Link copied!
Sign in / Sign up
2
Shares

ಮಕ್ಕಳು ತಾಯಿಯರಿಂದ ಕಲಿಯುವ ೫ ಅತ್ಯಾಶ್ಚರ್ಯಕರ ಅಭ್ಯಾಸಗಳು

ಮಕ್ಕಳು ತಮ್ಮ ತಾಯಿಯ ಕನ್ನಡಿ ಇದ್ದಂತೆ. ಮಕ್ಕಳು ತಮ್ಮ ತಾಯಿಯನ್ನೇ ಅನುಕರಿಸುತ್ತಾರೆ. ನೀವು ಮೇಕಪ್ ಮಾಡಿಕೊಳ್ಳುವಾಗ ಬಿಟ್ಟ ಕಣ್ಗಳಿಂದ ನಿಮ್ಮನ್ನೇ ನೋಡುತ್ತಿರುವ ನಿಮ್ಮ ಮಗುವನ್ನು ನೀವು ಗಮನಿಸಿರಬಹುದು. ನಿಮ್ಮ ಕಣ್ತಪ್ಪಿಸಿ ನಿಮ್ಮ ಲಿಪ್ಸ್ಟಿಕ್‍ನಿಂದ ತನ್ನ ತುಟಿಗೆ ರಂಗು ಬಳಿಯುವುದನ್ನೂ ನೀವು ಕಂಡಿರಬಹುದು. ನಿಮ್ಮನ್ನೇ ನಕಲು ಮಾಡುವ ಅವರನ್ನು ನೋಡುತ್ತಾ ಕುಳಿತುಕೊಳ್ಳುವುದಕ್ಕಿಂತ ಇನ್ನು ಬೇರೆ ಸಂತೋಷದಾಯಕ ವಿಷಯ ಏನಿದೆ ? ವಂಶ ಪಾರಂಪರ್ಯ ಎಂದು ಹಲವರು ಹೇಳುವುದನ್ನು ನೀವು ಕೇಳಿಸಿಕೊಂಡಿರಬಹುದು. ಮಕ್ಕಳಲ್ಲಿ ಕಾಣುವ ಕೆಲವು ಹವ್ಯಾಸಗಳು, ಹಾವ ಭಾವಗಳು ಕೇವಲ ತಮ್ಮ ತಾಯಿಯ ಅನುಕರಣೆಯಿಂದ ಮಾತ್ರ ಮೈಗೂಡಿಸಿಕೊಂಡವಂತಹವುಗಳು. ಮಕ್ಕಳು ತಮ್ಮ ದಿನದ ಬಹುತೇಕ ಭಾಗವನ್ನು ತನ್ನ ತಾಯಿಯೊಂದಿಗೆ ಕಳೆಯುವುದರಿಂದ ಅವರು ತಮ್ಮ ತಾಯಿಯನ್ನೇ ಅನುಕರಿಸುತ್ತಾರೆನ್ನುವುದರಲ್ಲಿ ಎರಡು ಮಾತಿಲ್ಲ. “ಓಹ್ , ನಿನ್ನ ಮಗು ನಿನ್ನದೇ ಪಡಿಯಚ್ಚು” ಎಂದು ಯಾರಾದರೂ ಹೇಳಿದರೆ ನೀವು ಹರ್ಷ ಚಿತ್ತರಾಗುವುದಿಲ್ಲವೇ...!ಬಾಹ್ಯ ರೂಪದಿಂದಾಗಲೀ ಅಥವಾ ವ್ಯಕ್ತಿತ್ವದಿಂದಾಗಲೀ ಮಕ್ಕಳು ತಾಯಿಯರನ್ನೇ ಬಹುತೇಕ ಹೋಲುತ್ತಾರೆ. ಮಕ್ಕಳು ತಾಯಿಯರನ್ನೇ ಗಮನಿಸುತ್ತಾ ಅವರಂತಾಗಲು ಬಯಸುವುದೇಕೆ ಎನ್ನುವುದಂತೂ ಬಹಳ ವಿಸ್ಮಯದ ವಿಷಯ.ಮಕ್ಕಳು ತಮ್ಮ ತಾಯಿಯಿಂದ ಬಳುವಳಿಯಾಗಿ ಪಡೆದ ಕೆಲವು ಹವ್ಯಾಸಗಳನ್ನು ತಿಳಿಯೋಣ ಬನ್ನಿ.

೧.ಸ್ನಾನದ ಸಮಯ

ಮಕ್ಕಳ ಸ್ವಚ್ಛತೆಗೆ ಆದ್ಯತೆ ನೀಡಬೇಕಾದ್ದರಿಂದ ಸ್ನಾನಕ್ಕೆ ಅತ್ಯಂತ ಆದ್ಯತೆ ನೀಡಬೇಕು.ಮಕ್ಕಳಿಗೆ ವಾರದಲ್ಲಿ ಮೂರು ಬಾರಿಯಾದರೂ ಸ್ನಾನ ಮಾಡಿಸಬೇಕು. ಆದರೆ ಶಾಲಾ ಮಕ್ಕಳು ಪ್ರತಿನಿತ್ಯ ತನ್ನ ಮೈ ತೊಳೆದುಕೊಂಡು ಶರೀರವನ್ನು ಶುಚಿಯಾಗಿಟ್ಟುಕೊಳ್ಳಬೇಕು. ಮನೆಯೇ ಮೊದಲ ಪಾಠಶಾಲೆ. ಸ್ನಾನ ಮಾಡಿದ ಬಳಿಕವಷ್ಟೇ ನೀವು ಹೊರಗಡಿಯಿಟ್ಟರೆ ಮಗು ಕೂಡ ಅದನ್ನೇ ಕಲಿತುಕೊಳ್ಳುತ್ತದೆ. ತನ್ನನ್ನು ತಾನು ಶುಚಿಯಾಗಿ ಹಾಗೂ ಶುಭ್ರವಾಗಿಟ್ಟುಕೊಳ್ಳುತ್ತದೆ.

೨.ನೀವು ಎದ್ದೇಳುವ ಸಮಯ

ಬೆಳಗ್ಗೆ ಎದ್ದೇಳುವ ಅದೇ ಸಮಯಕ್ಕೆ ಸರಿಯಾಗಿ ಮಗುವು ಏಳುವುದನ್ನು ನೀವು ಗಮನಿಸಿರಬಹುದು. ತಾಯಿಯಂತೆ, ಮಗುವು ಬೆಳಗ್ಗೆ ಬೇಗ ಹೇಳುವುದು ರೂಢಿ.ತನ್ನ ತಾಯಿಯು ಎದ್ದಳೆಂದು ಅರಿತುಕೊಂಡ ಮಗುವು ತಾಯಿಯೊಂದಿಗೆ ಎಚ್ಚರಗೊಳ್ಳುತ್ತದೆ. ಮಗುವು ಗರ್ಭದೊಳಗಿರುವಾಗಲೇ ಅದರ ನಿದ್ರೆಯ ಅವಧಿಯೂ ನಿಗದಿಸಲ್ಪಟ್ಟಿರುತ್ತದೆ. ಆದರೆ ಬಾಹ್ಯ ಪ್ರಪಂಚಕ್ಕೆ ಕಾಲಿರಿಸಿದ ಮಗುವು ತನ್ನ ನಿದ್ರೆಯ ಅವಧಿಯನ್ನು ಬದಲಿಸುತ್ತದೆ. ಆದರೆ ನಿಮ್ಮ ಪುಟ್ಟ ಕಂದನೊಂದಿಗೆ ನೀವು ಮಲಗಲು ಜತೆಗೂಡಿದರೆ ನೀವಿಬ್ಬರು ಎದ್ದೇಳುವ ಸಮಯ ಒಂದೇ ರೀತಿ ಆಗಿರುವುದು.

೩.ನಿಮ್ಮ ವಾಕ್ಚಾತುರ್ಯ

ಮಕ್ಕಳ ಮುಂದೆ ಬಳಸುವ ಪ್ರತಿ ಶಬ್ದದ ಬಗ್ಗೆಯೂ ಎಚ್ಚರ ವಹಿಸಬೇಕು. ಹೌದು, ಅದು ಕೇವಲ ಫೋನಿನ ಸಂಭಾಷಣೆ ಆಗಿದ್ದರೂ ಕೂಡ ಮಕ್ಕಳು ಅದನ್ನು ಕೇಳಿಸಿಕೊಂಡು ಅನುಕರಿಸಲು ಪ್ರಯತ್ನಿಸುತ್ತಾರೆ. ಕೆಲವೊಮ್ಮೆ ಅವರು ಬಳಸುವ ಶಬ್ದಗಳು ಕೇಳಲು ಅಷ್ಟೊಂದು ಹಿತಕರವಾಗಿರದಿದ್ದರೆ ಅದಕ್ಕೆ ನೀವೇ ಹೊಣೆ.

೪.ಊಟದ ಶಿಷ್ಟಾಚಾರಗಳು

ನಿಮ್ಮ ಮುದ್ದಾದ ಮಗು ಚೂಟಿಯೂ ಹೌದು. ಅದು ಬೇಬಿ ಚೇರ್‍ನಲ್ಲಿ ಕುಳಿತುಕೊಂಡಿದ್ದರೇನಂತೆ ? ನಿಮ್ಮನ್ನೇ ಯಥಾವತ್ತಾಗಿ ಅನುಭವಿಸುತ್ತಿರುತ್ತದೆ. ಮಗು ಊಟ ಮಾಡಲು ಪ್ರಾರಂಭಿಸುವಾಗಲೂ ನಿಮ್ಮನ್ನೇ ನಿರೀಕ್ಷಿಸುತ್ತಾನೆ. ಆದ ಕಾರಣ ನಿಮ್ಮ ಮಗುವಿನ ಊಟದ ಬಟ್ಟಲು ನಿಮ್ಮ ಬಟ್ಟಲಿನಷ್ಟೇ ಆಕರ್ಷಕವಾಗಿರುವಂತೆ ಪ್ರಯತ್ನಿಸಿ.

೫.ನೈತಿಕತೆಗಳು

ಪ್ರತಿಯೊಂದು ಚಿಕ್ಕಪುಟ್ಟ ವಿಷಯಗಳು; ನೀವು ನಿಮ್ಮ ಕೆಲಸದಲ್ಲಿ ಮಾತನಾಡುವ ರೀತಿ, ಊಟದ ಮುನ್ನ ಧನ್ಯವಾದ ಸಮರ್ಪಣೆ ಎಲ್ಲವೂ ಪರಿಗಣಿಸಲ್ಪಟ್ಟಿರುತ್ತದೆ. ಇಂತಹ ಪ್ರವೃತ್ತಿಗಳನ್ನು ಮಕ್ಕಳು ಮೈಗೂಡಿಸಿಕೊಳ್ಳುತ್ತದೆ.ನೀವು ಉತ್ತಮ ಪ್ರವೃತ್ತಿಯನ್ನು ಹೊಂದಿದ್ದರೆ,ಮಗು ಕೂಡಾ ಉದಾತ್ತ ಪ್ರಜೆಯಾಗಿ ಬೆಳೆಯುತ್ತಾನೆ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon