Link copied!
Sign in / Sign up
8
Shares

ನೋಡಿ: ಅಮ್ಮನ ಕಾಪರ್-T ಅನ್ನು ಕೈಯಲ್ಲೇ ಇಟ್ಟುಕೊಂಡು ಹೊರಬಂದ ಮಗು !!

ನಾವು ಜನನ ನಿಯಂತ್ರಣ ವಿಧಾನಗಳ ಬಗ್ಗೆ ತಿಳಿದುಕೊಳ್ಳುವಾಗ, ಯಾವ ಜನನ ನಿಯಂತ್ರಣ ವಿಧಾನವೂ 100% ಪರಿಣಾಮಕಾರಿ ಅಲ್ಲ ಎಂಬುದನ್ನ ಓದಿರುತ್ತೇವೆ. ಆದರೆ ಇಲ್ಲಿ ನಡೆದ ಒಂದು ಸನ್ನಿವೇಶದಷ್ಟು ಚೆನ್ನಾಗಿ ಯಾವುದೂ ಇದನ್ನ ಸಾಬೀತು ಮಾಡಿರಲಿಕ್ಕಿಲ್ಲ ಎಂದುಕೊಳ್ಳುತ್ತೀನಿ.

ಅಮೆರಿಕಾದ ಅಲಬಾಮಾ ಪ್ರಾಂತ್ಯದ ಲೂಸಿ ಹೆಲೀನ್ ಎಂಬಾಕೆ ತನ್ನ ಫೇಸ್ಬುಕ್ ಅಕೌಂಟ್ ಅಲ್ಲಿ ಹಂಚಿಕೊಂಡಿದ್ದ ಒಂದು ಫೋಟೋ, ಜನನ ನಿಯಂತ್ರಣ ಸಾಧನಗಳು ವಿಫಲವಾಗಬಹುದು ಎಂಬುದನ್ನ ತೋರಿಸಿಕೊಟ್ಟಿದೆ. ಇಂತದ್ದೊಂದು ಅದ್ಭುತ ಫೋಟೋದಲ್ಲಿ, ಮಗುವು ಎಲ್ಲಾ ನವಜಾತ ಶಿಶುಗಳಂತೆ ಮುಖ ಗಂಟಿಕ್ಕಿಕೊಂಡು, ಕೆಂಪು ಮಾಡಿಕೊಂಡು, ಇನ್ನೂ ಈಗಷ್ಟೆ ಉದರದಿಂದ ಹೊರಬಂದಿದೆ ಎಂದು ತೋರಿಸುವ ತಲೆ ಕೂದಲ ಮೇಲೆ ರಕ್ತವನ್ನ ಹೊಂದಿದೆ.

ಆದರೆ ಅವನ ಕೈಯಲ್ಲಿ ಇರುವುದೇನು? ಹೌದು ಅದು ಅವನ ಅಮ್ಮನ ಕಾಪರ್-T ಸಾಧನ. ಇವುನು ಇಲ್ಲಿ ಇರಬಾರದು ಎಂದೇ ಧರಿಸಿದ್ದ ಸಾಧನ ಅದು!


ಅಂದಹಾಗೆ ಈ ಮಗುವಿನ ಹೆಸರು ಡೆಕ್ಸ್ಟರ್. ಇವನನ್ನ ಸಿಸೇರಿಯನ್ ಮೂಲಕ ಹೊರತೆಗೆಯಲಾಯಿತು. ಲೂಸಿ ಮತ್ತು ಆಕೆಯ ಗಂಡ ಮತ್ತೊಂದು ಮಗು ಬೇಡವೆಂದು ಜವಾಬ್ದಾರಿಯುತವಾಗಿ ಕಾಪರ್-T ಅನ್ನು ಅಳವಡಿಸಿಕೊಂಡಿದ್ದರು. ಆದರೆ ಮೊದಲೇ ಹೇಳಿದಂತೆ ಇಂತಹ ಇಂಟ್ರಾ-ಯುಟೆರಿನ್ ಸಾಧನಗಳು 99% ಅಷ್ಟು ಪರಿಣಾಮಕಾರಿ. ಅಂದರೆ 100 ಹೆಂಗಸರಲ್ಲಿ ಒಂದು ಹೆಂಗಸಿನಲ್ಲಿ ಇದು ವಿಫಲವಾಗಬಹುದು. ಇಲ್ಲಿ ಲೂಸಿ ನೂರಕ್ಕೆ ಒಬ್ಬಳಾದಳು !

 

ಈಗ ಪುನಃ ಇಂತದ್ದೊಂದು ಬೇಡದ ಗರ್ಭಧಾರಣೆ ಉಂಟಾಗಬಾರದೆಂದು, ಲೂಸಿ ತನ್ನ ಫಾಲೋಪಿಯನ್ ನಾಳಗಳನ್ನೇ ಸರ್ಜರಿ ಮೂಲಕ ಕತ್ತರಿಸಿಕೊಂಡಿದ್ದಾಳೆ. ಈಕೆಯ ಒಳಗಡೆ ಅಳವಡಿಸಿದ್ದ ಕಾಪರ್-T ಫೋಟೋವನ್ನ ಕೂಡ ನೀವು ನೋಡಬಹುದು.  

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
100%
What?
scroll up icon