ಕಣ್ಣಿಗೆ ಸಂಬಂಧಪಟ್ಟ ಹಲವು ಅಸ್ವಸ್ಥತೆಗಳೆಲ್ಲವಿಕ್ಕೂ ಸಾಮಾನ್ಯ ಜನರಾದ ನಾವು ಹೇಳುವುದು ಕಣ್ಣಿನ ಸೋಂಕು ಅಥವಾ ಐ ಇನ್ಫೆಕ್ಷನ್ ಎಂದು. ಬಹುತೇಕ ಕಣ್ಣಿನ ಸೋಂಕು ಉಂಟಾಗುವುದು ಅಲರ್ಜಿಗಳು, ವೈರಾಣುಗಳು, ಬ್ಯಾಕ್ಟೀರಿಯಾಗಳು ಮತ್ತು ಇನ್ನಿತರೇ ಸೂಕ್ಷ್ಮಜೀವಿಗಳಿಂದ. ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕಣ್ಣಿನ ಸೋಂಕು ಎಂದರೆ ಕಾಂಜುಕ್ಟಿವಿಟಿಸ್ (ಪಿಂಕ್ ಐ), ಟ್ರಕೋಮಾ ಮತ್ತು ಬ್ಲೇಫಾರಿಟಿಸ್. ಕಣ್ಣಿನ ಸೋಂಕು ಸುಲಭವಾಗಿ ಹಬ್ಬುತ್ತದೆ ಮತ್ತು ಕಣ್ಣಿನ ಪ್ರಮುಖ ಭಾಗಗಳಿಗೆ ಹಾನಿ ಮಾಡುತ್ತದೆ. ಸಾಮಾನ್ಯವಾಗಿ ಕಣ್ಣಿನ ಸೋಂಕಿನ ಲಕ್ಷಣಗಳು ಎಂದರೆ ಕೆಂಪಾಗುವಿಕೆ, ಊದಿಕೊಳ್ಳುವುದು, ತುರಿಕೆ, ನೋವು, ಕಣ್ಣಿನ ಸುತ್ತ ಪಿಸುರುಗಟ್ಟುವುದು, ಕಣ್ಣಿಂದ ಸೋರಿಕೆ ಉಂಟಾಗುವುದು ಮತ್ತು ಇನ್ನಷ್ಟು ಇವೆ.
ಕಣ್ಣಿನ ಸೋಂಕಿಗೆ ಟಾಪ್ ಮನೆಮದ್ದುಗಳ ಪಟ್ಟಿ ಇಲ್ಲಿದೆ ನೋಡಿ :
೧. ಅಗಸೆಬೀಜ
ಅಗಸೆಬೀಜಗಳಲ್ಲಿ ಇರುವ ಒಮೇಗಾ-3 ಫ್ಯಾಟಿ ಆಸಿಡ್ ನಿಮ್ಮ ಇಮ್ಮ್ಯೂನಿಟಿ (ಪ್ರತಿರಕ್ಷಣಾ ಶಕ್ತಿ) ಅನ್ನು ಹೆಚ್ಚಿಸುತ್ತದೆ ಮತ್ತು ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಮೊದಲಿಗೆ ಅರ್ಧ ಕಪ್ ಅಷ್ಟು ನೀರನ್ನು ಬಿಸಿ ಮಾಡಿ. ನಂತರ ಒಂದು ಹಿಡಿಯಷ್ಟು ಅಗಸೆಬೀಜಗಳನ್ನು ಈ ಬಿಸಿನೀರಿನೊಳಗೆ 15-20 ನಿಮಿಷಗಳಷ್ಟು ನೆನೆಯಲು ಬಿಡಿ. ನಂತರ ಹೆಚ್ಚುವರಿ ನೀರನ್ನು ಹೊರತೆಗೆದು, ಬಿಸಿಯಿಂದ ಮೆತ್ತಗಾದ ಅಗಸೆಬೀಜ ಮತ್ತು ಅದರ ಅಂಶವುಳ್ಳ ತಳದ ಸ್ವಲ್ಪ ನೀರನ್ನು ಇನ್ನೊಂದು ಕಾಟನ್ ಬಟ್ಟೆ ಮೇಲೆ ಇಟ್ಟುಕೊಳ್ಳಿ. ಈ ಮಿಶ್ರಣದ ನೀರನ್ನು ಬಟ್ಟೆ ಕೆಳಗೆ ಒಂದು ಬಟ್ಟಲು ಇಟ್ಟು ಶೇಖರಿಸಿ. ಶೇಖರಿಸಿದ ಈ ನೀರನ್ನು ನಿಮ್ಮ ಕಣ್ಣಿಗೆ ಹತ್ತಿಯಿಂದ ಅಥವಾ ಕೈ ಇಂದ ನೇರವಾಗಿ ಹಚ್ಚಿಕೊಳ್ಳಿ.
೨. ಟೀ
ಟೀ ಬ್ಯಾಗ್ಸ್ ನಿಮ್ಮ ಕಣ್ಣಿಗೆ ಆರಾಮ ನೀಡುವುದಷ್ಟೇ ಅಲ್ಲದೆ, ಕೆಂಪಗಾಗುವಿಕೆಯನ್ನೂ ಮತ್ತು ಊದಿಕೊಳ್ಳುವುದನ್ನು ತಡೆಯುತ್ತದೆ.
ಮೊದಲಿಗೆ ಕೆಲವು ಟೀ ಬಾಗ್ಸ್ ಅನ್ನು ಬಿಸಿ ನೀರಿನಲ್ಲಿ ಕುದಿಸಿಕೊಳ್ಳಿ. ನಂತರ ಟೀ ಬಾಗ್ಸ್ ಅನ್ನು ತಣ್ಣಗಾಗಲು ಬಿಡಿ. ನಂತರ ಸೋಂಕು ತಗಲಿರುವ ಕಣ್ಣಿನ ಮೇಲೆ ಒಂದು ಟೀ ಬ್ಯಾಗ್ ಅನ್ನು ಇಟ್ಟುಕೊಳ್ಳಿ ಮತ್ತು 10-15 ನಿಮಿಷಗಳು ಹಾಗೆಯೇ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಲಿ ಮುಖವನ್ನು ತೊಳೆದುಕೊಳ್ಳಿ. ಕಣ್ಣಿನ ಸೋಂಕಿನ ಲಕ್ಷಣಗಳೆಲ್ಲವೂ ಹೋಗುವ ತನಕ ದಿನಕ್ಕೆ 3 ಬಾರಿ ಮಾಡಿ.
೩. ಜೇನುತುಪ್ಪ
ಜೇನುತುಪ್ಪಕ್ಕೆ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿದ್ದು, ಇದು ಕಣ್ಣಿನಲ್ಲಿ ಇರುವ ಬ್ಯಾಕ್ಟೀರಿಯಾಗಳನ್ನ ಕೊಲ್ಲುತ್ತದೆ. ಜೇನುತುಪ್ಪವನ್ನು ಕಣ್ಣಿನ ಸೋಂಕಿನ ವಿರುದ್ಧ ಬಳಸಲು ಹಲವಾರು ದಾರಿಗಳಿವೆ. ಅವುಗಳಲ್ಲಿ ಮೂರು ವಿಧಾನಗಳನ್ನ ನಾವು ಈ ಕೆಳಗೆ ತಿಳಿಸಿದ್ದೇವೆ ಓದಿ :
1 - ಸಮಾನ ಪ್ರಮಾಣದಲ್ಲಿ ಜೇನುತುಪ್ಪ ಮತ್ತು ಬಿಸಿನೀರನ್ನು ಬೆರೆಸಿಕೊಳ್ಳಿ. ಚೆನ್ನಾಗಿ ಕಲಿಸಿ, ತಣ್ಣಗಾಗಲು ಬಿಡಿ. ನಂತರ ಹತ್ತಿಯ ಉಂಡೆ ಅಥವಾ ತೆಳುವಾದ ಬಟ್ಟೆಯನ್ನು ಈ ಮಿಶ್ರಣದಲ್ಲಿ ಅದ್ದು, ನಿಮ್ಮ ಸೋಂಕು ತಗುಲಿದ ಕಣ್ಣಿಗೆ ಹಚ್ಚಿಕೊಳ್ಳಿ.. ನಂತರ ಆ ಅದ್ದಿದ ಉಂಡೆ ಅಥವಾ ಬಟ್ಟೆಯನ್ನ ನಿಮ್ಮ ಕಣ್ಣುಗಳ ಮೇಲೆ 10-15 ನಿಮಿಷಗಳ ಕಾಲ ಹಾಗೆಯೇ ಇಟ್ಟುಕೊಳ್ಳಿ. ನೀವು ಈ ಮಿಶ್ರಣವನ್ನು ಇಲ್ಲಿ ತಿಳಿಸಿದಂತೆ ಐ-ಡ್ರಾಪ್ಸ್ ರೀತಿ ಉಪಯೋಗಿಸಬಹುದು ಅಥವಾ ಕಣ್ಣನ್ನು ತೊಳೆದುಕೊಳ್ಳಲು ಬಳಸಬಹುದು.
2- ನೇರವಾಗಿ ಜೇನುತುಪ್ಪವನ್ನು ನಿಮ್ಮ ಕಣ್ಣಿಗೆ ಹಾಕಿಕೊಳ್ಳುವುದು. ಜೇನುತುಪ್ಪಕ್ಕೆ ನೀರನ್ನು ಬೆರೆಸದೆ, ಹಾಗೆಯೇ ಹಾಕಿಕೊಳ್ಳುವುದು. ಜೇನುತುಪ್ಪವನ್ನು ನೇರವಾಗಿ ನಿಮ್ಮ ಕಣ್ಣುಗಳಿಗೆ ಹಾಕಿಕೊಳ್ಳಬೇಕು ಏಕೆಂದರೆ, ಜೇನುತುಪ್ಪವು ನಿಮ್ಮ ಕಣ್ಣಿನಲ್ಲಿರುವ ಯಾವುದೇ ರೀತಿಯ ಕಸ, ಸೋರಿಕೆಗೆ ಅಂಟಿಕೊಳ್ಳುತ್ತದೆ.
೪. ಬೇಬಿ ಶಾಂಪೂ
ಕಣ್ಣಿನ ಸೋಂಕಿಗೆ ಈ ಲೇಖನದಲ್ಲಿ ನಾವು ತಿಳಿಸಲಿರುವ ಇನ್ನೊಂದು ಮನೆಮದ್ದು ಎಂದರೆ ಅದು ಬೇಬಿ ಶಾಂಪೂ. ಬೇಬಿ ಶಾಂಪೂ ಅನ್ನು ಕಣ್ಣಿನ ಸೋಂಕಿನ ಚಿಕಿತ್ಸೆಗೆ ಬಳಸಲು ಇರುವ ವಿಧಾನವನ್ನು ನಾವು ನಿಮಗೆ ತಿಳಿಸುತ್ತೇವೆ ಓದಿ.
ಈ ವಿಧಾನದಲ್ಲಿ ನೀವು ಮಾಡಬೇಕಿರುವುದು ಕೇವಲ ಒಂದೇ ಕೆಲಸ - ಬೇಬಿ ಶಾಂಪೂಗೆ ಸ್ವಲ್ಪ ನೀರನ್ನು ಬೆರೆಸಿ ಅದನ್ನು ತಿಳಿಯಾಗಿಸಿಕೊಳ್ಳುವುದು. ನಂತರ ಹತ್ತಿಯ ಉಂಡೆ ಅಥವಾ ತೆಳುವಾದ ಬಟ್ಟೆಯನ್ನು ಬಳಸಿಕೊಂಡು ಈ ಮಿಶ್ರಣವನ್ನು ಸೋಂಕು ತಗುಲಿದ ಕಣ್ಣಿನ ಭಾಗದ ಮೇಲೆ ಹಚ್ಚಿಕೊಳ್ಳಿ. ಈ ಮಿಶ್ರಣದ ಸಹಾಯದಿಂದ ನಿಮ್ಮ ಕಣ್ಣು ಮತ್ತು ಕಣ್ಣಿನ ಸುತ್ತಲಿರುವ ಧೂಳು ಮತ್ತು ಇತರೆ ಪದಾರ್ಥಗಳನ್ನ ಹೋಗಲಾಡಿಸಬಹುದು. ವಾರದಲ್ಲಿ ನೀವು ಎರಡು ಬಾರಿ ಇದರಿಂದ ಕಣ್ಣುಗಳನ್ನು ಸ್ವಚ್ಛವಾಗಿಸಿಕೊಂಡರೆ ಒಳ್ಳೆಯ ಫಲಿತಾಂಶ ಲಭಿಸುತ್ತದೆ.
೫. ಅರಿಶಿನ ಪುಡಿ
ಅರಿಶಿನ ಪುಡಿಯು ಕಣ್ಣಿನ ಸೋಂಕಿಗೆ ಒಂದು ಅತ್ಯಂತ ಪರಿಣಾಮಕಾರಿ ಮನೆಮದ್ದು. ಅರಿಶಿನ ಪುಡಿಯನ್ನು ಕಣ್ಣಿನ ಸೋಂಕಿಗೆ ಬಳಸುವುದು ಹೇಗೆಂದು ಓದಿ.
ಎರಡು ಲೋಟದಷ್ಟು ನೀರಿಗೆ ಒಂದು ಚಮಚದಷ್ಟು ಅರಿಶಿನ ಪುಡಿಯನ್ನು ಚೆನ್ನಾಗಿ ಕಲಿಸಿಕೊಳ್ಳಿ. ನಂತರ ಐ-ಡ್ರಾಪ್ಸ್ ಹಾಕಿಕೊಳ್ಳುವ ಪಿಲ್ಲರ್ ಅಲ್ಲಿ ಈ ಮಿಶ್ರಣವನ್ನು ತುಂಬಿಕೊಂಡು ಒಂದೆರೆಡು ಹನಿಗಳಷ್ಟು ಮಾತ್ರ ನಿಮ್ಮ ಕಣ್ಣಿನೊಳಗೆ ಬಿಟ್ಟುಕೊಳ್ಳಿ. ನಿಮ್ಮ ಕಣ್ಣಿಗೆ ಆರಾಮ ಸಿಗುವವರೆಗೂ ದಿನಕ್ಕೆ 2 ಬಾರಿ ಇದನ್ನು ಮಾಡಿರಿ.
೬. ಕೊತ್ತಂಬರಿ ಬೀಜಗಳು
ಕಣ್ಣಿನ ಸೋಂಕಿಗೆ ಮತ್ತೊಂದು ಉತ್ತಮ ಮನೆಮದ್ದು ಎಂದರೆ ಅದು ಕೊತ್ತಂಬರಿ ಬೀಜ. ಇದನ್ನು ಬಳಸುವುದು ಹೇಗೆ ಎಂದರೆ :
ಒಂದು ಲೋಟದಷ್ಟು ನೀರಿನೊಂದಿಗೆ ಕೊತ್ತಂಬರಿ ಬೀಜಗಳನ್ನ ಚೆನ್ನಾಗಿ ಕುದಿಸಿ. ನಂತರ ಅದು ತಣ್ಣಗಾಗಲು ಬಿಡಿ. ನಂತರ ಈ ಮಿಶ್ರಣದೊಂದಿಗೆ ನಿಮ್ಮ ಕಣ್ಣುಗಳನ್ನು ತೊಳೆದುಕೊಳ್ಳಿ. ಈ ಮಿಶ್ರಣವನ್ನು ಬಳಸುವುದರಿಂದ ನಿಮ್ಮ ಕಣ್ಣಿನ ನೋವು ಮಾತ್ರ ಕಡಿಮೆ ಆಗುತ್ತದೆ ಅಲ್ಲದೆ, ಸೋಂಕಿನಿಂದ ನಿಮ್ಮ ಕಣ್ಣು ಊದಿಕೊಳ್ಳುವುದು ಕೂಡ ಕಡಿಮೆ ಆಗುತ್ತದೆ.
