Link copied!
Sign in / Sign up
212
Shares

ನಿಮ್ಮ ಕಾಲು ಬೆರಳುಗಳು, ನಿಮ್ಮ ವ್ಯಕ್ತಿತ್ವದ ಬಗ್ಗೆ ಏನು ಹೇಳುತ್ತದೆ?

ಹೌದು ಸ್ನೇಹಿತರೆ, ನೀವು ಓದಿದ್ದು ಸರಿಯಾಗಿದೆ. ನಿಮ್ಮ ಕಾಲು ಬೆರಳುಗಳು, ನಿಮ್ಮ ವ್ಯಕ್ತಿತ್ವವನ್ನು ತಿಳಿಸುತ್ತದೆ ಎಂದು ಇತ್ತೀಚಿನ ಸಂಶೋಧನೆಯೊಂದು ವರಧಿ ಪ್ರಕಟಿಸಿದೆ. ಪ್ರಖ್ಯಾತ  ವಿಜ್ಞಾನಿಗಳು, ಸಾವಿರಾರು ಜನಸಾಮಾನ್ಯರ ಪದಗಳ ಮೇಲೆ, ನಡಿಸಿರುವ ಸಮೀಕ್ಷೆಯ ಆಧಾರದ ಮೇಲೆ, ವ್ಯಕ್ಥಿತವನ್ನು ವಿವರಿಸಲಾಗಿದೆ. ವಿಜ್ಞಾನ ಬೆಳದಂತೆ, ಪ್ರತಿನಿತ್ಯ ಹೊಸ ಹೊಸ ಅನ್ವೇಷಣೆಗಳು ಬೆಳಕಿಗೆ ಬರುತ್ತಿದೆ. ಅದೇ ರೀತಿ, ಪುರಾತನ ಕಾಲದ ಜ್ಯೋತಿಷ್ಯ ಶಾಸ್ತ್ರಗಳು ಕೂಡ, ಹಸ್ತ, ಪಾದಗಳ ರಚನೆಯ ಮೇಲೆ, ನಮ್ಮ ಜೀವನದ ಆಗು-ಹೋಗುಗಳ್ಳನ್ನು ವಿವರಿಸುತ್ತದೆ.

ಒಟ್ಟಿನಲ್ಲಿ ಆಧುನಿಕ ಹಾಗು ಪುರಾತನ ವಿಜ್ಞಾನಗಳ ನಡುವೆ ಬಹು ದೊಡ್ಡ ಅಂತರವೇನಿಲ್ಲ ಎಂದು ಲೇಖನ ನಿಮಗೆ ಸ್ಪಷ್ಟಪಡಿಸುತ್ತದೆ.

ನೀವೆಲ್ಲರು, ನಿಮ್ಮ ನಿಮ್ಮ ವ್ಯಕ್ತಿತ್ವದ ಬಗ್ಗೆ ತಿಳಿದುಕೊಳ್ಳಲು ಕಾತುರರಾಗಿದ್ಧೀರಾ? ಹಾಗಾದರೆ ಬನ್ನಿ! ನಿಮ್ಮ ಪಾದಗಳು ನಿಮ್ಮ ವ್ಯಕ್ತಿತ್ವದ ಬಗ್ಗೆ ಏನು ಹೇಳುತ್ತವೆ ಎಂದು ತಿಳಿಯೋಣ.

ಅವರೋಹಣ ಆಕಾರದ ಪಾದಗಳು( ಈಜಿಪ್ಷಿಯನ್ ಪಾದಗಳು)

ಮೇಲಿರುವ ಚಿತ್ರದ ಪ್ರಕಾರ, ನಿಮ್ಮ ಕಾಲು ಬೆರಳುಗಳು ಅವರೋಹಣ ಆಕಾರದ್ದಲ್ಲಿ ಇದ್ದರೆ; ಅಂದರೆ ಮೊದಲನೆಯ ಬೆರಳಿನಿಂದ ಕಿರುಬೆರಳಿನವರೆಗೆ, ಒಂದಕ್ಕಿಂತ ಒಂದು ಚಿಕ್ಕದಾಗಿದ್ದರೆ, ನಿಮ್ಮನ್ನು ಈಜಿಪ್ಷಿಯನ್ ವಂಶದವರು ಎಂದು ಕರೆಯುತ್ತಾರೆ.

ಈ ವ್ಯಕ್ತಿತ್ವದವರಿಗೆ ತುಂಬಾ ಕುತೂಹಲವಿರುತ್ತದೆ ಹಾಗು ಇವರುಗಳು ಕ್ಲಿಷ್ಟಕರವಾದ ಸಮಸ್ಯೆಗಳ್ಳನ್ನು, ರಹಸ್ಯಗಳ್ಳನ್ನು ಭೇದಿಸುವ ವ್ಯಕ್ತಿಗಳಾಗಿರುತ್ತಾರೆ. ಇವರು ಮಾಡುವ ಕೆಲಸಗಳು, ಮುಂದಾಲೋಚನೆಯನ್ನು ಯಾರಿಂದಲೂ ತಿಳಿದುಕೊಳ್ಳಲು ಸಾದ್ಯವಿಲ್ಲ.  ಇವರು ಅಷ್ಟು ಸುಲಭವಾಗಿ ಯಾರನ್ನುಸ್ನೇಹಿತರನ್ನಾಗಿ ಮಾಡಿಕೊಳ್ಳುವುದಿಲ್ಲ ಹಾಗು ಈ ವ್ಯಕ್ತಿತ್ವದವರ ಸ್ನೇಹಗಳಿಸಬೇಕಾದರೆ, ನೀವು ಮೊದಲು ಅವರ ನಂಬಿಕೆಗೆ ಅರ್ಹರಾಗಬೇಕು.

ಮೊದಲ ಮೂರು ಬೆರಳುಗಳು ಸಮನಾಗಿರುವುದು( ರೋಮನ್ ಪಾದಗಳು)

ನಿಮ್ಮ ಪಾದದ, ಮೊದಲ ಮೂರು ಬೆರಳುಗಳು ಒಂದೇ ಸಮನಾಗಿದ್ದು, ಉಳಿದ ಎರಡು ಬೆರಳುಗಳು ಚಿಕ್ಕದಾಗಿದ್ದರೆ, ನಿಮ್ಮನ್ನು ರೋಮನ್ ವಂಶದವರೆಂದು ಗುರುತಿಸುತ್ತಾರೆ. ಈ ವ್ಯಕ್ತಿವದವರು ಸುಂದರರು, ಹಾಸ್ಯಕಾರರು ಹಾಗು ನಂಬಿಕಸ್ಥ ವ್ಯಕ್ಥಿಗಳಾಗಿರುತ್ತಾರೆ.

ತಮ್ಮ ಸ್ನೇಹಿತರು, ಬಂಧು-ಮಿತ್ರರ ಸಹಾಯಕ್ಕೆ ಸದಾಕಾಲ ಸಿದ್ಧರಿರುತ್ತಾರೆ ಹಾಗು ಬಹು ಬೇಗ ಎಲ್ಲರ ಪ್ರೀತಿ, ವಿಶ್ವಾಸವನ್ನು ಸಂಪಾದಿಸುತ್ತಾರೆ.

ಎಲ್ಲಾ ಬೆರಳುಗಳು ಒಂದೇ ಸಮನಾಗಿರುವುದು(ಪರ್ಷಿಯನ್ ಪಾದಗಳು)

ಕಾಲಿನ ಎಲ್ಲಾ ಬೆರಳುಗಳು ಒಂದೇ ಸಮನಾಗಿರುವ ವ್ಯಕ್ತಿಗಳು ಕಂಡುಬರುವುದು, ತುಂಬಾ ಅಪರೂಪ. ಇವರ ವಂಶವಾಹಿಯನ್ನು ಹುಡುಕುತ್ತಾ ಹೋದರೆ, ಇವರು ಪರ್ಷಿಯನ್ ವಂಶಕ್ಕೆ ಸೇರೆದವರು ಎಂದು ತಿಳಿದುಬರುತ್ತದೆ.

ಶಾಂತ, ತಾಳ್ಮೆ ವ್ಯಕ್ಥಿಗಳಾಗಿರುವ ಇವರು, ಅನ್ಯಾಯವನ್ನು ಕಂಡರೆ ಸಹಿಸುವುದಿಲ್ಲ. ಯಾವುದಾದರು ವಿಷಯಗಳಿಗೆ ಸ್ನೇಹಿತರಿಂದ ಸಲಹೆ ಪಡೆದರೂ, ಕಡೆಯಲ್ಲಿ ಇವರಿಗೆ ಸರಿಯನಿಸಿದ್ದನ್ನು ಮಾತ್ರ ಮಾಡುತ್ತಾರೆ.

ಎರಡನೆಯ ಬೆರಳು ಉದ್ದವಾಗಿರುವುದು(ಗ್ರೀಕ್ ಪಾದಗಳು)

ಈ ಗುಂಪಿನ ವ್ಯಕ್ತಿಗಳು, ಸೃಜನಾತ್ಮಕ, ಕ್ರಿಯಾತ್ಮಕ, ಬುದ್ಧಿವಂತ ಹಾಗು ಮೇಧಾವಿಗಳಾಗಿರುತ್ತಾರೆ. ಇವರುಗಳು ಸಹಜವಾಗಿ ನಾಯಕ ಗುಣ ಉಳ್ಳವರು ಹಾಗು ಎಲ್ಲರನ್ನು ಮುನ್ನಡೆಸುವ ಸಾಮರ್ಥ್ಯವನ್ನು ಹೊಂದಿರುವವರು.

ನೃತ್ಯ, ಅಭಿನಯ, ನಾಟಕ , ಗಾಯನಗಳ್ಳಲ್ಲಿ ಯಶಸ್ಸು ಸಾಧಿಸುತ್ತಾರೆ.

ಸ್ಥಿರವಾದ ಕೊನೆಯ ಎರಡು ಬೆರಳುಗಳು

 

ನಿಮ್ಮ ಕಾಲು ಬೆರಳಿನ ಕೊನೆಯ ಎರಡು ಬೆರಳುಗಳ್ಳನ್ನು ಅಲುಗಾಡಿಸಲು ಆಗದ ಹಾಗೆ ಒಂದಕ್ಕೊಂದು ಹೊಂದಿಕೊಂಡಿದ್ದರೆ, ನೀವು ಹಿಡಿದ ಕೆಲಸವನ್ನು ಸಾಧಿಸುವವರೆಗೂ, ಛಲಬಿಡದೆ ಮಾಡುವ ವ್ಯಕ್ತಿಗಳಾಗಿರುತ್ತೀರ.

ಗುರಿ ಸಾಧಿಸುವ ಹಂಬಲದಲ್ಲಿರುವ ಇವರು, ಯಾವುದೇ ಅಡೆ-ತಡೆಗೆ ಬಗ್ಗದೆ, ನಿರಂತರ ಪರಿಶ್ರಮಿಗಳಾಗಿರುತ್ತಾರೆ.

ಪ್ರತ್ಯೇಕಗೊಂಡಿರುವ ಕಿರುಬೆರಳು

ನಿಮ್ಮ ಕಿರು ಬೆರಳು, ಬೇರೆಲ್ಲಾ ಬೆರಳುಗಳಿಂದ ಸ್ವಲ್ಪ ದೂರದಲ್ಲಿದ್ದರೆ, ನೀವು ಸಕ್ರಿಯ ವ್ಯಕ್ತಿತ್ವವನ್ನು ಹೊಂದಿರುವವರಾಗಿದ್ದೀರ. ಯಾವುದೇ ಕೆಲಸಗಳ್ಳನ್ನು ಇಲ್ಲ ಎನ್ನದೆ, ಮುಂದಾಳತ್ವ ವಹಿಸಿಕೊಳ್ಳುವ ವ್ಯಕ್ಥಿತವದವರು ಇವರು.

ಬಾಗಿದ ಕಿರುಬೆರಳು

ನಿಮ್ಮ ಕಿರುಬೆರಳು ಬೇರೆಲ್ಲಾ ಬೆರಳುಗಳಿಗಿಂತ ಹೆಚ್ಚು ಬಾಗಿದೆಯೇ? ಹಾಗಾದರೆ ನೀವು ಆದರ್ಶ ವ್ಯಕ್ತಿತ್ವ ಉಳ್ಳವರು. ಬೇರೆಯವರ ದಾರಿಯನ್ನು ತುಳಿಯದೇ, ನಿಮ್ಮದೇ ದಾರಿಯಲ್ಲಿ ಮುನ್ನಡೆಯುವ ಸಾಮರ್ಥ್ಯವನ್ನು ಹೊಂದಿದವರು ನೀವು.

ಸಂಕಷ್ಟದ ಪರಿಸ್ಥಿತಿ ಎದುರಾದರೂ, ನಿಮ್ಮದೇ ದಾರಿಯಲ್ಲಿ ನೀವು ನಡೆದು, ಮುಂದೊಂದು ದಿನ ಎಲ್ಲರಿಗೆ ಮಾದರಿಯಾಗುವ ವ್ಯಕ್ಥಿತ್ವವ್ವನ್ನು ಹೊಂದಿರುತ್ತೀರ.

ನೀವು ಮಾಡಬೇಕಾಗಿರುವುದು ಇಷ್ಟೇ, ಮೇಲೆ ಹೇಳಿರುವ ಗುಂಪಿನ್ನಲ್ಲಿ, ನೀವು ಯಾವ ಗುಂಪಿನವರು ಎಂದು ಕಮೆಂಟ್(comment)ಗಳ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

ನಿಮ್ಮ ಉತ್ತರದ ನಿರೀಕ್ಷೆಯಲ್ಲಿದ್ದೇವೆ!!

ಈ ಲೇಖನ ನಿಮಗೆ ಉಪಯುಕ್ತವೆನಿಸಿದರೆ, ದಯವಿಟ್ಟು ನಿಮ್ಮ ಬಂಧು-ಮಿತ್ರರೊಂದಿಗೆ ಹಂಚಿಕೊಳ್ಳಿ.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon