Link copied!
Sign in / Sign up
18
Shares

ನಿಮ್ಮ ಕೈ ಕೆಲವೊಮ್ಮೆ ಮರಗಟ್ಟುವಂತೆ ಆಗುತ್ತದೆಯೇ? ಹಾಗಿದ್ದರೆ ಈ 11 ಕಾಯಿಲೆಗಳ ಬಗ್ಗೆ ಗೊತ್ತಿರಲಿ!

ನಿಮ್ಮ ದೇಹದಲ್ಲಿರುವ ಅತ್ಯಂತ ಸೂಕ್ಷ್ಮ  ಸ್ಪರ್ಶ ಗ್ರಾಹಕಗಳನ್ನ (touch receptors) ಅನ್ನು ನಿಮ್ಮ ಕೈಗಳು ಹೊಂದಿರುತ್ತವೆ. ಈ ಎಲ್ಲಾ ಸ್ಪರ್ಶ ಗ್ರಾಹಕಗಳು ನರಗಳ ಮೂಲಕ ನಿಮ್ಮ ಮೆದುಳಿಗೆ ಸಂಪರ್ಕ ಹೊಂದುತ್ತವೆ. ಈ ನರಗಳಲ್ಲಿ ಕೇವಲ ಒಂದು, ಕೇವಲ ಒಂದು ನರವನ್ನು ನೀವು ಚಿವುಟಿಕೊಂಡರೆ ಅಥವಾ ಹೇಗೋ ಹಾನಿಯಾಗಿಸಿಕೊಂಡರೆ, ನಿಮ್ಮ ಕೈಗಳು ಕಳಿಸುವ ಸಂವೇದನೆಗಳು  ಮತ್ತು ಇಂದ್ರೀಯ ಮಾಹಿತಿಯು ನಿಮ್ಮ ಮೆದುಳಿಗೆ ತಲುಪುವುದೇ ಇಲ್ಲ. ಇದನ್ನು ವಿವರಿಸಿದವರು ಫಿಲಡೆಲ್ಫಿಯಾದ ಅರಿಯಾ ಅರೋಗ್ಯ ವ್ಯವಸ್ಥೆಯ ಕುಟುಂಬ ವೈದ್ಯಕೀಯ ವಿಭಾಗದ ನಿರ್ದೇಶಕರಾದ ರಾಬ್ ಡಾನೋಫ್.

ಈ ಸಮಯದಲ್ಲಿ ಉಂಟಾಗುವುದೇ ಮರಗಟ್ಟುವಿಕೆ. ಹಾಗಿದ್ದರೆ ನಿಮ್ಮ ಕೈಗಳು ಮರಗಟ್ಟುವಂತೆ ಆಗಲು ಕಾರಣಗಳು ಏನು? ಮುಂದೆ ಓದಿ.

೧. ಕಾರ್ಪಲ್ ಟನಲ್

ರಾಬ್ ಡಾನೋಫ್ ಪ್ರಕಾರ ಕೈ ಮರಗಟ್ಟುವಿಕೆಗೆ ಅತ್ಯಂತ ಸಾಮಾನ್ಯವಾದ ಕಾರಣ ಎಂದರೆ ಅದು ಕಾರ್ಪಲ್ ಟನಲ್ ಸಿಂಡ್ರೋಮ್. ಕಾರ್ಪಲ್ ಟನಲ್ ಸಿಂಡ್ರೋಮ್ ಎಂದರೆ ನಿಮ್ಮ ಮುಂದೋಳಿನಿಂದ ನಿಮ್ಮ ಕೈಗೆ ಹರಿದು ಹೋಗುವ ಮೀಡಿಯನ್ ನರವು ನಿಮ್ಮ ಮಣಿಕಟ್ಟಿನ ಬಳಿಯೇ ಚಿವುಟಿಕೊಳ್ಳುವುದು.

“ಹೆಚ್ಚು ಸಮಯ ಕಂಪ್ಯೂಟರ್ ಅಲ್ಲಿ ಕೆಲಸ ಮಾಡುವವರಿಗೆ ಇದು ಸಾಮಾನ್ಯವಾದದ್ದು” ಎನ್ನುತ್ತಾರೆ ಡಾನೋಫ್. ಅದರಲ್ಲೂ ಮುಖ್ಯವಾಗಿ ನೀವು ನಿಮ್ಮ ಕಂಪ್ಯೂಟರ್ ಅನ್ನು ಬಳಸುವಾಗ ನಿಮ್ಮ ಮಣಿಕಟ್ಟು(wrist) ಅನ್ನು ಯಾವುದಾದರೂ ಟೇಬಲ್ ತುಡಿಯೋ ಅಥವಾ ಗಟ್ಟಿಯಾದ ಮೇಲ್ಮೈ ಹೊಂದಿರುವ ಪ್ರದೇಶದಲ್ಲಿ ಇಟ್ಟುಕೊಂಡು ಟೈಪ್ ಮಾಡುವುದು ಅಥವಾ ಮೌಸ್ ಬಳಸುವುದು ಮಾಡಿದರೆ ಇದು ಉಂಟಾಗುವ ಸಾಧ್ಯತೆಗಳು ಇನ್ನೂ ಹೆಚ್ಚು.

ಮರಗಟ್ಟುವಿಕೆಯೊಂದಿಗೆ, ಈ ಕಾರ್ಪಲ್ ಟನಲಿನ ಮತ್ತಷ್ಟು ಲಕ್ಷಣಗಳು ಎಂದರೆ ನಿಮ್ಮ ಒಂದು ಅಥವಾ ಹೆಚ್ಚು ಬೆರಳುಗಳು - ಮುಖ್ಯವಾಗಿ ಹೆಬ್ಬೆರಳು, ತೋರುಬೆರಳು ಮತ್ತು ಮಧ್ಯಬೆರಳು ಊದಿಕೊಳ್ಳುವುದು ಅಥವಾ ಜುಮ್ಮ್ ಹಿಡಿದಂತೆ ಆಗುವುದ. ಒಂದು ವೇಳೆ ನಿಮಗೆ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದರೆ, ಕೂಡಲೇ ವೈದ್ಯರನ್ನ ಭೇಟಿ ಮಾಡಿ ಎನ್ನುತ್ತಾರೆ ಡಾ ।। ಡಾನೊಫ್. ಒಂದು ವೇಳೆ ನೀವು ಇದಕ್ಕೆ ಚಿಕಿತ್ಸೆ ತೆಗೆದುಕೊಳ್ಳದೆ ಬಹುಕಾಲ ಹಾಗೆಯೇ ಬಿಟ್ಟುಬಿಟ್ಟರೆ, ಮುಂದೊಂದು ದಿನ ಚಿವುಟಿಕೊಂಡ ನರವನ್ನ ಸರಿ ಮಾಡಲು ಸರ್ಜರಿಯನ್ನೇ ಮಾಡಬೇಕಾಗುತ್ತದೆ.

೨. ಟೆನಿಸ್ ಎಲ್ಬೋ

ಒಂದು ವೇಳೆ ನೀವು ಟೆನಿಸ್ ಅಥವಾ ಗಾಲ್ಫ್ ಆಟಗಾರರು ಆಗಿದ್ದರೆ - ಅಥವಾ ಕೈ, ಮಣಿಕಟ್ಟು ಅಥವಾ ಮೊಣಕೈಯನ್ನು ಪದೇ ಪದೇ ತಿರುಗಿಸುವಂತಹ ಕೆಲಸದಲ್ಲಿ ಇದ್ದರೆ, ನೀವು ಟೆನಿಸ್ ಎಲ್ಬೋ ಹೊಂದುವ ಸಾಧ್ಯತೆಗಳು ಇರುತ್ತವೆ ಎಂದು ತಿಳಿಸುತ್ತಾರೆ ಡಾ।। ಡಾನೋಫ್. ನಿಮ್ಮ ಮೊಣಕೈಯನ್ನು ಸುತ್ತುವರೆದಿರುವ ನರಗಳು ಸವೆದು ಹೋದರೆ ಅಥವಾ ದುರ್ಬಲವಾದರೆ ಈ ಅಸ್ವಸ್ಥತೆ ಉಂಟಾಗುತ್ತದೆ.

ಈ ಟೆನಿಸ್ ಎಲ್ಬೋ ತೀವ್ರ ಸ್ವರೂಪ ಪಡೆದುಕೊಂಡಾಗ ನಿಮ್ಮ ಮೊಣಕೈ ಮತ್ತು ಮುಂದೋಳು ಅಲ್ಲಿ ನೋವಾಗಿ ಕಾಣಿಸಿಕೊಂಡರೂ, ಮೊದಲ ಹಂತಗಳಲ್ಲಿ ಇದರ ಲಕ್ಷಣಗಳು ಎಂದರೆ ನಿಮ್ಮ ಕೈಗಳು ಮರಗಟ್ಟುವುದು ಅಥವಾ ಜುಮ್ಮ್ ಹಿಡಿದಂತೆ ಆಗುವುದು. ನೀವು ಇದನ್ನು ಅನುಭವಿಸುತ್ತಿದ್ದರೆ, ಇದನ್ನು ಉಂಟುಮಾಡುತ್ತಿರುವ ಆ ಕ್ರೀಡೆಯನ್ನು ಅಥವಾ ಚಟುವಟಿಕೆಯನ್ನು ಸ್ವಲ್ಪ ಸಮಯದವರೆಗೆ ನಿಲ್ಲಿಸಿ. ಒಂದು ವೇಳೆ ಅದು ವಾಪಸ್ ಆದರೆ, ನಿಮ್ಮ ವೈದ್ಯರನ್ನು ಭೇಟಿ ಮಾಡಿ.

 

೩. ಥೈರಾಯಿಡ್ ಅಸ್ವಸ್ಥತೆಗಳು

“ಯಾರೂ ಇದನ್ನು ಮೊದಲು ಊಹಿಸುವುದಿಲ್ಲ, ಆದರೆ ಥೈರಾಯಿಡ್ ಕೂಡ ಕೈ ಮರಗಟ್ಟುವಿಕೆಗೆ ಕಾರಣ ಆಗಿರಬಹುದು” ಎನ್ನುತ್ತಾರೆ ಡಾ।। ಡಾನೊಫ್.

ಇದನ್ನು ಚಿಕಿತ್ಸೆಗೆ ಒಳಪಡಿಸಿದೆ ಹಾಗೆಯೇ ಬಿಟ್ಟರೆ, ಹೈಪೋಥೈರಾಯಿಡ್ ಆಗಿ, ಅದರಿಂದ ನಿಮ್ಮ ಮೆದುಳಿನಿಂದ ಬೆನ್ನಿನ ಮೂಳೆ ಮತ್ತು ದೇಹದ ಇತರೆ ಭಾಗಗಳಿಗೆ ಮಾಹಿತಿಯನ್ನು ಕೊಂಡೊಯ್ಯುವ ನರಗಳಿಗೆ ಹಾನಿ ಉಂಟಾಗಬಹುದು. ಮುಖ್ಯವಾಗಿ ನೀವು ಹೈಪೋಥೈರಾಯಿಡಿನ ಇತರೆ ಲಕ್ಷಣಗಳಾದ - ಕೂದಲುದುರುವಿಕೆ, ದಪ್ಪ ಆಗುವುದು, ಯಾವಾಗಲೂ ಚಳಿ ಆಗುವುದು - ಇವೆಲ್ಲಾ ಕಾಣಿಸಿಕೊಂಡರೆ ನೀವು ವೈದ್ಯರೊಡನೆ ಮಾತಾಡಬೇಕು.

೪. ಮದ್ಯಪಾನ ಅಸ್ವಸ್ಥತೆಗಳು

ದೀರ್ಘಕಾಲದ ಮದ್ಯಪಾನ ಸೇವನೆಯು ನರಗಳ ಹಾನಿಗೆ ದಾರಿ ಆಗಬಹುದು. ಇದನ್ನು ನ್ಯೂರೋಪಥಿ ಎನ್ನುತ್ತಾರೆ. ಅಮೆರಿಕಾದ ರಾಷ್ಟ್ರೀಯ ವೈದ್ಯಕೀಯ ಗ್ರಂಥಾಲಯದ ಪ್ರಕಾರ ಸುಮಾರು ಅರ್ಧದಷ್ಟು ಮದ್ಯವ್ಯಸನಿಗಳು ಇದಕ್ಕೆ ತುತ್ತಾಗುವ ಸಾಧ್ಯತೆಗಳು ಇರುತ್ತವೆ. ಇದರೊಂದಿಗೆ ಇತರೆ ಲಕ್ಷಣಗಳು ಎಂದರೆ ನಿಮ್ಮ ಕೈಗಳು ಮತ್ತು ಕಾಲುಗಳು ಮರಗಟ್ಟುವುದು, ಕಾಲುಗಳಲ್ಲಿ ಚುಚ್ಚಿದಂತೆ ಆಗುವ ವಿಚಿತ್ರ ಅನುಭವ ಮತ್ತು ಸ್ನಾಯು ಸೆಳೆತ, ನೋವು.

ಮದ್ಯವ್ಯಸನಿ ಎಂದರೆ ಹೆಣ್ನಗಸರಲ್ಲಿ ವಾರಕ್ಕೆ 3 ಅಥವಾ ಹೆಚ್ಚು ಬಾರಿ ಮದ್ಯ ಸೇವಿಸುವವರು ಮತ್ತು ಗಂಡಸರಲ್ಲಿ ವಾರಕ್ಕೆ 4 ಅಥವಾ ಹೆಚ್ಚು ಬಾರಿ ಮದ್ಯ ಸೇವಿಸುವವರು. ಇದು ಮರಗಟ್ಟುವಿಕೆಗೆ ಕಾರಣ ಆಗಬಹುದು.

೫. ಗಂಟುಗಳು

ಗಾಂಗ್ಲಿಯೋನ್ ಗಂಟುಗಳು ಕ್ಯಾನ್ಸರ್ ಉಂಟು ಮಾಡದಂತಹ ಗಂಟುಗಳು ಅಥವಾ ಕೋಶಗಳು. ಇವುಗಳು ದೇಹದ ಯಾವುದೇ ಭಾಗದಲ್ಲಿ ಬೇಕಾದರೂ ಕಾಣಿಸಿಕೊಳ್ಳಬಹುದು. ಆದರೆ ಇವುಗಳು ಜಾಯಿಂಟ್ಸ್ ಬಳಿ ಕಾಣಿಸಿಕೊಳ್ಳುವುದು ಹೆಚ್ಚು. ಅಕಸ್ಮಾತ್ ಇದು ನಿಮ್ಮ ಮಣಿಕಟ್ಟು ಬಳಿ ಉಂಟಾದರೆ, ಮರಗಟ್ಟುವಿಕೆ ಸಾಮಾನ್ಯ ಲಕ್ಷಣ.

ಈ ಗಂಟುಗಳು ಕೆಲವೊಮ್ಮೆ ತಾವಾಗಿಯೇ ಮಾಯವಾಗುತ್ತವೆ. ಒಂದು ವೇಳೆ ಅವು ಮಾಯವಾಗದೆ ನಿಮಗೆ ನೋವು ಅಥವಾ ಮರಗಟ್ಟುವಿಕೆ ಉಂಟು ಮಾಡುತ್ತಿದ್ದರೆ, ಸರ್ಜರಿ ಅಥವಾ ಗಂಟಾಳಾಗಿರುವ ದ್ರವ್ಯವನ್ನು ಹೊರತೆಗೆಯುವಂತಹ ಪ್ರಕ್ರಿಯೆಯಾದ ಆಸ್ಪಿರೇಷನ್ ಅನ್ನು ಶಿಫಾರಸು ಮಾಡಲಾಗುತ್ತದೆ.

೬. ಗಿಲನ್ - ಬಾರ್ರೆ ಸಿಂಡ್ರೋಮ್

ಇದು ಒಂದು ಆಟೋಇಮ್ಮ್ಯೂನ್ ಕಾಯಿಲೆ ಆಗಿದ್ದು, ಇದರಲ್ಲಿ ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯೇ (immunity system) ನಿಮ್ಮ  ನರಗಳ ಮೇಲೆ ದಾಳಿ ಮಾಡಿ, ಹಾನಿ ಮಾಡಿ ನಿಮ್ಮ ಕೈ ಮರಗಟ್ಟುವಂತೆ ಮಾಡುತ್ತದೆ. ಸಾಮಾನ್ಯವಾಗಿ ಇದು ಉಂಟಾಗುವ ಮುನ್ನ ನಿಮಗೆ ಉಸಿರಾಟದ ಕಾಯಿಲೆಗಳು, ಉದರ ಜ್ವರ ಅಥವಾ ಯಾವುದಾದರೂ ಸಾಂಕ್ರಾಮಿಕ ಕಾಯಿಲೆ ನಿಮಗೆ ಉಂಟಾಗಬಹುದು. ಇತರೆ ಲಕ್ಷಣಗಳು ಎಂದರೆ ಅದು ನಿಮ್ಮ ಕೈ-ಕಾಲು ಬೆರಳಗಳು, ಮಣಿಕಟ್ಟು ಅಥವಾ ಮೊಣಕಾಲಿನಲ್ಲಿ ತುರಿಕೆ ಉಂಟಾಗುವುದು, ಕಾಲಲ್ಲಿ ಬಲ ಇಲ್ಲದಂತೆ ಆಗುವುದು, ಸ್ಥಿರವಾಗಿ ನಡೆಯಲು ಕಷ್ಟವಾಗುವುದು, ವೇಗವಾದ ಎದೆಬಡಿತ, ಕಳಪೆ ಮೂತ್ರಕೋಶ ಅಥವಾ ಹಲ್ಲಿನಿಂದ ಅಗಿಯುವಂತಹ ಮುಖದ ಕ್ರಿಯೆಗಳೂ ಕಷ್ಟ ಆಗುವುದು.

 

೭. ಲೈಮ್ ಕಾಯಿಲೆ

ತಿಗಣೆಗಳು ಯಾವ ಊರಲ್ಲಿ ಇಲ್ಲ ಹೇಳಿ? ಇವುಗಳ ಕಡಿತದಿಂದಲೇ ಉಂಟಾಗುವ ಕಾಯಿಲೆ ಎಂದರೆ ಅದು ಲೈಮ್. ಇದು ಈಗ ಎಂದಿಗಿಂತ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಈ ಕಾಯಿಲೆಯ ಮೊದಲ ಹಂತದ ಲಕ್ಷಣಗಳು ಎಂದರೆ ಅತಿಯಾದ ಆಯಾಸ, ಚರ್ಮದ ಮೇಲೆ ರಾಷೆಸ್, ಜ್ವರದ ಲಕ್ಷಣಗಳಾದ ನಡುಕ, ಚಳಿ ಅಥವಾ ಮೈ-ಕೈ ನೋವು. ನೀವು ಇದಕ್ಕೆ ಚಿಕಿತ್ಸೆ ತೆಗೆದುಕೊಳ್ಳದೆ ಹಾಗೆಯೇ ಬಿಟ್ಟರೆ, ಜಾಯಿಂಟ್ಸ್ ಅಲ್ಲಿ ನೋವು ಮತ್ತು ಕೈ-ಕಾಲು ಮರಗಟ್ಟುವಿಕೆಯು ನಂತರದ ಹಂತದ ಲಕ್ಷಣಗಳು ಆಗಿರುತ್ತವೆ. ಒಂದು ವೇಳೆ ನೀವು ನಿಮ್ಮ ದಿನದ ಬಹುತೇಕ ಸಮಯವನ್ನು ಮರ ಅಥವಾ ಮರಗಳ ತುಂಡು ಇರುವ ಜಾಗದಲ್ಲಿ ಕಳೆಯುತ್ತಿದ್ದರೆ, ಈ ತಿಗಣೆಗಳಿಂದ ಕಡಿತಕ್ಕೆ ಒಳಗಾಗಿದ್ದರೆ, ನಿಮ್ಮ ಮರಗಟ್ಟುವಿಕೆಗೆ ಲೈಮ್ ಕಾಯಿಲೆ ಕಾರಣ.

 

೮. ಮಲ್ಟಿಪಲ್ ಸ್ಲೇರೋಸಿಸ್

ನಿಮ್ಮ ಮೆದುಳಿನ ಮತ್ತು ಸ್ಪೈನಲ್ ಕಾರ್ಡಿನ ನರ ಫೈಬರ್ಸ್ ಅನ್ನು ಕೊಬ್ಬಿನ ಅಂಶವು ಕಾಪಾಡುತ್ತಿರುತ್ತದೆ. ಈ ಕೊಬ್ಬಿನ ಅಂಶದ ಮೇಲೆ ನಿಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಯೇ (immunity system) ದಾಳಿ ಮಾಡುವುದನ್ನು ಮಲ್ಟಿಪಲ್ ಸ್ಲೇರೋಸಿಸ್ ಎನ್ನುತ್ತಾರೆ. ಇದು ನಿಮ್ಮ ಕೈ ಮರಗಟ್ಟುವಂತೆ ಮಾಡಬಹುದು ಎನ್ನುತ್ತಾರೆ ಡಾ।। ಡಾನೋಫ್.

ಈ ಮಲ್ಟಿಪಲ್ ಸ್ಲೇರೋಸಿಸ್ ನಿಮಗೆ ಯಾವ ವಯಸ್ಸಿನಲ್ಲಿ ಆದರೂ ಉಂಟಾಗಬಹುದು, ಆದರೆ ಹೆಚ್ಚು ಉಂಟಾಗುವ ಸಾಧ್ಯತೆಗಳು ಇರುವುದು ನೀವು ನಿಮ್ಮ 20ರ ಮತ್ತು 30ರ ವಯಸ್ಸಿನಲ್ಲಿ. ಇದರ ಲಕ್ಷಣಗಳು ದೇಹದ ಎಲ್ಲೆಡೆ ಕಾಣಿಸಿಕೊಂಡರೂ, ಕಾಲುಗಳು ಮತ್ತು ಸ್ನಾಯುಗಳ ದುರ್ಬಲತೆ, ಎಲ್ಲವೂ ಎರಡೆರಡು ಕಾಣುವುದು ಅಂತಹ ಇನ್ನೂ ಹಲವು ಲಕ್ಷಣಗಳು ನಿಮ್ಮ ಕೈ ಮರಗಟ್ಟುವಿಕೆಯೊಂದಿಗೆ ಕಾಣಿಸಿಕೊಳ್ಳಬಹುದು.

 

೯. ಸ್ಟ್ರೋಕ್

ಡಾ।। ಡಾನೋಫ್ ಪ್ರಕಾರ ಕೈ ಮರಗಟ್ಟುವುದು ಅಥವಾ ಕಚಗುಳಿ ಕೊಟ್ಟಂತೆ ಆಗುವುದು ನಿಮಗೆ ಸ್ಟ್ರೋಕ್ ಉಂಟಾಗುತ್ತಿದೆ ಎಂಬುದರ ಸೂಚನೆ ಆಗಿರಬಹುದು ಎನ್ನುತ್ತಾರೆ. ಇದರ ಇನ್ನಿತರೇ ಮೊದಲ ಲಕ್ಷಣಗಳು ಎಂದರೆ ವಕ್ರ ನಗು, ತೊದಲು ನುಡಿ ಅಥವಾ ಯೋಚಿಸಲು ಕಷ್ಟವಾಗುವುದು, ತಲೆ ತಿರುಗುವುದು ಮತ್ತು ಕಣ್ಣು ಮಂಜಾಗುವುದು. ಒಂದು ವೇಳೆ ನೀವು ಅನುಭವಿಸುತ್ತಿರುವುದರಲ್ಲಿ ಇವೆಲ್ಲಾ ಕಾಣಿಸಿಕೊಂಡರೆ, ಕೂಡಲೇ ವೈದ್ಯರನ್ನು ಭೇಟಿ ಮಾಡಿ.

ನೀವು ಇನ್ನೂ ಯುವಕರಾಗಿದ್ದರೂ ನಿಮಗೆ ಸ್ಟ್ರೋಕ್ ಉಂಟಾಗಬಹುದು. ಸ್ಟ್ರೋಕಿಗೆ ತುತ್ತಾದ ಎಲ್ಲಾ ಜನರಲ್ಲಿ ಸುಮಾರು 10% ಅಷ್ಟು ಜನರು 45 ವರ್ಷದ ಒಳಗಿನವರು. ಅಲ್ಲದೆ ನೀವು ಫಿಟ್ ಆಗಿ ಮತ್ತು ಆರೋಗ್ಯವಾಗಿ ಇದ್ದೀರಾ ಎಂದಮಾತ್ರಕ್ಕೆ ನಿಮಗೆ ಸ್ಟ್ರೋಕ್ ಉಂಟಾಗುವುದಿಲ್ಲ ಎಂದುಕೊಳ್ಳಬೇಡಿ.

 

೧೦. ಮಧುಮೇಹ

ಇಷ್ಟೊತ್ತಿಗಾಗಲೇ ನಿಮಗೆ ಪದೇ ಪದೇ ಮೂತ್ರವಿಸರ್ಜನೆ ಮಾಡುವುದು, ಅತಿಯಾದ ಬಾಯಾರಿಕೆ, ಮತ್ತು ರಕ್ತದಲ್ಲಿ ಹೆಚ್ಚಿನ ಸಕ್ಕರೆ ಅಂಶ ಹೊಂದುವುದೆಲ್ಲಾ ಪ್ರಿ-ಡಯಾಬಿಟಿಸ್ ಲಕ್ಷಣಗಳು ಅಥವಾ ನಿಮಗೆ ಡಯಾಬಿಟಿಸ್ ಉಂಟಾಗುವ ದೊಡ್ಡ ಅಪಾಯ ಇದೆ. ಈ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದರೆ ವೈದ್ಯರ ಬಳಿ ಧಾವಿಸಿ.

ಆದರೆ ಪೂರ್ಣ ಪ್ರಮಾಣದ ಡಯಾಬಿಟಿಸ್-2 ಹೊಂದಿರುವ ಬಹುತೇಕ ಜನರಿಗೆ ಇದರ ಅರಿವೇ ಉಂಟಾಗುವುದಿಲ್ಲ. ಒಂದು ವೇಳೆ ಇದಕ್ಕೆ ಚಿಕಿತ್ಸೆ ಪಡೆಯಲಿಲ್ಲ ಎಂದರೆ, ಡಯಾಬಿಟಿಸ್-ಸಂಬಂಧಿತ ನರ ಹಾನಿ ಉಂಟಾಗಿ ನಿಮ್ಮ ಕೈ ಮರಗಟ್ಟಬಹುದು ಎಂದು ಹೇಳುತ್ತಾರೆ ಡಾ ।। ಡಾನೋಫ್. ಕಣ್ಣು ಮಂಜಾಗುವುದು, ಕಿಡ್ನಿ ತೊಂದರೆ, ಹೃದಯ ವೈಫಲ್ಯತೆ - ಇವೆಲ್ಲವೂ ಡಯಾಬಿಟಿಸ್ ಗೆ ಸರಿಯಾದ ಚಿಕಿತ್ಸೆ ತೆಗೆದುಕೊಳ್ಳಲಿಲ್ಲ ಎಂದರೆ ಉಂಟಾಗುವ ಅಪಾಯಗಳು ಇರುತ್ತವೆ.

೧೧. ರೇಯ್ನಾಡ್ ಕಾಯಿಲೆ

ಒಂದು ವೇಳೆ ನೀವು ಮರಗಟ್ಟುವಿಕೆ ಜೊತೆಗೆ ನಿಮ್ಮ ಬೆರಳುಗಳು ಹೆಪ್ಪುಗಟ್ಟಿದಂತೆ ಆದರೆ, ನಿಮಗೆ ರೇಯ್ನಾಡ್ ಉಂಟಾಗಿರಬಹುದು. ಇಲ್ಲಿ ನಿಮ್ಮ ಚರ್ಮಕ್ಕೆ ರಕ್ತವನ್ನು ತಂದು ಒದಗಿಸುವ ಅಪಧಮನಿಗಳು ಕುಗ್ಗಿ, ಸಂಚಾರಕ್ಕೆ ಅಡ್ಡಿ ಮಾಡುವುದು ಆಗುತ್ತದೆ. ರೇಯ್ನಾಡ್ ಕಾಯಿಲೆಯು ಪೀಡಿತರಿಗೆ ತುಂಬಾ ಕಷ್ಟಕರವಾಗಬಹುದು. ಕೆಲವು ಜನರು ತಮ್ಮ ಬೆರಳುಗಳು ಬಿಳಿ ಅಥವಾ ನೀಲಿ ಬಣ್ಣಕ್ಕೆ ತಿರುಗುವುದನ್ನು ಕೆಲವು ಸನ್ನಿವೇಶಗಳಲ್ಲಿ ಕಾಣಬಹುದು. ಇದು ಏಕೆ ಉಂಟಾಗುತ್ತದೆ ಎಂಬುದು ತಜ್ಞರಿಗೆ ಸ್ಪಷ್ಟವಾಗಿ ತಿಳಿದಿರದೆ ಇದ್ದರೂ, ಇದನ್ನು ಹೆಂಗಸರು ಹೊಂದುವ ಸಾಧ್ಯತೆಗಳು ಹೆಚ್ಚು ಇರುತ್ತವೆ ಎಂಬುದನ್ನು ಅವರು ಹೇಳುತ್ತಾರೆ. ಅಲ್ಲದೆ ಇದು 15-30ರ ವಯಸ್ಸಿನಲ್ಲಿ ಶುರುವಾಗುತ್ತದೆ.

ಅಮ್ಮಂದಿರೆ! ನಿಮಗೆಲ್ಲಾ ಒಂದು ಸಿಹಿ ಸುದ್ದಿ ಇದೆ!

ನಾವು, ಅಂದರೆ ಟೈನಿಸ್ಟೆಪ್ ಸಂಪೂರ್ಣ ನೈಸರ್ಗಿಕ ಫ್ಲೋರ್ ಕ್ಲೀನರ್ ಅನ್ನು ಲಾಂಚ್ ಮಾಡಿದ್ದು, ಇದು ನಿಮಗೆ, ನಿಮ್ಮ ಮಗುವಿಗೆ ಮತ್ತು ನಿಮ್ಮ ಕುಟುಂಬಕ್ಕೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಈ ಕ್ಷಣವೇ ಕೀಟಾಣುಗಳಿಗೆ ಮತ್ತು ರಾಸಾಯನಿಕಗಳಿಗೆ ವಿದಾಯ ಹೇಳಿಬಿಡಿ!

ಒಮ್ಮೆ ನಮ್ಮ ಈ ಉತ್ಪನ್ನವನ್ನು ಪ್ರಯತ್ನಿಸಿ ಮತ್ತು ನಿಮಗೆ ಇಷ್ಟವಾಯಿತೇ ಎಂದು ತಿಳಿಸಿ. ಇದನ್ನು ಈಗಲೇ ಆರ್ಡರ್  ಮಾಡಲು ಇಲ್ಲಿ ಕ್ಲಿಕ್ ಮಾಡಿ!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon