Link copied!
Sign in / Sign up
40
Shares

ಸ್ಲೀವ್ಲೆಸ್ ಬಟ್ಟೆ ಹಾಕಲು ಇಷ್ಟ ಆದರೆ ಕಂಕುಳ ಕಪ್ಪಿದೆ ಎಂಬ ಭಯವೇ?ಹಾಗಿದ್ದರೆ ಇಲ್ಲಿವೆ 5 ಮನೆಮದ್ದುಗಳು!

ಕಂಕುಳ ಭಾಗದಲ್ಲಿ ಗಾಢ ಬಣ್ಣವನ್ನು ಹೊಂದುವುದು ಬಹುತೇಕ ಬಾರಿ ಕಾಯಿಲೆ ಅಥವಾ ಇನ್ನ್ಯಾವುದೋ ಅಸ್ವಸ್ಥತೆ ಆಗಿರುವುದಿಲ್ಲ. ಬಹುತೇಕ ಬಾರಿ ಚರ್ಮವು ಕೆಲವೊಂದು ಅಂಶಗಳಿಗೆ ತೆರೆದುಕೊಂಡಾಗ ಇಂತಹ ಪರಿಸ್ಥಿತಿ ಉಂಟಾಗುತ್ತದೆ. ಆದರೆ ಇದು ಉಂಟಾಗಲು ಕೆಲವೊಂದು ಸಾಮಾನ್ಯ ಕಾರಣಗಳಿವೆ ಮತ್ತು ಹೌದು, ಅವುಗಳೊಂದಿಗೆ ಅದಕ್ಕೆ ಮನೆ ಪರಿಹಾರಗಳು ಕೂಡ ಇವೆ.


ನೀವು ಆ ಭಾಗದಲ್ಲಿನ ಕೂದಲನ್ನ ಕೀಳುವುದರ ಮೂಲಕ ಅಥವಾ ಶೇವ್ ಮಾಡುವ ಮೂಲಕ, ಆ ಭಾಗದ ಚರ್ಮದಲ್ಲಿ ಹಲವಾರು ರಂಧ್ರಗಳನ್ನ ಮುಕ್ತವಾಗಿ ಬಿಡುತ್ತೀರಾ. ಇದರಿಂದ ಬ್ಯಾಕ್ಟೀರಿಯಾಗಳು ಅವುಗಳ ಒಳಗಡೆ ಹೋಗಿ ನಿಮಗೆ ಇರಿಸುಮುರಿಸು ಉಂಟು ಮಾಡಬಹುದು. ನಂತರ ಇವುಗಳ ಕಾರ್ಯದಿಂದಲೇ ಚರ್ಮವು ಕಪ್ಪಾಗಬಹುದು. ಕೆಲವೊಂದು ಬಾರಿ ಸೌಂದರ್ಯವರ್ಧಕಗಳ ದುರ್ಬಳಕೆ ಇಂದಲೂ ಆ ಭಾಗದಲ್ಲಿ ಕಪ್ಪು ಕಲೆಗಳು ಆಗಬಹುದು. ಅಲ್ಲದೆ ತುಂಬಾ ಟೈಟ್ ಆದ ಬಟ್ಟೆಗಳನ್ನ ಧರಿಸುವದರಿಂದಲೂ ಇದು ಉಂಟಾಗಬಹುದು. ಆದರೆ, ಇದಕ್ಕೆ ಮನೆ ಪರಿಹಾರಗಳು ಏನು? ಅವುಗಳನ್ನ ನಾವು ತಿಳಿಸುತ್ತೇವೆ ಓದಿ. ಆದರೆ ಅದಕ್ಕೂ ಮುನ್ನ ನೀವು ಈ ಸ್ಥಿತಿ ಮತ್ತೆ ಎದುರಾಗಬಾರದು ಎಂದರೆ ಏನು ಮಾಡಬೇಕು ಎಂದು ತಿಳಿಸುತ್ತೇವೆ ಓದಿ :

ತ್ವಚೆ ಕಪ್ಪು ಆಗಬಾರದು ಎಂದರೆ ಪಾಲಿಸಬೇಕಾದ ವಿಷಯಗಳು

೧. ಸರಿಯಾದ ವ್ಯಾಕ್ಸಿಂಗ್

ವ್ಯಾಕ್ಸಿಂಗ್ ಮಾಡಿಸುವುದು ಕಂಕುಳ ಚರ್ಮವನ್ನ ಬೆಳ್ಳಗೆ ಮಾಡಲು ಸಹಾಯ ಮಾಡುತ್ತದೆ. ಕೂದಲುಗಳನ್ನ ಬುಡಸಮೇತ ಕೀಳುವುದು ಕಂಕುಳನ್ನ ಬೆಳ್ಳಗಾಗಿಸುತ್ತದೆ. ದಪ್ಪ ಕೂದಲಿನ ಕಿರುಚೀಲಗಳು ಹೊಂದಿರುವವರಿಗೆ ಕೂದಲು ನಿರ್ಮೂಲನೆ ತ್ವಚೆ ಬೆಳ್ಳಗಾಗಿಸಲು ಒಂದು ಉತ್ತಮ ದಾರಿ. ಹೇರ್ ರಿಮೂವಲ್ ಕ್ರೀಮ್ ಗಳನ್ನ ಬಳಸಬೇಡಿ. ಅವುಗಳಲ್ಲಿ ರಾಸಾಯನಿಕಗಳು ಇದ್ದು, ಇದು ನಿಮ್ಮ ತ್ವಚೆಗೆ ಹಾನಿ ಮಾಡುತ್ತವೆ.


೨. ಕಂಕುಳ ಕೂದಲನ್ನು ಕಿತ್ತುಕೊಳ್ಳಬೇಡಿ

ನೀವು ನಿಮ್ಮ ಕಂಕುಳ ಕೂದಲನ್ನ ಕಿತ್ತುಕೊಂಡರೆ, ಆ ಕೂದಲಿನ ಜಾಗದಲ್ಲಿ ರಂಧ್ರ ಉಂಟಾಗುತ್ತದೆ. ಆ ರಂಧ್ರಗಳಲ್ಲಿ ಧೂಳು ಮತ್ತು ಇತರೆ ಪದಾರ್ಥಗಳು ಸೇರಿಕೊಂಡು ನಿಮ್ಮ ತ್ವಚೆ ಕಪ್ಪಗಾಗುವಂತೆ ಮಾಡುತ್ತದೆ.


೩. ತ್ವಚೆಯನ್ನ ಕೆರಳಿಸುವಂತಹ ಉತ್ಪನ್ನಗಳನ್ನ ಬಳಸಬೇಡಿ
 
ನೀವು ನಿಮ್ಮ ಚರ್ಮವನ್ನ ಕೆರಳಿಸುವಂತಹ ಯಾವುದೇ ಉತ್ಪನ್ನಗಳನ್ನ ಬಳಸಬಾರದು. ಮುಖ್ಯವಾಗಿ ನೈಲಾನ್ ಬಟ್ಟೆ ಧರಿಸುವುದು. ನೈಲಾನ್ ಬಟ್ಟೆಯಿಂದ ಸೂರ್ಯನ ಕಿರಣಗಳು ಚರ್ಮಕ್ಕೆ ಮುಟ್ಟದೆ ಬ್ಲಾಕ್ ಆಗುವವು.

೪. ಪದೇ ಪದೇ ಟೈಟ್ ಬಟ್ಟೆಗಳನ್ನ ಧರಿಸಬೇಡಿ

ಟೈಟ್ ಆಗಿರುವ ಬಟ್ಟೆಗಳಿಂದ ಉಜ್ಜುವಿಕೆ ಉಂಟಾಗುತ್ತದೆ. ಇದು ತ್ವಚೆಯನ್ನು ಕಪ್ಪಗಾಗಿಸುತ್ತದೆ.


ಮನೆಪರಿಹಾರಗಳು 

೧. ನಿಂಬೆಹಣ್ಣು

ನಿಂಬೆಹಣ್ಣು ನೈಸರ್ಗಿಕ ಬ್ಲೇಚ್ ಆಗಿ ಅಷ್ಟೇ ಅಲ್ಲದೆ, ಪರಿಣಾಮಕಾರಿ ಬ್ಯಾಕ್ಟೀರಿಯಾ ಮತ್ತು ಸೆಪ್ಟಿಕ್ ವಿರೋಧಿಯಾಗಿಯೂ ಕೆಲಸ ಮಾಡುತ್ತದೆ. ಇದೆ ಗುಣಕ್ಕಾಗಿ ನಾವು ಅದನ್ನ ಕಪ್ಪು ತ್ವಚೆ ನಿರ್ಮೂಲನೆಗೆ ಬಳಸಬಹುದು. ನಿಂಬೆಹಣ್ಣು ನಿಮ್ಮ ತ್ವಚೆಯನ್ನು ಒಣಗಿಸುತ್ತದೆ. ಈ ಕಾರಣಕ್ಕಾಗಿ ನೀವು ಕೆಳಗಿನ ವಿಧಾನ ಅನುಸರಿಸಿದ ನಂತರ ಯಾವುದಾದರು ಮೊಯಿಶ್ಚರೈಸಿಂಗ್ ಕ್ರೀಮ್ ಅನ್ನು ಹಚ್ಚಿಕೊಳ್ಳಿ.

ಮೊದಲು ನೀವು ನಿಮ್ಮ ಕಂಕುಳನ್ನ ಬಿಸಿನೀರಿನಿಂದ ತೊಳೆದು, ಸತ್ತ ಕೋಶಗಳನ್ನ ಹೊರಹಾಕಿ. ನಂತರ ನಿಂಬೆಹಣ್ಣಿನ ತುಂಡನ್ನು ತೆಗೆದುಕೊಂಡು ನಿಮ್ಮ ಕಂಕುಳಿನ ಎಲ್ಲಾ ಭಾಗಗಳ ಮೇಲೆಯೂ ಹಲವು ನಿಮಿಷಗಳ ಕಾಲ ಚೆನ್ನಾಗಿ ಉಜ್ಜಿ. ಉಜ್ಜಿದ ನಂತರ ಸ್ವಲ್ಪ ಸಮಯ ಹಾಗೆ ಬಿಡಿ. 10 ನಿಮಿಷಗಳು ಆದ ನಂತರ ಅದನ್ನ ನೀರಿನಿಂದ ತೊಳೆದುಬಿಡಿ.


೨. ಆಲೂಗಡ್ಡೆ

ಆಲೂಗಡ್ಡೆಯಲ್ಲಿ ಇರುವ ಮೃದು ಆಮ್ಲಿಯ ಗುಣಗಳನ್ನ ನಾವು ಬ್ಲೀಚಿಂಗ್ ಕಾರ್ಯಕ್ಕೆ ಬಳಸಬಹುದು. ಇತರೆ ಶಕ್ತಿಶಾಲಿ ಬ್ಲೀಚಿಂಗ್ ಪದಾರ್ಥಗಳಂತೆ ಆಲೂಗಡ್ಡೆ ಚರ್ಮಕ್ಕೆ ಹಾನಿ ಉಂಟುಮಾಡದು.

ನೀವು ಆಲೂಗಡ್ಡೆಯ ಒಂದು ತುಂಡನ್ನು ನಿಮ್ಮ ಚರ್ಮಕ್ಕೆ ಚೆನ್ನಾಗಿ ಉಜ್ಜಿಕೊಳ್ಳಬಹುದು ಅಥವಾ ಆಲೂಗಡ್ಡೆಯನ್ನ ತುರಿದು, ಅದರ ರಸವನ್ನು ಹಿಂಡಿಕೊಂಡು, ಆ ರಸವನ್ನ ಕೂಡ ಹಚ್ಚಿಕೊಳ್ಳಬಹುದು. ಹಚ್ಚಿಕೊಂಡ 20 ನಿಮಿಷಗಳ ನಂತರ ನಲ್ಲಿ ನೀರಿನಲ್ಲಿ ತೊಳೆದುಕೊಳ್ಳಿ.


೩. ಸೌತೆಕಾಯಿ

ಸೌತೆಕಾಯಿಯನ್ನು ಕೂಡ ಆಲೂಗಡ್ಡೆಯ ರೀತಿಯಲ್ಲೇ ಬ್ಲೀಚಿಂಗ್ ಮತ್ತು ತ್ವಚೆ ಬೆಳ್ಳಗಾಗಿಸಲು ಬಳಸಬಹುದು. ಒಂದು ಚಮಚದಷ್ಟು ಸೌತೆಕಾಯಿ ತುಂಡನ್ನು ಮೊದಲು ಜೇಜ್ಜಿ ಅಥವಾ ಚೆನ್ನಾಗಿ ಪ್ರೆಸ್ ಮಾಡಿ. ಅದಕ್ಕೆ ಎರಡು ಚಮಚ ನೀರು ಮತ್ತು ಸ್ವಲ್ಪ ಅರಿಶಿನ ಬೆರೆಸಿ. ಈ ಮಿಶ್ರಣವು ತ್ವಚೆಯನ್ನ ಬೆಳ್ಳಗಾಗಿಸುತ್ತದೆ. ಈ ಮಿಶ್ರಣವನ್ನ ನಿಮ್ಮ ಕಂಕುಳಿಗೆ 30 ನಿಮಿಷಗಳ ಕಾಲ ಹಚ್ಚಿಕೊಳ್ಳಿ. ಹಾಗು ಅದರ ನಂತರ ನೀರಿನಲ್ಲಿ ತೊಳೆಯಿರಿ.


೪. ಅಡುಗೆ ಸೋಡಾ

ಅಡುಗೆ ಸೋಡಾವನ್ನು ಒಂದು ನೈಸರ್ಗಿಕ ಸುಲಿಯುವ ಸ್ಕ್ರಬ್ ಆಗಿ ಬಳಸಬಹುದು. ಹೀಗೆ ಬಳಸುವ ಮೂಲಕ ನಾವು ತ್ವಚೆಯಲ್ಲಿ ಉಳಿದುಕೊಂಡಿರುವ ಸತ್ತ ಕಣಗಳನ್ನ ಹೊರಹಾಕಬಹುದು ಮತ್ತು ತ್ವಚೆಯನ್ನ ಬೇಗನೆ ಬೆಳ್ಳಗಾಗಿಸಬಹುದು.

ಸ್ವಲ್ಪ ಅಡುಗೆ ಸೋಡಾಗೆ ಒಂದೆರೆಡು ಹನಿಗಳಷ್ಟು ನೀರನ್ನು ಬೆರೆಸಿ ದಪ್ಪವಾದ ಪೇಸ್ಟ್ ಅನ್ನು ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ನಿಮ್ಮ ಕಂಕುಳಿಗೆ ಹಚ್ಚಿಕೊಳ್ಳಿ , ಸ್ವಲ್ಪ ಹೊತ್ತು ಬಿಡಿ ನಂತರ ಅದನ್ನ ತೆಗೆದು, ನೀರಿನಿಂದ ತೊಳೆದುಕೊಳ್ಳಿ.


೫. ಕಿತ್ತಳೆ ಹಣ್ಣಿನ ಸಿಪ್ಪೆ

ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಕೆಲವು ದಿನಗಳಷ್ಟು ಬಿಸಿಲಿಗೆ ಇಟ್ಟು ಚೆನ್ನಾಗಿ ಒಣಗಿಸಿ. ನಂತರ, ಈ ಒಣಗಿದ ಸಿಪ್ಪೆಯನ್ನು ಚೆನ್ನಾಗಿ ರುಬ್ಬಿಕೊಳ್ಳಿ ಅಥವಾ ಮಿಕ್ಸರ್ ಅಲ್ಲಿ ಪುಡಿ ಮಾಡಿ. ಸ್ವಲ್ಪ ಹಾಲು ಮತ್ತು ರೋಜ್ ಮಿಲ್ಕ್ ಮಿಶ್ರಣಕ್ಕೆ, ಒಂದೆರೆಡು ಚಮಚದಷ್ಟು ಕಿತ್ತಳೆ ಸಿಪ್ಪೆಯ ಪುಡಿಯನ್ನ ಬೆರೆಸಿ, ಗಟ್ಟಿಯಾದ ಪೇಸ್ಟ್ ಅನ್ನು ಸಿದ್ದಪಡಿಸಿ. ಇದನ್ನ ನಿಮ್ಮ ಕಂಕುಳಕ್ಕೆ ಹಚ್ಚಿಕೊಂಡು 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಅದನ್ನ ತಣ್ಣೀರಿನಿಂದ ತೊಳೆದುಕೊಳ್ಳಿ. ಇದನ್ನ ವಾರದಲ್ಲಿ ಹಲವು ಬಾರಿ ಮಾಡಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
100%
Wow!
0%
Like
0%
Not bad
0%
What?
scroll up icon