Link copied!
Sign in / Sign up
0
Shares

ಸ್ಕೂಲ್ ವ್ಯಾನ್ ಅಲ್ಲೇ ಮಗುವನ್ನ ಮರೆತುಬಿಟ್ಟರು! ಮಗು ಜೀವವನನ್ನೇ ಕಳೆದುಕೊಂಡಿತು!

ಆ ದಿನ ಮಾರ್ಚ್ 19, ಸ್ಕೂಲ್ ವ್ಯಾನ್ ಡ್ರೈವರ್ ಅವತ್ತು ತನ್ನ ಕೆಲಸಕ್ಕೆ ರಜೆ ಹಾಕಿದ್ದ ಕಾರಣ, ಸ್ಕೂಲಿನ ನಿರ್ದೇಶಕರೇ ತಮ್ಮ ವ್ಯಾನ್ ಅಲ್ಲಿ ಶಾಲೆಯ ಕೆಲವು ಶಿಕ್ಷಕರು ಮತ್ತು ಮಕ್ಕಳನ್ನ ಮನೆಯಿಂದ ಶಾಲೆಗೆ ಕರೆತರುವ ಕೆಲಸ ವಹಿಸಿಕೊಂಡರು. ಆ ಮಕ್ಕಳಲ್ಲಿ ನೈತಿಕ್ ಎಂಬ 6-ವರ್ಷದ ಪುಟ್ಟ ಹುಡುಗನು ಇದ್ದನು. ಶಾಲೆಯ ನಿರ್ದೇಶಕರಾದ ನಿತಿನ್ ಗೌರ್ ಎಲ್ಲರನ್ನು ಶಾಲೆಗೇ ತಂದು ಮುಟ್ಟಿಸಿದರು. ಶಾಲೆಯ ಗುಮಾಸ್ತ ಎಲ್ಲಾ ಮಕ್ಕಳನ್ನು ವ್ಯಾನ್ ಇಳಿಸಿ ಶಾಲೆ ಒಳಗೆ ಕಳುಹಿಸಿದ. ಶಿಕ್ಷಕರು ಕೂಡ ವ್ಯಾನ್ ಇಳಿದು ಶಾಲೆಗೇ ಹೋದರು.

ಎಲ್ಲರನ್ನು ಶಾಲೆಗೇ ತಂದಿಳಿಸಿದ ನಂತರ, ನಿರ್ದೇಶಕ ನಿತಿನ್ ಗೌರ್ ತನ್ನ ಗಾಡಿಯನ್ನ ಲಾಕ್ ಮಾಡಿ, ಯಾವುದೋ ಕೆಲಸದ ಮೇಲೆ ಬೇರೆ ಎಲ್ಲೋ ಹೋಗಿದ್ದಾನೆ. ಆದರೆ ಅಲ್ಲೊಂದು ಎಡವಟ್ಟು ನಡೆದೇ ಹೋಗಿತ್ತು! ಎಲ್ಲರನ್ನು ಕಾರ್ ಇಂದ ಇಳಿಸಿದ ಗುಮಾಸ್ತನು, ಪುಟ್ಟ ಬಾಲಕ ನೈತಿಕ್ ಅನ್ನು ಕಾರ್ ಅಲ್ಲಿಯೇ ಮರೆತು ಬಿಟ್ಟಿದ್ದ! ಈ ಕಡೆ ನಿರ್ದೇಶಕ ನಿತಿನ್ ಕೂಡ ಕಾರ್ ಅನ್ನು ಲಾಕ್ ಮಾಡಿ, ಬಿಟ್ಟ ಜಾಗದಲ್ಲಿಯೇ ಬಿಟ್ಟು, ಎಲ್ಲೋ ಹೋಗಿಬಿಟ್ಟ!

ಈ ನಿತಿನ್ ಕಾರ್ ಬಳಿ ಮರಳಿ ಬಂದದ್ದೇ 4 ಗಂಟೆಗಳ ನಂತರ. ಆ ನಾಲ್ಕು ಗಂಟೆಗಳ ಕಾಲ, ಗಾಳಿ ಇಲ್ಲದೆ, ಆ ಮಗು ಕಾರ್ ಒಳಗೆ ನರಕಯಾತನೆ ಅನುಭವಿಸಿತ್ತು. ನಿತಿನ್ ಕಾರ್ ಲಾಕ್ ಅನ್ನು ಓಪನ್ ಮಾಡಿ ಒಳಗಡೆ ನೋಡಿದರೆ, ಮಗುವು ಜ್ಞಾನ ತಪ್ಪಿ ಬಿದ್ದಿತ್ತು. ಮಗುವನ್ನು ಕೂಡಲೇ ಅಲ್ಲಿಂದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

“ಆ ಪುಟ್ಟ ಹುಡುಗನು ಅಕ್ಷರಸಹ ನಲುಗಿ ಹೋಗಿದ್ದ, ಭಯಭೀತನಾಗಿದ್ದ ಮತ್ತು ತುಂಬಾ ಗಂಭೀರ ಸ್ಥಿತಿಯಲ್ಲಿದ್ದ” ಎಂದು ಹೇಳುತ್ತಾರೆ ಮಗುವಿಗೆ ಪ್ರಥಮ ಚಿಕಿತ್ಸೆ ನೀಡಿದ ವೈದ್ಯರು. ಆದರೆ, ಮಗುವಿಗೆ ಬಹಳಷ್ಟು ಉಸಿರಾಟದ ತೊಂದರೆಗಳು ಉಂಟಾಗಿದ್ದವು. ಆಸ್ಪತ್ರೆ ಸೇರಿದ ಐದು ದಿನಗಳ ನಂತರ ಆ ಪುಟ್ಟ ಬಾಲಕ ಜೀವವನ್ನೇ ಬಿಟ್ಟು ಬಿಟ್ಟ. ಇತ್ತ ಆ ಬಾಲಕನ ತಾಯಿ ಶಾಲೆಯ ಬೇಜವಾಬ್ದಾರಿತನದಿಂದ ನನ್ನ ಮಗುವು ಸತ್ತಿತ್ತು ಎಂದು ಮತ್ತು ಇದೊಂದು ಕೊಲೆ ಎಂದು ಗೋಳಿಡುತ್ತಾ ಅಳುತ್ತಿದ್ದಾಳೆ. ಅತ್ತ, ಆ ಶಾಲೆಯ ನಿರ್ದೇಶಕನ ಮೇಲೆ ಪೊಲೀಸರು FIR ದಾಖಲಿಸಿಕೊಂಡಿದ್ದಾರೆ.

ಇದು ನಡೆದದ್ದು ಮಧ್ಯ ಪ್ರದೇಶದ, ಭೋಪಾಲ್ ನಗರದ, ಡೋಲರಿಯ ತಾಲೂಕಿನ ಸಾಯಿ ಇಂಟರ್ನ್ಯಾಷನಲ್ ಸ್ಕೂಲ್ ಅಲ್ಲಿ.  

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon