Link copied!
Sign in / Sign up
10
Shares

ನಿಮ್ಮ ಕಣ್ಣುಗಳು ಸುಂದರವಾಗಿ ಎದ್ದುಕಾಣುವಂತೆ ಮಾಡಲು 8 ಬ್ಯೂಟಿ ಟ್ರಿಕ್ಸ್

ಕಣ್ಣುಗಳು ಮನಸ್ಸಿನ ಕಿಟಕಿ ಎಂದು ಹೇಳುತ್ತಾರೆ. ಇತ್ತೀಚಿಗೆ ನಡೆದ ಅಧ್ಯಯನದಲ್ಲಿ 70% ಅಷ್ಟು ಗಂಡಸರು ಹೆಂಗಸರಲ್ಲಿ ಮೊದಲು ನೋಡುವುದು ಅವರ ಕಣ್ಣುಗಳು ಎಂದು ಹೇಳಿದ್ದಾರೆ. ಮೇಕ್ಅಪ್ ಬಳಸಿ ನಿಮ್ಮ ಕಣ್ಣುಗಳಿಗೆ ಮತ್ತಷ್ಟು ಜೀವ ಮತ್ತು ಸೌಂದರ್ಯ ತುಂಬಲು ಅನೇಕ ವಿಧಾನಗಳಿವೆ. ನಿಮ್ಮ ಕಣ್ಣುಗಳು ಎದ್ದು ಕಾಣುವಂತೆ ಮಾಡಲು ಇಲ್ಲಿವೆ ನಮ್ಮಿಂದ ಕೆಲವು ಸಲಹೆಗಳು.

೧. ಮೊದಲು ಯಾವ ಕಣ್ಣಿನ ಮೇಕ್ಅಪ್ ಎಲ್ಲಿ ಬಳಸಬೇಕು ಎಂಬುದನ್ನು ತಿಳಿಯಿರಿ

ಅಷ್ಟೊಂದು ಬಗೆಯ ಕಣ್ಣಿನ ಮೇಕ್ಅಪ್ ಲೆಕ್ಕ ಇಡಲು ಯಾರಿಗಾದರೂ ಕಷ್ಟ ಆಗಬಹುದು. ಆದರೆ ಈ ಚಿಕ್ಕ ಚಾರ್ಟ್ ನಿಮಗೆ ಯಾವ ಮೇಕ್ಅಪ್ ಎಲ್ಲಿಗೆ ಬಳಸಬೇಕು ಎಂಬುದರ ಮಾಹಿತಿ ನೀಡುತ್ತದೆ.


೨. ನಿಮ್ಮ ಕಣ್ಣುಗಳು ದೊಡ್ಡದಾಗಿ ಕಾಣಲು ನಿಮ್ಮ ಕಣ್ರೆಪ್ಪೆಗಳನ್ನು ಕರ್ಲ್ (ಸುರುಳಿ) ಮಾಡಿಕೊಳ್ಳಿ

ಮಾಸ್ಕ್ಯಾರ ಹಚ್ಚುವುದು ನಿಮ್ಮ ಕಣ್ಣುಗಳ ಚೌಕಟ್ಟುಗಳನ್ನು ತೋರಿಸುತ್ತದೆ. ಆದರೆ ನಿಮ್ಮ ಕಣ್ರೆಪ್ಪೆಗಳನ್ನು ಲ್ಯಾಶ್ ಕರ್ಲೆರ್ ಬಳಸಿ ಕರ್ಲ್ ಮಾಡಿಕೊಂಡರೆ ಕಣ್ಣುಗಳು ದೊಡ್ಡದಾಗಿ ಕಾಣುತ್ತವೆ. ಆದರೆ ನೀವು ಮಾಸ್ಕ್ಯಾರ ಹಚ್ಚಿಕೊಳ್ಳುವ ಮುನ್ನವೇ ಇದನ್ನು ಮಾಡಿ.


೩. ಒಂದು ಮಸ್ಕಾರ ಬದಲು ಎರಡು ಮಸ್ಕಾರ ಬಳಸಿ

ನಿಮಗೆ ನಿಮ್ಮ ಕಣ್ರೆಪ್ಪೆಗಳು ಎದ್ದು ಕಾಣಬೇಕು ಎಂದರೆ ನೀವು ಎರಡು ಮಾಸ್ಕ್ಯಾರ ಬಳಸಬೇಕು : ಒಂದು ನಿಮ್ಮ ಕಣ್ರೆಪ್ಪೆಗಳು ದಪ್ಪ ಕಾಣಲಿಕ್ಕೆ, ಇನ್ನೊಂದು ಉದ್ದ ಕಾಣಲಿಕ್ಕೆ. ದಪ್ಪ ಕಾಣಲು ಬಳಸುವ ಫಾರ್ಮುಲಾವನ್ನು ಕಣ್ರೆಪ್ಪೆಯ ಬುಡಕ್ಕೆ ಹಚ್ಚಿರಿ. ಉದ್ದ ಕಾಣಲು ಬಳಸುವ ಫಾರ್ಮುಲಾವನ್ನು ಕಣ್ರೆಪ್ಪೆಯ ಮಧ್ಯದಿಂದ ಅವುಗಳ ಅಂಚಿನವರೆಗೆ ಹಚ್ಚಿಕೊಳ್ಳಿ. ಆಗ ನಿಮ್ಮ ಕಣ್ರೆಪ್ಪೆಗಳು ಇನ್ನಷ್ಟು ಉದ್ದ ಕಾಣುತ್ತವೆ.


೩. ಮೇಲಿನ ಮತ್ತು ಕೆಳಗಿನ ಲೈನರ್ ಅನ್ನು ಬೇರೆ ಮಾಡಿ ನಿಮ್ಮ ಕಣ್ಣುಗಳು ಮತ್ತಷ್ಟು ಎದ್ದು ಕಾಣುವಂತೆ ಮಾಡಿ

ನಿಮಗೆ ನಿಮ್ಮ ಕಣ್ಣುಗಳು ಅಗಲವಾಗಿ ಕಾಣಬೇಕು ಎಂದರೆ ನಿಮ್ಮ ಮೇಲಿನ ಕಣ್ರೆಪ್ಪೆಯ ಮತ್ತು ಕೆಳಗಿನ ಕಣ್ರೆಪ್ಪೆಯ ಲೈನರ್ ಅನ್ನು ಕೂಡಿಸಬೇಡಿ. ಬದಲಿಗೆ ತುದಿಯಲ್ಲಿ ಸ್ವಲ್ಪ ಗ್ಯಾಪ್ ಬಿಡಿ. ಇದು ನಿಮ್ಮ ಕಣ್ಣುಗಳು ಅಗಲವಾಗಿ ಕಾಣುವಂತೆ ಮಾಡುತ್ತದೆ.


೪. ನಿಮ್ಮ ಹುಬ್ಬುಗಳನ್ನು ಸರಿಯಾಗಿ ಫಿಲ್ಲ್  ಮಾಡಿಕೊಳ್ಳಿ

ನಿಮ್ಮ ಹುಬ್ಬಿನ ಕೂದಲು ಕೆದರಿದಂತೆ ಇದ್ದರೆ ಅವುಗಳು ನಿಮ್ಮ ಕಣ್ಣಿನ ಸೌಂದರ್ಯವನ್ನು ಹಾಳು ಮಾಡುತ್ತವೆ. ಹೀಗಾಗಿ ನಿಮ್ಮ ಹುಬ್ಬುಗಳನ್ನು ಸರಿಯಾಗಿ ಫಿಲ್ಲಿಂಗ್ ಮಾಡಿಕೊಳ್ಳಿ.


೫. ಕನ್ಸೀಲರ್ ಬಳಸಿ

ನಿಮ್ಮ ಕಣ್ಣಿನ ರೆಪ್ಪೆಯಲ್ಲಿ ನರಗಳು ಕಾಣಿಸುತ್ತಿದ್ದರೆ ಅಥವಾ ಕೆಂಪು ಬಣ್ಣ ಹೊಂದಿದ್ದರೆ, ಕನ್ಸೀಲರ್ ಬಳಸಿ ಅಲ್ಲಿನ ಬಣ್ಣವನ್ನು ಇತರೆ ಭಾಗದ ಬಣ್ಣದೊಂದಿಗೆ ಬೆರೆಯುವಂತೆ ಮಾಡಿ.


೬. ಐ ಶಾಡೋ ಹಚ್ಚಿಕೊಳ್ಳುವಾಗ ಪೇಪರ್ ಟೇಪ್ ಬಳಸಿ

ನೀವು ಐ ಶಾಡೋ ಹಚ್ಚಿಕೊಳ್ಳುವಾಗ ಕೇವಲ ರೆಪ್ಪೆಗೆ ಅಷ್ಟೇ ಅಲ್ಲದೆ, ಕಣ್ಣಿನ ಕೆಳಗೆಯೂ ಸ್ವಲ್ಪ ಹಚ್ಚಿಕೊಂಡು ಬಿಡಬಹುದು. ಇದನ್ನು ತಪ್ಪಿಸಲು ನೀವು ನಿಮ್ಮ ಕಣ್ಣಿನ ಕೆಳಗೆ ಒಂದು ಪೇಪರ್ ಟೇಪ್ ಅನ್ನು ಅಂಟಿಸಿಕೊಂಡು ನಂತರ ಐ ಶಾಡೋ ಹಚ್ಚಿಕೊಳ್ಳಬಹುದು. ಮೇಕ್ಅಪ್ ಆದ ನಂತರ ಅದನ್ನು ತೆಗೆದು ಹಾಕಿರಿ.


೭. ಕಣ್ರೆಪ್ಪೆ ಹೆಚ್ಚು ಉದ್ದವಾಗಿ ಕಾಣುವಂತೆ ಮಾಡಲು ಬ್ರಷ್ ಅನ್ನು ಉದ್ದುದ್ದವಾಗಿ ಹಿಡಿಯಿರಿ

ನಿಮ್ಮ ಕಣ್ಣಿನ ಪ್ರತಿಯೊಂದು ಇಂಚೂ ಎದ್ದು ಕಾಣಬೇಕೇ? ಹಾಗಿದ್ದರೆ ನೀವು ನಿಮ್ಮ ಬ್ರಷ್ ಅನ್ನು ಉದ್ದುದ್ದವಾಗಿ ಹಿಡಿಯಿರಿ. ಇದು ನಿಮ್ಮ ಕಣ್ರೆಪ್ಪೆಯ ತುತ್ತತುದಿಯವರೆಗೆ ನೀವು ಮೇಕ್ಅಪ್ ಮಾಡಿಕೊಳ್ಳಬಹುದು.


೮. ಮಾಸ್ಕ್ಯಾರ ಹಚ್ಚುವಾಗ ಸ್ಪೂನ್ ಬಳಸಿ

ಒಂದು ವೇಳೆ ನಿಮಗೆ ಕೇವಲ ಕಣ್ರೆಪ್ಪೆ ಮೇಲೆ ಮಾತ್ರ ಮಾಸ್ಕ್ಯಾರ ಹಚ್ಚಲು ಕಷ್ಟವಾಗಿ ಇತರೆ ಭಾಗಗಳಿಗೂ ಹಚ್ಚಿಕೊಳ್ಳುತ್ತಿದ್ದರೆ, ನೀವು ಸ್ಪೂನ್ ಅನ್ನು ಅಡ್ಡ ಇಟ್ಟುಕೊಂಡು ಹಚ್ಚಿಕೊಳ್ಳಬಹುದು. ಇದು ನೀವು ಮಾಸ್ಕ್ಯಾರವನ್ನು ಕಣ್ರೆಪ್ಪೆ ಬಿಟ್ಟು ಬೇರೆ ಜಾಗಗಳಿಗೆ ಹಚ್ಚುವುದನ್ನ ತಪ್ಪಿಸುತ್ತದೆ.

ನಿಮಗೂ ಈ ಲೇಖನ ಇಷ್ಟ ಆಗಿದ್ದರೆ, ಇದನ್ನು ಶೇರ್ ಮಾಡಿ. 

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon