Link copied!
Sign in / Sign up
0
Shares

ನೈಸರ್ಗಿಕವಾಗಿ ದೇಹದ ಕಲೆಗಳನ್ನು(ಗಾಯದ ಗುರುತನ್ನು) ಹೋಗಿಸಲು 6 ತೈಲಗಳು

ದೇಹದಲ್ಲಿರುವ ಕೆಲವು ಗಾಯದ ಗುರುತುಗಳು ಕೆಲವರಿಗೆ ಅತೀವ ಆತ್ಮ ವಿಶ್ವಾಸವನ್ನುಂಟು ಮಾಡುತ್ತದೆಪ್ರತಿಯೊಂದು ಗಾಯದ ಗುರುತುಗಳು ತಮ್ಮದೇ ಆದ ಕತೆಯನ್ನು ಹೊಂದಿರುತ್ತದೆಅದು ಶಾಲೆಯಲ್ಲಿ ಎಲ್ಲರಮುಂದೆ ಕಾಲುಜಾರಿ ಬಿದ್ದು ಮೂತಿಯನ್ನು ಒಡೆದುಕೊಂಡು ಹೊಲಿಗೆ ಹಾಕಿಸಿಕೊಂಡಿದಿರಬಹುದು ಅಥವಾ ಯಾವುದೋ ರಸ್ನಲ್ಲಿ ಗೆಲುವಿಗಾಗಿ ಓಡುವಾಗ ಬಿದ್ದು ಗಾಯ ಮಾಡಿಕೊಂಡಿದ್ದ ಗಾಯದ ಗುರುತುಗಳಿರಬಹುದು.

ಅಂತಹ ಗಾಯದ ಗುರುತಿಗೆ ಕಾಲ ಕಳೆದಂತೆ ಹೊಂದಿಕೊಂಡು ಬಿಟ್ಟಿದ್ದರು ಕೂಡ ಕೆಲವು ಬಾರಿ ಅಂತಹ ಗಾಯದ ಗುರುತುಗಳು ನಮ್ಮ ನೆಮ್ಮದಿಯನ್ನು ಹಾಳುಮಾಡಬಹುದು. ಅಂತಹ ಕಲೆಗಳನ್ನು ಹೋಗಿಸಲು ನಾವುಎಲ್ಲಾ ಪ್ರಯತ್ನ ಮಾಡುತ್ತೇವೆ. ಸಾಕಷ್ಟು ಕ್ರೀಮ್‌ಗಳು ಕಲೆಗಳನ್ನು ಹೋಗಿಸುತ್ತೇವೆ ಎಂದು ಹೇಳಿದರು ಅದು ದುಬಾರಿಯಾಗಿರುತ್ತದೆ ಅಥವಾ ಕಲೆಯನ್ನು ಹೋಗಿಸಲು ವಿಫಲವಾಗುತ್ತದೆ.

ಅದಕ್ಕಾಗಿ ಇಲ್ಲಿದೆ 6 ನೈಸರ್ಗಿಕ ತೈಲ ಗಳು, ನಿಮ್ಮ ಗಾಯದ ಗುರುತನ್ನು ವಾಸಿ ಮಾಡಲು
1.ಗುಲಾಬಿ ಬೀಜದ ತೈಲ

ಗುಲಾಬಿ ತೈಲವನ್ನು ಸ್ನಾನ ಮಾಡುವಾಗ ಬಳಸಿದರೆ ಅತ್ಯಂತ ಪರಿಣಾಮಕಾರಿ ಕೆಲಸಮಾಡುತ್ತದೆ.ಅದು ಉತ್ತಮವಾದ ಕಂಪನ್ನು ಹೊಂದಿದ್ದು ತುಂಬಾ ದಿನಗಳ ಮಟ್ಟಿಗೆ ಉಪಯೋಗಿಸುತ್ತ ಹೋದರೆ ಗಾಯದ ಗುರುತುಗಳುವಾಸಿಯಾಗುತ್ತದೆ. ಸ್ನಾನ ಮಾಡುವಾಗ ಕೆಲವು ಹನಿ ಈ ತೈಲವನ್ನು ನೀರಿನಲ್ಲಿ ಸೇರಿಸಿ ಸ್ನಾನ ಮಾಡಿದರೆ ಆಯ್ತು.

2.ತೆಂಗಿನ ಎಣ್ಣೆ

ಭಾರತದ ಪ್ರತಿ ಮನೆಯಲ್ಲೂ ಸಿಗಬಹುದಾದ ಎಣ್ಣೆ ತೆಂಗಿನ ಎಣ್ಣೆ. ತೆಂಗಿನ ಎಣ್ಣೆ ಬಳಸುವುದರಿಂದ ತ್ವಚೆಯ ಆರೋಗ್ಯ ಮತ್ತು ಕೂದಲಿನ ಆರೋಗ್ಯವನ್ನು ಕಾಯ್ದುಕೊಳ್ಳಬಹುದು. ಗಾಯದ ಗುರುತನ್ನು ವಾಸಿಮಾಡಲುಎಣ್ಣೆಯ ಜೊತೆ ಕೆಲವು ಹನಿ ನಿಂಬೆ ರಸ ಸೇರಿಸಿ ಕಲೆಯ ಮೇಲೆ ಪ್ರತಿನಿತ್ಯ ಲೇಪಿಸಿದರೆ ಗುರುತು ನೈಸರ್ಗಿಕವಾಗಿ ವಾಸಿಯಾಗುತ್ತದೆ.

3.ಸಾಸಿವೆ ಕಾಳಿನ ಎಣ್ಣೆ

ಇದು ಗುಲಾಬಿ ತೈಲದಂತೆ ಗಮ್ಮೆಂದು ಕಂಪು ಬರದೇ ಇದ್ದರು ಗಾಯದ ಗುರುತನ್ನು ವಾಸಿಮಾಡುವ ಶಕ್ತಿಯನ್ನು ಯಾರು ಅಲ್ಲಗೆಳೆಯುವುದಿಲ್ಲ. ಕೆಲವೇ ಕೆಲವು ವಾರಗಳ ಮಟ್ಟಿಗೆ ಈ ಎಣ್ಣೆಯನ್ನು ನಿಮ್ಮ ತ್ವಚೆಗೆ ಲೇಪಿಸಿದರೆಗಾಯದ ಗುರುಗಳು ಸಂಪೂರ್ಣವಾಗಿ ಮಯವಾಗುತ್ತವೆ.

4.ಲ್ಯಾವೆಂಡರ್‌ ಆಯಿಲ್‌

ಲ್ಯಾವೆಂಡರ್‌ ಆಯಿಲ್‌ ಜೊತೆ ಕೆಲವು ಹನಿ ನೀರನ್ನು ಸೇರಿಸಿ ಈಗ ತಾನೇ ಆದ ಗಾಯಕ್ಕೆ ಹಚ್ಚಿದರೆ ಗಾಯವು ಬಹಳ ಬೇಗ ವಾಸಿಯಾಗುತ್ತದೆ. ಹಳೆಯ ಗಾಯದ ಗುರುತನ್ನು ವಾಸಿಮಾಡಲು ಲ್ಯಾವೆಂಡರ್‌ ಆಯಿಲ್‌ ಜೊತೆಗೆ ಬೇರವುದಾದರೂ ಎಣ್ಣೆಯನ್ನು ಸೇರಿಸಿ 2 ವಾರಗಳ ಕಾಲ ಹಚ್ಚಿದರೆ ಫಲಿತಾಂಶ ನಿಮ್ಮ ಕಣ್ಣಿಗೆ ಕಾಣುತ್ತದೆ.

5.ಆಲೀವ್‌ ಆಯಿಲ್‌

ಶುದ್ದವಾದ ಆಲೀವ್‌ ಆಯಿಲ್‌ ಬಳಸಿದರೆ ಬಹುಬೇಗನೆ ಗಾಯದ ಗುರುತನ್ನು ವಾಸಿಮಾಡಿಕೊಳ್ಳಬಹುದು ಅಷ್ಟೆ ಅಲ್ಲದೆ ಆಲೀವ್‌ ಎಣ್ಣೆ ನಮ್ಮ ತ್ವಚೆ ಯ ಡೇಡ್‌ ಸೆಲ್ಸ್‌ಗಳನ್ನು ತೆಗೆಯುವಲ್ಲೂ ಕೂಡ ಸಹಾಯ ಮಾಡುತ್ತದೆ.

6.ಕ್ಯಾರಟ್ಟು‌ ಬೀಜದ ಎಣ್ಣೆ

ಈ ಎಣ್ಣೆ ಕಲೆಗಳನ್ನು ತೆಗೆದು ಹಾಕಲು ಅತ್ಯಂತ ಪರಿಣಾಮಕಾರಿಯಾಗಿ ಕೆಲಸಮಾಡುತ್ತದೆ. ಇದನ್ನು ತ್ವಚೆಗೆ ಹಚ್ಚಿ ಕೊಳ್ಳುವ ಮುನ್ನ ಬೇರೆ ಎಣ್ಣೆಯ ಜೊತೆ ಸೇರಿಸಿ ಹಚ್ಚಿ ಕೊಳ್ಳುವುದನ್ನು ಮರೆಯದಿರಿ. ಈ ಎಣ್ಣೆ ತ್ವಚೆಯಲ್ಲಿ ತೇವಾಂಶ ಇರುವಂತೆ ನೋಡಿಕೊಳ್ಳಲು ಸಹಾಯ ಮಾಡುತ್ತದೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon