Link copied!
Sign in / Sign up
9
Shares

ಜೋತುಬಿದ್ದ ಮೊಲೆಗಳು : ಪ್ರತಿ ತಾಯಿಯ ದುಃಸ್ವಪ್ನ

ಮಗುವಿನ ಕಾಳಜಿವಹಿಸುವುದು ಅತ್ಯಂತ ಕಷ್ಟಕರ ಜವಾಬ್ದಾರಿಗಳಲ್ಲಿ ಒಂದು, ಅದರಲ್ಲೂ ನವಜಾತ ಶಿಶುಗಳ ವಿಷಯಕ್ಕೆ ಬಂದಾಗ ನಿಮ್ಮ ಮುಂದೆ ಕವಲು ದಾರಿ ಎದುರಾಗುತ್ತದೆ - ಎದೆಹಾಲು ನೀಡುವುದ ಅಥವಾ ಬಾಟಲಿ ಹಾಲು ನೀಡುವುದ ಎಂದು. ಈ ನಿರ್ಧಾರವು ಎಲ್ಲಾ ತಾಯಂದಿರು ಹಾಗು ವೈದ್ಯರು ಸದಾಕಾಲ ಹೇಳುವ ಎರೆಡು “ಸಂಗತಿಗಳಿಂದ” ಮತ್ತಷ್ಟು ಕ್ಲಿಷ್ಟಕರವಾಗುತ್ತದೆ. ನಮಗೆ ತಿಳಿದಿರುವ ಈ ಎರೆಡು ಸಂಗತಿಗಳು ಯಾವೆಂದರೆ -

೧. ಎದೆಹಾಲು ಎಲ್ಲದಕ್ಕಿಂತ ಸುರಕ್ಷಿತ ಹಾಗು ಮಗುವಿಗೆ ಇದರಿಂದ ಸಿಗುವ ಪೋಷಕಾಂಶಗಳಿಗೆ ಪರ್ಯಾಯ ಇಲ್ಲ.

೨. ಎದೆಹಾಲು ನೀಡುವುದರಿಂದ ಸ್ತನಗಳು ಜೋತುಬೀಳುತ್ತವೆ.

ಒಂದು ತಾಯಿಯ ಮನಸ್ಸಿನಲ್ಲಿ ಗೊಂದಲ, ಪಾಪಪ್ರಜ್ಞೆ ಉಂಟು ಮಾಡಲಿಕ್ಕೆ ಇವೆರೆಡು ಸಾಕು. ಆದರೆ, ನೀವು ಪಶ್ಚಾತಾಪ ಪಡುವ ಅಗತ್ಯವಿಲ್ಲ. ಈ ಎರೆಡು ಸಂಗತಿಗಳ ಸತ್ಯಾಸತ್ಯತೆ ತಿಳಿದರೆ ನಿಮ್ಮ ಪಾಪಪ್ರಜ್ಞೆ ಕಮ್ಮಿ ಆಗಬಹುದು. ಮೊದಲನೆಯದಾಗಿ, ಎದೆಹಾಲು ತುಂಬಾನೇ ಸುರಕ್ಷಿತ, ಏಕೆಂದರೆ ಇದರಲ್ಲಿ ಪ್ರತಿಕಾಯಗಳು ಇರುತ್ತವೆ. ಅಲ್ಲದೆ, ಎದೆಹಾಲು ಅರಗಿಸಿಕೊಳ್ಳಲು ಸುಲಭವಾಗಿರುವುದರಿಂದ ನಿಮ್ಮ ಮಗುವು ಸರಿಯಾಗಿ ಜೀರ್ಣಿಸಿಕೊಳ್ಳುವುದು ಹಾಗು ಅದಕ್ಕೆ ಗ್ಯಾಸ್ ತೊಂದರೆ ಉಂಟಾಗುವುದಿಲ್ಲ. ಎರಡನೆಯ ಸಂಗತಿಗೆ ಬಂದರೆ ನಮಗೆ ತೊಂದರೆ ಏನೆಂದು ತಿಳಿಯುತ್ತದೆ. ಪ್ರತಿಯೊಂದು ಹೆಣ್ಣಿನ ದೇಹ ವಿಭಿನ್ನವಾಗಿದ್ದು ಕೆಲವು ಹೆಣ್ಣುಮಕ್ಕಳಿಗೆ ಎದೆಹಾಲು ನೀಡುವುದು ತಮ್ಮ ಸ್ತನಗಳ ಮೇಲೆ ಕೆಟ್ಟ ಪರಿಣಾಮ(ಜೋತುಬೀಳುವುದು) ಬೀರುತ್ತದೆ. ಇದು ಎಲ್ಲಾ ಹೆಂಗಸರಿಗೂ ಅನ್ವಯಿಸುವುದಿಲ್ಲ. ಹಾಗಾಗಿ ನೀವು ಚಿಂತೆ ಮಾಡುವ ಅಗತ್ಯವಿಲ್ಲ. ಆದರೆ ನೀವು ಅದೇ ವರ್ಗಕ್ಕೆ ಸೇರುವಿರಿ ಎಂದು ನಿಮಗೆ ಅನಿಸಿದರೆ ಹಾಗು ನಿಮ್ಮ ವೈದ್ಯರು ಕೂಡ ಅದನ್ನು ದೃಢಪಡಿಸಿದರೆ, ನಿಮ್ಮ ಮಗುವಿಗೆ ಪುಡಿಹಾಲು ನೀಡಿದರೆ ತೊಂದರೆಯೇನಿಲ್ಲ. ಹೌದು ಎದೆಹಾಲು ತುಂಬಾನೇ ಪೋಷಕಾಂಶಗಳನ್ನು ಹೊಂದಿದ್ದು ನಿಮ್ಮ ಮಗುವಿಗೆ ಅತ್ಯುತ್ತಮವಾದುದು, ಆದರೆ ಅದರ ನಂತರದ ಅತ್ಯುತ್ತಮವಾದುದು ಎಂದರೆ ಅದು ಪುಡಿಹಾಲು. ಹೌದು ಅಮ್ಮಂದಿರ, ನಿಮ್ಮ ಪಾಪಪ್ರಜ್ಞೆಗೆ ವಿದಾಯ ಹೇಳಿ!

ಅಲ್ಲದೆ ತಾಯಿ ಆಗಬೇಕು ಎಂದಿರುವವರು ತಿಳಿದುಕೊಳ್ಳಬೇಕಾದ ಇನ್ನೊಂದು ವಿಷಯ ಎಂದರೆ ಅದು ಸ್ತನಗಳು ಜೋತುಬೀಳುವುದು ಕೇವಲ ಎದೆಹಾಲು ಉಣಿಸುವದರಿಂದ ಮಾತ್ರ ಅಲ್ಲ, ವಾಸ್ತವತೆಯಲ್ಲಿ ಈ ತೊಂದರೆಯು ಗರ್ಭಧಾರಣೆ ಸಮಯದಿಂದ ಬೇರೂರಲು ಶುರು ಮಾಡುತ್ತದೆ. ಗರ್ಭಧಾರಣೆ ಸಮಯದಲ್ಲಿ ಕೂಪರ್ ಲಿಗಮೆಂಟ್ (ನಿಮ್ಮ  ಸ್ತನಗಳಿಗೆ ಬಿಗಿಯಾಗಿ ನಿಲ್ಲಲು ಬೆಂಬಲ ನೀಡುವ ಲಿಗಮೆಂಟ್ ಗಳು) ಹಿಗ್ಗುತ್ತವೆ. ಕಾಲಕ್ರಮೇಣ, ಅವುಗಳು ತಮ್ಮ ಪುನಶ್ಚೈತನ್ಯ ಶಕ್ತಿ ಕಳೆದುಕೊಂಡು ಸಡಿಲಗೊಳ್ಳುತ್ತವೆ. ಇದು ತಡೆಯಲಾಗದ ಜೈವಿಕ ವಿದ್ಯಮಾನ ಎಂದ ಮಾತ್ರಕ್ಕೆ, ಇದರ ಪರಿಣಾಮಗಳನ್ನ ಅಳಿಸಿಹಾಕಲು ಸಾಧ್ಯವಿಲ್ಲ ಎಂಬಂತೆ ಏನಿಲ್ಲ. ಜೋತುಬೀಳುವುದಕ್ಕೆ ಒಂದು ಕಾರಣ ಜೈವಿಕ ವಿದ್ಯಮಾನ ಆಗಿದ್ದರು, ಇನ್ನೂ ಅನೇಕ ಸಂಗತಿಗಳು ಇದರ ಮೇಲೆ ಪ್ರಭಾವ ಬೀರುತ್ತವೆ. ಹಾಗೆ ಹೇಳುವುದಾದರೆ, ಇದು ಹೆಣ್ಣಿನ ವಯಸ್ಸಿನಿಂದ ಹಿಡಿದು ಆಕೆಯ ಆಹಾರಪದ್ದತಿಯು ಇದಕ್ಕೆ ಕಾರಣವಾಗುತ್ತವೆ.

ನೀವು ನಿಮ್ಮ ಮಗುವಿಗೆ ಎದೆಹಾಲನ್ನೇ ನೀಡುವುದೆಂದು ತೀರ್ಮಾನಿಸಿದರೆ, ಸ್ತನಗಳು ಜೋತುಬೀಳುವುದನ್ನು ತಪ್ಪಿಸಲು ಇರುವ ದಾರಿಗಳು ಇಲ್ಲಿವೆ :

೧. ಎದೆಹಾಲು ಉಣಿಸುವಾಗ ಸರಿಯಾದ ಭಂಗಿಯನ್ನು ಕಾಪಾಡಿಕೊಳ್ಳಿ

ನಿಮ್ಮ ಮಗುವನ್ನು ನಿಮ್ಮ ಸ್ತನಗಳಿಗೆ ಹತ್ತಿರ ತಂದುಕೊಳ್ಳಲು ಮೆತ್ತನೆ ತಲೆದಿಂಬುಗಳನ್ನು ಉಪಯೋಗಿಸಿ. ನಿಮ್ಮ ದೇಹವನ್ನು ಅಹಿತಕರ ಎನಿಸುವಂತೆ ಬಾಗಿಸಬೇಡಿ.

೨.ಚೆನ್ನಾಗಿ ತಿನ್ನಿ

ಸರಿಯಾಗಿ ತಿನ್ನುವುದು ಕೂಡ ಜೋತುಬೀಳುವ ಸ್ತನಗಳನ್ನು ದೂರವಿರಿಸುತ್ತದೆ. ಸಂಕೀರ್ಣ ಕಾರ್ಬೋಹೈಡ್ರೇಟ್ ಗಳು, ಆರೋಗ್ಯಕರ ಕೊಬ್ಬಿನಂಶ, ಪ್ರೋಟೀನ್ ಗಳು ಇರುವಂತಹ ಆಹಾರವನ್ನ ಸೇವಿಸಿದರೆ ಜೋಡಣೆ ಅಂಗಾಂಶ(connecting tissues)ಗಳಿಗೆ ತುಂಬಾ ಒಳ್ಳೆಯದು. ಹೀಗೆ ಮಾಡುವುದರಿಂದ ನಿಮ್ಮ ಸ್ತನಗಳು ಜೋತುಬೀಳುವುದನ್ನು ತಪ್ಪಿಸಬಹುದು.

(ಅಲ್ಲದೆ ವಿಟಮಿನ್ ಬಿ ಹಾಗು ವಿಟಮಿನ್ ಇ ಇರುವ ಆಹಾರಗಳು ಕೂಡ ನಿಮಗೆ ಸಹಾಯ ಮಾಡುತ್ತವೆ).

೩. ಭಾರ ಹೊರುವ ಹಾಗು ಹಿತಕರವಾದ ಒಳರವಿಕೆಗಳನ್ನ ಬಳಸಿ

ನಿಮ್ಮ ಸ್ತನಗಳನ್ನ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುವ ಒಳರವಿಕೆಗಳನ್ನ ಧರಿಸಿ. ಇದು ಗಾತ್ರ ಅಥವಾ ಆಕಾರಕ್ಕೆ ಸಂಬಂಧಿಸಿದ ತೊಂದರೆಗಳಿಗೆ ಏನು ಪರಿಹಾರ ನೀಡದೆ ಇದ್ದರೂ, ಲಿಗಮೆಂಟ್ ಗಳು ಅನವಶ್ಯಕವಾಗಿ ಹಿಗ್ಗುವುದನ್ನ ತಪ್ಪಿಸಿ ನಿಮ್ಮ ಸ್ತನಗಳು ಮತ್ತಷ್ಟು ಜೋತುಬೀಳುವುದನ್ನು ತಪ್ಪಿಸುತ್ತವೆ.   

೪. ಚೆನ್ನಾಗಿ ವ್ಯಾಯಾಮ ಮಾಡಿ

ಸಾಧಾರಣ ವ್ಯಾಯಾಮಗಳಾದ ನಡೆಯುವುದು ಅಥವಾ ಯೋಗದಿಂದ ಶುರು ಮಾಡಿ. ನೀವು ತುಂಬಾ ಆಯಾಸ ಮಾಡಿಕೊಳ್ಳದಂತೆ ನೋಡಿಕೊಳ್ಳಿ. ವ್ಯಾಯಾಮ ಮಾಡುವುದರಿಂದ ತುಂಬಾನೇ ತೂಕ ಕಳೆದುಕೊಂಡರೆ ನಿಮ್ಮ ಚರ್ಮವು ಜೋತು ಬೀಳುತ್ತದೆ, ನಮಗೆ ಬೇಡವಾಗಿರುವುದೇ ಇದು. ಹುಷಾರಾಗಿರಿ ಹಾಗು ಪ್ರತಿಯೊಂದು ಹೆಣ್ಣಿನ ದೇಹ ಮುಂಚೆಯೇ ಹೇಳಿದ ಹಾಗೆ ವಿಭಿನ್ನ ಆಗಿರುವ ಕಾರಣ ನೀವು ನಿಮ್ಮ ಆಹಾರಪದ್ದತಿ ಬಗ್ಗೆ ವೈದ್ಯರ ಬಳಿ ಸಲಹೆ ಪಡೆದುಕೊಳ್ಳುವುದು ತುಂಬಾ ಒಳ್ಳೆಯದು. ಅಲ್ಲದೆ ಗರ್ಭಧಾರಣೆ ಹಾಗು ಎದೆಹಾಲು ನೀಡುವ ಹಂತದ ನಂತರ ನಿಮ್ಮ ದೇಹದಲ್ಲಿ ಆಗುವ ನೈಸರ್ಗಿಕ ಬದಲಾವಣೆಗಳ ಬಗ್ಗೆ ಅವರಿಗೆ ಮಾತ್ರ ಸರಿಯಾಗಿ ತಿಳಿದಿರುತ್ತದೆ.

೫. ಮಸಾಜ್

ಬಿಸಿನೀರು ಅಥವಾ ತಣ್ಣೀರು ಸ್ನಾನ ಮಾಡುವಾಗ, ನಿಮ್ಮ ಸ್ತನಗಳನ್ನು ಮಸಾಜ್ ಮಾಡಿ. ಬಿಸಿನೀರಿನ ಮಸಾಜ್ ರಕ್ತ ಸಂಚಾರ ಸುಗಮ ಮಾಡುವ ಕಾರಣ ಜೋತುಬೀಳುವುದನ್ನ ಇದು ತಪ್ಪಿಸುವುದು. ತನ್ನೀರಿನ ಮಸಾಜ್ ಚರ್ಮವನ್ನು ಬಿಗಿಯಾಗಿಸುತ್ತದೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon