Link copied!
Sign in / Sign up
28
Shares

ಗಂಟಲಿನ ಕಫ ಮತ್ತು ಮೂಗಿನ ಲೋಳೆ ತೆಗೆದುಹಾಕಲು 5 ಸರಳ, ಪರಿಣಾಮಕಾರಿ ಮನೆಮದ್ದುಗಳು

ನಮಗೆ ಶೀತ ಆದಾಗ ಅಥವಾ ನಮ್ಮ ಉಸಿರಾಟದ ನಾಳದ ಮೇಲ್ಭಾಗದಲ್ಲಿ ಸೋಂಕು ಉಂಟಾದಾಗ, ಕಫ ಉಂಟಾಗುವುದು ಸಾಮಾನ್ಯ. ಇದು ಜೀವಕ್ಕೆ ಕುತ್ತು ತರುವಂತದಲ್ಲ ಎಂದರೂ ಇದನ್ನು ಸರಿಯಾದ ಸಮಯಕ್ಕೆ ತೊಲಗಿಸದಿದ್ದರೆ ಅದು ನಿಮ್ಮ ಶ್ವಾಸಕೋಶದ ನಳಿಕೆಗಳಿಗೆ ತಡೆಯೊಡ್ಡಿ, ಉಸಿರಾಟದ ನಾಳದ ಮೇಲ್ಭಾಗದಲ್ಲಿ ಎರಡನೆಯ ಸೋಂಕು ಹುಟ್ಟು ಹಾಕಬಹದು.

ಇಂದು ಈ ಲೇಖನದಲ್ಲಿ ನಾನು ನಿಮಗೆ ಗಂಟಲಿನ ಕಫವನ್ನು ಹೊರಹಾಕಲು ಸುಲಭ ಮತ್ತು ಅತ್ಯಂತ ಪರಿಣಾಮಕಾರಿ ವಿಧಾನಗಳು ಯಾವುಗಳೆಂದು ತಿಳಿಸುತ್ತೇನೆ ಓದಿರಿ.

೧. ಉಪ್ಪು ನೀರು

ಒಂದು ಲೋಟದಷ್ಟು ಉಗುರುಬೆಚ್ಚಗಿನ ನೀರಿಗೆ ಕಾಲು ಚಮಚದಷ್ಟು ಉಪ್ಪು ಬೆರೆಸಿ. ಈ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸಿ. ಇದನ್ನು ದಿನಕ್ಕೆ ಹಲವಾರು ಬಾರಿ ಮಾಡಬೇಕು. ಉಪ್ಪಿಗೆ ಬ್ಯಾಕ್ಟೀರಿಯಾಗಳನ್ನೂ ಕೊಳ್ಳುವ ಸಾಮರ್ಥ್ಯ ಇದ್ದು ಇದು ಸೋಂಕನ್ನು ತಡೆಗಟ್ಟಿ ಕಫ ಹೆಚ್ಚಾಗುವುದನ್ನು ತಡೆಯುತ್ತದೆ.


೨. ಶುಂಠಿ

ಶುಂಠಿಯು ಒಂದು ನೈಸರ್ಗಿಕ ಆಂಟಿಹಿಸ್ಟಾಮೈನ್ ಮತ್ತು ಮೂಗುಕಟ್ಟುವುದರ ನಿವಾರಕ. ಅಲ್ಲದೆ ಇದರಲ್ಲಿ ಶಗೋಲ್ ಎಂಬ ಪದಾರ್ಥವಿದ್ದು ಇದು ಶೀತ ಉಂಟುಮಾಡುವ ವೈರಾಣುಗಳೊಂದಿಗೆ ಹೋರಾಡುತ್ತದೆ. ಶುಂಠಿಯ ವೈರಾಣು-ವಿರೋಧಿ ಮತ್ತು ಬ್ಯಾಕ್ಟೀರಿಯಾ-ವಿರೋಧಿ ಗುಣಗಳೊಂದಿಗೆ, ಇದು ಉಸಿರಾಟವನ್ನು ಸುಲಭ ಕೂಡ ಮಾಡುತ್ತದೆ.

ಒಂದು ಶುಂಠಿಯನ್ನು ಚಿಕ್ಕ ತುಂಡುಗಳಾಗಿ ಕತ್ತರಿಸಿ. ನಂತರ ಒಂದು ಚಮಚದಷ್ಟು ಶುಂಠಿಯ ತುಂಡುಗಳನ್ನು ಒಂದು ಲೋಟದಷ್ಟು ಬಿಸಿ ಬಿಸಿ ನೀರಿನಲ್ಲಿ ಹಾಕಿ. ಶುಂಠಿ ನೀರಿನೊಂದಿಗೆ ಬೆರೆಯಲು ಸ್ವಲ್ಪ ಹೊತ್ತು ಬಿಟ್ಟು, ನಂತರ ಅದಕ್ಕೆ ಎರಡು  ಚಮಚದಷ್ಟು ಜೇನುತುಪ್ಪ ಬೆರೆಸಿ. ಈ ಮಿಶ್ರಣವನ್ನು ಚೆನ್ನಾಗಿ ಕಲಿಸಿ ದಿನಕ್ಕೆ ಮೂರ್ನಾಲ್ಕು ಬಾರಿ ಸೇವಿಸಿರಿ. ಪರ್ಯಾಯವಾಗಿ ನೀವು ಕೆಲವಷ್ಟು ಶುಂಠಿಯ ತುಂಡುಗಳನ್ನು ಹಾಗೆ ಬಾಯಲ್ಲಿ ಅಗಿಯಬಹುದು.


೩. ಮೆಣಸಿನ ಪುಡಿ

ಮೆಣಸು ನಿಮ್ಮ ಗಂಟಲಿನಲ್ಲಿರುವ ಕಫವನ್ನು ಕಡಿಮೆ ಮಾಡಿ ಉಸಿರಾಟಕ್ಕೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ಇದು ಕೆಮ್ಮಿನಿಂದ ಉಂಟಾದ ಎದೆ ನೋವು ಮತ್ತು ಗಂಟಲು ಕೆರೆತವನ್ನೂ ಕಡಿಮೆ ಮಾಡುತ್ತದೆ.

ಮೊದಲಿಗೆ ಕಾಲು ಚಮಚದಷ್ಟು ಮೆಣಸಿನ ಪುಡಿ, ಕಾಲು ಚಮಚದಷ್ಟು ತುರಿದ ಶುಂಠಿ, ಒಂದು ಚಮಚದಷ್ಟು ಜೇನುತುಪ್ಪ - ಈ ಮೂರರ ಮಿಶ್ರಣ ಮಾಡಿ. ನಂತರ ಈ ಮಿಶ್ರಣಕ್ಕೆ ಎರಡು ಚಮಚದಷ್ಟು ನೀರನ್ನು ಬೆರೆಸಿ, ಕಲಿಸಿ. ಈ ಮಿಶ್ರಣವನ್ನು ದಿನಕ್ಕೆ 2-3 ಬಾರಿ ಸೇವಿಸುವುದರಿಂದ ಕಫ ಕಡಿಮೆ ಆಗುತ್ತದೆ.


೪. ನಿಂಬೆಹಣ್ಣು

ಕಫವನ್ನು ಮತ್ತು ಲೋಳೆಯನ್ನು ಹೋಗಲಾಡಿಸುವುದರಲ್ಲಿ ನಿಂಬೆಹಣ್ಣು ಬಹಳಷ್ಟು ಸಹಾಯ ಮಾಡುತ್ತದೆ. ನಿಂಬೆ ಹಣ್ಣಿನಲ್ಲಿ ಕೇವಲ ಆಂಟಿ-ಬ್ಯಾಕ್ಟೀರಿಯಾ ಗುಣಗಳು ಇರುವದಷ್ಟೇ ಅಲ್ಲದೆ, ಅದರಲ್ಲಿರುವ ವಿಟಮಿನ್ C ನಿಮ್ಮ ದೇಹಕ್ಕೆ ಸೋಂಕಿನ ವಿರುದ್ಧ ಹೋರಾಡಲು ಶಕ್ತಿ ನೀಡುತ್ತದೆ.

ಮೊದಲಿಗೆ ಎರಡು ಚಮಚದಷ್ಟು ನಿಂಬೆರಸವನ್ನು ಒಂದು ಚಮಚದಷ್ಟು ಜೇನುತುಪ್ಪ ಮತ್ತು ಒಂದು ಲೋಟದಷ್ಟು ಕುದಿಸಿದ ನೀರಿಗೆ ಬೆರೆಸಿ. ಈ ಮಿಶ್ರಣವನ್ನು ದಿನಕ್ಕೆ ಮೂರು ಬಾರಿ ಸೇವಿಸಿ. ಇನ್ನೊಂದು ವಿಧಾನ ಎಂದರೆ ನಿಂಬೆಹಣ್ಣನು ಕೇವಲ ಎರಡು ಭಾಗ ಮಾಡಿ. ಒಂದು ತುಂಡಿನ ಮೇಲೆ ಮೆಣಸಿನ ಪುಡಿ ಮತ್ತು ಉಪ್ಪನ್ನು ಉದುರಿಸಿ, ಅದನ್ನು ಚೀಪಿ.


೫. ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿ ಬ್ಯಾಕ್ಟೀರಿಯಾ-ವಿರೋಧಿ, ವೈರಾಣು-ವಿರೋಧಿ ಮತ್ತು ಉರಿತ-ವಿರೋಧಿ ಗುಣಗಳಿದ್ದು ಇದು ಉಸಿರಾಟದ ನಾಳದ ಉರಿಯೂತವನ್ನು ಕಡಿಮೆ ಮಾಡುತ್ತದೆ.

ನೀವು ಕಫವನ್ನು ನಿರ್ಮೂಲನೆ ಮಾಡಲು ಬೆಳ್ಳುಳ್ಳಿ  ಚೆನ್ನಾಗಿ ಜೇಜ್ಜಿಕೊಳ್ಳಿ. ಈ ಜೇಜ್ಜಿದ ಬೆಳ್ಳುಳ್ಳಿಯ ಎಸಳುಗಳನ್ನು ಬೆಳಗ್ಗೆ ಎದ್ದೊಡನೆ ಮತ್ತು ಮಲಗುವ ಮುನ್ನ ನೀರಿನೊಂದಿಗೆ ಸೇವಿಸಿ.

ನಿಮ್ಮ ಮೂಗಿನಲ್ಲಿ ಕಟ್ಟಿಕೊಂಡಿರುವ ಲೋಳೆಯನ್ನು ಹೋಗಲಾಡಿಸಬೇಕೆಂದರೆ ಬೆಳ್ಳುಳ್ಳಿಯನ್ನು ಹಿಂಡಿ ಅದರ ರಸ ತೆಗಿಯಿರಿ. ನಂತರ ಈ ಬೆಳ್ಳುಳ್ಳಿ ರಸವನ್ನು ಒಂದು ಲೋಟದಷ್ಟು ನೀರಿನೊಂದಿಗೆ ಬೆರೆಸಿ. ಈ ಮಿಶ್ರಣದ ಕೆಲವು ಹನಿಗಳನ್ನು ನಿಮ್ಮ ಮೂಗಿನೊಳಗೆ ಬಿಟ್ಟುಕೊಳ್ಳಿ. ಇದು ಕಟ್ಟಿಕೊಂಡಿರುವ ಲೋಳೆಯನ್ನು ನೀರು ಮಾಡಿ ಅದು ಆಚೆ ಬರುವಂತೆ ಮಾಡುತ್ತದೆ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon