Link copied!
Sign in / Sign up
10
Shares

ಕಡಲೆ ಹಿಟ್ಟಿನ ಫೇಸ್ ಪ್ಯಾಕ್: ಚರ್ಮಕ್ಕಾಗಿ ಕಡಲೆಹಿಟ್ಟನ್ನು ಬಳಸಲು ೧೫ ಆಸಕ್ತಿದಾಯಕ ಮಾರ್ಗಗಳು (Besan Face Packs: 15 Interesting Ways To Use Besan For Skin in Kannada)

ಆರೋಗ್ಯವೇ ಭಾಗ್ಯ. ನಿಮ್ಮ ಚರ್ಮ ನಿಮ್ಮ ಆರೋಗ್ಯದ ಸ್ಥಿತಿಯನ್ನು ತೋರಿಸುತ್ತದೆ. ನೀವು ತಿನ್ನುವ ಆಹಾರ ಮತ್ತು ನಿಮ್ಮ ಆರೋಗ್ಯವನ್ನು ನಿಭಾಯಿಸುವ ರೀತಿ ನಿಮ್ಮ ಚರ್ಮದಲ್ಲಿ ಪ್ರತಿಫಲಿಸುತ್ತದೆ. ನಿಮ್ಮ ಈ ಸುರಕ್ಷಾ ಕವಚದ ಬಗ್ಗೆ ಕಾಳಜಿವಹಿಸುವುದು ಮುಖ್ಯ. ಏಕೆಂದರೆ ನಿಮ್ಮ ದೇಹದ ಈ ಭಾಗಕ್ಕೆ ಸೋಂಕು ತಗಲುವ ಸಾಧ್ಯತೆ ಹೆಚ್ಚು. 

ನಿಮ್ಮ ಚರ್ಮಕ್ಕೆ ವಿವಿಧೋದ್ದೇಶದ ಮಿಶ್ರಣವೆಂದರೆ ಕಡಲೆಹಿಟ್ಟು ಅಥವಾ ಬೇಸನ್ (ಹಿಂದಿಯಲ್ಲಿ)! ನೀವು ಅನ್ವೇಷಣೆ ಪ್ರಾರಂಭಿಸಿದರೆ, ಬೇಸನ್ ನಿಂದ ನಿಮ್ಮ ಮಖಕ್ಕೆ ಅಸಂಖ್ಯಾತ ಲಾಭಗಳನ್ನು ಪಡೆಯಬಹುದು ಮತ್ತು ವಿವಿಧ ಬಗೆಯ ಚರ್ಮಕ್ಕೆ ಬೇಸನ್ ಫೇಸ್ ಪ್ಯಾಕ್ ಕೂಡಾ ಕಂಡುಕೊಳ್ಳಬಹುದು. ಚರ್ಮದ ಏರಿಕೆಯ ವಿಷಯಕ್ಕೆ ಬಂದಾಗ ನೈಸರ್ಗಿಕ ಪದಾರ್ಥಗಳನ್ನು ಬಳಸುವುದು ಮುಖ್ಯವಾಗುತ್ತದೆ. ಏಕೆಂದರೆ ನಾವು ಈಗಾಗಲೇ ನಮ್ಮ ಚರ್ಮವನ್ನು ಮಾಲಿನ್ಯ ಮತ್ತು ಸೌಂದರ್ಯವರ್ಧಕಗಳ ರೂಪದಲ್ಲಿ ಹಲವು ಬಗೆಯ ರಾಸಾಯನಿಕಗಳಿಗೆ ಪ್ರದರ್ಶಿಸುತ್ತೇವೆ. 

ಈ ಲೇಖನದಲ್ಲಿ, ನಿಮ್ಮ ಚರ್ಮಕ್ಕಾಗಿ ಸೂಕ್ತವಾಗಿ ಸಂಶೋಧಿಸಿದ ಬೇಸನ್  ಪ್ರಯೋಜನಗಳನ್ನು ನೀಡಿದ್ದೇವೆ. ಅದರ ಸತ್ಯಂಶಗಳನ್ನು ತಿಳಿದುಕೊಳ್ಳೋಣ. 

ಪರಿವಿಡಿ:

೧. ಕಡಲೆಹಿಟ್ಟು ಅಥವಾ ಬೇಸನ್ ಎಂದರೇನು? (What Is Gram Flour Or Besan? in Kannada)

೨. ನಿಮ್ಮ ಚರ್ಮಕ್ಕೆ ಕಡಲೆಹಿಟ್ಟಿನ ೧೫ ಅದ್ಭುತ ಲಾಭಗಳು (15 Amazing Benefits Of Besan For Skin in Kannada)

೩. ಪ್ರಮುಖ ೫ ಕಡಲೆಹಿಟ್ಟಿನ ಫೇಸ್ ಪ್ಯಾಕ್ ಗಳು (Top 5 Besan Face Packs in Kannada)

೪. ಮುಖಕ್ಕೆ ಕಡಲೆಹಿಟ್ಟಿನಿಂದ ಆಗಬಹುದಾದ ಅಡ್ಡಪರಿಣಾಮಗಳು (Side Effects Of Gram Flour On Face in Kannada)

೧. ಕಡಲೆಹಿಟ್ಟು ಅಥವಾ ಬೇಸನ್ ಎಂದರೇನು? (What Is Gram Flour Or Besan? in Kannada)

ಬೇಸನ್ ಹಿಟ್ಟನ್ನು ಕಡಲೆ ಹಿಟ್ಟು ಎಂದು ಸಹ ಕರೆಯಲಾಗುತ್ತದೆ. ಇದನ್ನು ಕಡಲೆ ಬೆಳೆಯನ್ನು ಪುಡಿಮಾಡಿ ತಯಾರಿಸುತ್ತಾರೆ. ಭಾರತದಲ್ಲಿ ಉಪಯೋಗಿಸುವ ಪ್ರಧಾನ ಆಹಾರ ಪದಾರ್ಥಗಳಲ್ಲಿ ಇದು ಮೂರನೆಯದು (ಅಕ್ಕಿ ಮತ್ತು ಗೋಧಿಯ ನಂತರ). ಇವುಗಳು ಒರಟು ಮೇಲ್ಮೈಯನ್ನು ಹೊಂದಿದ್ದು, ಶೂನ್ಯ ಕೊಬ್ಬಿನಂಶವನ್ನು ಹೊಂದಿರುತ್ತವೆ. ಕಡಲೆ ಹಿಟ್ಟನ್ನು ನಿಮ್ಮ ಆಹಾರಗಳಲ್ಲಿ ಸೇರಿಸಿದರೆ, ನಿಮ್ಮ ದೇಹ ಮತ್ತು ಹೃದಯದಿಂದ ಕೊಬ್ಬಿನಂಶವನ್ನು ಹೀರಿಕೊಂಡು ಹೃದಯ ಸಂಬಂಧಿತ ಅಪಧಮನಿಕಾಠಿನ್ಯದಂತಹ ರೋಗಗಳನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ. 

ಈ ಹಿಟ್ಟು ಪುಡಿಯ ರೂಪದಲ್ಲಿದ್ದರೂ, ಅದರಲ್ಲಿರುವ ನಾರಿನಂಶ ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ. ಕಳವು ಬಗೆಯ ರಾಜಸ್ಥಾನಿ ರೊಟ್ಟಿ ಅಥವಾ ಚಪಾತಿಗಳನ್ನು ಕಡಲೆಹಿಟ್ಟಿನಿಂದ ಮಾಡುತ್ತಾರೆ. ಅವುಗಳು ಸಹಜವಾಗಿಯೇ ಸ್ವಾದಿಷ್ಟಭರಿತವಾಗಿರುತ್ತವೆ. ಕಡಲೆಹಿಟ್ಟು ಎಣ್ಣೆ ಹೀರಿಕೊಳ್ಳುವ ಗುಣವನ್ನು ಹೊಂಡಿಯುವುದರಿಂದ, ಎಲ್ಲ ಬಗೆಯ ಚರ್ಮಗಳಿಗೆ ಲಾಭದಾಯಕವಾಗಿದೆ. 

[Back To Top]

೨. ನಿಮ್ಮ ಚರ್ಮಕ್ಕೆ ಕಡಲೆಹಿಟ್ಟಿನ ೧೫ ಅದ್ಭುತ ಲಾಭಗಳು (15 Amazing Benefits Of Besan For Skin in Kannada):

ನೀವು ಸೌಂದರ್ಯ ಹೆಚ್ಚಿಸುವ ಸೌಂದರ್ಯ ಗುಟ್ಟುಗಳನ್ನು ತಿಳಿದುಕೊಳ್ಳಲು ಕಾತರರಾಗಿರುವುದು ಸಹಜ. ನಾವು ಇಲ್ಲಿ ನಿಮ್ಮ ಮುಖಕ್ಕೆ ಮತ್ತು ಇತರ ಚರ್ಮದ ಭಾಗಗಳಿಗೆ ಕಡಲೆಹಿಟ್ಟಿನ ೧೫ ಶಕ್ತಿಶಾಲಿ ಪ್ರಯೋಜನಗಳನ್ನು ನೀಡಿದ್ದೇವೆ. ಕಾಲಹರಣ ಮಾಡದೆ ಅವುಗಳ ಬಗ್ಗೆ ತಿಳಿದುಕೊಳ್ಳೋಣ.

೧. ಡಿ-ಟಾನ್ ಮಾಡುತ್ತದೆ: ಕಡಲೆಹಿಟ್ಟು ಅತ್ಯುತ್ತಮ ಡಿ-ಟಾನಿಂಗ್ ಏಜೆಂಟ್ ಆಗಿ ಕಾರ್ಯನಿರವಹಿಸುತ್ತದೆ. ಅದರಲ್ಲಿರುವ ಗುಣ ಸೂರ್ಯನ ಕಿರಣಗಳಿಂದ ಕಂಡಾಗಿರುವ ನಿಮ್ಮ ಚರ್ಮದ ಸತ್ತ ಜೀವಕೋಶಗಳನ್ನು ಪದರಾಗಿ ಉದುರಿಸುತ್ತದೆ. ಕಡಲೆಹಿಟ್ಟು ನಿಮ್ಮ ಚರ್ಮದ ರಂಧ್ರಗಳಿಗೆ ಅಂಟಿಕೊಂಡು ಕಂದು ಬಣ್ಣಗೊಂಡಿರುವ ಚರ್ಮವನ್ನು ತಗೆದುಹಾಕುತ್ತದೆ. ಕಡಲೆಹಿಟ್ಟನ್ನು ನಿಯಮಿತವಾಗಿ ಬಳಸುವುದರಿಂದ ಟಾನ್ ತ್ವರಿತವಾಗಿ ತೆಗೆದುಹಾಕಬಹುದು. 

೨. ಪ್ರಬಲ ಡಿಫೋಲಿಯೇಟಿಂಗ್ ಏಜೆಂಟ್: ಕಡಲೆಹಿಟ್ಟಿಗಿಂತ ಉತ್ತಮವಾದ ಯಾವುದೇ ನೈಸರ್ಗಿಕ ಫೇಸ್ ಮಾಕುಗಳಿಲ್ಲ. ನಿಮ್ಮ ಮುಖದ ಸೌಂದರ್ಯವನ್ನು ವರ್ಧಿಸಲು ನೈಸರ್ಗಿಕ ವಿಧಾನಗಳನ್ನು ಪಾಲಿಸಲು ಬಯಸಿದರೆ, ಬೇಸನ್ ಅಥವಾ ಕಡಲೆಹಿಟ್ಟು ಅತ್ಯುತ್ತಮ.  

೩. ಅಧಿಕ ಎಣ್ಣೆಯನ್ನು ಕಿತ್ತೊಗೆಯುತ್ತದೆ: ನಿಮ್ಮ ಚರ್ಮಕ್ಕೆ ಕಡಲೆಹಿಟ್ಟು ಮುಖ್ಯ ಏಕೆಂದರೆ ಅದು ನಿಮ್ಮ ಚರ್ಮದ ಅನಗತ್ಯ ಎಣ್ಣೆಯನ್ನು ತೆಗೆದುಹಾಕುವಲ್ಲಿ ಸಹಾಯ ಮಾಡುತ್ತದೆ. ಅದು ನಿಮ್ಮ ಚರ್ಮದ ಅಧಿಕ ಎಣ್ಣೆಯನ್ನು ಸಂಪೂರ್ಣವಾಗಿ ಹೀರಿಕೊಂಡು, ನಿಮ್ಮ ಚರ್ಮ ಮೃದುವಾಗಿ, ಸುಂದರವಾಗುವಂತೆ ಮಾಡುತ್ತದೆ. ನೀವು ಕಡಲೆಹಿಟ್ಟನ್ನು ನಿಯಮಿತವಾಗಿ ಬಳಸಿದರೆ, ಸ್ಕ್ರಬ್, ಫೇಶಿಯಲ್ ಅಥವಾ ಫೇಸ್ ಪ್ಯಾಕ್ ನ ಅಗತ್ಯತೆ ಬೀಳುವುದಿಲ್ಲ. ಎಣ್ಣೆಯುಕ್ತ ಮುಖವುಳ್ಳವರಿಗೆ ಇದು ಒಂದು ಆಶೀರ್ವಾದ ರೀತಿಯಾಗಿದೆ. 

೪. ಮುಖದ ಮತ್ತು ದೇಹದ ಅನಗತ್ಯ ಕೂದಲನ್ನು ತೆಗೆಯುತ್ತದೆ: ನೀವು ಕಡಲೆಹಿಟ್ಟನ್ನು ನಿಯಮಿತವಾಗಿ ಬಳಸಿದರೆ, ನಿಮ್ಮ ಮುಖದ ಮತ್ತು ನಿಮ್ಮ ದೇಹದ ಮೇಲಿರುವ ಅನಗತ್ಯ ಕೂದಲನ್ನು, ರೇಜರ್ ಅಥವಾ ವ್ಯಾಕ್ಸಿನ್ಗ್ ಇಲ್ಲದೆ ಕಡಿಮೆಗೊಳಿಸಬಹುದು. ಕಡಲೆಹಿಟ್ಟನ್ನು ಹಚ್ಚಿ, ಅದನ್ನು ಒಣಗಿಸಿ ತೊಳೆದುಕೊಂಡರೆ, ನಿಮ್ಮ ಕೂದಲಿನ ಕಿರುಚೀಲಗಳನ್ನು ಕಿತ್ತೊಗೆಯುತ್ತದೆ. ಇದರಿಂದ ನಿಮ್ಮ ಮುಖ ಮತ್ತು ದೇಹ ಅನಗತ್ಯ ಕೂದಲ ಬೆಳವಣಿಗೆಯಿಂದ ಮುಕ್ತಿ ಪಡೆಯುತ್ತದೆ. 

೫. ಮೊಡವೆಗೆ ಕಡಲೆಹಿಟ್ಟು: ನಮಗೀಗಾಗಲೇ ತಿಳಿದಿರುವಂತೆ ಕಡಲೆಹಿಟ್ಟು ಮುಖದ ಎಣ್ಣೆಯನ್ನು ಕಡಿಮೆಗೊಳಿಸುತ್ತದೆ. ಅದರಿಂದ ಸಹಜವಾಗಿ ನಿಮ್ಮ ಚರ್ಮದ ರಂಧ್ರಗಳು ಸ್ವಚ್ಛಗೊಂಡು, ಮೊಡವೆ ಉಂಟು ಮಾಡುವ ಬ್ಯಾಕ್ಟೀರಿಯಾ ಗಳ ಬೆಳವಣಿಗೆಯನ್ನು ತಡೆಯುತ್ತದೆ. ಇದರಿಂದ ಪಪುಲ್ಸ್ ಅಥವಾ ಮೊಡವೆಗಳನ್ನು ತಡೆಗಟ್ಟಬಹುದು. ಕಡಲೆಹಿಟ್ಟಿನ ಉನ್ನತ ಗುಣವೆಂದರೆ ಅದು ಮೊಡವೆಗಳನ್ನು ಬೇರೆ ಜಾಗಗಳಿಗೆ ಹರಡುವುದಿಲ್ಲ. 

೬. ಮೊಡವೆಗಳನ್ನು ಮತ್ತು ಸಿಡುಬು ರೋಗದ ಕಲೆಗಳನ್ನು ತೆಗೆದುಹಾಕುತ್ತದೆ: ಇತ್ತೀಚಿನ ದಿನಗಲ್ಲಿ ನೀವು ಮೊಡವೆ ಅಥವಾ ಸಿಡುಬು ರೋಗದಿಂದ ಬಳಲಿದ್ದಾರೆ, ಕಡಲೆಹಿಟ್ಟು ನಿಮ್ಮ ಚರ್ಮದ ಮೇಲೆ ಜಾದೂ ಮಾಡಬಹುದು. ಇದು ಕಲೆಗಳನ್ನು ಹೊಂದಿರುವ ಚರ್ಮವನ್ನು ಸಾಮಾನ್ಯ ಚರ್ಮದಿಂದ, ಯಾವುದೇ ರಾಸಾಯನಿಕಗಳ ಸಹಾಯವಿಲ್ಲದೆ, ಪದರವಾಗಿ ತೆಗೆದುಹಾಕುತ್ತದೆ. ಒಂದು ತಿಂಗಳ ನಂತರ, ಕಲೆಗಳು ಕಡಿಮೆಯಾಗಿರುವುದನ್ನು ನೀವು ಗಮನಿಸಬಹುದು. 

[Back To Top]

೭. ನೈಸರ್ಗಿಕ ಬಿಳುಪುಕಾರಕ: ಮೊಸರಿನಲ್ಲಿ ಕಲಸಿರುವ ಕಡಲೆಹಿಟ್ಟು ಅತ್ಯುತ್ತಮವಾದ ನೈಸರ್ಗಿಕ ಬಿಳುಪುಕಾರಕ. ಮೊಸರಿನಲ್ಲಿರುವ ಲ್ಯಾಕ್ಟೋಬ್ಯಾಸಿಲ್ಕ್ಸ್ ನಿಮ್ಮ ಮುಖದ ಮೇಲೆ ಉತ್ಕರ್ಷಣ ಪ್ರಕ್ರಿಯೆಯನ್ನು ನಡೆಸಿ, ನಿಮ್ಮ ಮುಖದ ಕೂದಲನ್ನು ಬಿಳುಪುಯಾಗಿಸುತ್ತದೇ. ನೀವು ಯಾವುದಾದರೂ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರೆ, ಫೆಶಿಯಲ್ ಮಾಡಿಕೊಳ್ಳಲು ಸಮಯವಿರದಿದ್ದರೆ, ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಲೇಪಿಸಬಹುದು. 

೮. ನಿಮ್ಮ ಚರ್ಮದ ಮೇಲ್ಮೈಯನ್ನು ಸುಧಾರಿಸಬಹುದು: ಕಡಲೆಹಿಟ್ಟು ನಿಮ್ಮ ಚರ್ಮದ ಅತ್ಯುತ್ತಮ ಸ್ಕ್ರಬ್. ನಿಮ್ಮ ಮುಖದಲ್ಲಿ ಹೆಚ್ಚಿನ ರಂಧ್ರಗಳಿದ್ದರೆ, ಕಡಲೆಹಿಟ್ಟು ಇವುಗಳನ್ನು ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ. ಕಡಲೆಹಿಟ್ಟನ್ನು ಕೆನೆ ಅಥವಾ ಹಾಲಿನೊಂದಿಗೆ ಸೇರಿಸಿಕೊಂಡು ನಿಮ್ಮ ಚರ್ಮದ ಮೇಲೆ ನಿಯಮಿತವಾಗಿ ಪ್ರತಿದಿನ ೫ ನಿಮಿಷ ಲೇಪಿಸಿಕೊಳ್ಳುವುದರಿಂದ ಎಡಿಎ ಪರಿಣಾಮವನ್ನು ಕಾಣಬಹುದು. 

೯. ತ್ವರಿತ ಸೌಂದರ್ಯ: ನಿಮ್ಮ ಚರ್ಮವನ್ನು ಬೆಳ್ಳಗಾಗಿಸಲು ಸಾಮಾನ್ಯವಾಗಿ ಎಲ್ಲಾ ಭಾರತೀಯರ ಮನೆಯಲ್ಲಿ ಕಂಡುಬರುವ ಉಪಾಯ ಕಡಲೆಹಿಟ್ಟು. ಯಾವುದಾದರೂ ಕಾರ್ಯಕ್ರಮಕ್ಕೆ ಹೋಗುವ ಮುನ್ನ ಈ ನೈಸರ್ಗಿಕ ಕಡಲೆಹಿಟ್ಟಿನ ಫೇಸ್ ಪ್ಯಾಕ್ ಅನ್ನು ಸುಲಭವಾಗಿ ಹಚ್ಚಿಕೊಳ್ಳಬಹುದು. ಇದರ ಬದಲಾಗಿ ಕಸ್ತೂರಿ ಮಂಜರ್ ಎನ್ನುವ ನೈಸರ್ಗಿಕ ಹಳದಿಯನ್ನು ಸಹ ಬಳಸಬಹುದು. ಶಾಲೆ ಅಥವಾ ಕಾಲೇಜಿನ ನಂತರ ಸಹ ಕಡಲೆಹಿಟ್ಟನ್ನು ನಿಮ್ಮ ಚರ್ಮದಳ್ಳಿ ಚೈತನ್ಯ ಭರಿಸಲು ಹಚ್ಚಿಕೊಳ್ಳಬಹುದು. 

೧೦. ಕಪ್ಪು ಮತ್ತು ಬೆಳ್ಳಗಿನ ಚುಕ್ಕೆಗಳನ್ನು ಹೋಗಲಾಡಿಸುತ್ತದೆ: ಕಡಲೆಹಿಟ್ಟನ್ನು ಸ್ಕ್ರಬ್ ಆಗಿ ಬಳಸಿದಾಗ, ಅದು ಚರ್ಮದ ರಂಧ್ರವನ್ನು ಹೋಗಲಾಡಿಸುತ್ತದೆ. ಚರ್ಮವನ್ನು ಎಸ್ಫೋಲಿಯೇಟ್ ಮಾಡಿ, ನಿಮ್ಮ ಚರ್ಮವಾದ ರಂಧ್ರಗಳನ್ನು ಅಗಲಿಸಿ, ನಿಮ್ಮ ಚರ್ಮದ ಮೇಲಿರುವ ಕಪ್ಪು ಮತ್ತು ಬೆಳ್ಳಗಿನ ಚುಕ್ಕೆಗಳನ್ನು ತೆಗೆದುಹಾಕುತ್ತದೆ. ಸೆಬಮ್ ತಕ್ಷಣವೇ ಹೊರಬಾರದಿದ್ದರೂ, ನಿಧಾನವಾಗಿ ತೆಗೆದುಹಾಕಲಾಗುತ್ತದೆ. ಅದನ್ನು ತೆಗೆದುಹಾಕಲು, ಹಸಿ ಬಟ್ಟೆಯಿಂದ ನಿಮ್ಮ ಮುಖವನ್ನು ಮೆತ್ತನೆಯ ಹತ್ತಿಯುಂಡೆಯನ್ನು ತಣ್ಣನೆ ಹಾಲು ಅಥವಾ ರೋಸ್ ವಾಟರ್ ನಲ್ಲಿ ಅಡ್ಡಿ ನಿಮ್ಮ ಮುಖವನ್ನು ಒರೆಸಿಕೊಳ್ಳಿ. 

೧೧. ಒರಟು ಜಾಗಗಳಲ್ಲಿ ಚರ್ಮವನ್ನು ಬೆಳ್ಳಗಾಗಿಸುತ್ತದೆ: ನಿಮ್ಮ ಮೊಣಕೈ ಮತ್ತು ನಿಮ್ಮ ಮಂದಿಯ ಸುತ್ತದ ಚರ್ಮದ ಬಗ್ಗೆ ನೀವು ಚಿಂತಿಸುತ್ತಿರಬಹುದು. ಅವುಗಳು ಸುಲಭವಾಗಿ ಕಪ್ಪಾಗುತ್ತವೆ. ಕಡಲೆಹಿಟ್ಟು ಕೇವಲ ಮುಖಕಷ್ಟೆ ಅಲ್ಲದೆ, ನಿಮ್ಮ ದೇಹದ ಹಲವು ಭಾಗಗಳಿಗೂ ಹಚ್ಚಿಕೊಳ್ಳಬಹುದು. ಕಡಲೆಹಿಟ್ಟನ್ನು, ಸೌತೆಕಾಯಿ ರಸ ಅಥವಾ ಟೊಮೇಟೊ ರಸದೊಂದಿಗೆ ಬೆರೆಸಿ, ಕಪ್ಪಗಿರುವ ಚರ್ಮದ ಮೇಲೆ ಲೇಪಿಸಿಕೊಳ್ಳಿಸಿ. ಈ ವಿಧಾನವನ್ನು ಒಂದು ವಾರ ಮಾಡಿದರೆ, ನಿಮ್ಮ ಚರ್ಮ ಬೆಳ್ಳಗಾಗುವುದನ್ನು ನೀವೇ ಗಮನಿಸಬಹುದು. 

೧೨. ಸ್ಟ್ರೆಚ್ ಮಾರ್ಕ್ ತಡೆಯುತ್ತದೆ: ನೀವು ತೂಕ ಇಳಿಸಿಕೊಳ್ಳಲು ಡೈಟಿಂಗ್ ಮಾಡಲು ನಿಶ್ಚಯಿಸಿದಾಗ, ಕಡಲೆಹಿಟ್ಟಿನ ಈ ಪ್ರಯೋಜನವನ್ನು ನೀವು ಅನುಭವಿಸಬಹುದು. ಹಾಗಿದ್ದರೆ, ನೀವು ತೂಕ ಇಳಿಸಿಕೊಳ್ಳುವ ನಿರ್ಧಾರ ಮಾಡಿ, ಅದನ್ನು ಕಾರ್ಯಾಚರಣೆಗೆ ತರುವಾಗ, ನಿಮ್ಮ ಚರ್ಮ ತಕ್ಕ ಮಟ್ಟಿಗೆ ಕುಗ್ಗಿ, ವಿಸ್ತಾರವಾಗುವ ಸಾಧ್ಯತೆ ಇರುತ್ತದೆ. ನಿಮ್ಮ ಬಗಳು, ತೊಡೆ ಮತ್ತು ಹೊಟ್ಟೆಯ ಹತ್ತಿರ ಈ ಬದಲಾವಣೆ ಗಮನಾರ್ಹವಾಗಿ ಯೋಚಿಸುತ್ತದೆ. 

 

೧೩. ಗಾಯದ ಕಲೆ, ಸುಟ್ಟುಗಾಯ ಮತ್ತು ಉರಿಯನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ: ನೈಸರ್ಗಿಕ ಏಜೆಂಟ್ ಆಗಿರುವ ಕಡಲೆಹಿಟ್ಟು, ಅದನ್ನು ಲೇಪಿಸಿರುವ ಪ್ರದೇಶವನ್ನು ಒಣಗಿಸಿ, ತಂಪಾಗಿಸುವ ಗುಣವನ್ನು ಹೊಂದಿರುತ್ತದೆ. ಕಡಲೆಹಿಟ್ಟು ಮತ್ತು ಹಳದಿಯನ್ನು ಬೆರೆಸಿ ತಯಾರಿಸಿರುವ ಅಲಂಕಾದ ಮಿಶ್ರಣವನ್ನು ಈ ಪ್ರದೇಶಗಳಿಗೆ ಹಚ್ಚಿದಾಗ, ಗಾಯಗಳು ವೇಗವಾಗಿ ನಿವಾರಣೆಯಾಗುತ್ತದೆ. ಅದು ನಿಮ್ಮ ಚರ್ಮವನ್ನು ಅರೈಸ್, ಮೃದುಗೊಳಿಸಿ, ಯಾವುದೇ ಸೂಕ್ಷಜೀವಿಗಳು ತೊಂದರೆಯುಂಟು ಮಾಡದಂತೆ ಮಾಡುತ್ತದೆ. 

೧೪. ಕೂದಲ ಬೆಳವಣಿಗೆಯನ್ನು ಉತ್ತೇಜಿಸಿ, ತಲೆಹೊಟ್ಟನ್ನು ನಿವಾರಿಸುತ್ತದೆ: ಕಡಲೆಹಿಟ್ಟು ನಿಮ್ಮ ನೆತ್ತಿಗೆ ಸಹ ಉಪಯುಕ್ತ. ಇದು ನಿಮ್ಮ ನೆತ್ತಿಯ ಕೆರಾಟಿನ್-ಬೈಂಡಿಂಗ್ ಅನ್ನು ಉತ್ತೇಜಿಸಿ, ಕೂದಲುದುರುವಿಕೆಯನ್ನು ತಡೆಗಟ್ಟುತ್ತದೆ. ನಿಮ್ಮ ನೆತ್ತಿಯ ಮೇಲಿರುವ ಎಲ್ಲ ಎಣ್ಣೆಯನ್ನು ಹೀರಿಕೊಳ್ಳುತ್ತದೆ. ನಿಯಮಿತವಾಗಿ ಈ ಮಿಶ್ರಣವನ್ನು ೨ ತಿಂಗಳು ಬಳಸಿದ್ರೆ, ನಿಮ್ಮ ತಲೆಹೊಟ್ಟು ಸಮಸ್ಯೆ ಸಹ ನಿವಾರಣೆಯಾಗುತ್ತದೆ. ಆದರೆ ನೀವು ತಯಾರಿಸುವ ಮಿಶ್ರಣ ಅಳಕಾಗಿರಬೇಕು. 

೧೫. ಚರ್ಮಕ್ಕಾಗಿ ಮನೆಯಲ್ಲಿಯೇ ತಯಾರಿಸಿರುವ ಮಿನಿ ಫೇಶಿಯಲ್: ಇದು ನಿಮಗೆ ಗೊತ್ತಿದೆಯೇ? ಕಡಲೆಹಿಟ್ಟಿನ ಪ್ರಯೋಜನವನ್ನು ಅತ್ಯಂತ ಕ್ರಾಂತಿಕಾರಕ ರೂಪದಲ್ಲಿ ನೀವು ಅನುಭವಿಸಬಹುದು. ಮೊಸರು, ಹಳದಿ, ವಿಟಮಿನ್ ಇ ಕ್ಯಾಪ್ಸ್ಯುಲ್ ಮತ್ತು ಸ್ವಲ್ಪ ನೀರನ್ನು ಬೆರೆಸಿ, ಸ್ವಲ್ಪ ಅಳಕಾಗಿರುವ ಹಿಟ್ಟನ್ನು ತಯಾರಿಸಿಕೊಳ್ಳಿ. ನಿಮ್ಮ ಮುಖವನ್ನು ತಣ್ಣನೆಯ ಹಾಲಿನಿಂದ ಹತ್ತಿಯ ಉಂಡೆಯ ಉಪಯೋಗದಿಂದ ತೊಳೆದುಕೊಳ್ಳಿ. ಅದನ್ನು ನಿಮ್ಮ ಸಂಪೂರ್ಣ ಮುಖಕ್ಕೆ ಲೇಪಿಸಿರಿ. ನಂತರ ಸ್ವಲ್ಪ ರೋಸ್ ವಾಟರ್ ಅನ್ನು ನಿಮ್ಮ ಮುಖಕ್ಕೆ ಸಿಂಪಡಿಯಿಕೊಂಡು, ಮಸಾಜ್ ಮಾಡಿಕೊಳ್ಳಿ. ಬೆಚ್ಚನೆಯ ನೀರಿನಿನ ನಿಮ್ಮ ಮುಖವನ್ನು ತೊಳೆದುಕೊಳ್ಳಿ. ಯಾವುದೇ ಕ್ರೀಮ್, ಸೋಪ್ ಅಥವಾ ಫೇಸ್ ವಾಶ್ ಅನ್ನು ಬಳಸಬೇಡಿ. 

[Back To Top]

೩. ಪ್ರಮುಖ ೫ ಕಡಲೆಹಿಟ್ಟಿನ ಫೇಸ್ ಪ್ಯಾಕ್ ಗಳು (Top 5 Besan Face Packs in Kannada):

 

ನೀವು ಮನೆಯಲ್ಲಿಯೇ ತಯಾರಿಸಬಹುದಾದ ಫೇಸ್ ಪ್ಯಾಕ್ ಮಾಡಲು ನಾವು ಸಹಾಯ ಮಾಡುತ್ತೇವೆ. ಕೆಲವು ಅದ್ಭುತ ಫೇಸ್ ಪ್ಯಾಕ್ ಗಳು ಇಲ್ಲಿವೆ.

‣ ಮೊಡವೆಗಳನ್ನು ಹೋಗಲಾಡಿಸಲು ಕಡಲೆಹಿಟ್ಟಿನ ಫೇಸ್ ಪ್ಯಾಕ್: ಒಂದು ಚಮಚ ಕಡಲೆಹಿಟ್ಟನ್ನು ಅದರಷ್ಟೇ ಬೇವಿನ ಎಳೆಗಳ ಕಣಕ ಮತ್ತು ತುಳಸಿ ಎಳೆಯ ಕಣಕದಲ್ಲಿ ಬೆರೆಸಿ. ಈ ಮಿಶ್ರಣಕ್ಕೆ ಒಂದು ಚಮಚ ನಿಂಬೆ ರಸ ಸೇರಿಸಿ, ನಿಮ್ಮ ಮುಖದ ಮೇಲೆ ಲೇಪಿಸಿರಿ. ನಂತರ ನಿಮ್ಮ ಮುಖವನ್ನು ನಿಧಾನವಾಗಿ ತೊಳೆದುಕೊಳ್ಳಿ. ಇದು ನಿಮ್ಮ ಮುಖದ ಎಣ್ಣೆಯನ್ನು ತೆಗೆದುಹಾಕಿ, ಮೊಡವೆಗಳನ್ನು ನಿವಾರಿಸುತ್ತದೆ. 

‣ ಚರ್ಮ ಬೆಳ್ಳಗಾಗಿಸಲು ಕಡಲೆಹಿಟ್ಟಿನ ಫೇಸ್ ಪ್ಯಾಕ್: ಕಡಲೆಹಿಟ್ಟನ್ನು ಹಾಲಿನಲ್ಲಿ ಕಲಸಿ, ನಿಂಬೆರಸವನ್ನು ಸೇರಿಸಿ. ಇದಕ್ಕೆ ಒಂದು ಚುಟುಕು ಅರಿಶಿಣವನ್ನು ಸಹ ಸೇರಿಸಬಹುದು. ಇದನ್ನು ನಿಮ್ಮ ಮುಖದ ಮೇಲೆ ಲೇಪಿಸಿರಿ. ಅರ್ಧ ಗಂಟೆಯ ನಂತರ, ನಿಮ್ಮ ಮುಖವನ್ನು ಸ್ಕ್ರಬ್ ಮಾಡಿ, ನೀರಿನಿಂದ ತೊಳೆದುಕೊಳ್ಳಿ. 

‣ ಉಲ್ಲಾಸಭರಿತ ಚರ್ಮಕ್ಕಾಗಿ, ಕಡಲೆಹಿಟ್ಟಿನ ಫೇಸ್ ಪ್ಯಾಕ್: ಕಡಲೆಹಿಟ್ಟನ್ನು ರೋಸ್ ವಾಟರ್ ಮತ್ತು ಅರ್ಧ ಚಮಚ ಗಂಧದ ಪುಡಿಯಲ್ಲಿ ಕಲಸಿಡಿ. ನಿಮ್ಮ ಮುಖದ ಮೇಲೆ ತಳ್ಳನೆಯ ಪದರವಾಗಿ ಲೇಪಿಸಿಕೊಳ್ಳಿ. ನಂತರ ಒಂದು ಹತ್ತಿಯ ಉಂಡೆ ಅಥವಾ ಹಸಿ ಬಟ್ಟೆಯಿಂದ ನಿಮ್ಮ ಮುಖವನ್ನು ಒರೆಸಿಕೊಳ್ಳಿ. ಇದು ನಿಮ್ಮ ಮುಖವನ್ನು ತಣ್ಣಗಾಗಿಸುತ್ತದೆ. 

‣ ಶಕ್ತಿಯುತ ಚರ್ಮಕ್ಕಾಗಿ ಕಡಲೆಹಿಟ್ಟಿನ ಫೇಸ್ ಪ್ಯಾಕ್: ಕಡಲೆಹಿಟ್ಟನ್ನು ರೋಜ್ ವಾಟರ್ ಮತ್ತು ಅರ್ಧ ಚಮಚ ಕಾಫಿ ಪುಡಿಯೊಂದಿಗೆ ಬೆರೆಸಿ. ಇದನ್ನು ನಿಮ್ಮ ಮುಖದ ಮೇಲೆ ತಳ್ಳನೆಯ ಪದರವಾಗಿ ಲೇಪಿಸಿ. ನಂತರ ಸ್ಕ್ರಬ್ ಮಾಡುವುದರೊಂದಿಗೆ ಅದನ್ನು ತೊಳೆದುಕೊಳ್ಳಿ. ಇದು ನಿಮ್ಮ ಚರ್ಮದ ರಂಧ್ರಗಳನ್ನು ತೆರೆಯುವಂತೆ ಮಾಡಿ, ನಿಮ್ಮ ಚಾರಂದಲ್ಲಾಗಿರುವ ಮಾಲಿನ್ಯವನ್ನು ನಿವಾರಿಸುತ್ತದೆ. 

‣ ಚರ್ಮವನ್ನು ಮೃದುಗೊಳಿಸಲು ಕಡಲೆಹಿಟ್ಟಿನ ಫೇಸ್ ಪ್ಯಾಕ್: ಕಡಲೆಹಿಟ್ಟನ್ನು ಪುಡಿಯಾದ ಓಟ್ಸ್, ಸ್ವಲ್ಪ ಅಕ್ಕಿ ಹಿಟ್ಟು, ಜೇನುತುಪ್ಪ, ನಿಂಬೆ ರಸ ಬೆರೆಸಿಡಿ. ಇದನ್ನು ನಿಮ್ಮ ಮುಖಕ್ಕೆ ಲೇಪಿಸಿ, ೧೦ ನಿಮಿಷಗಳ ಕಾಲ ಮಸಾಜ್ ಮಾಡಿ. ನಂತರ ಬೆಚ್ಚನೆಯ ನೀರಿನಿನ ಮತ್ತು ರೋಸ್ ವಾಟರ್ ನಿಂದ ತೊಳೆದುಕೊಳ್ಳಿ. ನಿಮ್ಮ ಚರ್ಮ ಮೃದುವಾಗುತ್ತದೆ. 

[Back To Top]

೪. ಮುಖಕ್ಕೆ ಕಡಲೆಹಿಟ್ಟಿನಿಂದ ಆಗಬಹುದಾದ ಅಡ್ಡಪರಿಣಾಮಗಳು (Side Effects Of Gram Flour On Face in Kannada):

ಇನ್ನಿತರ ಆಹಾರ ಪದಾರ್ಥಗಳಂತೆ ಕಡಲೆಹಿಟ್ಟಿನಲ್ಲಿ ಸಹ ಕಲಬೆರಕೆಯುಂಟಾಗಬಹುದು. ಅದರಿಂದ ನಿಮ್ಮ ಚರ್ಮಕ್ಕೆ ಉಂಟಾಗಬಹುದಾದ ಅಡ್ಡಪರಿಣಾಮಗಳ ಬಗ್ಗೆ ನಾವು ಈ ಭಾಗದಲ್ಲಿ ತಿಳಿಸುತ್ತಿದ್ದೇವೆ. ಅದರೊಂದಿಗೆ ನೀವು ಏನು ಮುನ್ನೆಚ್ಚರಿಕೆಗಳನ್ನು ವಹಿಸಬೇಕು ಎನ್ನುವುದನ್ನು ತಿಳಿದುಕೊಳ್ಳಿ.  

‣ ಕಡಲೆಹಿಟ್ಟನ್ನು ಅಕ್ಕಿ ಹಿಟ್ಟಿನೊಂದಿಗೆ ಸೇರಿಸಿದರೆ ಅದು ನಿಮ್ಮ ಮುಖಕ್ಕೆ ಒರಟಾಗಬಹುದು. ಹಲವರಿಗೆ ಈ ಒರಟುತನ ಸರಿಬರುವುದಿಲ್ಲ. ಹಾಗಾಗಿ ಇದರಿಂದ ಚರ್ಮ ಕೆಂಪಾಗಬಹುದು. 

‣ ಪದಾರ್ತಿಗಳನ್ನು ಬೆರೆಸುವಾಗ, ಅಲ್ಲೆರ್ಜಿ ಉಂಟುಮಾಡಬಹುದಾದ ಪದಾರ್ತಿಗಳ ಬಗ್ಗೆ ಗಮನವಿರಲಿ. ಕೆಲವು ಪದಾರ್ಥಗಳನ್ನು ಒಟ್ಟಿಗೆ ಬೆರೆಸಿದಾಗ ಅದು ಹಾನಿಕಾರಕವಾಗಬಹುದು. ಉದಾಹರೆಣೆಗೆ: ನಿಂಬೆ ರಸವನ್ನು ಟೊಮೇಟೊ ರಸದೊಂದಿಗೆ ಸೇರಿಸಬೇಡಿ. ಅದರ ಆಮ್ಲತೆ ಹೆಚ್ಚಾಗಿ ನಿಮ್ಮ ಮುಖದ ಮೇಲೆ ಬೆಳ್ಳಗಿನ ಗುರುತುಗಳನ್ನುಂಟುಮಾಡಬಹುದು. 

‣ ಕೆಲವು ಬಾರಿ ಕಡಲೆಹಿಟ್ಟನ್ನು ಗೋಧಿ ಹಿಟ್ಟಿನೊಂದಿಗೆ  ಬೆರೆಸಲಾಗುತ್ತದೆ. ಇದರಿಂದ ಜೆಲ್ಲಿಯಂತಹ ಸಮರಸ್ಯತೆ ಬರಬಹುದು. ನಿಮ್ಮ ಮುಖದ ಮೇಲೆ ಲೇಪಿಸಿದ ನಂತರ, ಅದು ಒಣಗಿ ಅದನ್ನು ತೆಗೆಯಲು ಕಷ್ಟವಾಗಬಹುದು. ನಿಮ್ಮ ಚರ್ಮಕ್ಕೆ ಅಂಟಿಕೊಂಡಿರುವ ಗೋಧಿ ಹಿಟ್ಟನ್ನು ತೆಗೆಯುವಾಗ, ನಿಮ್ಮ ಮುಖದ ಮತ್ತು ದೇಹದ ಕೂದಲನ್ನು ಕಿತ್ತಬಹುದು. 

‣ ಹುಳವಾಗಿರುವ ಕಡಲೆಹಿಟ್ಟನ್ನು ಬಳಸಬೇಡಿ. ಅವುಗಳ ಮಲ ಹಿಟ್ಟಿನಲ್ಲಿದ್ದು, ನಿಮ್ಮ ಚರ್ಮಕ್ಕೆ ತೊಂದರೆಯುಂಟು ಮಾಡಬಹುದು. ಕಡಲೆಹಿಟ್ಟು ವಿಚಿತ್ರ ವಾಸನೆ ಬರುತ್ತಿದ್ದರೂ ಅದನ್ನು ಬಳಸದೆ ಇರುವುದು ಉತ್ತಮ. 

ನಿಮ್ಮ ಚರ್ಮಕ್ಕೆ ಕಡಲೆಹಿಟ್ಟಿನ ಈ ಪ್ರಯೋಜನಗಳನ್ನು ತಿಳಿದ ನಂತರ ಸಹಜವಾಗಿಯೇ ನೀವು ಈ ನೈಸರ್ಗಿಕ ಪದಾರ್ಥದ ಶಕ್ತಿಯನ್ನು ನಂಬುತ್ತೀರಿ. ಈ ಒಂದೇ ನೈಸರ್ಗಿಕ ಪದಾರ್ಥ ನಿಮ್ಮ ಚರ್ಮಕ್ಕೆ ಇಷ್ಟೊಂದು ಲಾಭಗಳನ್ನು ಕೊಡುವುದಿದ್ದರೆ, ಎಲ್ಲ ನೈಸರ್ಗಿಕ ಪದಾರ್ಥಗಳನ್ನು ಬಳಸಿದರೆ, ನಿಮ್ಮ ಆರೋಗ್ಯಕ್ಕೆ ಎಷ್ಟೊಂದು ಲಾಭಗಲುಂಟಾಗಬಹುದು. 

ನಿಸರ್ಗ ನಮ್ಮ ಸುತ್ತವಿರುವುದಕ್ಕೆ ನಾವು ಹೆಮ್ಮೆ ಪಡಬೇಕು. ನಾವು ಮಾಡಬೇಕಾಗಿರುವುದಿಷ್ಟೇ - ಈ ಸಂಪನ್ಮೂಲಗಳನ್ನು ಸಮರ್ಥನೀಯವಾಗಿ ನಿರ್ವಹಿಸಬೇಕು. ಮತ್ತು ಅದರ ಬಗ್ಗೆ ಜಾಗರೂಕತೆ ಉಂಟು ಮಾಡಬೇಕು. ನಿಮ್ಮ ಚರ್ಮಕ್ಕಾಗಿ ಭಾಷೆ ತೆಗೆದುಕೊಳ್ಳಿ - ಇಂದಿನಿಂದ ನಿಮ್ಮ ಚರ್ಮವನ್ನು ಅನಾರೋಗ್ಯಕರ ರಾಸಾಯನಿಕಗಳಿಗೆ ಪ್ರದರ್ಶಿಸುವುದಿಲ್ಲ ಎಂದು. ಇದು ನಿಮ್ಮ ಚರ್ಮಕ್ಕೆ ಯಾವ ರೀತಿಯಲ್ಲಿ ಉಪಯೋಗವಾಯಿತು ಎನ್ನುವುದನ್ನು ನಮಗೆ ತಿಳಿಸಿ. 

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon