವ ಹೊಂದುವುದು ಯಾವ ವಿಷಯದ ಬಗ್ಗೆ? ಊಹೆ ಕೂಡ ಮಾಡುವುದು ಬೇಡ ಅಲ್ಲವಾ? ಹೌದು, ಅದು ತಾವು ದಪ್ಪಗಿದ್ದೀವಿ ಎಂಬ ಭಾವನೆ.

ನಾವು ಊರಿನ ಜನರ ಕಣ್ಣಲ್ಲಿ ಸುಂದರವಾಗಿ ಕಾಣಿಸಿಕೊಳ್ಳಬೇಕು, ಸಮಾಜ ಸುಂದರ ಎಂದು ಏನು ಪರಿಗಣಿಸುತ್ತದೋ, ಹಾಗೆಯೇ ಆಗಬೇಕು ಎಂದು ಪಟ್ಟು ಬೀಳುವುದು ಮೂರ್ಖತನ. ನಾವು ನಮ್ಮ ತ್ವಚೆ, ಕೂದಲು ಮತ್ತು ಆರೋಗ್ಯದ ಬಗ್ಗೆ ಒಳ್ಳೆಯ ಕಾಳಜಿವಹಿಸಿ, ನಮಗೆ ಎಷ್ಟು ಸಾಧ್ಯವೋ ಅಷ್ಟು ಉತ್ತಮವಾಗಿ ನಮ್ಮ ದೇಹವನ್ನ ಕಾಪಾಡಿಕೊಳ್ಳುವುದರ ಕಡೆ ಗಮನ ಹರಿಸಬೇಕು. ಒಂದು ವೇಳೆ ನೀವು ನಿಮ್ಮ ಹೊಟ್ಟೆ ಮತ್ತು ತೊಡೆ ಭಾಗಗಳಲ್ಲಿನ ಕೊಬ್ಬನ್ನು ಕರಗಿಸಬೇಕು ಎಂದರೆ, ನೀವು ಮಾಡಬೇಕಿರುವುದು ಕೇವಲ ನಿಮ್ಮ ಆಹಾರಪದ್ದತಿ ಮತ್ತು ವ್ಯಾಯಾಮ ರೂಟೀನ್ ಬದಲಾವಣೆ. ಒಂದು ವೇಳೆ ನೀವು ವ್ಯಾಯಾಮ ಮಾಡುತ್ತಿಲ್ಲ ಎಂದರೆ ಅಥವಾ ನಿಮಗೆ ಅದನ್ನು ಮಾಡಲು ಸಮಯ ಆಗುವುದಿಲ್ಲ ಎಂದರೆ ಅಥವಾ ನಿಮಗೆ ಅದರಲ್ಲಿ ನಂಬಿಕೆ ಇಲ್ಲ ಎಂದರೆ, ಈ ಲೇಖನದ ಮುಂದಿನ ಭಾಗ ನಿಮಗಾಗಿಯೇ ಇದೆ ಓದಿ :


೧. ನೀವು ಯಾಕೆ ಮತ್ತು ಯಾವಾಗ ವ್ಯಾಯಾಮ ಮಾಡಬೇಕು

ನಾವು ಆರೋಗ್ಯಕರವಾಗಿ ಇರಬೇಕು ಎಂದರೆ, ನಾವು ನಮ್ಮ ದೇಹವು ಚಲನೆಯಲ್ಲಿ ಇರುವಂತೆ ನೋಡಿಕೊಳ್ಳಬೇಕು ಮತ್ತು ಸಕ್ರಿಯವಾಗಿ ಇರಬೇಕು. ನಮ್ಮ ದೇಹವು ಯಾವಾಗಲೂ ಚಲನೆಯಿಂದ ಕೂಡಿರುವಂತೆಯೇ ವಿನ್ಯಾಸಗೊಂಡಿದ್ದು, ನಾವು ಕುರ್ಚಿ ಮೇಲೆ ಒಂದೇ ಕಡೆ ಕುಳಿತಲ್ಲೇ ಕೂರಬಾರದು. ನಿಮಗೆ ತಿಳಿದಿರಬೇಕು ಹೇಗೆ ನಮ್ಮ ಪೂರ್ವಜರು ಹಿಂದಿನ ಕಾಲದಲ್ಲಿ ತಮ್ಮ ಆಹಾರ ದೊರಕಿಸಿಕೊಳ್ಳಲು ತಾವೇ ಕಾಡಿಗೆ ಹೋಗಿ ಬೇಟೆ ಆಡುತ್ತಿದ್ದರು ಎಂಬುದು. ಪ್ರಾಣಿಗಳು ಖಂಡಿತವಾಗಿಯೂ ನಮಗಿಂತ ವೇಗವಾಗಿ ಚಲಿಸುತ್ತೇವೆ.  ಹೀಗಾಗಿಯೇ ನಾವು ಅವುಗಳಿಗಿಂತ ವೇಗವಾಗಿ ಚಲಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕಿತ್ತು. ಅಲ್ಲದೆ ನಾವು ನಮ್ಮ ಮೇಲೆ ದಾಳಿ ಮಾಡಬಹುದಾದ ಪ್ರಾಣಿಗಳಿಂದ ಬಚಾವ್ ಆಗಲು ಕೂಡ ಓದುವುದನ್ನು ಕಲಿಯಬೇಕಿತ್ತು.


ಆದರೆ, ಈಗ ಮನೆಯಲ್ಲೇ ಕುಳಿತು ನಾವು ನಮಗೆ ಬೇಕಿರುವ ಹೋಟೆಲ್ ಇಂದ ಆಹಾರ ಆರ್ಡರ್ ಮಾಡಬಹುದು. ಈಗ ತರಕಾರಿ ಕೂಡ ಮನೆ ಹೊರಗಡೆ ಹೋಗದೆ ಆನ್ಲೈನ್ ಅಲ್ಲೇ ಆರ್ಡರ್ ಮಾಡಬಹುದು. ಆದರೆ ಇವೆಲ್ಲವು ಇರುವುದು ನಮ್ಮ ಸಮಯ ಉಳಿಸಲೆಂದು. ನಾವು ಇದಕ್ಕೆ ಎಕ್ಸ್ಟ್ರಾ ಡೆಲಿವರಿ ಚಾರ್ಜ್ ಕೊಡುವ ಬದಲು ಸ್ವತಃ ನಾವೇ ಅವಾಗಿಂದವಾಗ ಒಂದೆರೆಡು ಹೆಜ್ಜೆ ಹಾಕಿ ಅಂಗಡಿಗೆ ಯಾಕೆ ಹೋಗಿ ತರಬಾರದು?

ನೀವು ಕಚೇರಿಯಲ್ಲಿ ಕುಳಿತಲ್ಲೇ ಕೆಲಸ ಮಾಡಬೇಕು ಎಂದರೆ, ಪ್ರತಿ 20-30 ನಿಮಿಷಗಳಿಗೆ ಒಮ್ಮೆ ಅಲಾರ್ಮ್ ಇಟ್ಟುಕೊಂಡು ಎದ್ದು, ಒಂದೆರೆಡು ನಿಮಿಷ ನಡೆದಾಡಲು ಬ್ರೇಕ್ ತೆಗೆದುಕೊಳ್ಳಿ. ಪ್ರತಿದಿನ ಬೆಳಗ್ಗೆ ವಾಕಿಂಗ್ ಹೋಗಿ. ಒಂದು ವೇಳೆ ನೀವು ಬೆಳಗ್ಗೆ ಸಮಯದಲ್ಲಿ ಬ್ಯುಸಿ ಇರುತ್ತೀರಿ ಎಂದರೆ, ಒಂದು ಘಂಟೆ ಬೇಗ ಎದ್ದೇಳಿ ಅಥವಾ ಮನೆಯಲ್ಲಿನ ಇತರೆ ವ್ಯಕ್ತಿಗಳಿಂದ ನಿಮ್ಮ ಕೆಲಸಗಳನ್ನ ಸ್ವಲ್ಪ ಬೇಗ ಮುಗಿಸಲು ಸಹಾಯ ಪಡೆದುಕೊಳ್ಳಿ. ನೀವು ಬೆಳಗ್ಗೆ ಎದ್ದು ಆಗಷ್ಟೇ ಉದಯಯಿಸಿದ ಸೂರ್ಯನ ಕಿರಣಗಳಿಗೆ ತೆರೆದುಕೊಂಡರೆ, ನಿಮಗೆ ಅಮೂಲ್ಯವಾದ ವಿಟಮಿನ್-D ಸಿಗುತ್ತದೆ. ಈ ವಿಟಮಿನ್-D ನಿಮ್ಮ ಮೂಳೆಯು ಕ್ಯಾಲ್ಸಿಯಂ ಅನ್ನು ಸುಲಭವಾಗಿ ಹೀರುವಂತೆ ಮಾಡುತ್ತದೆ. ಇದರಿಂದ ನಿಮ್ಮ ಮೂಳೆಗಳು ಗಟ್ಟಿಯಾಗುತ್ತವೆ.


೨. ಯಾವ ರೀತಿಯ ವ್ಯಾಯಾಮಗಳು

ಒಂದು ವೇಳೆ ನೀವು ಕೇವಲ ನಿಮ್ಮ ಹೊಟ್ಟೆ ಮತ್ತು ತೊಡೆಯ ಕೊಬ್ಬನ್ನು ಮಾತ್ರ ಕರಗಿಸಬೇಕು ಎಂದರೆ, ಅದು ಸಾಧ್ಯವಿಲ್ಲ. ಯಾವುದೇ ಒಂದೇ ಭಾಗದಲ್ಲಿ ಕೊಬ್ಬು ಕರಗಿಸಲು ಆಗುವುದಿಲ್ಲ. ನೀವು ವ್ಯಾಯಾಮ ಮಾಡಿದಾಗ ನಿಮ್ಮ ದೇಹದ ಎಲ್ಲಾ ಭಾಗಗಳಲ್ಲೂ ಸಮನಾಗಿ ಕೊಬ್ಬು ಕರಗುತ್ತದೆ. ಒಂದು ವೇಳೆ ನಿಮ್ಮ ಹೊಟ್ಟೆ ಮತ್ತು ತೊದೆಭಾಗದಲ್ಲಿ ಹೆಚ್ಚು ಕೊಬ್ಬು ಇದ್ದರೆ, ನೀವು ಸರಿಯಾದ ವ್ಯಾಯಾಮಗಳನ್ನ ಮಾಡಿ, ನಿಮ್ಮ ಆಹಾರಪದ್ದತಿಯಲ್ಲಿ ಸ್ವಲ್ಪವೇ ಸ್ವಲ್ಪ ಬದಲಾವಣೆಗಳನ್ನ ಮಾಡಿಕೊಂಡರೆ, ಆ ಕೊಬ್ಬನ್ನು ಕರಗಿಸಬಹುದು.

ಪ್ರತಿದಿನವೂ ನಿಮ್ಮ ದೇಹದ ಒಂದು ಭಾಗಕ್ಕೆ ಸಹಾಯ ಮಾಡುವಂತಹ ವ್ಯಾಯಾಮ ಮಾಡಲು ರೂಢಿಸಿಕೊಳ್ಳಿ. ಸೋಮವಾರ ನೀವು ಸ್ಕ್ವಾಟ್ಸ್ (ಭಸ್ಕಿ ಹೊಡೆಯುವುದು, ಬೇರೆ ಬೇರೆ ರೀತಿಯಲ್ಲಿ), ಜಂಪಿಂಗ್ ಜಾಕ್ಸ್ ಮಾಡಬಹುದು. ಮಂಗಳವಾರದಂದು ನಿಮ್ಮ ಕೋರ್ ಸ್ನಾಯುಗಳಿಗೆ ವ್ಯಾಯಾಮ ಮಾಡಿ - ಅವುಗಳೆಂದರೆ ವಿವಿಧ ಪ್ಲಾಂಕ್ ವ್ಯಾಯಾಮಗಳು, ಪುಶ್-ಅಪ್ಸ್  ಮತ್ತು ಕ್ರಂಚಸ್.

ಬುಧವಾರದಂದು ನಿಮ್ಮ ಹೃದಯಕ್ಕೆ ಸಂಬಂಧಿಸಿದ ವ್ಯಾಯಾಮಗಳಾದ - ಸ್ಕಿಪ್ಪಿಂಗ್, ಜಂಪಿಂಗ್ ಜಾಕ್ಸ್ ಮತ್ತು ಜಾಗಿಂಗ್ ಮಾಡಿ. ಗುರುವಾರದಂದು ತೂಕಗಳನ್ನ ಎತ್ತಿ. ನೀವು ವಾರದ ಎರಡು-ಮೂರು ದಿನದಂದು ಸುಸ್ತಾಗಿದ್ದಾರೆ ಬ್ರೇಕ್ ತೆಗೆದುಕೊಳ್ಳಬಹುದು. ನೀವು ಇದರೊಂದಿಗೆ ಕೆಲವು ಸ್ಟ್ರೆಚಿಂಗ್ ಮತ್ತು ಯೋಗವನ್ನು ಕೂಡ ಅಳವಡಿಸಿಕೊಳ್ಳಬೇಕು. ಇದು ಕೇವಲ ಒಂದು ಮಾರ್ಗದರ್ಶಿ ಆಗಿದ್ದು, ನೀವು ಹೀಗೇ ಮಾಡಬೇಕೆಂಬ ನಿಯಮವಿಲ್ಲ. ನಿಮಗೆ ವ್ಯಾಯಾಮ ಮಾಡಲು ಮನಸ್ಸಿಲ್ಲದ ದಿನಗಳಂದು ನೀವು ಮಜಭರಿತವಾದ ಇತರೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದು. ನೀವು ಏರೋಬಿಕ್ ವೀಡಿಯೋಸ್, ಕುಣಿತದ ಹಾಡುಗಳಿಗೆ ಹೆಜ್ಜೆ ಹಾಕುವುದು ಮಾಡಬಹುದು. ಈ ವಿಡಿಯೋಗಳು ನೀವು ಎಷ್ಟು ನಿಮಿಷಗಳ ಕಾಲ ವರ್ಕೌಟ್ ಮಾಡಬೇಕು ಎಂಬುದನ್ನ ಕೂಡ ತೋರಿಸುತ್ತವೆ. ಹೀಗಾಗಿ ನಿಮಗೆ ಎಷ್ಟು ಸಮಯದವರೆಗೆ ಮಾಡಬೇಕೆಂದು ನಿಗದಿತವಾಗಿ ತಿಳಿಯುತ್ತದೆ.


೩. ನೀವು ಏನನ್ನು ತಿನ್ನಬೇಕು


ನೀವು ತೂಕ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೀರಾ ಎಂದ ಮಾತ್ರಕ್ಕೆ ನೀವು ತಿನ್ನುವುದನ್ನೇ ನಿಲ್ಲಿಸಬೇಕು ಎಂದಲ್ಲ. ನೀವು ಏನು ತಿನ್ನುತ್ತಿರುವಿರೋ ಅದರಲ್ಲೇ ಬದಲಾವಣೆಯನ್ನ ಮಾಡಿಕೊಳ್ಳಬೇಕು. ನೀವು ಉತ್ತಮ ಪ್ರಮಾಣದ ಪ್ರೋಟೀನ್, ಕೊಬ್ಬು, ವಿಟಮಿನ್ಸ್ ಮತ್ತು ಮಿನರಲ್ಸ್ ಅನ್ನು ಸೇವಿಸಬೇಕು. ಕಡಿಮೆ ಪ್ರಮಾಣದ ಕಾರ್ಬ್ಹೈಡ್ರೇಟ್ ಆಹಾರವನ್ನು ಪಾಲಿಸಿದರೆ, ನೀವು ಕೊಬ್ಬನ್ನು ವೇಗವಾಗಿ ಕರಗಿಸಬಹುದು. ನೀವು ಕೊಬ್ಬನ್ನು ಕರಗಿಸಬೇಕು ಎಂದುಕೊಂಡಾಗ ನಿಮ್ಮ ದೇಹವನ್ನ ಜಲೀಕರಣ ಹೊಂದಿರುವಂತೆ ನೋಡಿಕೊಳ್ಳಬೇಕು. ಯಥೇಚ್ಛವಾಗಿ ನೀರನ್ನು ಸೇವಿಸುತ್ತಿರಿ. ನೀವು ಹೆಚ್ಚು ನೀರು ಕುಡಿಯದೆ ತೂಕವನ್ನ ಇಳಿಸಿಕೊಂಡರೆ, ನಿಮ್ಮ ದೇಹದ ಮೇಲೆ ಸ್ಟ್ರೆಚ್ ಮಾರ್ಕುಗಳು ಮೂಡುತ್ತವೆ.  

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon