Link copied!
Sign in / Sign up
0
Shares

ಕಾಲು ಮೊದಲು ಆಚೆ ಬಂದು ಜನಿಸುವುದು : ನೀವು ತಿಳಿದುಕೊಳ್ಳಬೇಕಾದುದ್ದು

ಶಿಶುವು ನಿಮ್ಮ ಹೊಟ್ಟೆಯೊಳಗೆ ಇರುವ ಸ್ಥಾನದ ಬಗ್ಗೆ ನೀವು ನಿಜವಾಗಿಯೂ ಚಿಂತಿಸಬೇಕಾ? ಅದು ಹೆರಿಗೆ ಸಮಯದಲ್ಲಿ ಕಠಿಣ ಸಂದರ್ಭವನ್ನು ಉಂಟುಮಾಡುವುದೇ? ನೀವು ತಿಳಿದುಕೊಳ್ಳಬೇಕಾದ ಹೆರಿಗೆ ಸಮಯದಲ್ಲಿ ಕಾಲು ಮೊದಲು ಹೊರಬರುವ ಕೆಲವು ವಿಷಯಗಳು.

ಕಾಲು ಮೊದಲು ಆಚೆ ಬರುವುದು ಎಂದರೇನು?

ಸಾಮಾನ್ಯವಾಗಿ, ತಾಯಿಯ ಗರ್ಭಾಶಯದಲ್ಲಿ ಅದರಲ್ಲೂ ಹೆರಿಗೆ ಸಮಯದಲ್ಲಿ ಮಗುವಿನ ತಲೆ ತಾಯಿಯ ಯೋನಿಯ ಕಡೆಗೆ ಇರುತ್ತದೆ, ಆದರೆ ಕೆಲವು ಸಮಯದಲ್ಲಿ ಮಗುವಿನ ಕಾಲು ತಾಯಿಯ ಯೋನಿಯ ಕಡೆಗೆ ಇರುತ್ತದೆ.

ಸುರಕ್ಷಿತವಾಗಿ ಹೆರಿಗೆಯಾಗಲು ಮತ್ತು ಯಾವಾಗಲು ಮಗುವಿನ ತಲೆಯು ಮೊದಲು ಆಚೆ ಬರುವುದು ಇದು ಸಾಮಾನ್ಯ ಕೂಡ ಹೌದು, ಆದರೆ ಕೆಲವು ಸಮಯಗಳಲ್ಲಿ ಮಗುವು ತಿರುಗದೆ ತನ್ನ ಕಾಲನ್ನು ಮೊದಲು ಆಚೆ ತರುವುದು ಇದನ್ನು ಆಂಗ್ಲ ಭಾಷೆಯಲ್ಲಿ ಬ್ರೀಚ್ ಜನನ ಎನ್ನುವರು. ಸುಮಾರು ೩-೫% ಮಹಿಳೆಯರು ಇದನ್ನು ಎದುರಿಸುತ್ತಾರೆ.

ಕಾಲು ಮೊದಲು ಆಚೆ ಬರಲು ಕಾರಣ

೧.ಅಕಾಲಿಕ ಹೆರಿಗೆ ಸಮಯದಲ್ಲಿ, ಇಂತಹ ಸಾಧ್ಯತೆಗಳು ತುಂಬಾ ಹೆಚ್ಚು. ಏಕೆಂದರೆ, ಗರ್ಭಾವಸ್ಥೆಯ ಆರಂಭಿಕ ದಿನಗಳಲ್ಲಿ, ಮಗುವು ತನ್ನ ತಲೆಯನ್ನು ತಾಯಿಯ ಎದೆ ಬಳಿ ಅಥವಾ ಎದೆ ಕಡೆಗೆ ಇರಿಸಿಕೊಂಡಿರುತ್ತದೆ. ಕಾಲಕ್ರಮೇಣ ೬ನೇ ತಿಂಗಳು ಅಥವಾ ೭ನೇ ತಿಂಗಳು ತುಂಬುತ್ತಿದ್ದಂತೆ ಮಗುವು ತನ್ನ ತಲೆಯನ್ನು ತಾಯಿಯ ಯೋನಿಯ ಕಡೆಗೆ ತಿರುಗಿಸಿಕೊಳ್ಳುತ್ತದೆ.

೨.ಒಂದು ವೇಳೆ ಗರ್ಭದಲ್ಲಿ ಒಂದಕ್ಕಿಂತ ಹೆಚ್ಚು ಮಗುವಿದ್ದರೆ, ಒಂದು ಮಗು ಅಥವಾ ಎಲ್ಲಾ ಶಿಶುಗಳು ಕಾಲನ್ನು ಮೊದಲು ಆಚೆ ತರುವ ಸಾಧ್ಯತೆಗಳು ಹೆಚ್ಚಿವೆ.

೩.ಹೆಚ್ಚು ಅಥವಾ ಕಡಿಮೆ ಪ್ರಮಾಣದ ಆಮ್ನಿಯೋಟಿಕ್ ದ್ರವ ಕೂಡ ಇದಕ್ಕೆ ಕಾರಣ.

೪.ಅಸಹಜತೆ ಆಕಾರದ ಗರ್ಭಕೋಶ ಅಥವಾ ಗರ್ಭದಲ್ಲಿ ನಾರಿನಂತಿರುವ ಗಟ್ಟಿಯಾದ ಆಕಾರ ಬೆಳೆಯುವುದು ಕೂಡ ಇದಕ್ಕೆ ಕಾರಣ.

ಇದು ಅಲ್ಟ್ರಾಸೌಂಡ್ ಸ್ಕ್ಯಾನ್ ಮೂಲಕ ನಿಮಗೆ ತಿಳಿಯುತ್ತದೆ, ಇದನ್ನು ಸಾಮಾನ್ಯವಾಗಿ ಹೆರಿಗೆಯ ಸಮಯ ಬರುವಾಗ ವೈದ್ಯರು ಮಾಡಲು ಸೂಚಿಸುತ್ತಾರೆ.

ಕಾಲು ಆಚೆ ಮಾಡಿ ಬರುವ ವಿಧಗಳು

ಇದರಲ್ಲಿ ಮೂರು ವಿಧಗಳಿವೆ - ಸಂಪೂರ್ಣ, ಅಪೂರ್ಣ ಮತ್ತು ಸರಳ(ಫ್ರ್ಯಾಂಕ್)

೧.ಮಗುವಿನ ಕಾಲು ಬಾಗಿ, ಅಂಡು ಮತ್ತು ಕಾಲಿನ ಪಾದ ಎರಡು ಜನ್ಮ ಕೊಳವೆಯಲ್ಲಿ ಅಥವಾ ಹತ್ತಿರ ಇರುವುದು ಸಂಪೂರ್ಣ ವಿಧವಾಗಿದೆ.

೨.ಮಗುವಿನ ಒಂದು ಕಾಲು ಬಾಗಿ,  ಒಂದು ಕಾಲಿನ ಪಾದ ಮತ್ತು ಅಂಡು ಜನ್ಮ ಕೊಳವೆಯ ಹತ್ತಿರ ಇರುವುದು ಅಪೂರ್ಣ ವಿಧವಾಗಿದೆ.

೩.ಮಗುವಿನ ಕಾಲು ತಲೆಗೆ ಎದುರಾಗಿ ಅಂಡು ಮಾತ್ರ ಜನ್ಮ ಕೊಳವೆಯ ಹತ್ತಿರ ಇರುವುದು ಸರಳ(ಫ್ರ್ಯಾಂಕ್) ವಿಧವಾಗಿದೆ.

ಇದರಿಂದ ಸಾಮಾನ್ಯ ಹೆರಿಗೆಯಾಗುತ್ತದೋ? ಅಥವಾ ಸಿಸೇರಿಯನ್ ಮಾಡಬೇಕಾಗುತ್ತದೋ?

ಖಚಿತವಾಗಿ, ಇದರಿಂದ ನೀವು ಖಂಡಿತವಾಗಿಯೂ ಸಿಸೇರಿಯನ್ ಗೆ ಒಳಗಾಗುತ್ತೀರಾ. ಮಗುವು ಹೊರ ಬರುವಾಗ ನಿಮಗೆ ಹೆಚ್ಚು ನೋವಾಗಬಹುದು ಅದಕ್ಕಿಂತ ಹೆಚ್ಚಾಗಿ ಮಗುವಿನ ಕೈ ಗಳು ಸಿಲುಕಿ ಕೊಳ್ಳಬಹುದು ಅಥವಾ ಆಮ್ಲಜನಕ ಪೂರೈಸುತ್ತಿರುವ ಹೊಕ್ಕುಳ ಬಳ್ಳಿಗೆ ತೊಂದರೆಯಾಗಬಹುದು. ಸಾಮಾನ್ಯವಾಗಿ ಈ ರೀತಿ ಜನಿಸುವ ಮಕ್ಕಳು ನಂತರ ಅಥವಾ ಮೊದಲು ಅರೋಗ್ಯ ಸಮಸ್ಯೆಯನ್ನು ಎದುರಿಸಬಹುದು. ಆದರೆ ಆರೋಗ್ಯವಾಗಿರುವ ಮಗುವು ಸಾಮಾನ್ಯ ಹೆರಿಗೆಯ ಮೂಲಕವೇ ಹೊರಬರುವ ಅವಕಾಶ ಇದೆ ಆದರೆ ಇದು ತುಂಬಾ ಅಪರೂಪ, ವೈದ್ಯರು ತಾಯಿ ಮತ್ತು ಮಗುವಿನ ಆರೋಗ್ಯದ ದೃಷ್ಟಿಯಿಂದ ಸಿಸೇರಿಯನ್ ಮಾಡಲು ಸೂಚಿಸಿದರು, ಆ ಸಂದರ್ಭಕ್ಕೆ ಅನುಗುಣವಾಗಿ ಅವರು ಯೋಜನೆಯನ್ನು ಮಾಡಿಕೊಳ್ಳುತ್ತಾರೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon