Link copied!
Sign in / Sign up
17
Shares

ನಿಮ್ಮ ಜನ್ಮ ತಿಂಗಳು ನಿಮ್ಮ ಆರೋಗ್ಯಕ್ಕೆ ಸಂಬಂಧವನ್ನು ಹೊಂದಿದೆ !

ವೈದಿಕ ಜ್ಯೋತಿಷ್ಯಶಾಸ್ತ್ರದ ಪ್ರಕಾರ, ನಮ್ಮ ಜನ್ಮ ತಿಂಗಳು ನಮ್ಮ ಹಲವು ಸಂಗತಿಗಳ ಮೇಲೆ ಹಿಡಿತವನ್ನು ಸಾಧಿಸುತ್ತವೆ, ಅವು - ನಮ್ಮ ಭವಿಷ್ಯ, ಸಂಬಂಧಗಳು, ವ್ಯಕ್ತಿತ್ವ, ವೃತ್ತಿ ಆಯ್ಕೆ, ಮುಂತಾದವುಗಳು. ಇದರ ಜೊತೆಗೆ ನಮ್ಮ ಜನ್ಮ ತಿಂಗಳು ನಮ್ಮ ಆರೋಗ್ಯದ ಜೊತೆಗೆ ಸಂಬಂಧ ಹೊಂದಿದೆ ಎಂದು ನಿಮಗೆ ಗೊತ್ತೇ?

ಋತುಗಳು ಮತ್ತು ವಾತಾವರಣ ಬದಲಾವಣೆ ನಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬಿರುವುದು ಹಾಗೆಯೆ ನಮ್ಮ ಜನ್ಮ ತಿಂಗಳು ನಮ್ಮ ಆರೋಗ್ಯದ ಮೇಲೆ ಪ್ರಮುಖ ಪ್ರಭಾವ ಬೀರುತ್ತದೆ.

ನಿಮ್ಮ ಜನ್ಮ ತಿಂಗಳ ಆಧಾರದ ಮೇಲೆ ನಿಮ್ಮ ದೇಹದ ಯಾವ ಭಾಗ ಹೆಚ್ಚು ಅಸ್ವಸ್ಥತೆ ಅಥವಾ ನೋವನ್ನು ಅನುಭವಿಸುವುದು ಎಂಬುದನ್ನು ತಿಳಿಯಲು ಮುಂದೆ ಓದಿ.

೧.ಜನವರಿ - ರಕ್ತ

ಜನವರಿ ತಿಂಗಳಲ್ಲಿ ಜನಿಸಿದವರು, ಸಾಮಾನ್ಯವಾಗಿ ಅಧಿಕ ರಕ್ತದೊತ್ತಡ ಮತ್ತು ಕಾರ್ಡಿಯೊಮಿಯೊಪತಿ ಇಂದ ಬಳಲುವರು. ಇವರು ತಮ್ಮ ತೂಕ ಮತ್ತು ಕೊಲೆಸ್ಟ್ರಾಲ್ ಮಟ್ಟದ ಮೇಲೆ ಗಮನಹರಿಸುವುದು ತುಂಬಾ ಮುಖ್ಯ. ಇವರು ಪ್ರತಿದಿನ ನಡೆಯುವುದನ್ನು ಶಿಫಾರಸ್ಸು ಮಾಡುವೆವು.

೨.ಫೆಬ್ರವರಿ - ಲಿವರ್, ಶ್ವಾಸನಾಳಿಕೆ

ಈ ತಿಂಗಳಲ್ಲಿ ಜನಿಸಿದವರು ತಮ್ಮ ಶ್ವಾಸಕೋಶ ಮತ್ತು ಶ್ವಾಸನಾಳದ ಸಮಸ್ಯೆಯನ್ನು ಎದುರಿಸುವರು. ಲಿವರ್ ಬಗ್ಗೆ ಇವರು ಹೆಚ್ಚು ಗಮನವಿಟ್ಟು ಆಗಾಗ್ಗೆ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ.

೩.ಮಾರ್ಚ್ - ಹೃದಯ

ಮಾರ್ಚ್ ನಲ್ಲಿ ಜನಿಸಿದರೆ, ನಿಮ್ಮ ಹೃದಯದ ಬಗ್ಗೆ ಹೆಚ್ಚು ಜಾಗ್ರತೆಯನ್ನು ನೀವು ವಹಿಸುವುದು ತುಂಬಾ ಮುಖ್ಯ. ಪೌಷ್ಟಿಕಾಂಶವುಳ್ಳ ಆರೋಗ್ಯಕರ ಆಹಾರ ಸೇವನೆ ಮತ್ತು ಯೋಗ, ವ್ಯಾಯಾಮ ಮಾಡುವುದು ಬಹಳ ಮುಖ್ಯವಾಗುತ್ತದೆ.

೪.ಏಪ್ರಿಲ್ - ಹೃದಯ

ಎದೆಯಲ್ಲಿ ನೋವು ಕಾಣಿಸಿಕೊಳ್ಳುವ ಅಪಾಯ ಇವರಲ್ಲಿ ಕಾಣಬಹುದು, ಈ ಸ್ಥಿತಿಯು ಇವರ ಹೃದಯದ ಸಮಸ್ಯೆಗೆ ಕಾರಣವಾಗಬಹುದು. ನೀವು ದೈಹಿಕ ಚಟುವಟಿಕೆಯಿಂದ ಇದ್ದು, ಆರೋಗ್ಯಕರ ಆಹಾರ ಸೇವನೆ ಮಾಡಿ, ಸರಿಯಾದ ತೂಕವನ್ನು ಕಾಪಾಡಿಕೊಳ್ಳುವುದು ಒಳ್ಳೆಯದು.

೫.ಮೇ - ಸಾಮಾನ್ಯ

ಮೇ ತಿಂಗಳಲ್ಲಿ ಜನಿಸಿದವರು, ಹೆಚ್ಚು ಅಪಾಯದ ಸೂಚನೆ ಇರುವ ಅಥವಾ ಅತ್ಯಂತ ಅಪಾಯವುಳ್ಳ ಯಾವುದೇ ತೊಂದರೆಯನ್ನು ಅಷ್ಟಾಗಿ ಅನುಭವಿಸುವುದಿಲ್ಲ. ಇವರಿಗೆ ಸಕ್ಕರೆ ಕಾಯಿಲೆ ಬರಬಹುದು, ಆದರೆ ನಿಯಮಿತ ಆರೋಗ್ಯಕರ ಆಹಾರ ಸೇವನೆಯಿಂದ ಇದನ್ನು ಔಷದಿಗಳಿಲ್ಲದೆ ಮುಕ್ತಿ ಪಡೆಯಬಹುದು.

೬.ಜೂನ್ - ಹೃದಯ

ನಿಮ್ಮ ಹೃದಯದ ಬಗ್ಗೆ ನೀವು ತುಂಬಾ ಜಾಗ್ರತೆ ವಹಿಸಬೇಕು. ಇವರು ಮಧ್ಯಮ ಎದೆ ನೋವನ್ನು ಅನುಭವಿಸುವರು. ದೈಹಿಕ ಚಟುವಟಿಕೆ ಇಂದ ಇರುವುದು ವ್ಯಾಯಾಮ ಆರೋಗ್ಯಕರ ಆಹಾರ ಸೇವನೆ ಇದಕ್ಕೆ ರಾಮಬಾಣ.

೭.ಜೂಲೈ - ಉಸಿರಾಟ ವ್ಯವಸ್ಥೆ

ಉಸಿರಾಟದ ತೊಂದರೆಯನ್ನು ಇವರು ಅನುಭವಿಸುವರು. ಇದು ಅಸ್ತಮಾ ಅಥವಾ ಬೇರೆ ಯಾಗಿರಬಹುದು, ಉಸಿರಾಟದ ಸಮಸ್ಯೆಯನ್ನು ಇವರು ಎದುರಿಸುವರು.

೮.ಆಗಸ್ಟ್ - ಕರಳು

ಈ ತಿಂಗಳಲ್ಲಿ ಜನಿಸಿದವರು ಯಾವುದೇ ಅಪಾಯದ ಅಥವಾ ತೀವ್ರ ತೊಂದರೆಯನ್ನು ಅನುಭವಿಸದಿದ್ದರು, ಆಗಾಗ್ಗೆ ಕರುಳಿನ ಸಮಸ್ಯೆಯನ್ನು ಅಂದರೆ, ಜೀರ್ಣಕ್ರಿಯೆ ಸಮಸ್ಯೆ, ಹೊಟ್ಟೆನೋವು ಮುಂತಾದವುಗಳಿಗೆ ಗುರಿಯಾಗುವರು.

೯.ಸೆಪ್ಟೆಂಬರ್ - ಜೀರ್ಣ ಕ್ರಿಯೆ

ಈ ತಿಂಗಳಲ್ಲಿ ಜನಿಸಿದವರು, ಸಾಮಾನ್ಯವಾಗಿ ಆಗಾಗ್ಗೆ ಬೆಳಗಿನ ಸಮಯ ವಾಕರಿಕೆ ಅಥವಾ ವಾಂತಿ ಬರುವ ಭಾವನೆಯನ್ನು ಅನುಭವಿಸುವರು. ಸರಿಯಾದ ಆಹಾರ ಕ್ರಮವನ್ನು ನೀವು ಪಾಲಿಸಿದರೆ ಇದನ್ನು ನಿಮ್ಮಿಂದ ದೂರ ಇರಿಸಬಹುದು.

೧೦.ಅಕ್ಟೋಬರ್ - ಜನನಾಂಗ

ಈ ತಿಂಗಳಲ್ಲಿ ಜನಿಸಿದವರು, ನಿಮ್ಮ ಊಟದ ಮೇಲೆ ಹೆಚ್ಚು ಗಮನ ಇಡುವುದು ತುಂಬಾ ಮುಖ್ಯ. ನಿಮಗೆ ಅನುವಂಶೀಯ ಅಥವಾ ಸೋಂಕು ತಗುಲುವ ಸಾಧ್ಯತೆಗಳು ಹೆಚ್ಚು. ಆಗಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತೀರಿ.

೧೧.ನವೆಂಬರ್ - ಮೆದುಳು

ನೀವು ಚಳಿಗಾಲದಲ್ಲಿ ಜನಿಸಿರುವವರಾದರೆ, ನೀವೇ ಗಮನಿಸಿರಬಹುದು, ನಿಮಗೆ ಉಸಿರಾಟದ, ಹೃದಯದ ಮತ್ತು ಮೆದುಳಿನ ಸಮಸ್ಯೆ ಆಗಾಗ್ಗೆ ತೊಂದರೆ ನೀಡುತ್ತಿರುತ್ತದೆ.

೧೨.ಡಿಸೆಂಬರ್ - ಮೂಳೆ

ಮೂಳೆ ಎಂದರೆ ನೀವು ಕೈ ಕಾಲು ಅಥವಾ ಸಂದಿ(ಜಾಯಿಂಟ್) ನೋವುಗಳನ್ನು ಅನುಭವಿಸುವಿರಿ. ಇದರ ಜೊತೆಗೆ ಎದೆ ನೋವು, ಉಸಿರಾಟದ ಸಮಸ್ಯೆ, ತಲೆ ನೋವು ಮುಂತಾದ ಸಮಸ್ಯೆಗಳನ್ನು ಎದುರಿಸುವಿರಿ. ವೈರಲ್ ಸೋಂಕು ಆಗುವ ಸಾಧ್ಯತೆಗಳು ಇರುತ್ತವೆ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon