Link copied!
Sign in / Sign up
5
Shares

ಪಟ್ಟಿ : ಸೆಕ್ಸ್ ಮತ್ತು ಅದಕ್ಕೆ ಸಂಬಂಧಿಸಿದ ಪ್ರತಿ ಕಾರ್ಯಗಳಿಂದ ಎಷ್ಟೆಷ್ಟು ಕ್ಯಾಲೋರಿಗಳನ್ನ ಕರಗಿಸಬಹುದು

ಮುದ್ದಾಡುವುದು, ಆಲಿಂಗಿಸುವುದು, ಸೆಕ್ಸ್ ಮತ್ತು ಇವುಗಳಿಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳು ನಿಮ್ಮ ಸಂಬಂಧಕ್ಕೆ ಮತ್ತು ಖುಷಿಗೆ ತುಂಬಾ ಒಳ್ಳೆಯದು, ಆದರೆ ಸಂಗಾತಿಯೊಂದಿಗಿನ ಈ ಬೆಚ್ಚನೆ ಸಮಯವು ನಿಮ್ಮ ದೈಹಿಕ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಈ ಬೆಚ್ಚನೆ ಭಾವ ಕೇವಲ ನಿಮಗೆ ಅನ್ಯೋನ್ಯತೆಯ ಭಾವವನ್ನು ತರುವುದಷ್ಟೇ ಅಲ್ಲದೆ, ನಿಮ್ಮ ಹೃದಯಬಡಿತ ಹೆಚ್ಚಿಸಿ, ನಿಮ್ಮ ಕ್ಯಾಲೋರಿಗಳನ್ನು ಕರಗಿಸುತ್ತವೆ. ನೀವು ತೂಕ ಇಳಿಸಬೇಕೆಂದರೆ ನೀವು ಕರಗಿಸಬೇಕಿರುವುದು ಈ ಕ್ಯಾಲೋರಿಗಳನ್ನೇ. ಅರ್ಧ ಕೆಜಿ ತೂಕ ಇಳಿಸಲು ನೀವು ಸೇವಿಸುವ ಕ್ಯಾಲೊರಿಗಳಿಗಿಂತ 3500 ಹೆಚ್ಚು ಕ್ಯಾಲೋರಿಗಳನ್ನು ಕರಗಿಸಬೇಕು. ಇಂತಹ ಪ್ರತಿಯೊಂದು ಪ್ರಣಯ ನಡೆಯಿಂದ ನೀವು ಎಷ್ಟು ಕ್ಯಾಲೋರಿಗಳನ್ನು ಕರಗಿಸುತ್ತೀರಾ ಎಂಬುದನ್ನು ತಿಳಿಯಿರಿ.

ಚುಂಬಿಸುವುದು : ಒಂದು ಗಂಟೆಗೆ 65 ಕ್ಯಾಲೋರಿಗಳು

ಸಂಬಂಧದ ಹೊಸತರಲ್ಲಿ ನೀಡುತ್ತಿದ್ದ ದೀರ್ಘ ಚುಂಬನಗಳು ನೆನಪಲ್ಲಿ ಇದ್ದೆ ಇರುತ್ತವೆ. ಉಸಿರುಗಟ್ಟುವವರೆಗೆ ಚುಂಬಿಸಿ, ನಂತರ ಗಾಳಿ ಸೇವಿಸಲು ವಿರಾಮ ಕೊಡುತ್ತಿದೆವು. ದೀರ್ಘವಾಗಿ ಚುಂಬಿಸುವುದು ಕೇವಲ ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವಿನ ಬಾಂಧವ್ಯ ಹೆಚ್ಚಿಸುವುದಷ್ಟೇ ಅಲ್ಲದೆ, ಕ್ಯಾಲೋರಿಗಳನ್ನು ಕರಗಿಸುತ್ತದೆ.


ಬಟ್ಟೆ ಬಿಚ್ಚಿವುದು : ಗಂಟೆಗೆ 8ಕ್ಕೂ ಹೆಚ್ಚು ಕ್ಯಾಲೋರಿಗಳು

ನೀವು ನಿಮ್ಮ ಸಂಗಾತಿಯೊಡನೆ ಮಿಲನ ಹೊಂದುವ ಸಮಯದಲ್ಲಿ ಬಟ್ಟೆ ಕಳಚಿ ಹಾಕುವುದರ ಮೇಲೆ ಅಷ್ಟೊಂದು ಗಮನ ಹರಿಸಿರುವುದಿಲ್ಲ. ಆದರೆ ಇಟಲಿಯ ಓರ್ವ ಸಂಶೋಧಕನ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ಬಟ್ಟೆ ಬಿಚ್ಚುವುದರ ಮೂಲಕ 8ಕ್ಕೂ ಅಧಿಕ ಕ್ಯಾಲೋರಿಗಳನ್ನು ಕರಗಿಸುತ್ತಾನೆ ಎಂದು ತಿಳಿಸಿದ್ದಾನೆ.


ಮಸಾಜ್ ಮಾಡುವುದು : ಗಂಟೆಗೆ 80ಕ್ಕೂ ಹೆಚ್ಚು ಕ್ಯಾಲೋರಿಗಳು

ಯಾರಿಗೆ ತಾನೇ ತಮ್ಮ ಸಂಗಾತಿಯಿಂದ ಮಸಾಜ್ ಪಡೆಯಲು ಇಷ್ಟಪಡುವುದಿಲ್ಲ ಹೇಳಿ. ಆದರೆ ನೀವೇ ಕೊಡುವವರಾಗಿದ್ದರೆ, ನಿಮಗೆ ಇನ್ನೊಂದು ಉಪಯೋಗವಿದೆ. ಅದುವೇ ಕ್ಯಾಲೋರಿಗಳನ್ನು ಕರಗಿಸುವುದು. ಒಳ್ಳೆಯ ಮಸಾಜ್ ಕೊಡುವುದರಿಂದ ಹೃದಯಬಡಿತ ಹೆಚ್ಚಿ, ದೇಹವು ಕ್ಯಾಲೋರಿಗಳನ್ನ ಕರಗಿಸವ ಹಂತ ತಲುಪುತ್ತದೆ ಎಂಬುದು ತಿಳಿದು ಬಂದಿದೆ. ಆದರೆ, ತರಾತುರಿಯಲ್ಲಿ ಮಸಾಜ್ ಮಾಡುವಂತಿಲ್ಲ. ನೀವು ಮೆಲ್ಲನೆ ಮಾಡುತ್ತಾ ಹೋದಷ್ಟು ಹೆಚ್ಚು ಕ್ಯಾಲೋರಿಗಳನ್ನು ಕರಗಿಸಬಹುದು.


ಸಂಭೋಗ : ಅರ್ಧ ಗಂಟೆಗೆ 144ಕ್ಕೂ ಹೆಚ್ಚು ಕ್ಯಾಲೋರಿಗಳು

ಸೆಕ್ಸ್ ಕೂಡ ಒಂದು ರೀತಿಯ ವ್ಯಾಯಾಮ ಎಂದು ನಿಮಗೆ ಗೊತ್ತಿತ್ತು. ಆದರೆ ಇಷ್ಟೊಂದು ಕ್ಯಾಲೋರಿಗಳನ್ನ ಕರಗಿಸಬಹುದು ಎಂಬುದು ನಿಮಗೆ ಬಹುಶ ಗೊತ್ತಿರಲಿಕ್ಕಿಲ್ಲ. ಹೌದು, ಇದು 20 ರೂಪಾಯಿಯ ಡೈರಿ ಮಿಲ್ಕ್ ಚಾಕಲೇಟ್ ಅಲ್ಲಿರುವಷ್ಟು ಕ್ಯಾಲೋರಿಗಳನ್ನು ಕೆಲವೇ ನಿಮಿಷಗಳಲ್ಲಿ ಕರಗಿಸಿಬಿಡುತ್ತದೆ. ಇದರೊಂದಿಗೆ ನೀವು ಭಂಗಿಗಳನ್ನ ಬದಲಾಯಿಸಿ, ಸ್ವಲ್ಪ ಬಿಸಿ ಬಿಸಿ ಮಾತುಗಳಿಂದ ಕೂಡಿ, ಸೆಕ್ಸ್ ಅನ್ನು ಇನ್ನಷ್ಟು ಹಾಟ್ ಮಾಡಿದರೆ, ಇನ್ನೂ 15-20 ಕ್ಯಾಲೋರಿಗಳನ್ನ ಹೆಚ್ಚಿಗೆ ಕರಗಿಸಬಹುದು.


ಮೌಖಿಕ ಲೈಂಗಿಕತೆ : ಅರ್ಧ ಗಂಟೆಗೆ 100 ಕ್ಯಾಲೋರಿಗಳು

ಈ ಅಂಕಿ-ಅಂಶವನ್ನು ನೀವು ಬಹುಷಃ ಕೇಳಿರುವುದಿಲ್ಲ. ಆದರೆ ನೀವು ನಿಮ್ಮ ಸಂಗಾತಿಗೆ ಮೌಖಿಕ ಸುಖ - ಅಂದರೆ ನಿಮ್ಮ ಬಾಯಿಯನ್ನು ಉಪಯೋಗಿಸಿ ನಿಮ್ಮ ಸಂಗಾತಿಗೆ ಸುಖ ನೀಡುತ್ತಿರುವಿರಿ ಎಂದರೆ, ನೀವು 10 ನಿಮಿಷ ಸ್ಕಿಪ್ಪಿಂಗ್ (ಹಗ್ಗ ಜಿಗಿತ) ಮಾಡಿದಷ್ಟು ಕ್ಯಾಲೋರಿಗಳನ್ನ ಕರಗಿಸುತ್ತೀರಾ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon