Link copied!
Sign in / Sign up
3
Shares

ಏಕೆ ಹೆಂಗಸರು ತಮ್ಮ ಜರಾಯು (ಪ್ಲಾಸೆಂಟಾ)ವನ್ನ ತಾವೇ ತಿನ್ನುತ್ತಿದ್ದಾರೆ?

ಹಿಂದಿನಿಂದಲೂ ಬಾಣಂತಿ ಹೆಂಗಸರಿಗೆ ಮಲ್ಟಿವಿಟಮಿನ್ಸ್ ಬಹಳ ಮಹತ್ವವಾದವು ಎಂಬುದನ್ನ ಜನ ತಿಳಿದಿದ್ದಾರೆ, ಆದರೆ ಈಗ ಅವುಗಳೊಂದಿಗೆ ಬಹಳಷ್ಟು ಅಮ್ಮಂದಿರು ಜರಾಯುದಿಂದ (ಪ್ಲಾಸೆಂಟಾ ಇಂದ)ಮಾಡಿರುವ ಮಾತ್ರೆಗಳನ್ನೂ ಸೇವಿಸುತ್ತಿದ್ದಾರೆ. ಆದರೆ ಏಕೆ ಅವರು ಇಲ್ಲಿಯವರೆಗೂ ತಮ್ಮ ದೇಹದ ಒಂದು ಆಂತರಿಕ ಅಂಗವಾಗಿದ್ದ ಭಾಗವನ್ನ ಸೇವಿಸುತ್ತಾರೆ?


ಈ ಜರಾಯು ಅಥವಾ ಪ್ಲಾಸೆಂಟಾ ಇಂದ ಮಾಡಿರುವ ಮಾತ್ರೆಗಳು 100 ಜನ ಹೊಸ ಅಮ್ಮಂದಿರಲ್ಲಿ 11 ಜನರಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ತೊಂದರೆಯಾದ  ಪ್ರಸವ ನಂತರದ ಖಿನ್ನತೆಯನ್ನ (ಹೆರಿಗೆ ನಂತರ ಆಗುವ ಡಿಪ್ರೆಶನ್) ಇದು ಹೋಗಲಾಡಿಸುತ್ತದೆ ಎಂಬುದು ಒಂದು ನಂಬಿಕೆ. ಇಷ್ಟೇ ಅಲ್ಲದೆ ಈ ಮಾತ್ರೆಗಳು ಎದೆಹಾಲಿನ ಉತಪಟ್ಟಿಯನ್ನು ಕೂಡ ಜಾಸ್ತಿ ಮಾಡುತ್ತದೆ ಮತ್ತು ಅದರೊಂದಿಗೆ ಒತ್ತಡ ಕಡಿಮೆ ಮಾಡುವ ಹಾರ್ಮೋನಾದ ಆಕ್ಸಿಟೋಸಿನ್ ಅನ್ನು ಕೂಡ ಹೆಚ್ಚಿಸುತ್ತದೆ. ಈ ಆಕ್ಸಿಟೋಸಿನ್ ಕೇವಲ ಒತ್ತಡ ಕಡಿಮೆ ಮಾಡುವುದಲ್ಲದೆ ಮಗು-ಅಮ್ಮನ ನಡುವಿನ ಬಾಂಧವ್ಯ ಹೆಚ್ಚಿಸುವುದರಲ್ಲಿ ಮತ್ತು ಗರ್ಭಕೋಶವು ಮೊದಲಿನ ಸ್ಥಿತಿಗೆ ಮರಳಲು ಸಹಾಯ ಮಾಡುತ್ತದೆ. ಹೀಗಾಗಿ ಈ ಜರಾಯುದಿಂದ ಮಾಡಿರುವ ಮಾತ್ರೆಗಳನ್ನ ತಯಾರಿಸುವ ದೊಡ್ಡ ಉದ್ಯಮವೇ ಇದೆ. ಆದರೆ ಈ ಉದ್ಯಮಕ್ಕೆ ಇರುವ ಒಂದು ತೊಡಕು ಎಂದರೆ, ಇಲ್ಲಿ ಮೇಲೆ ತಿಳಿಸಿರುವ ಈ ಮಾತ್ರೆಗಳ ಯಾವ ಉಪಯೋಗವನ್ನೂ ಇಲ್ಲಿಯವರೆಗೆ ವಿಜ್ಞಾನ ಸಾಬೀತು ಮಾಡಿಲ್ಲ.


ಜರಾಯು ಹೊಟ್ಟೆಯೊಳಗಡೆ ಭ್ರೂಣದೊಂದಿಗೆ ಇದ್ದಾಗ, ಕೆಲವು ಗಂಭೀರವಾದ ಕಾರ್ಯಗಳನ್ನ ಮಾಡುತ್ತದೆ. ಪೋಷಕಾಂಶಗಳ, ರಕ್ತದ ಮತ್ತು ತ್ಯಾಜ್ಯವನ್ನ ವಿನಿಮಯ ಮಾಡುವಂತಹ ಮಹತ್ವದ ಕಾರ್ಯಗಳನ್ನ ಒಳಗೊಂಡು. ಆದರೆ ಹೆರಿಗೆಯ ನಂತರ ಅದರ ಉಪಯೋಗವಿಲ್ಲವೆಂದು ಅದನ್ನ ತಾಯಿಯ ದೇಹದಿಂದ ಹೊರತೆಗೆದು ಹಾಕುತ್ತಾರೆ. ಈ ಜರಾಯುವನ್ನ ಕುದಿಸಿ, ಒಣಗಿಸಿ ಹಾಗು ಕೊನೆಯದಾಗಿ ಪುಡಿ ಮಾಡಿ, ಇದನ್ನ ಕ್ಯಾಪ್ಸುಲ್ ಆಗಿ ತಯಾರು ಮಾಡುತ್ತಾರೆ.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon