ಜಪಾನೀ ಹೆಂಗಸರ ತೆಳ್ಳನೆ ಮೈಕಟ್ಟು ಮತ್ತು ತಾರುಣ್ಯದ ಹಿಂದಿನ 5 ಸೀಕ್ರೆಟ್ಸ್
ಇಡೀ ವಿಶ್ವದಲ್ಲೇ ಗರಿಷ್ಟ ಪ್ರಮಾಣದ 100 ವರ್ಷಕ್ಕಿಂತ ಹೆಚ್ಚು ಆಯಸ್ಸು ಹೊಂದಿರುವ ಜನರನ್ನು ಹೊಂದಿರುವ ದೇಶ ಜಪಾನ್. ತಜ್ಞರ ಪ್ರಕಾರ ಇದಕ್ಕೆ ಕಾರಣ ಅವರು ಸೇವಿಸುವ ಆಹಾರ. ಆಹಾರವು ಆಯಸ್ಸು ಮತ್ತು ಆರೋಗ್ಯದ ಮೇಲೆ ಆಧಾರಿತವಾಗಿರಬೇಕು. ಇನ್ನೂ ಸರಿಯಾಗಿ ಹೇಳಬೇಕೆಂದರೆ ಜಪಾನಿಗರು ಆಹಾರವನ್ನು ಕೇವಲ ರುಚಿಗಾಗಿ ಸೇವಿಸುವುದಿಲ್ಲ. ಬದಲಿಗೆ, ಅವರು ಆಹಾರವು ಅವರ ಆರೋಗ್ಯಕ್ಕೆ ಹೇಗೆ ಸಹಾಯ ಮಾಡುತ್ತದೆ ಎಂದು ಅರಿತು ಸೇವಿಸುವರು. ಜಪಾನಿನ ಹೆಂಗಸರು ಅಷ್ಟು ತೆಳುವಾದ ಮೈಕಟ್ಟು ಹೊಂದಿರುವುದಕ್ಕೆ ಮತ್ತು ತಾರುಣ್ಯ ಕಾಪಾಡಿಕೊಳ್ಳಲು ಏನು ಮಾಡುವರು ಎಂಬುದನ್ನು ಇಂದು ನಾವು ನಿಮಗೆ ತಿಳಿಸುತ್ತೇವೆ ಓದಿ :
೧. ಹುದುಗಿಸಿದ(ಫರ್ಮೆಂಟೇಡ್) ಆಹಾರದ ಪ್ರಿಯರು
ಜಪಾನಿಗರು ಅನೇಕ ಹುದುಗಿಸಿದ ಆಹಾರವನ್ನು ಸೇವಿಸುತ್ತಾರೆ. ಈ ಫರ್ಮೆಂಟೇಡ್ ಆಹಾರವನ್ನು ತಯಾರಿಸುವ ಪ್ರಕ್ರಿಯೆಯಲ್ಲಿ ನೈಸರ್ಗಿಕ ಬ್ಯಾಕ್ಟೀರಿಯಾ ಆಹಾರದಲ್ಲಿರುವ ಸಕ್ಕರೆ ಅಂಶ ಮತ್ತು ಸ್ಟಾರ್ಚ್ ಅನ್ನು ಸೇವಿಸಿ ಲ್ಯಾಕ್ಟಿಕ್ ಆಮ್ಲವನ್ನು ತಯಾರಿಸುತ್ತವೆ. ಈ ಫರ್ಮೆಂಟೇಶನ್ ಪ್ರಕ್ರಿಯೆಯು ನೈಸರ್ಗಿಕ ಪೋಷಕಾಂಶಗಳನ್ನು ಒದಗಿಸುತ್ತದೆ ಮತ್ತು ಒಮೇಗಾ-೩ ಕೊಬ್ಬಿನಾಮ್ಲ, ವಿಟಮಿನ್ ಬಿ, ಉಪಯೋಗಕರ ಕಿಣ್ವಗಳನ್ನು ಸೃಷ್ಟಿ ಮಾಡುತ್ತದೆ. ಹೊಟ್ಟೆಯಲ್ಲಿ ಆಹಾರವನ್ನು ಸರಿಯಾಗಿ ಕರಗಿಸಿ, ಅರಗಲು ಸಹಾಯ ಮಾಡುವ ಉಪಯುಕ್ತ ಬ್ಯಾಕ್ಟೀರಿಯಾಗಳನ್ನು ಆಹಾರದಲ್ಲಿ ವೃದ್ಧಿಸುತ್ತದೆ. ಹೀಗೆ ಆಹಾರವು ಬೇಗ ಕರಗಿ, ಸರಿಯಾಗಿ ಜೀರ್ಣವಾದರೆ ತೂಕ ಇಳಿಕೆ ಪರಿಣಾಮಕಾರಿಯಾಗಿ ಆಗುತ್ತದೆ.
೨. ಕಡಿಮೆ ಪ್ರಮಾಣದ ಆಹಾರ
ಕಡಿಮೆ ಪ್ರಮಾಣದ ಊಟ ಮಾಡುವುದು ಜಪಾನಿಗರ ಸಂಸ್ಕೃತಿಯ ಒಂದು ಭಾಗ. ಇವರು ಸಣ್ಣ ತಟ್ಟೆಯಲ್ಲಿ ಊಟ ಮಾಡುವರು ಮತ್ತು ಇವರು ಸೇವಿಸುವ ಊಟವು ಕಡಿಮೆ ಪ್ರಮಾಣದ್ದು. ಇದು ಕೂಡ ತೂಕ ಇಳಿಸಲಿಕ್ಕೆ ಸಹಾಯ ಮಾಡುತ್ತದೆ. ಅಲ್ಲದೆ, ಸಣ್ಣ ತಟ್ಟೆಯಲ್ಲಿ ಕಡಿಮೆ ಊಟ ಬಡಿಸಿಕೊಂಡರು ಜಾಸ್ತಿ ಇರುವಂತೆ ಕಾಣುತ್ತದೆ, ಇದು ನೀವು ಬೇಕಿರುವುದಕ್ಕಿಂತ ಹೆಚ್ಚು ತಿನ್ನುವುದನ್ನು ಮತ್ತು ಹೆಚ್ಚು ಕ್ಯಾಲೋರಿಸ್ ಸೇವಿಸುವುದುನ್ನು ತಪ್ಪಿಸುತ್ತದೆ.
೩. ತರಾತುರಿಯಲ್ಲಿ ಆಹಾರ ಸೇವಿಸುವ ಹಾಗೆಯೇ ಇಲ್ಲ
ಜಪಾನ್ ದೇಶದಲ್ಲಿ, ಊಟದ ಸಮಯವನ್ನು ದೇಹಕ್ಕೆ ಪುನಃ ಶಕ್ತಿ ತುಂಬಿಸಿಕೊಳ್ಳುವ ಒಂದು ಪವಿತ್ರ ಸಮಯ ಎಂದು ಭಾವಿಸುತ್ತಾರೆ. ಒಂದು ವೇಳೆ ನೀವು ತರಾತುರಿಯಲ್ಲಿ ಊಟ ಮಾಡಿದರೆ, ಜನರು ಅದನ್ನು ಅಸಭ್ಯ ವರ್ತನೆ ಎಂದು ಅಲ್ಲಿ ಪರಿಗಣಿಸುವರು. ಹೀಗಾಗಿಯೇ ನೀವು ಆ ದೇಶದಲ್ಲಿ ಜನರು ರಸ್ತೆ ಬದಿಯಲ್ಲಿ ಆಗಲಿ ಅಥವಾ ಬಸ್, ರೈಲುಗಳಲ್ಲಿ ಆಗಲಿ ಆಹಾರ ಸೇವಿಸುವುದು ಕಾಣುವುದಿಲ್ಲ.
ಈ ಕಾರಣಕ್ಕೆ ಜಪಾನಿಗರು ಮೆಲ್ಲನೆ ಊಟ ಮಾಡುತ್ತಾರೆ. ಇದರಿಂದ ಹೊಟ್ಟೆಗೆ ಊಟವನ್ನು ಬಿಡಿಸಿ, ಅರಗಿಸಿಕೊಳ್ಳಲು ಸಮಯ ಸಿಗುತ್ತದೆ ಮತ್ತು ಮೆದುಳಿಗೆ ಹೊಟ್ಟೆ ತುಂಬಿದೆ ಎಂದು ಸರಿಯಾದ ಸಮಯಕ್ಕೆ ತಿಳಿಸಲಿಕ್ಕೆ ಅನುವು ಮಾಡಿಕೊಟ್ಟಂತೆ ಆಗುತ್ತದೆ.
೪. ಗ್ರೀನ್ ಟೀ ಸೇವನೆ
ನಿಮಗೆ ಗೊತ್ತೇ? ಜಪಾನಿ ಹೆಂಗರ ನೆಚ್ಚಿನ ಪಾನೀಯ ಗ್ರೀನ್ ಟೀ. ಏಕೆಂದರೆ ಗ್ರೀನ್ ಟೀಗೆ ಅಷ್ಟೊಂದು ವೈದ್ಯಕೀಯ ಗುಣಗಳಿವೆ. ಇದರಲ್ಲಿ ಅತ್ಯಂತ ಶಕ್ತಿಶಾಲಿ ಉತ್ಕರ್ಷಣ ನಿರೋಧಕ ಪದಾರ್ಥಗಳು ಇವೆ. ಅಲ್ಲದೆ ಮುಖ್ಯವಾಗಿ ಇದರಲ್ಲಿ EGCG ಎಂಬ ವಸ್ತುವಿದ್ದು, ಇದು ನಿಮ್ಮ ದೇಹದಲ್ಲಿನ ಬೇಡದ ಕೊಬ್ಬಿನಂಶ ಕಡಿಮೆ ಮಾಡಿ, ನಿಮ್ಮ ಹೃದಯ ನಾಳಗಳ ಕ್ಷಮತೆ ಹೆಚ್ಚಿಸುತ್ತದೆ ಮತ್ತು ಕೆಲವು ರೀತಿಯ ಕ್ಯಾನ್ಸರ್ ಕಾಯಿಲೆಗಳಿಂದಲೂ ರಕ್ಷಣೆ ನೀಡುತ್ತದೆ.
೫. ಕರಾವಳಿ ಊಟ ಸೇವಿಸುತ್ತಾರೆ
ಜಪಾನಿಗರು ಮಟನ್ ಅಂತಹ ಕೆಂಪು ಮಾಂಸ ಸೇವಿಸುವ ಬದಲು ಸಮುದ್ರಾಹಾರ ಸೇವಿಸಲು ಬಯಸುವರು. ಇದಕ್ಕೆ ಕಾರಣ ಕೆಂಪು ಮಾಂಸವು ಸ್ಥೂಲಕಾಯತೆ, ಹೆಚ್ಚು ಕೊಬ್ಬಿನಂಶ, ಉರಿಯೂತದ ಕಾಯಿಲೆಗಳಿಗೆ ಕಾರಣವಾಗಿದೆ. ಅಲ್ಲದೆ ಸಮುದ್ರಾಹಾರವು ವಿಟಮಿನ್ಸ್, ಖನಿಜಗಳು, ಒಮೇಗಾ-೩ ಕೊಬ್ಬಿನಾಮ್ಲ, ಪ್ರೊಟೀನ್ಗಳು ಒಳಗೊಂಡಿರುತ್ತದೆ. ಇವು ಹೃದಯಕ್ಕೆ ಸಂಬಂಧಿಸಿದ ರೋಗಗಳನ್ನೂ ದೂರವಿಡುತ್ತವೆ.
