Link copied!
Sign in / Sign up
21
Shares

ಒಂದು ವರ್ಷಕ್ಕಿಂತ ಚಿಕ್ಕ ಮಗುವಿಗೆ ಜೇನುತುಪ್ಪ ತಿನಿಸಿದರೆ ಎಂತಹ ಅಪಾಯಗಳು ಎದುರಿಸಬೇಕು ಗೊತ್ತೇ?

ಸಿಹಿ ಪದಾರ್ಥಗಳ್ಳನ್ನು ಇಷ್ಟ ಪಡದ ಮಕ್ಕಳ್ಳಿಲ್ಲ. ಮಗುವಿನ ನಗು ಜೇನಿನಂತೆ ಸಿಹಿಯಾಗಿರುತ್ತದೆ ಎಂದರೆ ತಪ್ಪಾಗುವುದಿಲ್ಲ. ನಿಮ್ಮ ಮಗುವನ್ನು ಕೃತಕ ಸಕ್ಕರೆಯ ತಿನಿಸುಗಳಿಂದ ದೂರ ಮಾಡಿ, ಪ್ರಾಕೃತಿಕ ಸಿಹಿ ಪದಾರ್ಥಗಳಾದ  ಜೇನು ತುಪ್ಪವನ್ನು ತಿನ್ನಿಸುತ್ತಿದ್ದೀರಾ? ನಿಲ್ಲಿ! ಜೇನು ತುಪ್ಪದ್ದಲ್ಲಿ ಕ್ಲಾಸ್ಟ್ರಿಡಿಯಂ ಬೋತುಲಿನುಂ(clostridum botulinum) ಎಂಬ ಬ್ಯಾಕ್ಟೀರಿಯಾದ ಬೀಜಕ(spores)ಗಳಿರುತ್ತವೆ. ಇವು ಮಕ್ಕಳ್ಳಲ್ಲಿ ಬೋತುಲಿಸ್ಮ್(Botulism) ಎಂಬ ಖಾಯಿಲೆಯನ್ನು ಉಂಟುಮಾಡುತ್ತದೆ.

ಹಾಗಾದರೆ botulism ಅಂದರೆ ಏನೆಂದು ತಿಳಿದುಕೊಳ್ಳೋಣ ಬನ್ನಿ. ಸಾಮಾನ್ಯವಾಗಿ ಬೋತುಲಿಸ್ಮ್ ಬೀಜಕಗಳು, ನೀರು ಹಾಗು ಮಣ್ಣಿನಲ್ಲಿ ಲಭ್ಯವಾಗುತ್ತವೆ. ಆಹಾರದ ಮೂಲಕ, ನಮ್ಮ ದೇಹದೊಳಗೆ ಕ್ಲಾಸ್ಟ್ರಿಡಿಯಂ ಬ್ಯಾಕ್ಟೀರಿಯಾಗಳು ಸೇರುತ್ತವೆ. ಹೀಗೆ ಒಳಪ್ರವೇಶ ಮಾಡಿದ ಬ್ಯಾಕ್ಟೀರಿಯಾಗಳು, ಕರುಳಿನೊಳಗೆ ಸೇರಿ

ಹಾನಿಕಾರಕ ರಾಸಯನಿಕ ದ್ರವವನ್ನು ಸ್ರವಿಸುತ್ತದೆ. ಇದರಿಂದ ಮನುಷ್ಯನಿಗೆ ಮಾಂಸ ಖಂಡಗಳ ದೌರ್ಬಲ್ಯ, ಕಣ್ಣಿನ ಸ್ನಾಯುಗಳ ಶಕ್ತಿ ಕುಂದುತ್ತದೆ.

 

ಆದರೆ ಸಾಮಾನ್ಯವಾಗಿ ಒಂದು ವರುಷಕ್ಕಿಂತ ಕೆಳಗಿನ ಮಕ್ಕಳ್ಳಲ್ಲಿ, ಈ ರೋಗ ಕಂಡುಬರುತ್ತದೆ. ಒಂದು ವರುಷಕ್ಕಿಂತ ಮೇಲ್ಪಟ್ಟ ಮಕ್ಕಳ್ಳಲ್ಲಿ ರೋಗ -ನಿರೋಧಕ ಶಕ್ತಿ ವೃದ್ಧಿಯಾಗಿರುವುದರಿಂದ, ಬೋತುಲಿಸ್ಮ್ ಕಂಡು ಬರುವುದದ್ದಿಲ್ಲ.

ಹಾಗಾಗಿ ಒಂದು ವರುಷಕ್ಕಿಂತ ಚಿಕ್ಕ ಮಕ್ಕಳಿಗೆ ಜೇನನ್ನು ನೀಡುವುದು, ಅಪಾಯಕಾರಿ ಎಂದು ವೈದ್ಯರು ಹೇಳಿದ್ದಾರೆ. ಜೇನಿನ್ನಲ್ಲಿ ಕ್ಲಾಸ್ಟ್ರಿಡಿಯಂ ಬ್ಯಾಕ್ಟೀರಿಯಾ ಅಧಿಕ ಸಂಖ್ಯೆಯಲ್ಲಿರುವುದರಿಂದ, ನಿಮ್ಮ ಮುದ್ದು ಕಂದಮ್ಮಗಳಿಗೆ ಈ ಖಾಯಿಲೆ ಬರುವ ಸಾಧ್ಯತೆಗಳು ಹೆಚ್ಚು.ಆದ್ದರಿಂದ ಮಕ್ಕಳಿಗೆ, ಜೇನು ತಿನ್ನಿಸಲೇಬೇಕೆಂದರೆ, ಒಂದು ವರುಷದ ನಂತರ ತಿನ್ನಿಸುವುಸು ಸೂಕ್ತ.

ಹಾಗಾದರೆ ಎಳೆ ಮಕ್ಕಳ್ಳಲ್ಲಿ ಜೇನ್ನನ್ನು ತಿನ್ನಿಸಿದರೆ, ಏನಾಗುತ್ತದೆಂದು ವೈದ್ಯರಿಂದ ತಿಳಿಯೋಣ ಬನ್ನಿ. ಮೇಲೆ ವಿವರಿಸಿರುವ ಹಾಗೆ , ಜೇನಿನಲ್ಲಿ ಹಾನಿಕರ ಬ್ಯಾಕ್ಟೀರಿಯಾಗಳು ಜೀವಂತವಾಗಿರುತ್ತದೆ. ಮಗುವಿಗೆ ನೀವು ಜೇನನ್ನು ತಿನ್ನಿಸಿದರೆ, ಜೇನಿನೋಳಗಿರುವ ಬ್ಯಾಕ್ಟೀರಿಯಾವನ್ನು ಸಹ ತಿನ್ನಿಸಿದಂತಾಗುತ್ತದೆ. ಹೀಗೆ ಮಗುವಿನ ದೇಹದೊಳಗೆ ಪ್ರವೇಶಿಸಿದ ಬ್ಯಾಕ್ಟೀರಿಯಾಗಳು, ಮಗುವಿನ ಕರುಳಿನೊಳಗೆ ಪ್ರವೇಶ ಮಾಡಿ, ಅಲ್ಲಿ ತನ್ನ  ಸಂತಾನೋತ್ಪತ್ತಿಯನ್ನು ಆರಂಭಿಸುತ್ತದೆ. ಪೂರ್ಣಪ್ರಮಾಣದ ಬೆಳವಣಿಗೆ ಹೊಂದದ ಮಗುವಿನ ಅಂಗಾಂಗಗಳು, ಈ ಬ್ಯಾಕ್ಟೀರಿಯಾದಿಂದ ನಾಶವಾಗುವ ಸಂಭವವಿರುತ್ತದೆ. ಕೆಲವು ಕಡೆ ಮಕ್ಕಳು ಸಾವನ್ನಪ್ಪಿರುವ ಉದಾಹರಣೆಗಳಿವೆ.

ಆದ್ದರಿಂದ ಮಕ್ಕಳಿಗೆ ಜೇನನ್ನು ಯಾವ ರೂಪದಲ್ಲಿಯೂ ತಿನ್ನಿಸಬಾರದು. ಜೇನನ್ನು ಬೇರೆ ತಿನಿಸುಗಳೊಂದಿಗೆ ಬೇಯಿಸಿದರೂ, ಅದರೊಳಗಿನ ಬ್ಯಾಕ್ಟೀರಿಯಾ ಬೀಜಕಗಳು ಸಾಯುವುದ್ದಿಲ್ಲ. ಕೇವಲ ಹಸಿ ಜೇನನ್ನು ಮಾತ್ರವಲ್ಲ, ಜೇನಿನ ಪದಾರ್ಥಗಳಾದ  ಕಾರ್ನ್ ಸಿರಪ್(corn syrup), ಬಿಸ್ಕತ್ತು, ಓಟ್ಸ್ ಮುಂತಾದ ಸಂಸ್ಕರಿಸಿದ ಆಹಾರ ಪದಾರ್ಥಗಳ್ಳನ್ನು, ನಿಮ್ಮ ಪುಟ್ಟ ಕಂದಮ್ಮಗಳಿಗೆ ತಿನ್ನಿಸದಿರಿ.

ಹಾಗಾದರೆ ಅನಿರೀಕ್ಷಿತವಾಗಿ ಮಗುವಿಗೆ, ಜೇನಿನ ಪದಾರ್ಥಗಳ್ಳನ್ನು ನೀಡಿದ್ದಲ್ಲಿ, ಬೋತುಲಿಸ್ಮ್(Botulism) ಬಂದಿದೆಯೇ ಎಂದು ತಿಳಿದುಕೊಳ್ಳಲು, ಮಕ್ಕಳ ತಜ್ಞರು ಹೇಳಿರುವ ಲಕ್ಷಣಗಳ್ಳನ್ನು ನೋಡೋಣ ಬನ್ನಿ!

೧. ಜೀರ್ಣ ಸಂಬಂಧಿ ಖಾಯಿಲೆಗಳಾದ ವಾಂತಿ, ಹೊಟ್ಟೆ ನೋವು, ಮಲಬದ್ದತೆ.

೨. ಕಣ್ಣಿನ ಸ್ನಾಯುಗಳ್ಳಲ್ಲಿ ಶಕ್ತಿ ಇಲ್ಲದಂತಾಗುವುದು ಅಥವಾ ತೆರೆದ ಕಣ್ಣುಗಳು.

೩. ಒಣಗಿದ ಬಾಯಿ.

೪. ಜೊಲ್ಲು ಸುರಿಸುವುದು ಅಥವಾ ನುಂಗಲು ಕಷ್ಟವಾಗುವುದು.

೫. ನಿತ್ರಾಣಗೊಳ್ಳುವುದು.

೬. ಹೊಟ್ಟೆ ಹಸಿವಿಲ್ಲದಿರುವುದು ಇತ್ಯಾದಿ.

ಈ ಮೇಲಿನ ಲಕ್ಷಣಗಳು ನಿಮ್ಮ ೧ ವರುಷ ಕೆಳಗಿನ ಮಕ್ಕಳ್ಳಲ್ಲಿ ಕಂಡುಬಂದರೆ, ಕೂಡಲೇ ಹತ್ತಿರದ ಮಕ್ಕಳ ತಜ್ಞರ ಬಳಿ ಕರೆದುಕೊಂಡು ಹೋಗಿ.

ಮಕ್ಕಳು ಸಿಹಿ ಇಷ್ಟಪಡುತ್ತಾರೆಂದು ಎಲ್ಲಾ ಆಹಾರಗಳಿಗೆ, ಜೇನನ್ನು ಬೆರೆಸುವ ಮುಂಚೆ ಯೋಚಿಸಿ. ಜೇನಿನ ಬದಲು ಹಣ್ಣಿನ ರಸವನ್ನು ಮಗುವಿಗೆ ನೀಡಿ. ಆದರೆ ಅಂಗಡಿಯಲ್ಲಿ ತಯಾರಾದ ಹಣ್ಣಿನ ಜ್ಯೂಸ್ ಅಥವಾ ಮೊಸರನ್ನು ಮಕ್ಕಳಿಗೆ ನೀಡದಿರಿ.

ಯಾಕೆಂದರೆ ಇದರಲ್ಲಿಯು ಸಹ ಅಲ್ಪ ಪ್ರಮಾಣದ ಜೇನನ್ನು ಮಿಶ್ರಣ ಮಾಡಿರುತ್ತಾರೆ. ನಿಮ್ಮ ಮಗುವಿನ ಆರೋಗ್ಯ ನಿಮ್ಮ ಕೈಯಲ್ಲಿದೆ!!. ವೈದ್ಯರು  ಹೇಳುವ ಆಹಾರದ ಪಟ್ಟಿಯನ್ನು ಚಾಚೂತಪ್ಪದೆ ಪಾಲಿಸಿ, ನಿಮ್ಮ ಮಗುವಿನೊಂದಿಗೆ ಆನಂದದ ಕ್ಷಣಗಳ್ಳನ್ನು ಕಳೆಯಿರಿ.

ಲೇಖನ ನಿಮಗೆ ಉಪಯುಕ್ತವೆನಿಸಿದರೆ, ನಿಮ್ಮಂತೆ ಮಗುವಿನ ಆರೋಗ್ಯದ ಬಗ್ಗೆ ಕಾಳಜಿವಹಿಸುವ ಸಾವಿರಾರು ತಾಯಂದಿರೊಂದಿಗೆ ಇದನ್ನು ಹಂಚಿಕೊಳ್ಳಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon