Link copied!
Sign in / Sign up
5
Shares

ಏನಿದು ಕಾಗೆಗಳು ಹೀಗೆ ಏನನ್ನೋ ಕುಕ್ಕುತ್ತಿವೆ ಎಂದು ಹತ್ತಿರ ಹೋಗಿ ನೋಡಿದರೆ ನವಜಾತ ಮಗು!

ಚಿಕ್ಕಬಳ್ಳಾಪುರದ ಒಂದು ಗ್ರಾಮದಲ್ಲಿ ತಟ್ಟೆ ಗೌಡ ಎಂಬ ರೈತನೊಬ್ಬನು ಮಾರ್ಚ್ 22ರ ಬೆಳಗಿನ ಜಾವ ತನ್ನ ಹೊಲಕ್ಕೆ ಬಂದನು. ಅಲ್ಲಿ ಕಾಗೆಗಳ ಗುಂಪು ಯಾವುದೋ ಒಂದು ವಸ್ತುವಿನ ಮೇಲೆ ಹಾರಾಡುತ್ತಿರುವುದನ್ನು, ಮುಕ್ಕುತ್ತಿರುವುದನ್ನು ಆತ ನೋಡಿದನು. ಅದು ಏನಿರಬಹುದು ಎಂದು ಕುತೂಹಲದಿಂದ ಅದರ ಕಡೆ ಹೋದಾಗ, ಅಲ್ಲಿ ಇದ್ದದ್ದನ್ನು ನೋಡಿ ಆತನ ಮೈ ಮೇಲಿನ ಕೂದಲು ಎದ್ದು ನಿಂತಿವೆ. ಅಂದಹಾಗೆ ಅಲ್ಲಿ ಆತ ನೆಲದ ಮೇಲೆ ನೋಡಿದ್ದು ಏನೆಂದು ಕೇಳುತ್ತೀರಾ? ಒಂದು ನವಜಾತ ಶಿಶು! ಇನ್ನೂ ತನ್ನ ಕರುಳಬಳ್ಳಿಯನ್ನು ಹಾಗೆ ಇಟ್ಟುಕೊಂಡಿರುವ ನವಜಾತ ಶಿಶು!

ಆಗ ತಟ್ಟೆ ಗೌಡನು ಆ ಕಾಗೆಗಳನ್ನೆಲ್ಲಾ ಓಡಿಸಿ, ಅಲ್ಲೇ ಪಕ್ಕದ ಹೊಲದಲಿದ್ದ ರತ್ನಮ್ಮಳನ್ನು ಕರೆದಿದ್ದಾನೆ. ತಟ್ಟೆ ಗೌಡನು ಮಗುವನ್ನ ರತ್ನಮ್ಮಳ ಕೈಯಲ್ಲಿ ಇಟ್ಟು, ಒಂದು ಕಿಲೋಮೀಟರು ದೂರವಿದ್ದ, ಹತ್ತಿರದ ಅರೋಗ್ಯ ಕೇಂದ್ರ ಒಂದಕ್ಕೆ ಓಡಿ ಹೋಗು ಎಂದು ಕಳಿಸಿದ್ದಾನೆ.

ಆರೋಗ್ಯ ಕೇಂದ್ರದಲ್ಲಿದ್ದ ವೈದ್ಯೆ  ಡಾ।। ಪೂರ್ಣಿಮಾ, ಥಟ್ಟನೆ ತನ್ನ ವೈದ್ಯಕೀಯ ಕಿಟ್ ಅನ್ನು ಎತ್ತುಕೊಂಡು, ಓಡಿ ಬಂದು ಮಗುವಿಗೆ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಮಗುವು ಈ ಎಲ್ಲಾ ದುರ್ಘಟನೆಗಳನ್ನ ತಡೆದುಕೊಂಡಿದ್ದು, ನಿರಾಳವಾಗಿ ಉಸಿರಾಟ ಮಾಡುತ್ತಿದೆ ಎಂಬುದು ಪೂರ್ಣಿಮಾ ಅವರಿಗೆ ಗೊತ್ತಾಗಿದೆ. ಕಾಗೆಗಳಿಂದ ಮಗುವಿನ ಕಾಲಿಗೆ ಗಾಯ ಆಗಿದ್ದು, ಈಗ ಮಗುವು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದೆ ಎಂದು ಪೂರ್ಣಿಮಾ ತಿಳಿಸಿದ್ದಾರೆ.

ಸ್ಥಳೀಯ ಮಕ್ಕಳ ರಕ್ಷಣಾ ಅಧಿಕಾರಿಯಾದ ರಮೇಶ್ ಅವರು ಪೊಲೀಸರೊಂದಿಗೆ ಮಗುವಿದ್ದ ಜಾಗಕ್ಕೆ ಭೇಟಿ ನೀಡಿ ಮಗುವನ್ನು ಚಿಂತಾಮಣಿಯಲ್ಲಿನ ಜಿಲ್ಲಾಸ್ಪತ್ರೆಗೆ ಮಗುವನ್ನ ಸ್ಥಳಾಂತರಿಸಿದ್ದಾರೆ. ಮಗುವು ಚೇತರಿಸಿಕೊಳ್ಳುವವರೆಗೆ ಜಿಲ್ಲಾಸ್ಪತ್ರೆಯಲ್ಲೇ ಇರುತ್ತದೆ ಎಂದು ಮತ್ತು ಅದಾದ ನಂತರ ದತ್ತು ತೆಗೆದುಕೊಳ್ಳಲು ಅವಕಾಶ ಕಲ್ಪಿಸುತ್ತೇವೆ ಎಂದು ರಮೇಶ್ ಹೇಳಿದರು.

ಪೊಲೀಸರು ಅಜ್ಞಾತ ವ್ಯಕ್ತಿಗಳ ಮೇಲೆ ಮಗುವನ್ನ ಪರಿತ್ಯಾಗ ಮತ್ತು ಅಪಾಯಕ್ಕೆ ಈಡು ಮಾಡಿರುವುದಕ್ಕೆ ಕೇಸು ದಾಖಲಿಸಿಕೊಂಡಿದ್ದಾರೆ.

 

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon