Link copied!
Sign in / Sign up
6
Shares

ಕಣ್ಣುಗಳ ಸುತ್ತದ ಕಪ್ಪು ವೃತ್ತವನ್ನು ನಿವಾರಿಸಲು ೧೦ ಮನೆಮದ್ದುಗಳು (10 Home Remedies To Treat Dark Circles In Kannada)

ಪ್ರತಿ ದಿನ ಬೆಳಿಗ್ಗೆ ಎದ್ದ ಮೇಲೆ ನಮ್ಮಲ್ಲಿ ಅನೇಕರು ಕನ್ನಡಿ ನೋಡುತ್ತೇವೆ. ಆದರೆ ಅಂತಹ ಸಮಯದಲ್ಲಿ ನಿಮ್ಮ ಕಣ್ಣುಗಳ ಸುತ್ತದ ಕಪ್ಪು ವೃತ್ತಗಳು ನಿಮ್ಮನ್ನೇ ನೋಡುತ್ತಿದ್ದರೆ, ದಿನದ ಪ್ರಾರಂಭದಲ್ಲೇ ಅವುಗಳು ನಿಮ್ಮನ್ನು ಕುಗ್ಗಿಸಬಹುದು. ಆದರೆ ನೀವು ನಿಮ್ಮ ಅಜ್ಜಿಯಂದಿರ ಮನೆಮದ್ದುಗಳ ಬಗ್ಗೆ ಗಮನ ಹರಿಸಿದ್ದರೆ, ಈ ಕಪ್ಪು ವೃತ್ತಗಳು ನಿಮ್ಮನ್ನು ಈ ರೀತಿ ಕಾಡುವ ಸಂಗತಿ ಬರುತ್ತಿರಲಿಲ್ಲ. ಕಪ್ಪು ವೃತ್ತಗಳ ಬಗ್ಗೆ ನಿಮ್ಮಲ್ಲಿ ಒತ್ತಡ ಉಂಟಾಗುತ್ತಿದ್ದರೆ ಮತ್ತು ಅದನ್ನು ಹೇಗೆ ಕಡಿಮೆಗೊಳಿಸಬೇಕು ಎಂದು ನೀವು ಪ್ರತಿನಿತ್ಯ ಆಲೋಚಿಸುತ್ತಿದ್ದರೆ, ನಮಗಾಗಿ ನಮ್ಮಲ್ಲಿ ಒಳ್ಳೆಯ ಸುದ್ದಿ ಇದೆ. ಅಜ್ಜಿಯಂದಿರ ಮನೆಮದ್ದುಗಳಿಗೆ ಕೆಅಲ್ವು ಆವಿಷ್ಕಾರಗಳನ್ನು ಸೇರಿಸಿದರೆ, ಉಬ್ಬಿದ ಕಣ್ಣುಗಳು ಮತ್ತು ಕಪ್ಪು ವೃತ್ತಗಳಿಂದ ಮುಕ್ತಿ ಪಡೆಯಬಹುದು. 

ಪರಿವಿಡಿ:

೧. ಕಪ್ಪು ವೃತ್ತಗಳಿಗೆ ಕಾರಣವೇನು? (What Causes Dark Circles? in Kannada)

     1. ಕಪ್ಪು ವೃತ್ತಗಳಿಗೆ ಅನುವಂಶಿಕ ಕಾರಣಗಳು (Genetic Reasons for Dark Circles in Kannada)
     2. ಕಪ್ಪು ವೃತ್ತಗಳಿಗೆ ಅಲರ್ಜಿ ಕಾರಣಗಳು (Allergic Reasons for Dark Circles in Kannada)
     3. ಕಪ್ಪು ವೃತ್ತಗಳಿಗೆ ಸೌಂದರ್ಯವರ್ಧಕ ಕಾರಣಗಳು (Cosmetic Reasons for Dark Circles in Kannada)
     4. ಕಪ್ಪು ವೃತ್ತಗಳಿಗೆ ದೈಹಿಕ ಕಾರಣಗಳು (Physical Reasons for Dark Circles in Kannada)
     5. ಕಪ್ಪು ವೃತ್ತಗಳಿಗೆ ಸೂರ್ಯ ಕಾರಣವಿರಬಹುದು (Sun could be a Reason for Dark Circles in Kannada)
     6. ಕಪ್ಪು ವೃತ್ತಗಳಿಗೆ ನಿದ್ರಾಹೀನತೆ ಕಾರಣಗಳು (Sleep Deprivation Reasons for Dark Circles in Kannada)

೨. ಕಪ್ಪು ವೃತ್ತ ನಿವಾರಿಸಲು ೧೦ ಮನೆ ಮದ್ದುಗಳು. (10 Home Remedies to Treat Dark Circles in Kannada)

     1. ಆಲೂಗಡ್ಡೆ ಬಳಸಿ ಕಪ್ಪು ವೃತ್ತಗಳಿಂದ ಹೇಗೆ ಮುಕ್ತಿ ಪಡೆಯಬೇಕು (How to Get Rid of Dark Circles using Potatoes in Kannada)

     2. ಸೌತೇಕಾಯಿ ಉಪಯೋಗಿಸಿ ಕಪ್ಪು ವೃತ್ತಗಳಿಂದ ಹೇಗೆ ಮುಕ್ತಿ ಪಡೆಯಬೇಕು? ( How to Get Rid of Dark Circles using Cucumbers in Kannada)
     

     3. ಜೇನುತುಪ್ಪ ಉಪಯೋಗಿಸಿ ಕಪ್ಪು ವೃತ್ತಗಳಿಂದ ಹೇಗೆ ಮುಕ್ತಿ ಪಡೆಯಬೇಕು? (How to Get Rid of Dark Circles using Honey in Kannada)
     4. ಅಲೋವೆರಾ ಉಪಯೋಗಿಸಿ ಕಪ್ಪು ವೃತ್ತಗಳಿಂದ ಹೇಗೆ ಮುಕ್ತಿ ಪಡೆಯಬೇಕು? (How to Get Rid of Dark Circles using Aloe Vera in Kannada)
     5. ರೋಸ್ ವಾಟರ್ ಉಪಯೋಗಿಸಿ ಕಪ್ಪು ವೃತ್ತಗಳಿಂದ ಹೇಗೆ ಮುಕ್ತಿ ಪಡೆಯಬೇಕು? (How to Get Rid of Dark Circles using Rose Water in Kannada)
     6. ಗ್ರೀನ್ ಟೀ ಬ್ಯಾಗ್ ಉಪಯೋಗಿಸಿ ಕಪ್ಪು ವೃತ್ತಗಳಿಂದ ಹೇಗೆ ಮುಕ್ತಿ ಪಡೆಯಬೇಕು? (How to Get Rid of Dark Circles using Green Tea Bags in Kannada)
     7. ಟೊಮೇಟೊ ಉಪಯೋಗಿಸಿ ಕಪ್ಪು ವೃತ್ತಗಳಿಂದ ಹೇಗೆ ಮುಕ್ತಿ ಪಡೆಯಬೇಕು? (How to Get Rid of Dark Circles using Tomatoes in Kannada)
     8. ಕೊಬ್ಬರಿ ಎಣ್ಣೆ ಉಪಯೋಗಿಸಿ ಕಪ್ಪು ವೃತ್ತಗಳಿಂದ ಹೇಗೆ ಮುಕ್ತಿ ಪಡೆಯಬೇಕು? (How to Get Rid of Dark Circles using Coconut Oil in Kannada)
     9. ಆಪಲ್ ಸೈಡರ್ ವಿನೆಗರ್ ಉಪಯೋಗಿಸಿ ಕಪ್ಪು ವೃತ್ತಗಳಿಂದ ಹೇಗೆ ಮುಕ್ತಿ ಪಡೆಯಬೇಕು? (How to Get Rid of Dark Circles using Apple Cider Vinegar in Kannada)
    10. ಅಡಿಗೆಗೆ ಬಳಸುವ ಸೋಡಾ ಉಪಯೋಗಿಸಿ ಕಪ್ಪು ವೃತ್ತಗಳಿಂದ ಹೇಗೆ ಮುಕ್ತಿ ಪಡೆಯಬೇಕು? (How to Get Rid of Dark Circles using Baking Soda in Kannada)

೧. ಕಪ್ಪು ವೃತ್ತಗಳಿಗೆ ಕಾರಣವೇನು? (What Causes Dark Circles? in Kannada)

ನಮ್ಮ ಅಜ್ಜಿಯಂದಿರ ಜ್ಞಾನದ ಬಗ್ಗೆ ತಿಳಿದುಕೊಳ್ಳುವ ಮುನ್ನ, ಕಣ್ಣುಗಳ ಸುತ್ತಲಿನ ಕಪ್ಪು ವೃತ್ತಗಳು ಏಕೆ ಉಂಟಾಗುತ್ತವೆ ಎಣ್ಣೆಯುವುದರ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು. ಕಪ್ಪು ವೃತ್ತಗಳು ಉಂಟಾಗಲು ಹಲವಾರು ಕಾರಣಗಳಿವೆ. ಅವುಗಳನ್ನು ಮೊದಲು ತಿಳಿದುಕೊಳ್ಳೋಣ. ಅದರ ನಂತರ ಅವುಗಳಿಂದ ಮುಕ್ತಿ ಹೇಗೆ ಪಡೆಯಬೇಕು ಎನ್ನುವುದರ ಬಗ್ಗೆ ಚರ್ಚಿಸೋಣ. 

1. ಕಪ್ಪು ವೃತ್ತಗಳಿಗೆ ಅನುವಂಶಿಕ ಕಾರಣಗಳು (Genetic Reasons for Dark Circles in Kannada)

ನಿಮ್ಮ ತಂದೆ-ತಾಯಿ ಅಥವಾ ನಿಮ್ಮ ಅಜ್ಜ-ಅಜ್ಜಿಯಂದಿರಿಂದ ಪಡೆದಿರುವ ವಂಶವಾಹಿಗಳಿಂದ ಕಪ್ಪು ವೃತ್ತಗಳು ಉಂಟಾಗಬಹುದು. 

2. ಕಪ್ಪು ವೃತ್ತಗಳಿಗೆ ಅಲರ್ಜಿ ಕಾರಣಗಳು (Allergic Reasons for Dark Circles in Kannada)

ಯಾವುದಾದರೂ ಚರ್ಮ ತೊಂದರೆಗಳಿಂದ ಮತ್ತು ನಿಮ್ಮ ಚರ್ಮದಲ್ಲಿ ನಾವೇ ಉಂಟು ಮಾಡುವ ಉತ್ಪನ್ನಗಳಿಂದ ಕಪ್ಪು ವೃತ್ತಗಳು ಉಂಟಾಗುವ ಸಾಧ್ಯತೆ ಇರುತ್ತದೆ. ನಿಮ್ಮ ಕಣ್ಣುಗಳನ್ನು ಉಜ್ಜಿಕೊಳ್ಳುವುದರಿಂದ ನಿಮ್ಮ ಕಣ್ಣಿಗೆ ಹಾನಿಯಾಗಿ, ನಿಮ್ಮ ರಕ್ತನಾಳಗಳಲ್ಲಿ ಬಾವು ಉಂಟಾಗಬಹುದು. ಇದರಿಂದ ನಿಮ್ಮ ಕಣ್ಣು ಬಾತುಕೊಂಡು, ಕಪ್ಪು ವೃತ್ತಗಳನ್ನು ಅನುಭವಿಸುವಂತೆ ಆಗಬಹುದು. 

[Back To Top]

3. ಕಪ್ಪು ವೃತ್ತಗಳಿಗೆ ಸೌಂದರ್ಯವರ್ಧಕ ಕಾರಣಗಳು (Cosmetic Reasons for Dark Circles in Kannada)

ಹೆಚ್ಚಾಗಿ ನಮ್ಮಲ್ಲಿ ಕೆಲವರು ತಮ್ಮ ಚರ್ಮಕ್ಕೆ ಹೊಂದುವುದಿಲ್ಲವಾದ ಸೌಂದರ್ಯವರ್ಧಕ ಮತ್ತು ಮೇಕ್ಅಪ್ಗಳನ್ನು ಬಳಸುತ್ತಾರೆ. ಐ-ಲೈನರ್, ಮಸ್ಕರಾ, ಕನ್ಸಿಲರ್ - ಇಂತಹ ಉತ್ಪನ್ನಗಳಿಂದ ನಿಮ್ಮ ಚರ್ಮ ಗಾಢವಾಗುವ ಸಾಧ್ಯತೆ ಇರುತ್ತದೆ. 

4. ಕಪ್ಪು ವೃತ್ತಗಳಿಗೆ ದೈಹಿಕ ಕಾರಣಗಳು (Physical Reasons for Dark Circles in Kannada)

ಕೆಲವು ಪ್ರಕರಣಗಳಲ್ಲಿ, ಕಪ್ಪು ವೃತ್ತ ಮುಖದ ಲಕ್ಷಣಗಳ ಕಾರಣದಿಂದ ಉಂಟಾಗಬಹುದು. ನಮ್ಮಲ್ಲಿ ಕೆಲವರು ಆಳವಾದ ಕಣ್ಣೀರಿನ ತೊಟ್ಟಿಗಳನ್ನು ಹೊಂದಿದ್ದು, ಅದು ಕಣ್ಣಿನ ಕೆಳಗಿನ ಚರ್ಮವನ್ನು ಮುಖದ ಉಳಿದ ಭಾಗಕ್ಕಿಂತ ಗಾಢವಾಗಿಸುತ್ತದೆ.

5. ಕಪ್ಪು ವೃತ್ತಗಳಿಗೆ ಸೂರ್ಯ ಕಾರಣವಿರಬಹುದು (Sun could be a Reason for Dark Circles in Kannada):

ನಮ್ಮ ಕಣ್ಣುರೆಪ್ಪೆಗಳು ಇಡೀ ದೇಹದಲ್ಲಿ ತೆಳುವಾದ ಚರ್ಮವಾಗಿರುವುದರಿಂದ, ಸುದೀರ್ಘಕಾಲ ಸೂರ್ಯನಿಗೆ ಒಡ್ಡಿದಾಗ, ನಿಮ್ಮ ಸೂಕ್ಷ್ಮವಾದ ಚರ್ಮ ಬಳಲುತ್ತದೆ. ಹಾಗಾಗಿ ಕೆಪ್ಪು ವೃತ್ತಗಳು ಸೂರ್ಯನ ಕಿರಣಗಳಿಂದಲೂ ಆಗಬಹುದು. 

6. ಕಪ್ಪು ವೃತ್ತಗಳಿಗೆ ನಿದ್ರಾಹೀನತೆ ಕಾರಣಗಳು (Sleep Deprivation Reasons for Dark Circles in Kannada)

ಕೆಲವೊಮ್ಮೆ ಅಸಮರ್ಪಕ ನಿದ್ರೆ ಅಥವಾ ಆಯಾಸ ಕಪ್ಪು ವೃತ್ತಗಳನ್ನು ಉಂಟುಮಾಡಬಹುದು. ಪ್ರತಿಯೊಬ್ಬರೂ ಪ್ರತಿದಿನ ಕನಿಷ್ಠ ೭ ಗಂಟೆಗಳ ನಿದ್ದೆ ಮಾಡಬೇಕು. ಇದರಿಂದ ನಿಮ್ಮ ಸೌಂದರ್ಯ ಹೆಚ್ಚುತ್ತದೆ. 

[Back To Top]

೨. ಕಪ್ಪು ವೃತ್ತ ನಿವಾರಿಸಲು ೧೦ ಮನೆ ಮದ್ದುಗಳು. (10 Home Remedies to Treat Dark Circles in Kannada)

ಈಗ ನೀವು ಕಪ್ಪು ವೃತ್ತ ಏಕೆ ಉಂಟಾಗುತ್ತದೆ ಎಂದು ತಿಳಿದುಕೊಂಡಿರುವುದರಿಂದ ಅದನ್ನು ಕಡಿಮೆಗೊಳಿಸಲು ಏನು ಮಾಡಬೇಕು ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ. ಈ ಕೆಳಗೆ ಕೊಟ್ಟಿರುವ ವಿಧಾನಗಳನ್ನು ನಿಯಮಿತವಾಗಿ ಪಾಲಿಸಿದರೆ, ಅದು ನಿಮ್ಮ ಕಣ್ಣುಗಳ ಸುತ್ತವಿರುವ ಚರ್ಮವನ್ನು ಪೋಷಿಸಿ, ಆರೋಗ್ಯಕರವಾಗಿಸುತ್ತದೆ. ನೈಸರ್ಗಿಕವಾಗಿ ಕಣ್ಣಿನ ಕಪ್ಪು ವೃತ್ತಗಳನ್ನು ನಿವಾರಿಸಲು ಇಲ್ಲಿದೆ ಉಪಾಯ:

1. ಆಲೂಗಡ್ಡೆ ಬಳಸಿ ಕಪ್ಪು ವೃತ್ತಗಳಿಂದ ಹೇಗೆ ಮುಕ್ತಿ ಪಡೆಯಬೇಕು (How to Get Rid of Dark Circles using Potatoes in Kannada)

ಕಪ್ಪು ವೃತ್ತವನ್ನು ನಿವಾರಿಸಲು, ಆಲೂಗಡ್ಡೆ ಅತ್ಯುತ್ತಮ ಮನೆಮದ್ದುಗಳಲ್ಲಿ ಒಂದು. ಆಲೂಗಡ್ಡೆಯ ರಸವನ್ನು ನಿಮ್ಮ ಕಣ್ಣಿನ ಕೆಳಗೆ ಪ್ರತಿ ರಾತ್ರಿ ನೀವು ಮಲಗುವ ಮುನ್ನ ಹಚ್ಚಿದರೆ, ಅದರ ಬ್ಲೀಚ್ ಗುಣದಿಂದಾಗಿ, ನಿಮ್ಮ ಕಣ್ಣಿನ ಸುತ್ತದ ಕಪ್ಪು ವೃತ್ತಗಳು ಕ್ರಮೇಣ ಕಡಿಮೆಯಾಗುತ್ತದೆ. 

2. ಸೌತೇಕಾಯಿ ಉಪಯೋಗಿಸಿ ಕಪ್ಪು ವೃತ್ತಗಳಿಂದ ಹೇಗೆ ಮುಕ್ತಿ ಪಡೆಯಬೇಕು? ( How to Get Rid of Dark Circles using Cucumbers in Kannada)

ಸೌತೆಕಾಯಿ ಆಂಟಿಆಕ್ಸಿಡೆಂಟ್ಸ್ ಗಳನ್ನು ಹೊಂದಿದ್ದು, ಅತಿ ಸುಲಭವಾದ ಮನೆಮದ್ದುಗಳಲ್ಲಿ ಒಂದು. ಸೌತೆಕಾಯಿ ತುಂಡನ್ನು ಕತ್ತರಿಸಿ, ಫ್ರಿಜ್ ನಲ್ಲಿ ಇತ್ತು ತಣ್ಣಗಾಗಿಸಿ. ತಣ್ಣಗಾಗಿರುವ ಈ ತುಂಡುಗಳನ್ನು ನಿಮ್ಮ್ ಕಣ್ಣಿನ ಮೇಲೆ ಇಟ್ಟುಕೊಂಡು, ೧೫-೨೦ ನಿಮಿಷದವರೆಗೆ ಸಂಪೂರ್ಣವಾಗಿ ಮುಚ್ಚಿಕೊಳ್ಳಿ. ತದನಂತರ ನಿಮ್ಮ ಕಣ್ಣುಗಳು ತಾಜಾ ಆಗಿ, ಚೈತನಿಭರಿತವಾಗುತ್ತವೆ. ನಿಮ್ಮ ಕಪ್ಪು ವೃತ್ತಗಳು, ಕಣ್ಣಿನ ಕೆಳಗಿನ ಚೀಲ ಕೂಡ ಕಡಿಮೆಗೊಂಡಿರುತ್ತದೆ. 

3. ಜೇನುತುಪ್ಪ ಉಪಯೋಗಿಸಿ ಕಪ್ಪು ವೃತ್ತಗಳಿಂದ ಹೇಗೆ ಮುಕ್ತಿ ಪಡೆಯಬೇಕು? (How to Get Rid of Dark Circles using Honey in Kannada)

ಅಲೋವೆರಾ ಪ್ರಯೋಜನಗಳು ಎಲ್ಲರಿಗೂ ತಿಳಿದಿರುವುದಿಲ್ಲ. ಅದು ಕಪ್ಪು ವೃತ್ತಗಳನ್ನು ನಿವಾರಿಸಲು ಅತ್ಯುತ್ತಮ ಮನೆಮದ್ದು. ಒಂದು ಹತ್ತಿಯ ಉಂಡೆ ಬಳಸಿ ಅಲೋವೆರಾ ಜೆಲ್ ಅನ್ನು ನಿಮ್ಮ ಕಣ್ಣುಗಳ ಸುತ್ತ ಲೇಪಿಸಿರಿ. ೨೦-೩೦ ನಿಮಿಷಗಳ ನಂತರ ತಣ್ಣೀರಿನಿಂದ ತೊಳೆದುಕೊಳ್ಳಿ. ಇದನ್ನು ಮಾಡುವುದರಿಂದ ನೀವು ಸಕಾರಾತ್ಮಕ ಪ್ರಣಾಮವನ್ನು ಕಾಣಬಹುದು.

[Back To Top]

4. ಅಲೋವೆರಾ ಉಪಯೋಗಿಸಿ ಕಪ್ಪು ವೃತ್ತಗಳಿಂದ ಹೇಗೆ ಮುಕ್ತಿ ಪಡೆಯಬೇಕು? (How to Get Rid of Dark Circles using Aloe Vera in Kannada)

ಕಪ್ಪು ವೃತ್ತಗಳನ್ನು ಎರಡೇ ದಿನಗಳಲ್ಲಿ ಹೇಗೆ ನಿವಾರಿಸಬೇಕು ಎಂದು ಯೋಚಿಸುತ್ತಿದ್ದೀರಾ? ಅದಕ್ಕೆ ಉತ್ತರ ಜೇನುತುಪ್ಪ. ಜೇನುತುಪ್ಪ ಅನೇಕ ಬಗೆ ಆಂಟಿಆಕ್ಸಿಡೆಂಟ್ಸ್ ಗಳನ್ನೂ ಹೊಂದಿದ್ದು, ಚರ್ಮವನ್ನು ಮೃದುವಾಗಿಸುತ್ತದೆ. ಕೆಲವು ಹನಿ ಟೀ ಟ್ರೀ ಎಣ್ಣೆಯೊಂದಿಗೆ ಜೇನುತುಪ್ಪವನ್ನು ಸೇರಿಸಿ ಮಸಾಜ್ ಮಾಡಿಕೊಳ್ಳಿ. ಜೇನುತುಪ್ಪವನ್ನು ತೆಳುವಾಗಿ ನಿಮ್ಮ ಕಣ್ಣುಗಳ ಸುತ್ತ ಹಚ್ಚುವುದರಿಂದಲೂ ಕೆಪ್ಪು ವೃತ್ತಗಳನ್ನು ನಿವಾರಿಸಬಹುದು. 

5. ರೋಸ್ ವಾಟರ್ ಉಪಯೋಗಿಸಿ ಕಪ್ಪು ವೃತ್ತಗಳಿಂದ ಹೇಗೆ ಮುಕ್ತಿ ಪಡೆಯಬೇಕು? (How to Get Rid of Dark Circles using Rose Water in Kannada)

ರೋಸ್ ವಾಟರ್ ನಲ್ಲಿರುವ ಆಂಟಿಆಕ್ಸಿಡೆಂಟ್ ಗಳು ನಿಮ್ಮ ಚರ್ಮದ ಜೀವಕೋಶಗಳನ್ನು ಬಲಿಷ್ಠಗೊಳಿಸುತ್ತವೆ. ನೀವು ಕಪ್ಪು ವೃತ್ತಗಳನ್ನು ಹೇಗೆ ನಿವಾರಿಸಬೇಕು ಎಂದು ಯೋಚಿಸುತ್ತಿದ್ದರೆ, ಅದಕ್ಕೆ ಉತ್ತರ ಇದೇ. ಹತ್ತಿಯ ಉಂಡೆಯನ್ನು ತಣ್ಣನೆಯ ರೋಸ್ ವಾಟರ್ ನಲ್ಲಿ ಅದ್ದಿ ನಿಮ್ಮ ಕಣ್ಣಿಗೆ ಹಚ್ಚಿಕೊಳ್ಳಿ. ೧೫-೨೦ ನಿಮಿಷದ ನಂತರ ಅದನ್ನು ತೊಳೆದುಕೊಳ್ಳಿ. ನೀವು ಸ್ಪ್ರೇ ಬಾಟಲಿಯನ್ನು ಸಹ ಉಪಯೋಗಿಸಬಹುದು. ಇದರಿಂದ ನಿಮ್ಮ ಕಪ್ಪು ವೃತ್ತಗಳು ಕ್ರಮೇಣ ನಾಶಗೊಳ್ಳುತ್ತವೆ. 

6. ಗ್ರೀನ್ ಟೀ ಬ್ಯಾಗ್ ಉಪಯೋಗಿಸಿ ಕಪ್ಪು ವೃತ್ತಗಳಿಂದ ಹೇಗೆ ಮುಕ್ತಿ ಪಡೆಯಬೇಕು? (How to Get Rid of Dark Circles using Green Tea Bags in Kannada)

ಗ್ರೀನ್ ಟೀ ಸಂಕೋಚಕ ಗುಣಗಳನ್ನು ಹೊಂದಿದೆ. ಇದು ರಕ್ತನಾಳನ್ನು ಆರೋಗ್ಯಕ್ರವಾಗಿರಿಸಿ, ನಿಮ್ಮ ಕಣ್ಣಿನ ಬಾವು ಮತ್ತು ಕಪ್ಪು ವೃತ್ತಗಳನ್ನು ಚಿಕಿತ್ಸಿಸುತ್ತದೆ. ಎರಡು ಗ್ರೀನ್ ಟೀ ಬ್ಯಾಗ್ ಗಳನ್ನು ಅರ್ಧ ಕಪ್ ಬಿಸಿ ನೀರಿನಲ್ಲಿ ಅದ್ದಿಡಿ. ಇದ್ರಿಂದ ಗ್ರೀನ್ ಟೀ ಎಳೆಗಳು ಮೃದುವಾಗುತ್ತವೆ. ನಂತರ ಅದನ್ನು ಫ್ರಿಡ್ಜ್ ಅಲ್ಲಿ ಇಟ್ಟು, ತಣ್ಣಗಾಗಿಸಿ. ನಂತರ, ನಿಮ್ಮ ಕಣ್ಣುಗಳ ಮೇಲೆ ಈ ಬ್ಯಾಗ್ ಗಳನ್ನು ೧೫-೨೦ ನಿಮಿಷಗಳ ಇರಿಸಿಕೊಳ್ಳಿ. ಈ ಪದ್ಧತಿಯನ್ನು ಪ್ರತಿ ಎರಡು ದಿನಗಳಿಗೊಮ್ಮೆ ಮಾಡಿ. 

7. ಟೊಮೇಟೊ ಉಪಯೋಗಿಸಿ ಕಪ್ಪು ವೃತ್ತಗಳಿಂದ ಹೇಗೆ ಮುಕ್ತಿ ಪಡೆಯಬೇಕು? (How to Get Rid of Dark Circles using Tomatoes in Kannada)

ಟೊಮೇಟೊಗಳು ನಿಮ್ಮ ಚರ್ಮವನ್ನು ಯಾವುದೇ ರೀತಿಯ ಹಾನಿಯಾಗದಂತೆ (ವಿಶೇಷವಾಗಿ ಸೂರ್ಯನ ಕಿರಣಗಳಿಂದ) ಸಂರಕ್ಷಿಸುತ್ತವೆ. ನಿಂಬೆ ರಸ ಮತ್ತು ರೋಮ್ಯಾಟೋ ರಸವನ್ನು ಸೇರಿಸಿ, ಮಿಶ್ರಣ ತಯಾರಿಸಿ. ಇದನ್ನು ಹತ್ತಿ ಉಂಡೆಯ ಸಹಾಯದಿಂದ ನಿಮ್ಮ ಕಣ್ಣುಗಳ ಸುತ್ತ ಹೆಚ್ಚಿಸಿ. ೧೦-೧೫ ನಿಮಿಷಗಳ ನಂತರ ತಣ್ಣೇರಿನಿಂದ ತೊಳೆದುಕೊಳ್ಳಿ. ಪ್ರತಿ ದಿನ ಇದನ್ನು ೨ ಬಾರಿ ಹಚ್ಚಿಕೊಳ್ಳುವುದು ಒಳಿತು. 

8. ಕೊಬ್ಬರಿ ಎಣ್ಣೆ ಉಪಯೋಗಿಸಿ ಕಪ್ಪು ವೃತ್ತಗಳಿಂದ ಹೇಗೆ ಮುಕ್ತಿ ಪಡೆಯಬೇಕು? (How to Get Rid of Dark Circles using Coconut Oil in Kannada)

 ಕೊಬ್ಬರಿ ಎಣ್ಣೆ ನಿಮ್ಮ ಚರ್ಮವನ್ನು ಪೋಷಿಸುವುದಷ್ಟೇ ಅಲ್ಲದೇ, ಅದು ಕಪ್ಪು ವೃತ್ತಗಳಿಗೆ  ಅತ್ಯಂತ ಪರಿಣಾಮಕಾರಿ ಮನೆಮದ್ದಾಗಿದೆ. ಕೊಬ್ಬರಿ ಎಣ್ಣೆಯನ್ನು ನಿಮ್ಮ ಕಣ್ಣುಗಳ ಕೆಳಗಿನ ಕಣ್ಣಿನ ಚೀಲಗಳಿಗೆ ಹಚ್ಚಿಕೊಂಡು ಮಸ್ಸಾಜ್ ಮಾಡಿ. 

[Back To Top]

9. ಆಪಲ್ ಸೈಡರ್ ವಿನೆಗರ್ ಉಪಯೋಗಿಸಿ ಕಪ್ಪು ವೃತ್ತಗಳಿಂದ ಹೇಗೆ ಮುಕ್ತಿ ಪಡೆಯಬೇಕು? (How to Get Rid of Dark Circles using Apple Cider Vinegar in Kannada)

ಆಪಲ್ ಸೈಡರ್ ವಿನೆಗರ್ ವಿಟಮಿನ್ ಮತ್ತು ಮಿನರಲ್ಸ್ ಗಳನ್ನು ಸಮೃದ್ಧವಾಗಿ ಹೊಂದಿರುವುದರಿಂದ, ಹತ್ತಿ ಉಂಡೆಯನ್ನು ಆಪಲ್ ಸೈಡರ್ ವಿನೆಗರ್ ನಲ್ಲಿ ಅದ್ದಿ, ನಿಮ್ಮ ಕಣ್ಣ ಕೆಳಗೆ ಸೂಕ್ಷ್ಮವಾಗಿ ಲೇಪಿಸಿರಿ. ನಂತರ ಅದನ್ನು ತೊಳೆದುಕೊಳ್ಳುವ ಅಗತ್ಯ ಇಲ್ಲ. ಅದು ಒಣಗುತ್ತದೆ. 

10. ಅಡಿಗೆಗೆ ಬಳಸುವ ಸೋಡಾ ಉಪಯೋಗಿಸಿ ಕಪ್ಪು ವೃತ್ತಗಳಿಂದ ಹೇಗೆ ಮುಕ್ತಿ ಪಡೆಯಬೇಕು? (How to Get Rid of Dark Circles using Baking Soda in Kannada)

ನಿಮ್ಮ ಆಶ್ಚರ್ಯವೆನಿಸಬಹುದು, ಆದರೂ ಇದು ಸತ್ಯ. ಬೇಕಿಂಗ್ ಸೋಡಾ ನಿಮ್ಮ ಚರ್ಮಕ್ಕೆ ಮುದ ನೀಡಿ, ನಿಮ್ಮ ಚರ್ಮವನ್ನು ಬೆಳ್ಳಗಾಗಿಸುತ್ತದೆ. ಪ್ರತಿ ದಿನ ೧೦-೧೫ ನಿಮಿಷಗಳು, ನೀರು ಮತ್ತು ಬೇಕಿಂಗ್ ಸೋಡಾ ಮಿಶ್ರಣದಲ್ಲಿ ಅದ್ದಿದ ಹತ್ತಿಯನ್ನು ನಿಮ್ಮ ಕಣ್ಣಿನ ಕಪ್ಪು ವೃತ್ತಗಳ ಮೇಲಿಟ್ಟುಕೊಳ್ಳಿ. ಇದರಿಂದ ನಿಮ್ಮ ಕಪ್ಪು ವೃತ್ತಗಳು ಕಾಣೆಯಾಗುತ್ತವೆ. 

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon