Link copied!
Sign in / Sign up
11
Shares

ಕಣ್ಣಿನ ಸುತ್ತಲಿನ ಕಪ್ಪು ವರ್ತುಲಗಳನ್ನು ಹೋಗಲಾಡಿಸಲು, ಇಲ್ಲಿವೆ ನೋಡಿ ೫ ಸುಲಭ ಮನೆಮದ್ದು

ಕಣ್ಣಿನ ಕೆಳಗಿನ, ಕಪ್ಪು ಚಕ್ರಗಳನ್ನು ಹೊಂದಿದವರಲ್ಲಿ ನೀವು ಕೂಡ ಒಬ್ಬರಾಗಿದ್ದಾರೆ, ಚಿಂತಸದಿರಿ. ಈಗಿನ ಒತ್ತಡದ ಜೀವನಶೈಲಿ, ನಿದ್ರಾ ಹೀನತೆ, ಕೆಲಸದ ಒತ್ತಡ, ಮಾನಸಿಕ ಖಾಯಿಲೆಗಳು ಮುಂತಾದ ಕಾರಣಗಳಿಂದ ಕಣ್ಣಿನ ಕೆಳಗೆ ಕಪ್ಪು ಕಲೆಗಳು ಕಂಡುಬರುವುದು ಸಹಜ. ಮನೆಯಲ್ಲೇ ಲಭ್ಯವಾಗುವ ತರಕಾರಿ, ಹಣ್ಣುಗಳಿಂದ, ಹೇಗೆ ಕಪ್ಪು ಕಲೆಗಳನ್ನು ಹೋಗಲಾಡಿಸಬಹುದು ಎಂದು ನಾವು ನಿಮಗೆ, ಈ ೫ magic ಮನೆ ಮದ್ದುಗಳ ಮೂಲಕ ತಿಳಿಸುತ್ತೇವೆ.



೧. ಸೌತೇಕಾಯಿ

ಹೌದು, ಇದು ನಿಮಗೆಲ್ಲರಿಗೂ ತಿಳಿದಿರುವ ವಿಷಯವೇ. ಸೌತೇಕಾಯಿಯಲ್ಲಿರುವ ಚರ್ಮ ವರ್ಣ್ಯಕ ಗುಣಗಳು, ಕಪ್ಪು ಕಲೆಗಳನ್ನು ತುಂಬಾ ಸುಲಭವಾಗಿ ನಿವಾರಿಸುತ್ತದೆ. ತಾಜಾ ಸೌತೇಕಾಯಿಯನ್ನು ಚಕ್ರಗಳ ಆಕಾರದಲ್ಲಿ ಕತ್ತರಸಿಕೊಳ್ಳಿ. ಇದನ್ನು ಎರಡು ಕಣ್ಣಿನ ಮೇಲೆ ೧೫-೨೦ ನಿಮಿಷಗಳ ಕಾಲ ಇರಿಸಿ, ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆದುಕೊಳ್ಳಿ. ಇದನ್ನು ದಿನಕ್ಕೆ ೨ ಬಾರಿ, ೩ ತಿಂಗಳುಗಳ ಕಾಲ ಮಾಡಿದರೆ, ನಿಮ್ಮ ಕಣ್ಣಿನ ಕಪ್ಪು ಕಲೆಗಳು ಮಾಯವಾಗುತ್ತದೆ.


೨. ಬಾದಾಮಿ ಎಣ್ಣೆ

ಬಾದಾಮಿ ಕೇವಲ ಬುದ್ಧಿಯನ್ನು ಚುರುಕುಗೊಳಿಸುವುದಲ್ಲದೆ, ನೈಸರ್ಗಿಕವಾಗಿ ಸೌಂದರ್ಯ ವರ್ಧಕವು ಹೌದು. ಹಾಗಾಗಿ, ನೀವು ಬಾದಾಮಿ ಎಣ್ಣೆ ಹಾಗು ವಿಟಮಿನ್ ಇ ಎಣ್ಣೆ ಎರಡನ್ನು ಬೆರಸಿ, ರಾತ್ರಿ ಮಲಗುವ ಮುನ್ನ ಕಣ್ಣಿನ ಕೆಳಗೆ ಹಚ್ಚಿ ಮಲಗಿ. ಬೆಳಗ್ಗೆ ಎದ್ದ ಕೂಡಲೇ, ಉಗುರು ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆಯಿರಿ. ಪ್ರತಿದಿನ ರಾತ್ರಿ ಹೀಗೆ ಮಾಡುತ್ತಾ ಬಂದರೆ, ಕಾಲ ಕ್ರಮೇಣ ಕಣ್ಣಿನ ಕೆಳಗಿನ ಕಪ್ಪು ವರ್ತುಲಗಳು ಮಾಯವಾಗುತ್ತದೆ.


೩. ಟೊಮೇಟೊ ರಸ

ಟೊಮೋಟ ಒಂದು ರೀತಿಯ ಹಣ್ಣು, ಆದರೆ ನಾವು ಅದನ್ನು ತರಕಾರಿಯಾಗಿ ಅಡಿಗೆಯಲ್ಲಿ ಬಳಸುತ್ತೇವೆ. ಟೊಮೇಟೊದಲ್ಲಿರುವ ನೈಸರ್ಗಿಕ ಬ್ಲೀಚಿಂಗ್ ಗುಣದಿಂದ ಇದು ಕಣ್ಣಿನ ಕಪ್ಪು ಕಲೆಯನ್ನು ನಿವಾರಿಸುತ್ತದೆ. ಒಂದು ಚಮಚ ಟೊಮೇಟೊ ರಸಕ್ಕೆ, ೧.೫ ಚಮಚ ನಿಂಬೆ ರಸ ಬೆರಸಿ, ಮುಖಕ್ಕೆ ಹಚ್ಚಿ. ೧೦ ನಿಮಷಗಳ ನಂತರ ತಣ್ಣೀರಿನಲ್ಲಿ ಮುಖ ತೊಳೆಯಿರಿ. ವಾರಕ್ಕೆ ೪-೫ ಬಾರಿ ಹೀಗೆ ಮಾಡಿದರೆ, ಕ್ರಮೇಣ ಕಲೆಗಳು ಮಾಯವಾಗುತ್ತದೆ.


೪. ಆಲುಗಡ್ಡೆ

ಆಲುಗಡ್ಡೆಯಲ್ಲಿರುವ ಊತ ನಿವಾರಕ ಗುಣ ಕಣ್ಣಿನ ಕೆಳಗಿನ ಊತವನ್ನು ನಿವಾರಿಸುವುದಲ್ಲದೆ, ಕಣ್ಣಿನ ಸುತ್ತಲಿನ ಕಲೆಗಳನ್ನು ಸಹ ಕಡಿಮೆ ಮಾಡುತ್ತದೆ. ನೀವು, ೧ ತಣ್ಣಗಿನ ಆಲುಗಡ್ಡೆಯನ್ನು ತುರಿದು, ಅದರ ರಸವನ್ನು ಸೋಸಿ, ಒಂದು ಹತ್ತಿಯ ಉಂಡೆಯಿಂದ, ಕಣ್ಣಿನಕೆಳಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ.. ೧೫ ನಿಮಿಷಗಳ ನಂತರ ಕಣ್ಣನ್ನು ತಣ್ಣೀರಿನಲ್ಲಿ ತೊಳೆಯಿರಿ. ದಿನಕ್ಕೆ ೨ ಬಾರಿ, ೩ ವಾರಗಳು ಪ್ರತಿದಿನ, ಈ ವಿಧಾನವನ್ನು ಅನುಸರಿಸಿದರೆ, ಕಲೆಗಳು ಮಾಯವಾಗುತ್ತದೆ.


೫. ಗುಲಾಬಿ ರಸ

ಗುಲಾಬಿಯ ರಸ ನೈಸರ್ಗಿಕ ಸೌಂದರ್ಯ ವರ್ಧಕ ಹಾಗು ಚರ್ಮದ ಕಾಂತಿಯನ್ನು ಇಮ್ಮಡಿಗೊಳಿಸುವ ಶಕ್ತಿ ಇದಕ್ಕಿದೆ. ಹಾಗಾಗಿ ನೀವು ಒಂದು ಬಟ್ಟಲಿನಲ್ಲಿ, ಗುಲಾಬಿ ಹೂಗಳಿಂದ ಹೊರ ತೆಗೆದ ರಸವನ್ನು ತೆಗೆದುಕೊಳ್ಳಿ, ನಂತರ, ಒಂದು ಸಣ್ಣ ಹತ್ತಿಯ ಉಂಡೆಯಿಂದ ರಸವನ್ನು ಕಣ್ಣಿನ ಸುತ್ತ, ಸಂಪೂರ್ಣವಾಗಿ ಹಚ್ಚಿ, ೧೫ ನಿಮಿಷಗಳ ನಂತರ, ಕಣ್ಣನ್ನು ಚೆನ್ನಾಗಿ ತೊಳೆದು, ಹತ್ತಿ ಬಟ್ಟೆಯಿಂದ  ನಿಧಾನವಾಗಿ ಒರೆಸಿ. ಪ್ರತಿದಿನ ನೀವು ಇದನ್ನು ಅನುಸರಿಸುತ್ತಾ ಬಂದರೆ, ಕ್ರಮೇಣ ನಿಮ್ಮ ಕಣ್ಣಿನ ಕಲೆಗಳು ಮಾಯವಾಗುತ್ತದೆ.

ಮೇಲೆ ಹೇಳಿದ ವಿಧಾನಗಳು, ಹಲವು ಮಹಿಳೆಯರಲ್ಲಿ , ಒಂದೇ ತಿಂಗಳುಗಳಲ್ಲಿ ಫಲಿತಾಂಶ ನೀಡದೆ ಹೋಗಬಹುದು. ಹಾಗೆಂದ ಮಾತ್ರಕ್ಕೆ ಮೇಲೆ ಹೇಳಿದ ವಿಧಾನವನ್ನು ನಿಲ್ಲಿಸದಿರಿ.  ಒಬ್ಬೊಬರ, ಚರ್ಮದ ಅನುಗುಣವಾಗಿ, ಸ್ವಲ್ಪ ನಿಧಾನವಾಗಿ ಫಲಿತಾಂಶಗಳು ಕಂಡುಬರುತ್ತದೆ. ಇದೆಲ್ಲದರ ಜೊತೆ ಆರೋಗ್ಯಕರ ಆಹಾರ, ನಿದ್ರೆ ಹಾಗು ಜೀವನ ಶೈಲಿ ಕೂಡ ಬಹು ಮುಖ್ಯ.

ಈ ಲೇಖನ ನಿಮಗೆ ಇಷ್ಟವಾದರೆ, ನಿಮ್ಮ ಸ್ನೇಹಿತರು, ಬಂಧು-ಮಿತ್ರರೊಂದಿಗೆ ಶೇರ್ ಮಾಡುವ ಮೂಲಕ ಜಾಗೃತಿ ಮೂಡಿಸಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon