Link copied!
Sign in / Sign up
3
Shares

ಮಗುವಿಗೆ ಜನ್ಮ ನೀಡಿದ ಮೇಲೆ ಯೋನಿಯಲ್ಲಿ ಆಗುವ ಈ 8 ಬದಲಾವಣೆಗಳ ಬಗ್ಗೆ ಯಾರೂ ಹೇಳುವುದಿಲ್ಲ!

ಒಂದು ಮಗುವಿಗೆ ಜನ್ಮ ನೀಡಿದ ನಂತರ ಹೆಣ್ಣಿನ ಲೈಂಗಿಕ ಭಾಗಗಳು ಬದಲಾವಣೆಗೆ ಒಳಗಾಗುತ್ತವೆ ಮತ್ತು ಆಕೆಯ ಲೈಂಗಿಕ ಆಸಕ್ತಿಯಲ್ಲೂ ಬದಲಾವಣೆ ಆಗಬಹುದು. ನೀವು ಈಗಷ್ಟೇ ಜನ್ಮ ನೀಡಿದ ತಾಯಿ ಆಗಿದ್ದರೆ, ಸೆಕ್ಸ್ ಎನ್ನುವುದು ನಿಮಗೆ ಬೇಕಾಗಿರುವ ವಿಷಯಗಳ ಪಟ್ಟಿಯಲ್ಲಿ ಈಗ ಕೊನೆಯ ಸ್ಥಾನದಲ್ಲಿ ಇರಬಹುದು. ಆದರೆ ಮಗುವಿಗೆ ಜನನ ನೀಡಿದ ನಂತರ ನಿಮ್ಮ ಯೋನಿಯಲ್ಲಿ ಆಗುವ ಬದಲಾವಣೆಗಳ ಬಗ್ಗೆ ಯಾರು ನಿಮಗೆ ಸರಿಯಾದ ಮಾಹಿತಿ ನೀಡಿರುವುದಿಲ್ಲ. ಹೀಗಾಗಿ ಮಗುವಿನ ಜನನವು ನಿಮ್ಮ ಯೋನಿಯಲ್ಲಿ ತರುವ ಬದಲಾವಣೆಗಳು ಯಾವು ಎಂದು ಇಲ್ಲಿ ಪಟ್ಟಿ ಮಾಡಿದ್ದೇವೆ ಓದಿ

೧. ಅಂಗಗಳು ಕೆಳಗೆ ಬೀಳಬಹುದು

ಒಂದರ್ಥದಲ್ಲಿ ಹೌದು! ನಿಮ್ಮ ಯೋನಿಯ ಸುತ್ತ ಇರುವ ಸ್ನಾಯುಗಳು (ಪೆಲ್ವಿಕ್ ಫ್ಲೋರ್ ಸ್ನಾಯುಗಳು) ಸಹಜವಾಗಿ ನಿಮ್ಮ ಯೋನಿಯ ಭಾಗಗಳನ್ನ ಹಿಡಿದಿಟ್ಟುಕೊಳ್ಳಲು ಕಾರಣವಾಗಿರುತ್ತವೆ. ಇವುಗಳು ಗರ್ಭಧಾರಣೆ ವೇಳೆ ಮತ್ತು ಅದರ ನಂತರ ಸಡಿಲವಾಗುತ್ತವೆ. ಹೀಗಾಗಿ ಅಂಗಗಳು(ಮೂತ್ರನಾಳ, ಗರ್ಭಕೋಶ) ನಿಮ್ಮ ಯೋನಿಯ ನಾಳದಿಂದ ಕೆಳಗೆ ಬೀಳಬಹುದು. ಇದನ್ನು ಸರ್ಜರಿ ಮೂಲಕ ಸರಿಪಡಿಸಬೇಕಾಗುತ್ತದೆ.

೨. ಒಣ ಒಣ ಅನಿಸುವುದು

ಎದೆಹಾಲಿನ ಉತ್ಪತ್ತಿಯು ಈಸ್ಟ್ರೋಜೆನ್(ಮದಜನಕ) ಹಾರ್ಮೋನಿನ ಉತ್ಪತ್ತಿಯನ್ನು ಕಡಿಮೆ ಮಾಡುತ್ತದೆ. ಈ ಹಾರ್ಮೋನೆ ನಿಮ್ಮ ಯೋನಿಯ ರಕ್ತ ಸಂಚಾರಕ್ಕೆ ಸಹಾಯ ಮಾಡುವುದು. ಕಡಿಮೆಯಾದ ರಕ್ತ ಸಂಚಾರದಿಂದ ನೀವು ಲೈಂಗಿಕ ಪ್ರಚೋದನೆ ಹೊಂದುವುದು ಕಷ್ಟ ಆಗಬಹುದು ಮತ್ತು ನಿಮ್ಮ ಯೋನಿಯು ಒಣ ಒಣ ಅನಿಸಬಹುದು. ಈ ಸಮಯದಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಲು ಲ್ಯೂಬ್ರಿಕ್ಯಾಂಟ್ಸ್ (ಕೀಲೆಣ್ಣೆ) ಬಳಸುವುದು ಸೂಕ್ತ.

೩. “ಲೂಸ್” ಅನಿಸಬಹುದು

ಮೊದಲೇ ಹೇಳಿದ ಹಾಗೆ ಇದಕ್ಕೆ ಕಾರಣ ಯೋನಿಯ ಸುತ್ತಲಿನ ಸ್ನಾಯುಗಳು ಗರ್ಭಧಾರಣೆ ವೇಳೆ ಮತ್ತು ಅದರ ನಂತರದಲ್ಲಿ ಸಡಿಲಗೊಳ್ಳುವುದು. ಇದನ್ನು ನೀವು ಸರ್ಜರಿ ಮೂಲಕವೂ ಸರಿ ಪಡಿಸಿಕೊಳ್ಳಬಹುದು. ಇದನ್ನು ನೀವು ನಿವಾರಿಸಬೇಕು ಎಂದರೆ ಗರ್ಭಧಾರಣೆ ಸಮಯದಲ್ಲಿ ನೀವು ಕೆಗೆಲ್ ವ್ಯಾಯಾಮಗಳನ್ನ ಮಾಡುವುದು. ಕೆಗೆಲ್ ವ್ಯಾಯಾಮಗಳು ಮಾಡುವುದರಿಂದ ನಿಮ್ಮ ಸೊಂಟವನ್ನು ಕೂಡ ಗಟ್ಟಿ ಮಾಡುತ್ತದೆ.

೪. ನೋವಾಗುವುದು

ಇದು ಎದೆಹಾಲು ನೀಡುತ್ತಿರುವ ತಾಯಂದಿರಲ್ಲಿ ಇನ್ನೂ ಹೆಚ್ಚಾಗಿ ಕಾಣಿಸಿಕೊಳ್ಳುವಂತದ್ದು. ಇದಕ್ಕೆ ಕಾರಣ ನಿಮ್ಮ ಯೋನಿಯು ಇನ್ನೂ ಗರ್ಭಧಾರಣೆ ಮುಂಚೆ ಇದ್ದ ಸ್ಥಿತಿಗೆ ವಾಪಸ್ ಬರದೇ ಇರುವುದು. ಮುಖ್ಯವಾಗಿ ಎಲಾಸ್ಟಿಕ್ ಸಾಮರ್ಥ್ಯ ಮತ್ತು ಯೋನಿಯಿಂದ ವಿಸರ್ಜಿಸಬೇಕಾದ ಲೋಳೆಯ ಉತ್ಪತ್ತಿ ಅಲ್ಲಿ ಆಗುವ ಗಣನೀಯ ಇಳಿಕೆ. ಬಹುತೇಕ ಬಾರಿ ಈ ತೊಂದರೆಗಳು ಹಾರ್ಮೋನ್ ಅಸಮಾನತೆ ಇಂದ ಆಗುವಂತದ್ದು ಆಗಿದ್ದು, ಇವು ತಾವಾಗಿಯೇ ಸರಿ ಹೋಗುತ್ತವೆ. ಹೀಗಾಗಿ ಮೊದಲೇ ಹೇಳಿದಂತೆ ಲ್ಯೂಬ್ರಿಕ್ಯಾಂಟ್ ನಿಮ್ಮ ಬಳಿ ಇರಿಸಿಕೊಳ್ಳಿ.

೫. ಎದ್ದು ಕಾಣುವ ನರ ನಾಡಿಗಳು

ಯೋನಿಯಲ್ಲಿ ಉಬ್ಬಿರುವ ನಾಡಿಗಳು 10% ಅಷ್ಟು ಹೊಸ ತಾಯಂದಿರಲ್ಲಿ ಕಾಣಿಸಿಕೊಳ್ಳುವ ತೊಂದರೆ. ಇದು ಸಹಜವಾಗಿ ಎರಡನೇ ಗರ್ಭಧಾರಣೆಯ 5 ನೇ ತಿಂಗಳಲ್ಲಿ ಕಾಣಿಸಿಕೊಳ್ಳುತ್ತದೆ. ಇವುಗಳು ಕಣ್ಣಿಗೆ ಕಾಣಲಿಕ್ಕೆ ಗಂಭೀರ ಎನಿಸಿದರೂ, ಊದಿಕೊಂಡಿರುವ ಈ ನಾಡಿಗಳು ನೋವು ಉಂಟು ಮಾಡುವಂತವಲ್ಲ. ಹೆರಿಗೆಯಾಗಿ ಒಂದು ತಿಂಗಳ ನಂತರ ಇವು ಸಹಜ ಸ್ಥಿತಿಗೆ ಮರಳುತ್ತವೆ.

೬. ಬುರುಗು (ಯೀಸ್ಟ್) ಸೋಂಕು

ಗರ್ಭಧಾರಣೆ ವೇಳೆ ನೀವು ಸುಲಭವಾಗಿ ಸೋಂಕಿಗೆ ತುತ್ತಾಗಬಹುದು. ಈ ಯೀಸ್ಟ್ ಇನ್ಫೆಕ್ಷನ್ ಅಥವಾ ಬುರುಗು ಸೋಂಕು ಒಂದು ಹೆಣ್ಣಿನ ಜೀವನದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳು ಗರಿಷ್ಟ ಮಟ್ಟದಲ್ಲಿ ಇರುವುದು ಆಕೆ ಗರ್ಭಿಣಿ ಆದಾಗ ಎನ್ನುತ್ತಾರೆ ತಜ್ಞರು. ಇದು ಸಹಜವಾಗಿ ಗರ್ಭಧಾರಣೆಯ ದ್ವಿತೀಯ ತ್ರೈಮಾಸಿಕದಲ್ಲಿ ಕಾಣಿಸಿಕೊಳ್ಳುತ್ತದೆ. ಗರ್ಭಧಾರಣೆ ವೇಳೆ ಈ ಯೀಸ್ಟ್ ಸೋಂಕು ಆಗುವುದು ಸಹಜ. ಇದು ನಿಮಗೆ ಇರಿಸು ಮುರಿಸು ಉಂಟು ಮಾಡಬಹುದು ಆದರೆ ಜೀವಕ್ಕೆ ಹಾನಿಕರಕ ಅಲ್ಲ.

೭. ಗಾಳಿ ಬಿಡುವುದು !

ಹೌದು, ಹೆರಿಗೆ ನಂತರ ಲೈಂಗಿಕ ಕ್ರಿಯೆಯ ವೇಳೆ ಸಹಜವಾಗಿ ಕಾಣಿಸಿಕೊಳ್ಳುವ ಒಂದು ಸಹಜವಾದ ವಿಷಯ ಎಂದರೆ ಅದು ಯೋನಿಯಿಂದ ಗಾಳಿಯ ವಿಸರ್ಜನೆ. ಆದರೆ ಇದಕ್ಕಿಂತ ಮುಖ್ಯವಾದ ವಿಷಯ ಎಂದರೆ ಗಾಳಿಯು ಎಲ್ಲಿಂದ ಬರುತ್ತಿದೆ ಎಂಬುದು. ಏಕೆಂದರೆ ಗಾಳಿಯು ಗುದನಾಳದಿಂದ ತಪ್ಪಿಸಿಕೊಂಡು ಯೋನಿಯ ನಾಳದೊಳಗೆ ಸೇರಿಕೊಳ್ಳಬಹುದು. ಇದನ್ನು ತಪ್ಪಿಸಲು ನೀವು ಶ್ರೋಣಿಯ ವ್ಯಾಯಾಮಗಳು (ಪೆಲ್ವಿಕ್ ಫ್ಲೋರ್ ವ್ಯಾಯಾಮಗಳು) ಮಾಡಬೇಕಾಗುತ್ತದೆ.

೮. ಆಶಾಕಿರಣ !

ಹೌದು ಹೆರಿಗೆಯ ಭಯವೂ ಒಂದು ಸಮರ್ಥ ಜನನ ನಿಯಂತ್ರಣ ವಿಧಾನ ಎಂದು ಯಾರು ತಾನೇ ತಿಳಿದಿದ್ದರು! ಆದರೆ ಒಂದು ಮಗು ಆದಮೇಲೆ ತಾಯಂದಿರಿಗೆ ಇದರ ಮೇಲಿನ ಕ್ಷೀಣಿಸುತ್ತದೆ. ಏಕೆಂದರೆ, ಹೆಣ್ಣಿನ ಯೋನಿಯು ತನ್ನ ಗಾತ್ರದ ದುಪ್ಪಟ್ಟುಕ್ಕಿಂತ ಹೆಚ್ಚು ಗಾತ್ರಕ್ಕೆ ಹಿಗ್ಗಬಹುದು. ಈ ಸಂಗತಿಯು ಒಂದು ಮಗುವಿಗೆ ಜನ್ಮ ನೀಡಿ ನಂತರ ಚೇತರಿಸಿಕೊಂಡ ತಾಯಂದಿರಿಗೆ ಮನವರಿಕೆ ಆಗಿರುತ್ತದೆ. ಹೀಗಾಗಿ ಯೋನಿಯು ಸ್ವಲ್ಪ ಸಡಿಲ ಆಗಿದ್ದರೂ, ಎಲ್ಲವೂ ಸರಿ ಇಲ್ಲ ಎಂದರ್ಥವಲ್ಲ. ತಾಯಂದಿರು ತಮ್ಮ ಎರಡನೇ ಹೆರಿಗೆಗೆ ಇನ್ನಷ್ಟು ವಿಶ್ವಾಸದಿಂದ ಮುಂದಾಗಬಹುದು.  

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon