Link copied!
Sign in / Sign up
8
Shares

ಗರ್ಭಿಣಿ ಆಗಿದ್ದ ಈಕೆ,ಜನ್ಮ ನೀಡಿದಳು..ಆದರೆ ಮಗುವಿಗಲ್ಲ! ಮುಂದೇನಾಯಿತೆಂದು ನೋಡಿ ಭಾವುಕರಾಗಿ!

ಲಾರೆನ್ ತಾನು ಗರ್ಭಿಣಿ ಆಗುತ್ತಿದ್ದೇನೆ ಎಂದು ತಿಳಿದೊಡನೆ ಆಕಾಶದಲ್ಲಿ ತೇಲಾಡುತ್ತಿದ್ದಳು. ಆಕೆಯ ಪ್ರೆಗ್ನನ್ಸಿ ಟೆಸ್ಟ್ ಕಿಟ್ ಬಳಸಿ ನಡೆಸಿದ ಪರೀಕ್ಷೆಯು ಗರ್ಭಧಾರಣೆಯನ್ನು ಸಾಬೀತು ಮಾಡಿದಾಗ ಅವಳ ಹರ್ಷಕ್ಕೆ ಪಾರವೇ ಇರಲಿಲ್ಲ. ಆಕೆಯ ಹೊಟ್ಟೆಯು ಬೆಳೆಯುತ್ತಾ ಹೋಯಿತು. 17 ವಾರಗಳು ಆಗೋ ಅಷ್ಟರಲ್ಲಿ ಆಕೆಯ ಹೊಟ್ಟೆಯು ಎಷ್ಟು ಊದಿರಬೇಕಿತ್ತೋ, ಅಷ್ಟು ಉಬ್ಬಿತ್ತು. 27 ವರ್ಷ ವಯಸ್ಸಿನ ಲಾರೆನ್ ತನ್ನ ತಾಯ್ತನದ ಜೀವನವನ್ನು ಎದುರು ನೋಡುತ್ತಿದ್ದಳು. ಆದರೆ ಗರ್ಭಧಾರಣೆಯ ಏಳೂವರೆ ವಾರದಲ್ಲಿ ಕಾಣಿಸಿಕೊಂಡ ತೀವ್ರ ರಕ್ತಸ್ರಾವವು ಆಕೆಯು ವೈದ್ಯರ ಬಳಿ ತಪಾಸಣೆಗೆ ಹೋಗುವಂತೆ ಮಾಡಿತು.


ವೈದ್ಯರು ಆಕೆಯ ತಪಾಸಣೆಯನ್ನು ನಡೆಸಿ, ಆಕೆಗೆ ಮೋಲಾರ್ ಪ್ರೆಗ್ನನ್ಸಿ ಉಂಟಾಗಿದೆ ಎನ್ನುತ್ತಾರೆ. ಆದರೆ ಅದು ಏನು ಎಂದೇ ತಿಳಿಯದ ಲಾರೆನ್ ವೈದ್ಯರಿಗೆ ಬಿಡಿಸಿ ಹೇಳಲು ಕೇಳಿದಾಗ, ಆಕೆಯ ಕೈಗೆ ಒಂದು ರಿಪೋರ್ಟ್ ಕೊಡ್ತಾರೆ. ಅದನ್ನು ನೋಡಿ ಆಕೆ ಮಾನಸಿಕವಾಗಿ ಕುಸಿದು ಹೋಗುತ್ತಾಳೆ. ಮೋಲಾರ್ ಪ್ರೆಗ್ನನ್ಸಿ ಎಂದರೆ ಒಂದು ಕಾಯಿಲೆ ಆಗಿದ್ದು, ಇದರಲ್ಲಿ ಕೋಶಗಳು ಗುಂಪಾಗಿ ಒಂದು ಗಡ್ಡೆಯನ್ನು ಹುಟ್ಟು ಹಾಕುತ್ತವೆ. ಇಂಗ್ಲೆಂಡಿನಲ್ಲಿ ಬದುಕುತ್ತಿದ್ದ ಲಾರೆನ್ ತಾನು ಮಗುವನ್ನು ಹೊತ್ತಿಲ್ಲ, ಬದಲಿಗೆ ಒಂದು ಗಡ್ಡೆಯನ್ನು ಹೊತ್ತಿದ್ದೇನೆ ಎಂದು ಅರಿತು ದಿಗ್ಭ್ರಮೆಗೆ ಒಳಗಾದಳು. ಅಷ್ಟೇ ಅಲ್ಲದೆ ಈ ಗಡ್ಡೆ ಕ್ಯಾನ್ಸರ್ ಉಂಟು ಮಾಡುವಂತದ್ದು ಎಂದು ಕೂಡ ತಿಳಿದು ಬಂದಿತು.

ಹೀಗಾಗಿ ಆಕೆಯನ್ನು ಕಿಮೊತೆರಪಿ ಚಿಕಿತ್ಸೆಗೆ ಒಳಪಡಿಸಲಾಯಿತು. ಆಗ ಆಕೆ ಕೂದಲನ್ನ ಕಳೆದುಕೊಂಡಳು. ವೈದ್ಯರು ಗಡ್ಡೆಯ ಬಹುತೇಕ ಪಾಲನ್ನು ಹೊರ ತೆಗೆದುಹಾಕಿದರೂ, ಗಡ್ಡೆಯು ಬಹಳ ಆತಂಕಕಾರಿ ವೇಗದಲ್ಲಿ ಬೆಳೆಯಲು ಮುಂದುವರೆಸಿತು. ಆದರೆ 5 ತಿಂಗಳ ನಂತರ, ಹೊಟ್ಟೆ ಉಳಿಕಿದಂತೆ ಅನಿಸಿ, ಲಾರೆನ್ ತನ್ನ ಹೊಟ್ಟೆಯಲ್ಲಿರುವುದನ್ನು ಹೊರಹಾಕಬೇಕು ಎನಿಸಿದಾಗ, ಆಕೆಯು ತನ್ನ ಗಡ್ಡೆಯನ್ನು ಹೊರ ತಳ್ಳಿದಳು. ಅದು ಆಕೆಗೆ ಮಗುವನ್ನು ಹೊರತಳ್ಳುವಷ್ಟೇ ನೋವು ನೀಡಿತು.

ಅವಳ ಪ್ರಕಾರ ಗಡ್ಡೆಯು ಥೇಟ್ ಮಗುವಿನ ರೀತಿಯಲ್ಲೇ ಬೆಳೆಯುತ್ತಿತ್ತು ಮತ್ತು ದೇಹದಲ್ಲಿ ಗರ್ಭಧಾರಣೆ ವೇಳೆ ಉಂಟಾಗುವ ಹಾರ್ಮೋನ್ ಬದಲಾವಣೆಯೇ ಉಂಟಾಗುತ್ತಿತ್ತು. ಹೀಗಾಗಿ ಪ್ರತಿಯೊಂದು ಪ್ರೆಗ್ನನ್ಸಿ ಟೆಸ್ಟ್ ಪಾಸಿಟಿವ್ ಬರುತಿತ್ತು. ಆದರೆ ವೈದ್ಯರು ಈಕೆಗೆ ಗರ್ಭಧರಿಸುವುದು ಬಹಳ ಕಷ್ಟ ಎಂಬ ಎಚ್ಚರಿಕೆ ನೀಡಿದರು. ಆದರೆ ದೇವರ ವರದಂತೆ ಆಕೆ ಒಂದು ವರ್ಷದ ನಂತರ ನಿಜಕ್ಕೂ ಗರ್ಭಿಣಿ ಆದಳು. ಈಗ ಆಕೆಗೆ ಹತ್ತು ತಿಂಗಳ ಒಂದು ಮಗುವಿದೆ! ಇದನ್ನೇ ಅಲ್ಲವೇ ದೇವರ ಆಟ ಎನ್ನುವುದು!

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon