Link copied!
Sign in / Sign up
16
Shares

ಕಲ್ಲಂಗಂಡಿ ಹಣ್ಣಿನ ಬೀಜಗಳ ಪ್ರಯೋಜನ ತಿಳಿದರೆ ನೀವು ಖಂಡಿತ ಬೆರಗಾಗುವಿರಿ!

ಕಲ್ಲಂಗಡಿ ಹಣ್ಣು ಯಾರಿಗೆ ತಾನೇ ಇಷ್ಟವಿಲ್ಲ, ಅದರಲ್ಲೂ ಕಲ್ಲಂಗಡಿ ಹಣ್ಣಿನ ಜ್ಯುಸ್ ಅನ್ನು ಎಲ್ಲರೂ ಇಷ್ಟಪಡುವರು.ಇದು ರಕ್ತ ಹೆಚ್ಚಿಸುವಲ್ಲಿ ಮತ್ತು ಶುದ್ದಿ ಮಾಡುವಲ್ಲಿ ಸಹಾಯ ಮಾಡುವುದು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಕಲ್ಲಂಗಡಿ ಹಣ್ಣನ್ನು ತಿನ್ನುವುದು ಇಷ್ಟ, ಆದರೆ ಅದನ್ನು ತಿನ್ನುವಾಗ ಮದ್ಯೆ ಮದ್ಯ ಪದೆ ಪದೆ ಬಾಯಿಗೆ ಅದರ ಬೀಜಗಳು ಸಿಗುವುದು ಕೆಲವರಿಗೆ ಬೇಸರ ತರಬಹುದು. ಆದರೆ ನಿಮಗೆ ಗೊತ್ತೇ ಇದರ ಬೀಜಗಳನ್ನು ಸೇವಿಸುವುದು ನಮ್ಮ ಆರೋಗ್ಯವನ್ನು ಕಾಪಾಡುವುದರಲ್ಲಿ ಪ್ರಮುಖ ಪತ್ರವಹಿಸುವುದು ಎಂದು. ಇದರ ಬೀಜಗಳನ್ನು ಹಣ್ಣಿನ ಜೊತೆ ನೇರವಾಗಿ ಸೇವಿಸಬಹುದು ಅಥವಾ ಅದನ್ನು ಒಣಗಿಸಿ, ಸುಟ್ಟು (roasted) ಸೇವಿಸಬಹುದು.

 

ಬೀಜವನ್ನು ಸುಟ್ಟಿ ಸೇವಿಸುವುದು ಹೇಗೆ?

ಬೀಜಗಳನ್ನು ಮೊದಲು ಬಿಸಿಲಿನಲ್ಲಿ ಇಡಿ(2-4ಗಂಟೆ), ನಂತರ 3-5 ದಿನಗಳ ವರೆಗೆ ಇದನ್ನು ನೀರಿನಲ್ಲಿ ನೆನಸಿ ಇಡಿ, ನಂತರ ಇದು ತನ್ನ ಕಪ್ಪನೆಯ ಮೇಲ್ಬಾಗದ ಸಿಪ್ಪೆಯನ್ನು ಕಳೆಯುವಷ್ಟು ಸುಲಭವಾಗುತ್ತದೆ.

ಮೇಲ್ಬಾಗದ ಕಪ್ಪು ಸಿಪ್ಪೆಯನ್ನು ತೆಗೆದು, ಬಿಸಿಲಿನಲ್ಲಿ ಒಣಗಿಸಿ.

ನಂತರ ಇದನ್ನು ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆಯ ಜೊತೆ ಉಪ್ಪು ಮತ್ತು ಖಾರದಪುಡಿ ಸೇರಿಸಿ ಉರಿಯಿರಿ.

ನಂತರ ಸೇವಿಸಿ.

(ಇದನ್ನು ನೇರವಾಗಿ ಕೂಡ ಸೇವಿಸಬಹುದು, ರುಚಿಕರವಾಗಿರಬೇಕು ಎಂದರೆ ಹೀಗೆ ಮಾಡಿಕೊಂಡು ಸೇವಿಸಿ.)


ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಆಗುವ ಲಾಭಗಳು
೧.ಮಧುಮೇಹವನ್ನು ನಿಯಂತ್ರಿಸುತ್ತದೆ

ಇವುಗಳನ್ನು ಸೇವಿಸುವುದರಿಂದ, ಮಧುಮೇಹವನ್ನು ನಿಯಂತ್ರಿಸಬಹುದು ಮತ್ತು ಇದರ ಇನ್ನಿತರ ತೊಡಕುಗಳನ್ನು ತಪ್ಪಿಸಬಹುದು. ಈ ಬೀಜಗಳು ಅಮೈನೋ ಆಸಿಡ್ ಅನ್ನು ಒಳಗೊಂಡಿದೆ, ಇದು ರಕ್ತನಾಳಗಳು ಒತ್ತಡ ಅನುಭವಿಸದಂತೆ ಮಾಡುತ್ತವೆ. ಜೊತೆಗೆ ಮ್ಯಾಗ್ನಿಶಿಯಂ ಕಣಗಳು ಶುಗರ್ ಮಟ್ಟವನ್ನು ಸರಿಯಾಗಿ ಇರಿಸಲು ನೆರವಾಗುತ್ತದೆ.


೨.ಆಯಾಸವವನ್ನು ಕಡಿಮೆ ಮಾಡುವುದು

ಇದನ್ನು ಸೇವಿಸುವುದರಿಂದ ದೇಹದಲ್ಲಿ ಶಕ್ತಿ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಆಯಾಸ ಆಗದಂತೆ ತಡೆಯುತ್ತದೆ. ಇದು ಕಬ್ಬಿಣಾಂಶವನ್ನು ಒಳಗೊಂಡಿದೆ ಮತ್ತು ಆಮ್ಲಜನಕ ರಕ್ತನಾಳಗಳಲ್ಲಿ ಸರಾಗವಾಗಿ ಹರಿಯುವಂತೆ ಮಾಡುವುದರಿಂದ ದೇಹಕ್ಕೆ ಬೇಗನೆ ಸುಸ್ತಾಗುವುದಿಲ್ಲ. ಜೋತೆಗೆ ಇದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ.


೩.ಹೃದಯವು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ

ಇದನ್ನೂ ಸೇವಿಸುವುದರಿಂದ, ಹೃದಯ ಆರೋಗ್ಯವಾಗಿ ಮತ್ತು ಉತ್ತಮ ಸ್ಥಿತಿಯಲ್ಲಿ ಇರಲು ಸಹಾಯವಾಗುತ್ತದೆ. ಇದರಲ್ಲಿರುವ ಅಂಶಗಳು ಹೃದಯಾಘಾತ ಮತ್ತು ಸ್ಟ್ರೋಕ್(ಲಕ್ವ) ನಿಂದ ನಮ್ಮನ್ನು ರಕ್ಷಿಸುತ್ತದೆ.


೪.ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ

ಅಮೈನೋ ಆಸಿಡ್ ಅನ್ನು ಒಳಗೊಂಡ ಪ್ರೂಟಿನ್ ಗಳನ್ನು ಇದು ತನ್ನಲ್ಲಿ ಇರಿಸಿಕೊಂಡಿರುವುದರಿಂದ ರಕ್ತವು ನಾಳಗಳಲ್ಲಿ ಸರಾಗವಾಗಿ ಹರಿಯಲು ನೆರವಾಗುತ್ತದೆ. ಮತ್ತು ಹೃದಯ ಆರೋಗ್ಯವಾಗಿ ಇರಲು ಮತ್ತು ಉತ್ತಮ ರೀತಿಯಲ್ಲಿ ಇರಿಸಲು ಸಹಾಯಮಾಡುತ್ತದೆ.


೫.ತೋಳುಗಳಿಗೆ ಬಲ ನೀಡುತ್ತದೆ

ಸಾಮಾನ್ಯವಾಗಿ ಹುಡುಗರು ಸ್ನಾಯು ಮತ್ತು ತೋಳುಗಳು ಬಲವಾಗಲಿ ಎಂದು ಜಿಮ್ ಗೆ ಹೋಗುವರು, ಮತ್ತು ಅಭ್ಯಾಸ ಮಾಡಿದ ಬಳಿಕ ಸುಸ್ತಾಗುವರು. ಇದನ್ನು ಸೇವಿಸುವುದರಿಂದ ಕಡಿಮೆ ಆಯಾಸವನ್ನು ಪಡೆಯುವಿರಿ ಮತ್ತು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಿಕೊಳ್ಳುವಿರಿ. ಇದರಿಂದ ದೇಹ ನಿಮಗೆ ಬೇಕಾದ ಆಕಾರ ಪಡೆಯಲು ಕಡಿಮೆ ಅಭ್ಯಾಸದಲ್ಲಿ ಸಾಧ್ಯವಾಗುವುದು.


೬.ಸಣ್ಣಗಾಗಲು ಸಹಾಯಕ

ಇದರಲ್ಲಿ ಅಮೈನೋ ಆಸಿಡ್ ಸೇರಿದಂತೆ ದೇಹದ ಬೇಡದ ತೂಕವನ್ನು ಮತ್ತು ಬೊಜ್ಜು ಹಾಗು ಕೊಬ್ಬನ್ನು ಕರಗಿಸುವ ಗುಣಗಳಿರುವ ಅಂಶಗಳನ್ನು ಇದು ಒಳಗೊಂಡದಿದೆ. ಹೆಚ್ಚುವರಿಯಾಗಿ ದೇಹದಲ್ಲಿ ಸಂಗ್ರಹವಾಗಿರುವ ಫ್ಯಾಟ್ ಅನ್ನು ಕರಗಿಸುವ ಆಸೆ ಇದ್ದರೆ ಇದನ್ನು ಸೇವಿಸಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon