Link copied!
Sign in / Sign up
7
Shares

ಈ ಮಗುವಿಗೆ ಇರುವ ಕಾಲು-ಕೈಗಳ ಸಂಖ್ಯೆ 8!

ಗಂಡು ಮಗುವೊಂದು ನಾಲ್ಕು ಕೈಗಳು ಮತ್ತು ನಾಲ್ಕು ಕಾಲುಗಳೊಂದಿಗೆ ಜನಿಸಿದ್ದು, ವೈದ್ಯರು ಈ ಮಗುವಿನ ದೇಹದಿಂದ ಅದರ ಇನ್ನೊಂದು “ಪ್ಯಾರಾಸಿಟಿಕ್ ಟ್ವಿನ್” ಅನ್ನು ಬೇರ್ಪಡಿಸಿದ್ದಾರೆ. ಉಗಾಂಡಾ ದೇಶದ ಶಸ್ರಚಿಕಿತ್ಸಾತಜ್ಞರು ಮೂರು ತಿಂಗಳು ವಯಸ್ಸಿನ ಮಗುವಾದ ಪಾಲ್ ಮುಕಿಸ ಮೇಲೆ ಶಸ್ತ್ರಚಿಕಿತ್ಸೆ ಪ್ರಯೋಗಿಸಿ, ಸರಿಯಾದ ಜಾಗದಲ್ಲಿ ಕೂತಿರದ ಹೃದಯ, ಲಿವರ್ ಸರಿಪಡಿಸಿರುವುದಷ್ಟೇ ಅಲ್ಲದೆ, ಆತನ ದೇಹದಿಂದ ಹೆಚ್ಚುವರಿ ಕೈ-ಕಾಲುಗಳನ್ನ ಕೂಡ ಬೇರ್ಪಡಿಸಿದ್ದಾರೆ.


ಮಗುವಿನ ಶಸ್ತ್ರಚಿಕಿತ್ಸೆಯಲ್ಲಿ ಪಾಲ್ಗೊಂಡಿದ್ದ ವೈದ್ಯರಾದ ಡಾ ।। ನಾಸೇರ್ ಕಾಕೆಂಬೋ ಅವರ ಪ್ರಕಾರ ಮಗುವಿಗೆ ಜನರಲ್ ಅನಾಸ್ಥೆಸಿಯಾ ನೀಡಲಾಯಿತು ಮತ್ತು ಈ ಮಗುವಿಗೆ ಅಂಟಿಕೊಂಡಿದ್ದ ಇನ್ನೊಂದು ಮಗುವಿನ ತಲೆ ಮತ್ತು ಹೃದಯ ಇಲ್ಲದ ಪ್ಯಾರಾಸಿಟಿಕ್ ಕೈ-ಕಾಲುಗಳನ್ನ ಬೇರ್ಪಡಿಸಲಾಯಿತು.

ಈ ಪಾಲ್ ಮುಕಿಸ ಮೊದಲು ಹುಟ್ಟಿದಾಗ, ಅವರ ಪೋಷಕರಾದ ಮಾರ್ಗರೆಟ್ ಮತ್ತು ಬೋನಿಫೇಸ್ ಅವರಿಗೆ ಊರಿನ ಜನರೆಲ್ಲಾ ಈ ಮಗುವನ್ನ ಸರಿಪಡಿಸಲು ಯಾರಿಗೂ ಆಗುವುದಿಲ್ಲ ಎಂದು ಹೇಳಿದರು. ಆ ಕೂಡಲೇ ಈ ಪೋಷಕರು ಮಗುವನ್ನ ಹತ್ತಿರದ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಕೆಲವೊಮ್ಮೆ ದೇವರು ಬೇರೊಬ್ಬರ ರೂಪದಲ್ಲಿ ಬರುತ್ತಾನೆ ಎಂಬುದು ಎಷ್ಟು ನಿಜವೆಂದರೆ, ಆ ದಿನ ಅಲ್ಲಿದ್ದ ವಿಸಿಟಿಂಗ್ ವೈದ್ಯರಾದ ಮಕ್ಕಳತಜ್ಞ ಡಾ ।। ಜಾನ್ ಸೇಕಬೀರಾ ಅವರು ಈ ಮಗುವನ್ನ ನೋಡಿ, ಈ ಮಗುವನ್ನ ನಾವು ಸರ್ಜರಿ ಮೂಲಕ ಸರಿಪಡಿಸಬಹುದು ಎಂದು ಹೇಳಿ, ಸರ್ಜರಿ ಮಾಡಲು ಮಗುವಿಗೆ ಇನ್ನಷ್ಟು ದಿನಗಳಷ್ಟು ವಯಸ್ಸಾಗಬೇಕು ಎಂದು ತಿಳಿಸಿ, ಪೋಷಕರಿಗೆ ಸ್ವಲ್ಪ ದಿನಗಳ ನಂತರ ಆಸ್ಪತ್ರೆಗೆ ಪುನಃ ಮಗುವನ್ನ ಕರೆತನ್ನಿ ಎಂದು ಹೇಳಿ ಕಳುಹಿಸಿದ್ದಾರೆ.


ಮೂರು ತಿಂಗಳುಗಳ ನಂತರ ಪೋಷಕರು ಮಗುವಿನೊಂದಿಗೆ ವಾಪಸ್ ಆಗಮಿಸಿದಾಗ, ಮಗುವಿನ ಮೇಲೆ ಶಸ್ತ್ರಚಿಕಿತ್ಸೆ ಪ್ರಯೋಗಿಸಿ, ಹೆಚ್ಚುವರಿ ದೇಹಾಂಗಗಳನ್ನ ಬೇರ್ಪಡಿಸಿದರು ವೈದ್ಯರು.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon