Link copied!
Sign in / Sign up
16
Shares

ಕಾಳು ಮೆಣಸಿನ ೧೦ ಅತ್ಯದ್ಭುತ ಆರೋಗ್ಯದ ಪ್ರಯೋಜನಗಳು

ಕರಿ ಮೆಣಸು ಅದ್ಭುತವಾದ ಸ್ವಾದ ಹಾಗು ರುಚಿವರ್ಧಕ ಗುಣವನ್ನು ಹೊಂದಿದ್ದು, ಯಾವುದೇ ಆಹಾರ ಪದಾರ್ಥಗಳೊಂದಿಗೆ ಇದನ್ನು ಬೆರೆಸಿದಲ್ಲಿ ಆಹಾರದ ರುಚಿಯು ವೃದ್ದಿಸುತ್ತದೆ. ಮಸಾಲೆಗಳ ರಾಜ ಎಂದೇ ನಮೆಲ್ಲರಿಗು ತಿಳಿದಿರುವ ಈ ಕಾಳುಮೆಣಸನ್ನು ಪುರಾತನಕಾಲದಲ್ಲಿ ನಾಣ್ಯಪದತ್ತಿಯ ರೂಪದಲ್ಲಿ ಚಲಾವಣೆ ಮಾಡಲಾಗುತ್ತಿತ್ತು ಹಾಗೂ ಕಾಣಿಕೆಯ ರೂಪದಲ್ಲಿ ದೇವರಿಗೆ ಅರ್ಪಿಸುತ್ತಿದರು. ಇವೆಲ್ಲದಕ್ಕಿಂತ ಮಿಗಿಲಾಗಿ ಇದರ ಆರೋಗ್ಯ ವೃದ್ಧಿಕರ ಗುಣಗಳು  ಲೆಕ್ಖವಿಲ್ಲದಷ್ಟು ಹಾಗೂ ಊಹಿಸಲು ಅಸಾದ್ಯವಾಗದಷ್ಟಿದೆ. ಆದ್ಧರಿಂದ, ಮುಂದಿನ ಸಲ ಕಾಳು ಮೆಣಸನ್ನು ಅಡಿಗೆ ಕೋಣೆಯ ಕಪಾಟಿನ ಹಿಂದೆ ರವಾನೆ ಮಾಡುವ ಮುಂಚೆ, ನಾವೆಲ್ಲರೂ ಎರಡು ಬಾರಿ ಯೋಚಿಸಬೇಕಾಗಿದೆ.

೧.ಕಾಳು ಮೆಣಸು ಹಾಗು ಅದರ ಪೋಷಕಾಂಶಗಳು:

ಕಾಳು ಮೆಣಸು ಸಸ್ಯದ, ಫಲ/ಹಣ್ಣು ಈ ಕಾಳು ಮೆಣಸು. ನಯವಾದ, ಕಾಡುಬೆಳೆದ ಈ ಲತೆಯು ಉಷ್ಣ ಹಾಗು ಆರ್ದ್ರ ವಲಯದಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಇದನ್ನು ಮಸಾಲೆಯಾಗಿಯೂ ಹಾಗು ಔಷಧಿಯಾಗಿಯೂ   ಉಪಯೋಗಿಸುತ್ತಾರೆ. "ಪೈಪೆರಿನ್" ಎಂಬ ಕಾರ್ಯನಿರತ ಅಂಶವನ್ನು ಕಾಳುಮೆಣಸು ಹೊಂದಿದ್ದು, ಈ ಅಂಶವೇ ಇದರ ವೈಶಿಷ್ಟ್ಯ ರುಚಿಗೆ ಕಾರಣವಾಗಿದೆ. ಕಾಳು ಮೆಣಸು ತನ್ನೊಳಗೆ ದಟ್ಟವಾದ ಖನಿಜಗಳನ್ನುಹೊಂದಿದೆ.  ಅವುಗಳೆಂದರೆ ಕಬ್ಬಿಣಾಂಶ, ಪೊಟ್ಯಾಸಿಯಂ, ಕ್ಯಾಲ್ಸಿಯಂ, ಮಂಗನೆಸೆ, ಸೋಪ್ಪೆರ್, ಮೆಗ್ನೀಷಿಯಂ, ಫೋಸ್ಫೋರೌಸ್,ಜಿಂಕ್ ಹಾಗು ವಿಟಮಿನ್ಸ್ಗಳಾದ ರಿಬೋಫ್ಲಾವಿನ್, ವಿಟಮಿನ್ ಸಿ, ವಿಟಮಿನ್ ಕೆ, ಬಿ ೬ ಇತ್ಯಾದಿ. ಇದರಲ್ಲಿ ಅತಿ ಹೆಚ್ಚಿನ ಪ್ರಮಾಣದ  ನಾರಿನಾಂಶ ಹಾಗು ಮಿತ ಪ್ರಮಾಣದ ಕಾರ್ಬೋಹೈಡ್ರೇಟ್ ಮತ್ತು ಪ್ರೋಟೀನ್ಗಳಿರುತ್ತದೆ..

ಕಾಳು ಮೆಣಸಿನ ಆರೋಗ್ಯ ಲಾಭಗಳು:

೧. ಪೌಷ್ಟಿಕ ಆಹಾರದ ಹೀರಿಕೊಳ್ಳುವಿಕೆಯನ್ನು ವೃದ್ಧಿಸುತ್ತದೆ:

"ಪೈಪೆರಿನ್" ನಮ್ಮ ಕರುಳಿನ ಒಳಪದರದಲ್ಲಿರುವ ಅಮೈನೊ ಅಮ್ಲಗಳನ್ನು ಪ್ರಚೋದಿಸುತ್ತದೆ ಹಾಗೂ ಪೋಷಕಾಂಶಗಳ ಚಯಾಪಚಯಗಳಿಗೆ ಸಹಕಾರಿಯಾಗುವ ಕಿಣ್ವಗಳನ್ನು ಪ್ರತಿಬಂದಿಸುತ್ತದೆ. ಇವುಗಳು  ಜೀವಕೋಶದಿಂದ ಅನಗತ್ಯವಾಗಿ ತೆಗೆದುಹಾಕಲಾಗುವ ವಸ್ತುಗಳನ್ನುತಡೆಗಟ್ಟುತ್ತದೆ ಹಾಗೂ ಕರುಳಿನ ಚಟುವಟಿಕೆಯನ್ನು ನಿಯಂತ್ರಣದಲ್ಲಿಡುತ್ತದೆ. ಇವುಗಳು ನಿಷ್ಕ್ರಿಯವಾದ ಪದಾರ್ಥಗಳಿಗೆ ಸುಲಭವಾಗಿ ಪ್ರವೇಶಿಸಲು ಅಣುವು ಮಾಡಿಕೊಡುತ್ತದೆ ಹಾಗೂ ಶರೀರವು ಇದನ್ನು ಸರಳವಾದ ರೀತಿಯಲ್ಲಿ ಪಡೆಯಬಹುದಾಗಿದೆ. ಹೀಗಾಗಿ ಇದು ಪೋಷಕಾಂಶಗಳಾದ ವಿಟಮಿನ್ ಎ, ಸಿ,ಸೆಲೆನಿಯಮ್, ಬೀಟಾ ಕೆರೋಟಿನಗಳ ಜೈವಿಕ ಲಭ್ಯತೆಯನ್ನು ವೃದ್ಧಿಸುತ್ತದೆ.

೨. ಹಸಿವನ್ನು ಉತ್ತೇಜನಗೊಳಿಸುತ್ತದೆ ಹಾಗೂ ಜೀರ್ಣಕಾರ್ಯವನ್ನು ವೃದ್ಧಿಸುತ್ತದೆ:

ಘ್ರಾಣ ಸಂಬಂಧಿ ಸಂವೇದನೆಯಿಂದ ಕಾಳು ಮೆಣಸು ಹಸಿವನ್ನು ಪ್ರಚೋದಿಸುತ್ತದೆ. ಇದು ಅಲ್ಪ/ಸಾಧರಣ ಹಸಿವಿನ ಶಕ್ತಿಯುಳ್ಳ ವ್ಯಕ್ತಿಗಳಿಗೆ ರಾಮಬಾಣವಾಗಿದೆ. ಕಾಳು ಮೆಣಸು ನಾಲಿಗೆಯ ಮೇಲಿರುವ ರುಚಿ ಮೊಗ್ಗುಗಳ್ಳನ್ನು  ಉದ್ರೇಕಿಸುವ ಮೂಲಕ ಹೊಟ್ಟಯೋಳಗಿರುವ ಹೈಡ್ರೋಕ್ಲೋರಿಕ್ ಆಮ್ಲವನ್ನು ವೃದ್ಧಿಸುತ್ತದೆ. ಈ ಆಮ್ಲವು ಉತ್ತಮ ಜೀರ್ಣ ಕ್ರಿಯೆಗೆ ಸಹಕರಿಸುತ್ತದೆ  ಹಾಗೂ ಆರೋಗ್ಯ ಸಮಸ್ಯೆಗಳಾದಾ, ಹೊಟ್ಟೆ ಉಬ್ಬರಿಸುವಿಕೆ, ಮಲಬದ್ದತೆ, ಉದರಶೂಲ, ಅಜೀರ್ಣದಂತ ಸಮಸ್ಯೆಯನ್ನು ದೂರವಿಡುತ್ತದೆ.

೩. ತೂಕ ಇಳಿಕೆಯನ್ನು ಸುಗಮಗೊಳಿಸುತ್ತದೆ:

ಕಾಳು ಮೆಣಸಿನ ಬೀಜದ  ಹೊರಪದರವು  ಸಸ್ಯ ಪೋಷಕಾಂಶಗಳಿಂದ ಕೂಡಿದ್ದು, ನಮ್ಮ ದೇಹದಲ್ಲಿರುವ ಅಧಿಕ ಕೊಬ್ಬಿನ ಜೀವಕೋಶಗಳನ್ನುಒಡೆದು ಹಾಕುವಲ್ಲಿ ಸಹಕರಿಸುತ್ತದೆ. ಹೀಗೆ ಒಡೆದು ಹೋದ ಕೊಬ್ಬಿನ ಜೀವ ಕೋಶಗಳನ್ನು ನಮ್ಮ ಶರೀರವು ಸುಲಭವಾಗಿ ಪ್ರಕ್ರಿಯೇಗೊಳಿಸುತ್ತದೆ. ಇದರಿಂದ ತೂಕ ಇಳಿಸಲು ಸುಲಭವಾಗುತ್ತದೆ. ಇದಲ್ಲದೆ ಕಾಳು ಮೆಣಸು, ಮೂತ್ರವರ್ಧಕ ಹಾಗೂ ಸ್ವೆದಕಾರಿ ಮೂಲಿಕೆಯಾಗಿದೆ. ಇದೆಲ್ಲದ್ದರ ಜೊತೆಗೆ, ದೇಹದಲ್ಲಿರುವ ಜೀವಣುವನ್ನು  ಸ್ವಚ್ಛಗೊಳಿಸಲು ಮತ್ತು ಅಧಿಕ ನೀರಿನಂಶವನ್ನು ತೆಗೆದುಹಾಕಲು ಕೈಜೋಡಿಸುತ್ತದೆ.

೪. ಕಟ್ಟಿದ ಮೂಗಿನ ದಟ್ಟಣೆಯನ್ನು ತೆರವುಗೊಳಿಸುತ್ತದೆ:

ಕಾಳು ಮೆಣಸನ್ನು, ಕಟ್ಟಿದ ಮೂಗು, ಸೈನಸೈಟಿಸ್ ನಂತಹ ಹಲವಾರು ಸಮಸ್ಯೆಗಳಲ್ಲಿ ಬಳಸುತ್ತಾರೆ. ಇದಕ್ಕೆ ಕಫಹಾರಿ ಗುಣವಿದ್ದು ಶ್ವಾಸನಾಳದಲ್ಲಿರುವ ಲೋಳೆ ಹಾಗು ಶ್ಲೇಷ್ಮವನ್ನು ಹೊರಹಾಕುವಲ್ಲಿ ಇದರ ಪಾತ್ರ ಅಗಾಧ. ಕಾಳು ಮೆಣಸಿನ ನೈಸರ್ಗಿಕವಾದ ಉತ್ತೇಜನ ಗುಣದಿಂದ ಶ್ವಾಸಕೊಶದಲ್ಲಿರುವ ಕಫವನ್ನು, ಕೆಮ್ಮು ಹಾಗು ಸೀನಿನ ಮೂಲಕ ಹೊರದೂಡುತ್ತದೆ. 

೫. ಸಂಧಿವಾತದೊಂದಿಗೆ ಹೋರಾಡುತ್ತದೆ:

ಉರಿಯೂತ-ವಿರೋಧಿ ಗುಣ ಹಾಗು ಸಂಧಿವಾತ-ವಿರೋಧಿ ಗುಣಗಳನ್ನು ಹೊಂದಿರುವ ಈ ಕಾಳು ಮೆಣಸನ್ನು, ಸಂಧಿವಾತದ ರೋಗಿಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಇದು ದೇಹದ ರಕ್ತ ಪ್ರಸಾರಣ ಕ್ರಿಯೆಯನ್ನು ಸುಧಾರಿಸಿ, ರಕ್ತ ಪರಿಚಲನವಿಲ್ಲದೆ ಊದಿಕೊಂಡ, ಸಂಧಿಗಳಿಗೆ ಉತ್ತಮ ರೀತಿಯಲ್ಲಿ ರಕ್ತ ಸಂಚಾರವಾಗುವಂತೆ ಮಾಡಿ ರೋಗವನ್ನು ಗುಣಪಡಿಸುತ್ತದೆ. ಒಟ್ಟಿನಲ್ಲಿ ಕಾಳು ಮೆಣಸು, ನೋವಿನ  ಗ್ರಹಿಕೆಯನ್ನು ಹಾಗೂ ಸಂಧಿವಾತದ  ಲಕ್ಷಣಗಳನ್ನು ದೂರ ಮಾಡುತ್ತದೆ.

೬. ಕ್ಯಾನ್ಸರ್ ನೊಂದಿಗೆ ಹೋರಾಡುತ್ತದೆ ಹಾಗಗೂ ಇನ್ನಿತರ  ರೋಗಗಳಿಂದ ದೂರವಿಡುತ್ತದೆ:

ಜೀವಕೋಶಗಳ ಚಯಾಪಚಯಗಳ ಉತ್ಪನ್ನಗಳಾಗಿ ನಿರ್ಮಾಣವಾಗುವ ಉಚಿತ ರೇಡಿಕಲ್ಗಳು ದೇಹದಲ್ಲಿರುವ ಆರೋಗ್ಯಕರ ಜೀವಕೋಶಗಳ ಮೇಲೆ ದಾಳಿಮಾಡಿ, ಡಿಏನ್ ಎಗಳನ್ನೂ, ಪರಿವರ್ತಿಸಿ ಕ್ಯಾನ್ಸರ್ ಜೀವಕೋಶಗಳನ್ನಾಗಿ ಮಾರ್ಪಡಿಸುತ್ತದೆ. ಕಾಳು ಮೆಣಸಿನ ಉತ್ಕರ್ಷಣ ನಿರೋಧಕ ಗುಣದಿಂದ, ಅಪಾಯಕಾರಿ ಸಂಯುಕ್ತಗಳ್ಳನ್ನು ನಿಷ್ಪರಿಣಾಮಗೊಳಿಸುತ್ತದೆ ಹಾಗೂ ಶರೀರವನ್ನು ಅಕಾಲಿಕ ವಯಸ್ಸಾಗುವಿಕೆಯಿಂದ,  ಕ್ಯಾನ್ಸರ್ನಿಂದ (ವಿಶೇಷವಾಗಿ ಕರುಳು ಹಾಗೂ ಸ್ತನ ಕ್ಯಾನ್ಸರ್ )ದೂರವಿಡುತ್ತದೆ.  ಇದಲ್ಲದೆ ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಖಾಯಿಲೆಗಳಿಂದಲೂ ದೂರವಿಡುತ್ತದ್ದೆ.

೭. ನೈಸರ್ಗಿಕವಾಗಿ  ಖಿನ್ನತೆಯ ವಿರೋಧಿ:

ಕಾಳು ಮೆಣಸಿನಲ್ಲಿರುವ ಪೈಪೆರಿನ್ ಎಂಬ ಅಂಶವು ಸೆರೋಟೋನಿನ್ ಎಂಬ ರಾಸಾಯನಿಕ ದ್ರವವನ್ನು ಮೆದುಳಿನಲ್ಲಿ ಹೆಚ್ಚಿಸಿ ಖಿನ್ನತೆ ವಿರೋಧಿಯಾಗಿ ಕಾರ್ಯ ನಿರ್ವಹಿಸುತ್ತದೆ. ನಮ್ಮ ನಿಮೆಲ್ಲರ ಮನಸ್ಸನ್ನು ನಿಯಂತ್ರಿಸುವುದು ಇದೇ ಸೆರೋಟೋನಿನ್ ಎಂಬ ನ್ಯೂರೋ ಟ್ರಾನ್ಸ್ಮಿಟರ್ . ಪೈಪೆರಿನ್ ಮೆದುಳಿನಲ್ಲಿ ಬೀಟಾ ಎನ್ದೊರ್ಫಿನ್ಸ್ ಅನ್ನು ಹೆಚ್ಚಿಸುವ ಮೂಲಕ ಮನಸ್ಸಿನ ಸ್ಪಷ್ಟತೆಯನ್ನು ಹೆಚ್ಚಿಸುತ್ತದೆ. ಇವು ನೈಸರ್ಗಿಕ ನೋವು ನಿವಾರಕ ಹಾಗೂ ನಮ್ಮೊಳಗಾಗುವ  ಒತ್ತಡವನ್ನು ಕಡಿಮೆ ಮಾಡಿ, ಮನಸ್ಸನ್ನು ಉಲ್ಲಾಸದಿಂದಿಡಳು ಸಹಕರಿಸುತ್ತದೆ.  ಇವುಗಳೊಂದಿಗೆ ನೆನಪಿನ ದುರ್ಬಲತೆಯನ್ನು ಕಡಿಮೆಗೊಳಿಸುತ್ತದೆ ಹಾಗೂ ಅರಿವಿನ ಕಾರ್ಯ ಕ್ಷಮತೆಯನ್ನು ವೃದ್ಧಿಸುತ್ತದೆ.

೮. ಹಲ್ಲು ಮತ್ತು ವಸುಡಿನ ಸಮಸ್ಯೆಗಳನ್ನುದೂರ ಮಾಡುತ್ತದೆ:

ಇದರ ಉರಿಯೂತ-ವಿರೋಧಿ ಗುಣದಿಂದ ,ಇದನ್ನು ಉಪ್ಪಿನೊಂದಿಗೆ ಬಳಸಿದ್ದಲ್ಲಿ ವಸಡಿನ ನೋವು, ಊತವನ್ನು ದೂರ ಮಾಡುತ್ತದೆ. ಇದಲ್ಲದೆ ಹಲವಾರು ರೋಗಗಳನ್ನು ಸಹ ಗುಣಪಡಿಸಬಹುದು ಅವುಗಳೆಂದರೆ ಬಾಯಿಯ  ದುರ್ವಾಸನೆ ಹಾಗೂ ವಸಡಿನ ರಕ್ತ ಸ್ರಾವವನ್ನು ನಿಲ್ಲಿಸುತ್ತದೆ.

೯.ತ್ವಚೆಯ ಸಂರಕ್ಷಣೆ :

ಕಾಳು ಮೆಣಸಿನ ಪೈಪೆರಿನ್ ಅಂಶವು ತೊನ್ನು ಎಂಬ ಚರ್ಮ ಸಂಬಂಧಿ ಖಾಯಿಲೆಯಲ್ಲಿ ಪ್ರಮುಖವಾಗಿ ಉಪಯೋಗಿಸುತ್ತಾರೆ. ಈ ಖಾಯಿಲೆಯಲ್ಲಿ, ಚರ್ಮವು ಮೆಲಾನೋಸೈಟ್ ದ್ರವ್ಯಗಳನ್ನು ಉತ್ತೇಜಿಸಿ,  ಚರ್ಮದ  ವರ್ಣ ದ್ರವ್ಯಗಳನ್ನು  ಕಳೆದುಕೊಳ್ಳುವಂತೆ ಮಾಡಿ, ಬಿಳಿಯ ತೇಪೆಗಳು ಕಂಡುಬರುತ್ತವೆ .ಜಜ್ಜಿದ ಕಾಳು ಮೆಣಸನ್ನು ಜೇನುತುಪ್ಪ, ಮೊಸರು ಅಥವಾ ತಾಜಾ ಬೆಣ್ಣೆಯೊಂದಿಗೆ  ಸೇರಿಸಿ ಪ್ರತಿನಿತ್ಯ ಹಚ್ಚಬಹುದು. ಇದರಿಂದ ರಕ್ತ ಸಂಚಲನೆ ವೃದ್ಧಿಸಿ, ತ್ವಚೆಗೆ ಆಮ್ಲಜನಕವನ್ನು ಪೂರೈಸಿ ಕಾಂತಿಯನ್ನು ಇಮ್ಮಡಿಗೊಳಿಸುತ್ತದೆ.

೧೦. ಉಬ್ಬಸವನ್ನು ತಡೆಯುತ್ತದೆ:

ಕಾಳು ಮೆಣಸಿನ ಕಫಾಹಾರಿ ಗುಣದಿಂದ ಇದನ್ನು ಉಬ್ಬಸ ರೋಗಿಗಳಲ್ಲಿ ಹೆಚ್ಚಾಗಿ ಬಳಸಳು ವೈದ್ಯರು ಸಲಹೆ ನೀಡುತ್ತಾರೆ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon