Link copied!
Sign in / Sign up
5
Shares

ಆಸ್ಪತ್ರೆಯಿಂದ ಹೊರಹಾಕಲ್ಪಟ್ಟು ಗೇಟ್ ಬಳಿ ಹೆರಿಗೆ ನೀಡಿದಳು ಈಕೆ, ಕಾರಣ ಕೇಳಿದರೆ ಬೆಚ್ಚಿ ಬೀಳುತ್ತೀರಿ!

ಹೆರಿಗೆ ಎಂಬುದು ಎಂತಹ ವೈದ್ಯಕೀಯ ಸಹಾಯ ದೊರಕಿದರೂ ಸಹ ಸ್ವಲ್ಪ ಮಟ್ಟಿಗೆ ಸುರಕ್ಷಿತವಾಗಿ ಆಗಬಹುದೇ ಹೊರತು ನೋವು ಕಡಿಮೆ ಎನ್ನುವ ಮಾತಿಲ್ಲ. ಆದರೆ, ಅಂತಹ ವೈದ್ಯಕೀಯ ಸಹಾಯವು ಇಲ್ಲದೆಯೇ ತುಂಬು ಗರ್ಭಿಣಿಯೊಬ್ಬಳು ಆಸ್ಪತ್ರೆಯ ಹೊರಬಾಗಿಲಿನಲ್ಲಿ, ರಸ್ತೆಯ ಮೇಲೆ ಮಗುವಿಗೆ ಜನ್ಮ ನೀಡಬೇಕು ಎಂದರೆ ಪರಿಸ್ಥಿತಿ ಎಷ್ಟು ಕಠಿಣವಾಗಿರಬೇಕು ಎಂಬುದನ್ನ ಊಹಿಸಿಕೊಳ್ಳಿ. ಕೇವಲ ಈ ದೃಶ್ಯವನ್ನ ನೆನಪಿಸಿಕೊಳ್ಳುವುದೇ ನಿಮ್ಮ ಮೈಯಲ್ಲಿ ನಡುಕ ತರಿಸಬಹುದು. ಅಂದಹಾಗೆ ಈಕೆ ಹೀಗೆ ರಸ್ತೆಯ ಮೇಲೆ ಮಗುವಿಗೆ ಜನ್ಮ ನೀಡಲು ಕಾರಣವೇನು ಗೊತ್ತೇ? ಆಸ್ಪತ್ರೆ ಸಿಬ್ಬಂದಿ ಈಕೆಯನ್ನ ಒಳಗಡೆ ಬಿಟ್ಟುಕೊಳ್ಳುವುದಿಲ್ಲ ಎಂದು ಹೊರದಬ್ಬಿರುವುದು!

ಜನರು ಹೀಗೂ ಮಾಡಬಹುದಾ ಎಂದು ನೀವು ಬಾಯಿ ಮೇಲೆ ಬೆರಳಿಡಬಹುದು, ಆದರೆ ಆ ಆಸ್ಪತ್ರೆ ಸಿಬ್ಬಂದಿ ಹೀಗೆ ಮಾಡಲು ಕಾರಣ ಏನು ಎಂಬುದನ್ನ ತಿಳಿದರೆ ನೀವು ತಬ್ಬಿಬ್ಬಾಗಿ ಹೋಗುತ್ತೀರಾ! ಆಕೆಯನ್ನ ಹೊರದೂಡಲು ಆಕೆ ಮಾಡಿದ ತಪ್ಪು ಒಂದೇ - ಆಕೆಯ ಬಳಿ ಆಧಾರ್ ಕಾರ್ಡ್ ಇಲ್ಲದೆ ಇರುವುದು!


ಅಂದಹಾಗೆ ಇದು ನಡೆದಿರುವುದು ಉತ್ತರ ಪ್ರದೇಶ ರಾಜ್ಯದಲ್ಲಿ. ಈ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿದೊಡನೆ, ಮನೆಮಂದಿ ಈಕೆಯನ್ನ ಆಸ್ಪತ್ರೆಗೆ ಕರೆತಂದಿದ್ದಾರೆ. ಈ ಆಸ್ಪತ್ರೆಯ ಹೆಸರು ಸಹಗಂಜ್ ಕಮ್ಯುನಿಟಿ ಆಸ್ಪತ್ರೆ. ಇಲ್ಲಿ ಪ್ರಸೂತಿ ತಜ್ಞೆಯಾದ ಶೋಭನಾ ದುಬೆ ಈ ಬಸುರಿ ಹೆಂಗಸಿಗೆ ಮತ್ತು ಅವರ ಕುಟುಂಬದವರಿಗೆ ಬ್ಯಾಂಕ್ ಪಾಸ್-ಬುಕ್ ಮತ್ತು ಆಧಾರ್ ಕಾರ್ಡ್ ತರಲು ಕೇಳಿದಳಂತೆ. ಆದರೆ ದುರದೃಷ್ಟವಶಾತ್ ಆಕೆಯ ಬಳಿ ಅವರೆಡೂ ಇರಲಿಲ್ಲ. ಹೀಗಾಗಿ ವೈದ್ಯೆ ಆ ಬಸುರಿ ಹೆಂಗಸನ್ನ ಆಸ್ಪತ್ರೆಗೆ ಅಡ್ಮಿಟ್ ಮಾಡಿಕೊಳ್ಳಲು ಹಿಂದೇಟು ಹಾಕಿದ್ದಾಳೆ ಮತ್ತು ಆ ಬಸುರಿಯ ಕುಟುಂಬದವರು ಪರಿಪರಿಯಾಗಿ ಬೇಡಿಕೊಂಡಾಗ, ಒತ್ತಾಯಪೂರ್ವಕವಾಗಿ ಹೊರತಳ್ಳಿಸಿದ್ದಾಳೆ.

ನಂತರ ಈ ಬಸುರಿ ಹೆಂಗಸು ಗೇಟ್ ಬಳಿ ರೋಡ್ ಮೇಲೆ ಮಗುವಿಗೆ ಜನ್ಮ ನೀಡಿದ್ದಾಳೆ. ಆಗ ಅಲ್ಲಿ ಓಡಾಡುತ್ತಿದ್ದ ಜನರೆಲ್ಲಾ ಸೇರಿಕೊಂಡು ಆಕೆಯನ್ನ ಪುನಃ ಆಸ್ಪತ್ರೆಯೊಳಗೆ ಎತ್ತಿಕೊಂಡು ಹೋಗಿದ್ದಾರೆ. ಆನಂತರವಷ್ಟೇ ಆ ವೈದ್ಯೆ ದುಬೆಯ್ ಮತ್ತು ಇನ್ನೋರ್ವ ಮಕ್ಕಳ ತಜ್ಞ ಗುಪ್ತಾ ಇಬ್ಬರು ಸೇರಿ ಈಕೆಗೆ ಚಿಕಿತ್ಸೆ ನೀಡಿದ್ದಾರೆ.

ಈ ಪ್ರಕರಣದ ಬಗ್ಗೆ ತನಿಖೆ ಚಾಲ್ತಿಯಲ್ಲಿದ್ದು, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕಿದೆ. ಆದರೆ ವೈದ್ಯರಿಗೆ ಈ ಬಗ್ಗೆ ಕೇಳಿದಾಗ ಅವರು “ನಾವು ಆಕೆಗೆ ಜಿಲ್ಲಾ ಆಸ್ಪತ್ರೆಗೆ ತೆರಳಲು ತಿಳಿಸಿದೆವೆ ಹೊರತು, ಹೊರದೂಡಲಿಲ್ಲ” ಎಂಬ ಹೇಳಿಕೆ ನೀಡಿದ್ದಾರೆ.

 

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon