Link copied!
Sign in / Sign up
2
Shares

ಎದೆಹಾಲು ಕುಡಿಯುವಾಗ ಮಗುವು ನಿಮ್ಮ ತೊಟ್ಟುಗಳನ್ನು ಕಚ್ಚುವುದನ್ನು ಬಿಡಿಸಲು ಮಾರ್ಗಗಳು

ಮಗುವಿಗೆ ಎದೆಹಾಲುಣಿಸುವ ಅನುಭವವೇ ಅದ್ಭುತ. ಇದು ನಿಮ್ಮ ಮಗು ಮತ್ತು ನಿಮ್ಮ ನಡುವಿನ ಬಾಂಧವ್ಯ ಗಟ್ಟಿ ಮಾಡಿ, ನೀವಿಬ್ಬರು ಒಬ್ಬರನ್ನೊಬ್ಬರು ಬಿಟ್ಟಿರದಂತೆ ಮಾಡುತ್ತದೆ. ಒಂದು ಹೆಣ್ಣಿಗೆ ತನ್ನ ಮಗುವಿಗೆ ಎದೆಹಾಲುಣಿಸಿ ಅದರ ಪೋಷಣೆ ಮಾಡುವ ಅನುಭವವೇ ಸುಂದರ.

ಆದರೆ ಇದು ಹೇಳಿದಷ್ಟು ಸುಲಭವಲ್ಲ. ಎದೆಹಾಲುಣಿಸುವುದು ಸ್ವಲ್ಪ ನೋವನ್ನು ಕೂಡ ಒಳಗೊಂಡಿರುತ್ತದೆ. ಅದು ಮಗುವು ಮೊಲೆತೊಟ್ಟುಗಳನ್ನು ಕಚ್ಚಲು ಶುರು ಮಾಡಿದಾಗ. ಇದು ಒಂದು ಮಟ್ಟಿಗೆ ಜಾಸ್ತಿನೇ ನೋವು ಉಂಟು ಮಾಡುವಂತಾಗಿದ್ದು, ನೀವು ಈ ನೋವನ್ನು ಭರಿಸಲು ಸಿದ್ಧರಿರಬೇಕು.

ನೀವು ಎದೆಹಾಲುಣಿಸುತ್ತಿರುವ ಭಂಗಿಯು ಸರಿ ಇರದಿದ್ದರೆ ನಿಮ್ಮ ಮಗುವು ಕಚ್ಚಬಹುದು. ನಿಮ್ಮ ಮಗುವು ಸರಿಯಾಗಿ ಕಚ್ಚಿಕೊಳ್ಳಲು ಮತ್ತು ಹಾಲನ್ನು ಹೀರಲು ತನ್ನ ಕೆಳಗಿನ ದವಡೆಯನ್ನು ಉಪಯೋಗಿಸುತ್ತದೆ ಮತ್ತು ಮೇಲಿನ ದವಡೆಯು ತಟಸ್ಥವಾಗಿರುತ್ತದೆ. ಅದೇನಿದ್ದರೂ, ಇನ್ನೂ ಸರಿಯಾದ ಬೆಂಬಲ ಸಿಗಲು ಮಗುವು ತನ್ನ ನಾಲಿಗೆಯನ್ನು ತನ್ನ ಒಳದವಡೆಯ ಮೇಲೆ ಇಟ್ಟುಕೊಂಡಿರುತ್ತದೆ.

 
ನಿಮ್ಮ ಮಗು ಕಚ್ಚದಂತೆ ಮಾಡಲು ನೀವು ಮಾಡಬೇಕಿರುವುದು :

೧. ನಿಮ್ಮ ಮಗು ಕಚ್ಚಿದಾಗ ಥಟ್ಟನೆ ಒಂದೇ ಸರಿಗೆ ಮಗುವನ್ನು ಕೆಳಗೆ ಎಳೆಯಬೇಡಿ. ಹೀಗೆ ಮಾಡಿದರೆ ಮಗುವು ನಿಮ್ಮ ತೊಟ್ಟುಗಳನ್ನು ಇನ್ನೂ ಜೋರಾಗಿ ಕಚ್ಚಿ ಅವುಗಳಿಗೆ ಇನ್ನೂ ಹೆಚ್ಚು ನೋವು ಮಾಡಬಹುದು.

೨. ಒಂದು ವೇಳೆ ನೀವು ಮಗುವು ಕಚ್ಚುತ್ತಿರುವುದನ್ನು ಗುರುತಿಸಿದರೆ, ನಿಮ್ಮ ಸ್ತನ ಮತ್ತು ಮಗುವಿನ ಬಾಯಿಯ ನಡುವೆ ನಿಮ್ಮ ಬೆರಳನ್ನು ತೂರಿಸಿ. ಆಗ ನಿಮ್ಮ ಮಗು ನಿಮ್ಮ ಮೊಲೆಯ ಬದಲು ನಿಮ್ಮ ಬೆರಳನ್ನು ಕಚ್ಚುತ್ತದೆ.

೩. ನಿಮಗೆ ಗೊತ್ತೇ ನಿಮ್ಮ ಮಗುವು ಹಾಲು ಕುಡಿಯುವಾಗ ನಿಮ್ಮ ತೊಟ್ಟುಗಳನ್ನು ಕಚ್ಚಲು ಇಷ್ಟ ಪಡುತ್ತದೆ! ಮಗುವು ಸ್ವಾಭಿವಕವಾಗಿ ಕುತೂಹಲ ಹೊಂದಿದ್ದು, ಅದು ನಿಮ್ಮ ಪ್ರತಿಕ್ರಿಯೆ ಗಮನಿಸಲು ನಿಮ್ಮ ತೊಟ್ಟುಗಳನ್ನು ಉದ್ದೇಶಪೂರ್ವಕವಾಗಿ ಕಚ್ಚಬಹದು. ನಿಮ್ಮ ಮಗುವು ಆಟ ಆಡಲು ಇಚ್ಛಿಸುವ ತುಂಟ ಆಗಿದ್ದರೆ, ಅದು ಪುನಃ ಕಚ್ಚಬಹುದು.

ಹೀಗಾಗಿ, ಮಗುವು ಕಚ್ಚಲು ಶುರು ಮಾಡಿದರೆ ಅವರ ಗಮನ ಬೇರೆಡೆ ಸೆಳೆಯಿರಿ.

೪. ಮಗು ಕಚ್ಚಿದೊಡನೆ ಜೋರಾಗಿ ಕೂಗಬೇಡಿ. ಇದು ಮಗುವನ್ನು ಬೆಚ್ಚಿ ಬೀಳಿಸಬಹುದು. ಅದು ಗಾಬರಿಗೊಂಡು ಮತ್ತೆಂದೂ ನಿಮ್ಮ ಸ್ತನಗಳಿಗೆ ಕಚ್ಚಿಕೊಳದೆ ಇದ್ದು ಬಿಡಬಹುದು. ನೀವು ನಿಮ್ಮ ಮಗುವನ್ನು ಮೆಲ್ಲನೆ, ಸ್ವಲ್ಪ ದೂರ ಇಟ್ಟು ನಿಮ್ಮನ್ನು ಸಂತೈಸಿಕೊಳ್ಳಿ.

೫. ನಿಮ್ಮ ಮಗುವು ನಿಮ್ಮ ಸ್ತನಗಳಿಗೆ ಕಚ್ಚಿಕೊಂಡು ಹಾಲು ಕುಡಿಯಲು ಶುರು ಮಾಡಿದೊಡನೆ, ನಿಮ್ಮ ಕಣ್ಣುಗಳು ಅದರ ಮೇಲೆಯೇ ಇರಲಿ.

೬. ಕಚ್ಚಲು ಎಂದೇ ಅನೇಕ ಆಟಿಕೆಗಳು ಲಭ್ಯವಿವೆ. ಅವುಗಳನ್ನು ನಿಮ್ಮ ಮಗುವಿಗೆ ನೀಡಿದರೆ ಅದಕ್ಕೆ ಕಚ್ಚಲು ಪರ್ಯವಾಗಿ ಏನಾದರು ಸಿಕ್ಕಂತೆ ಆಗುತ್ತದೆ.

೭. ನಿಮ್ಮ ಮಗುವು ಬೆಳೆದಂತೆ, ಅದಕ್ಕೆ ಎದೆಹಾಲು ಕುಡಿಯಲು ಒತ್ತಾಯಿಸಬೇಡಿ. ಎದೆಹಾಲು ಬಿಡಿಸಲು ನೀಡುವ ಆಹಾರಗಳನ್ನು ನೀಡುತ್ತಾ ಅವರಿಗೆ ಅಭ್ಯಾಸ ಬಿಡಿಸಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon