Link copied!
Sign in / Sign up
8
Shares

ಕರುಳ ಬಳ್ಳಿಯನ್ನು ಕತ್ತರಿಸಲು ನೀವು ಎಷ್ಟು ಸಮಯ ಕಾಯಬೇಕು?

ಕರುಳುಬಳ್ಳಿ/ಹೊಕ್ಕುಳಬಳ್ಳಿಯನ್ನು ಅಷ್ಟು ಬೇಗ ಕತ್ತರಿಸಬೇಡಿ: ಜನನದ ನಂತರ ಸಂಕ್ಷಿಪ್ತವಾದ ವಿರಾಮವು ಹೆಚ್ಚು ನವಜಾತ ಶಿಶುವಿಗೆ ಲಾಭದಾಯಕವಾಗಿದ್ದು ಆಮ್ಲಜನಕ-ಭರಿತ ರಕ್ತವನ್ನು ಉಂಟುಮಾಡುತ್ತದೆ. ಎಲ್ಲಾ ನವಜಾತ ಶಿಶುಗಳ ಆರೋಗ್ಯದ ದೃಷ್ಟಿಯಿಂದ ಮಗು ಜನಿಸಿದ ಕನಿಷ್ಠ ೪೦ರಿಂದ ೬೦ ಸೆಕೆಂಡುಗಳು ಹೊಕ್ಕುಳ ಬಳ್ಳಿಯನ್ನು ಕತ್ತರಿಸದೆ ಬಿಡುವುದು ಒಳ್ಳೆಯದು ಎಂದು ಇತ್ತೀಚಿನ US ನ ಪ್ರಸೂತಿ ಚರ್ಚೆಯಲ್ಲಿ ಶಿಫಾರಸ್ಸು ಮಾಡಲಾಗಿದೆ.

ಇದು ಸಾಮಾನ್ಯವಾಗಿ ಈಗ ಮಾಡುವುದಕ್ಕಿಂತ ಎರಡಿನಷ್ಟಾಗಿದೆ. ಸಾಮಾನ್ಯವಾಗಿ, ಮಗು ಜನಿಸಿದ ೨೦ ರಿಂದ ೩೦ ಸೆಕೆಂಡುಗಳಲ್ಲಿ ಹೊಕ್ಕುಳಬಳ್ಳಿಯನ್ನು ಆಸ್ಪತ್ರೆಯಲ್ಲಿ ಕತ್ತರಿಸಿ ಬಿಡುವರು. ಹೆರಿಗೆ ಕೋಣೆಯಲ್ಲಿ ಹೊಕ್ಕುಳ ಬಳ್ಳಿಯನ್ನು ಕತ್ತರಿಸುವುದು ಸ್ಮರಣೀಯ ಕ್ಷಣ.

ಅಧಿಕ ೩೦ ಸೆಕೆಂಡುಗಳು ನೋಡುವುದಕ್ಕೆ ಹೆಚ್ಚು ಕಾಣಿಸುವುದಿಲ್ಲ, ಕೇವಲ ೩೦ ಸೆಕೆಂಡು ಅನಿಸಬಹುದು, ಆದರೆ ಆ ಸಮಯದಲ್ಲಿ, ಮಗುವು ಜನಿಸಿದ ನಂತರವೂ ಶುದ್ಧ ಆಮ್ಲಜನಕ-ಭರಿತ ರಕ್ತವು ಹೊಕ್ಕುಳ ಬಳ್ಳಿಯ ಮೂಲಕ ತಾಯಿಯಿಂದ ಮಗುವನ್ನು ಸೇರುತ್ತದೆ ಎಂದು ಅಬ್ಸ್ಟೆಟ್ರಿಕ್ ಪ್ರಾಕ್ಟೀಸ್ನಲ್ಲಿ ACOG ಸಮಿತಿಯ ಡಾ ಮಾರಿಯಾ ಮಸ್ಕೋಲಾ ರವರು ಹೇಳಿದ್ದಾರೆ.

ಮಗು ಉಸಿರಾಡಲು ಪ್ರಾರಂಭಿಸಿದ ನಂತರವೂ ಹೊಕ್ಕುಳ ಬಳ್ಳಿ ಅವಶ್ಯಕತೆ ನಿಜಕ್ಕೂ ಬೇಕಾಗಿದೆಯೇ?

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಡಾ. ಟೋನ್ಸ್ ರಾಜುರವರು ಹೇಳುವ ಪ್ರಕಾರ, ಮಗುವಿಗೆ ತನ್ನ ಮೊದಲ ಉಸಿರಾಟವನ್ನು ತೆಗೆದುಕೊಳ್ಳುವಾಗ ನಡೆಯುವ ಅದ್ಭುತ ಪರಿವರ್ತನೆಯನ್ನು ವೃದ್ಧಿಸಲು ಇದು ಸಹಾಯ ಮಾಡುತ್ತದೆ.

ಗರ್ಭದಲ್ಲಿ, ನಿಮ್ಮ ಜರಾಯುವು ಮಗುವಿನ ಶ್ವಾಸಕೋಶವಾಗಿ ಕಾರ್ಯ ನಿರ್ವಹಿಸುತ್ತಿರುತ್ತದೆ. ಆದರೆ ಹುಟ್ಟಿದ ಸೆಕೆಂಡುಗಳ ಒಳಗೆ, ಸಂಚಲನವು(ಪ್ರಸಾರವು) ಬದಲಾಗುತ್ತದೆ, ಮತ್ತು ಶ್ವಾಸಕೋಶ ಒಂದು ಬಾರಿ ದ್ರವದಿಂದ ತುಂಬಿದ ಮೇಲೆ ಮಗುವು ಉಸಿರನ್ನು ತೆಗೆದುಕೊಳ್ಳುತ್ತದೆ, ಮತ್ತು ಉಸಿರಾಟವನ್ನು ಪ್ರಾರಂಭಿಸುತ್ತದೆ. ದೀರ್ಘಕಾಲಿಕ ಜರಾಯುವನ್ನು ಕತ್ತರಿಸುವುದರಿಂದ ಅದರಲ್ಲಿರುವ ರಕ್ತವನ್ನು ಕತ್ತರಿಸಿದಂತೆ ಮತ್ತು ತನ್ನ ಆರಂಭಿಕ ಉಸಿರಾಟದಲ್ಲಿ ಪೂರಕವಾಗಿಸಿಕೊಳ್ಳಲು ಈ ಹೆಚ್ಚುವರಿಯನ್ನು ತಪ್ಪಿಸುತ್ತದೆ.

ಅಧ್ಯಯನಗಳು ಹೇಳಿದ್ದು!

ಹೊಕ್ಕುಳ ಬಳ್ಳಿಯಿಂದ ರಕ್ತ ಪ್ರವೇಶ ಮಾಡುವುದರಿಂದ ಶಿಶುಗಳಲ್ಲಿ ಮಿದುಳಿನಲ್ಲಿ ವರ್ಗಾವಣೆ, ರಕ್ತಹೀನತೆ, ಮತ್ತು ರಕ್ತಸ್ರಾವದಂತಹ ಅಪಾಯಗಳು ತುಂಬಾ ಕಡಿಮೆ. ಅರಿವಿನ ಅಭಿವೃದ್ಧಿಯನ್ನು ವಿಳಂಬಗೊಳಿಸಬಲ್ಲ ಸೌಮ್ಯವಾದ ಕಬ್ಬಿಣದ ಕೊರತೆಯ ಅಪಾಯವನ್ನು ಇದು ಕಡಿಮೆಗೊಳಿಸುತ್ತದೆ. ಒಂದು ಅಧ್ಯಯನದ ಪ್ರಕಾರ ಹೊಕ್ಕುಳ ಬಳ್ಳಿಯನ್ನು ೩ ನಿಮಿಷಗಳ ವರೆಗೆ ಕಾದು ನಂತರ ಕತ್ತರಿಸುವುದು, ಸ್ವಲ್ಪ ಮುಂಚಿತವಾಗಿಯೇ ಮೆದುಳು ಬೆಳವಣಿಗೆಗೆ ಸಹಾಯವಾಗುತ್ತದೆ.

ಸಲಹೆ

ವಿಶ್ವ ಅರೋಗ್ಯ ಸಂಸ್ಥೆಯು ಒಂದು ನಿಮಿಷದ ನಂತರ ಹೊಕ್ಕುಳ ಬಳ್ಳಿಯನ್ನು ಕತ್ತರಿಸಲು ಸಲಹೆ ನೀಡಿದರೆ, ಕೆಲವು ಸಮೂಹಗಳು ೨ ನಿಮಿಷಗಳ ತನಕ ಅಥವಾ ೫ ನಿಮಿಷದವೆರೆಗೂ ಕಾಯಬಹುದು ಎನ್ನುತ್ತವೆ. ಮತ್ತೆ ಕೆಲವು ಸಮೂಹ ೩೦ ಸೆಕೆಂಡುಗಳಿಂದ ೬೦ ಸೆಕೆಂಡುಗಳ ನಂತರ ಕತ್ತರಿಸಲು ಸಲಹೆ ನೀಡುತ್ತವೆ.

ಮಗುವಿಗೆ ಉಸಿರಾಟದ ಸಮಸ್ಯೆಗಳು ಮತ್ತು/ಅಥವಾ ತುರ್ತು ಆರೈಕೆ ಅಗತ್ಯವಿದ್ದಲ್ಲಿ ವೈದ್ಯರು ಹೊಕ್ಕುಳಬಳ್ಳಿಯನ್ನು ಕತ್ತರಿಸಲು ವಿಳಂಬ ಮಾಡುವುದಿಲ್ಲ.

ಸಂಭಾವ್ಯ ಭವಿಷ್ಯದ ವೈದ್ಯಕೀಯ ಬಳಕೆಗಾಗಿ ಕೆಲವು ತಾಯಿಯಂದಿರು ತಮ್ಮ ಮಗುವಿನ ಹೊಕ್ಕುಳಬಳ್ಳಿಯನ್ನು ರಕ್ತದ ಬ್ಯಾಂಕ್ ಗೆ  ನೀಡುತ್ತಾರೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon