Link copied!
Sign in / Sign up
0
Shares

ನಿಮ್ಮ ಎರಡನೇ ಹೆರಿಗೆಯ ಸಮಯದಲ್ಲಿ ನೀವು ಕಳೆದುಕೊಂಡು ಬಿಡಬಹುದಾದ ಕೆಲವು ವಿಷಯಗಳು 

ಮೊತ್ತ ಮೊದಲ ಬಾರಿಗೆ ಚಿಕ್ಕ ದೇವದೂತನ ಆಗಮನವನ್ನು ಕಂಡುಕೊಂಡ ದಿನ ನಿಮ್ಮ ಜೀವನದಲ್ಲಿ ಅತ್ಯಂತ ಸಂತೋಷದಾಯಕ ದಿನವಾಗಿದ್ದಿರಬಹುದು. ಉತ್ಸಾಹ ಮತ್ತು ಮೊದಲ ಬಾರಿಗೆ ತಾಯಿಯಾದ ಭೀತಿಯ ಸಂಯೋಜನೆಯ ಭಾವನೆಯನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ.  

 ಆದರೆ ಈ ಅನುಭವವು ನಿಮ್ಮ ಎರಡನೇ ಗರ್ಭಧಾರಣೆಯ ವಿಷಯದಲ್ಲಿ ಸಂಭವಿಸುವ ಸಾಧ್ಯತೆ ಇಲ್ಲ .ಈಗಾಗಲೇ ಗರ್ಭಧಾರಣೆಯ ನೋವು ಮತ್ತು ಗರ್ಭಾವಸ್ಥೆಯ ಆನಂದವನ್ನು ಅನುಭವಿಸಿರುವುದರಿಂದ, ಮೊದಲ ಮಟ್ಟದಷ್ಟು ಉತ್ಸಾಹವೂ ಗೋಚರಿಸಲ್ಪಡುವುದಿಲ್ಲ. ಆದರೆ ನಿಮ್ಮ ಎರಡನೇ ಮಗುವನ್ನು ನೀವು ಪ್ರೀತಿಸುವುದಿಲ್ಲ ಎಂಬ ಅರ್ಥವಿಲ್ಲ.ನೀವು ಈಗಾಗಲೇ ಮಾನಸಿಕವಾಗಿ ತಯಾರಾಗಿದ್ದೀರಿ ತಯಾರಾಗಿದ್ದೇರೆಂದರ್ಥ. 

 

(ಕಡಿಮೆಯಾದ ಭಯ 

ಮೊದಲ ಗರ್ಭಾವಸ್ಥೆಯ ಪ್ರತಿಯೊಂದು ಚಿಕ್ಕಪುಟ್ಟ ವಿಷಯಗಳನ್ನು ನಿಮ್ಮನ್ನು ಗಾಬರಿಗೊಳಿಸುತ್ತಿದ್ದವು. ನೀವು ಮಗುವಿನ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದು, ಪ್ರತಿಯೊಂದು ಹೆಜ್ಜೆಯಲ್ಲೂ ಎಚ್ಚರಿಕೆಯಿಂದ ಇರುತ್ತಿದ್ದರೆ ನೀವು ತಿನ್ನುವ ಆಹಾರ, ಬಳಸುವ ಶಾಂಪೂ, ನಿದ್ರಿಸುವ ಭಂಗಿ... ಈ ಪಟ್ಟಿಯು ಹನುಮಂತನ ಬಾಲದಂತೆ ಬೆಳೆಯುತ್ತಿರುತ್ತದೆ. ಆದರೆ ಈಗಿನ ಎರಡನೇ ಗರ್ಭಾವಸ್ಥೆಯ ಸಮಯದಲ್ಲಿ ನಿಮ್ಮ ಮಗುವಿನ ಸುರಕ್ಷತೆಯ ಬಗ್ಗೆ ನೀವು ಚಿಂತಿತರಾಗಿದ್ದರೂ ಸಹ, ಕೆಲವು ವಿಷಯಗಳ ಬಗ್ಗೆ ಹೆಚ್ಚಿನ ಗಮನ ನೀಡಲಾರಿರಿ. 

 

(ಕಡಿಮೆಯಾಗುವ ಕುತೂಹಲಗಳು 

 

ಮೊದಲೇ ಹೇಳಿದಂತೆ ನಿಮ್ಮ ಎರಡನೆಯ ಗರ್ಭಧಾರಣೆಯ ಸಮಯದಲ್ಲಿನ ಉತ್ಸಾಹ ಮಟ್ಟವು ಮೊದಲನೆಯದನ್ನು ಹೋಲಿಸಿದಾಗ ಕಡಿಮೆಯೇ ಇರುತ್ತದೆ. ನಿಮ್ಮ ಮೊದಲ ಮಗುವಿನ ಜನನದ ಸುದ್ದಿಯು, ನಿಮ್ಮ ಕುಟುಂಬದ ಸದಸ್ಯರನ್ನು ಕೂಡ ಪ್ರಚೋದಿಸುತ್ತದೆ. ನಿಮ್ಮ ಪೋಷಕರು ತಮ್ಮ ಮೊದಲ ಮೊಮ್ಮಕ್ಕಳನ್ನು ಸ್ವಾಗತಿಸಲು ಉತ್ಸುಕರಾಗಿರುತ್ತಾರೆ. ನಿಮ್ಮ ಮೊದಲ ಮಗುವಿನ ಕಿಕ್, ಚಲನೆ ಮತ್ತು ಎಲ್ಲಾ ಮೊದಲ ಬಾರಿಯ ಅನುಭವಗಳು ರೋಮಾಂಚಕವಾಗಿದ್ದವು. ಆದರೆ ನಿಮ್ಮ ಎರಡನೆಯ ಗರ್ಭಧಾರಣೆಯ ವಿಷಯದಲ್ಲಿ ಉತ್ಸಾಹವು ಮೊದಲನೇ ಅದಕ್ಕಿಂತ ಕಡಿಮೆಯಾಗಿರುತ್ತದೆ.  

 

(ಶಾರೀರಿಕ ಬದಲಾವಣೆಗೆ ಸಿದ್ಧತೆ 

 

ಗರ್ಭಾವಸ್ಥೆಯಲ್ಲಿ, ನಿಮ್ಮ ದೇಹವು ಹಲವಾರು ಬದಲಾವಣೆಗಳಿಗೆ ಒಳಗಾಗುತ್ತದೆ. ನಿಮ್ಮ ಮೊದಲ ಗರ್ಭಾವಸ್ಥೆಯಲ್ಲಿ ಇವುಗಳು ನಿಮಗೆ ಭಯಭೀತವಾಗಿದ್ದವು. ನಿಮ್ಮ ಹೊಟ್ಟೆ ಪ್ರತಿ ತಿಂಗಳು ಬೆಳವಣಿಗೆ ಮತ್ತು ನಿಮ್ಮ ದೇಹ ರಚನೆಯ ಬಗ್ಗೆ ಇನ್ನಷ್ಟು ಚಿಂತೆಗೊಳಗಾಗಿರುವಿರಿ. ಆದರೆ, ನಿಮ್ಮ ಎರಡನೆಯ ಗರ್ಭಧಾರಣೆಯ ಸಂದರ್ಭದಲ್ಲಿ, ನಿಮ್ಮ ಬಾಹ್ಯರೂಪದ ಬದಲಾವಣೆಯ ಬಗ್ಗೆ ನೀವು ಚಿಂತಿಸುವುದಿಲ್ಲ. 

 

(ಆಹಾರ ಕ್ರಮಗಳು 

ಗರ್ಭಾವಸ್ಥೆಯಲ್ಲಿ ನಿಮ್ಮ ಮಗುವಿನ ಆರೋಗ್ಯವು ನಿಮ್ಮ ಆದ್ಯತೆಯಾಗಿರುವುದರಿಂದ, ಆಹಾರವನ್ನು ಸೇವಿಸುವುದರ ಬಗ್ಗೆ ನೀವು ಹೆಚ್ಚು ಎಚ್ಚರಿಕೆಯಿಂದ ಆಯ್ಕೆಮಾಡಿರುತ್ತಿದ್ದೀರಿ. ನೀವು ನಿಮ್ಮ ಆಹಾರಕ್ರಮವನ್ನು ಬದಲಾಯಿಸಿದ್ದೀರಿ, ಹೆಚ್ಚು ಆರೋಗ್ಯಕರ ಆಹಾರವನ್ನು ಸೇವಿಸುತ್ತಿದ್ದು, ಜಂಕ್ ಆಹಾರಗಳನ್ನು ತಪ್ಪಿಸಿರಬಹುದು. ಆದರೆ, ನಿಮ್ಮ ಎರಡನೇ ಗರ್ಭಾವಸ್ಥೆಯಲ್ಲಿ, ನೀವು ಈ ನಿರ್ಬಂಧಿತ ಆಹಾರವನ್ನು ಅನುಸರಿಸುವುದಿಲ್ಲ. 

 

(ಪಠನದಲ್ಲಿ ಕಡಿತ

 

ನಿಮ್ಮ ಮೊದಲ ಗರ್ಭಾವಸ್ಥೆಯಲ್ಲಿ, ಪುಸ್ತಕಗಳು, ಲೇಖನಗಳು, ಬ್ಲಾಗ್‍ಗಳು ಮತ್ತು ಗರ್ಭಧಾರಣೆ, ಪಾಲನೆಯ ಮತ್ತು ಮಗುವಿನ ಆರೈಕೆಗೆ ಸಂಬಂಧಿಸಿದ ಎಲ್ಲ ವಿಷಯಗಳನ್ನೂ ಓದಿರುವಿರಿ. ಆದರೆ ನಿಮ್ಮ ಎರಡನೆಯ ಗರ್ಭಧಾರಣೆಯ ಸಮಯದಲ್ಲಿ, ನೀವು ತಕ್ಕ ಮಟ್ಟಿಗೆ ಎಲ್ಲಾ ವಿಷಯಗಳ ಬಗ್ಗೆ ತಿಳಿದಿರುತ್ತೀರಿ, ಹಾಗಾಗಿ ಎಲ್ಲದರಲ್ಲೂ ನಿಮಗೆ ಸಹಾಯ ಅಗತ್ಯವಿರುವುದಿಲ್ಲ. ಇದಲ್ಲದೆ, ನಿಮ್ಮ ಮೊದಲ ಮಗುವನ್ನು ನೋಡಿಕೊಳ್ಳುವಲ್ಲಿ ನೀವು ನಿರತರಾಗಿರುತ್ತೀರಿ, ಕಾರಣ ಪುಸ್ತಕಗಳು ಅಥವಾ ಬ್ಲಾಗ್‌ಗಳನ್ನು ಓದಲು ನಿಮಗೆ ಸಾಕಷ್ಟು ಸಮಯ ಸಿಗುವುದಿಲ್ಲ. 

 

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon