ನೀವು ನಿಮ್ಮ ಉದರದೊಳಗೆ ಶಿಶುವನ್ನು ಹೊಂದಿರುವಾಗ, ಅದನ್ನು ಜೋಪಾನಮಾಡುವುದು ಮತ್ತು ಭೂಮಿಗೆ ಪರಿಚಯಿಸುವುದು ನಿಮ್ಮ ಜವಾಬ್ದಾರಿ. ನೀವು ನಿಮ್ಮ ಇಷ್ಟ ಬಂದ ಹಾಗೆ ಇನ್ನು ಮುಂದೆ ಇರುವಂತಿಲ್ಲ, ನಿಮ್ಮ ಬಗ್ಗೆ, ನಿಮ್ಮ ಉದರದೊಳಗಿರುವ ಮುದ್ದು ಕಂದಮ್ಮನ ಬಗ್ಗೆ ಎಚ್ಚರವಹಿಸುವುದನ್ನು ಮರೆಯುವಂತಿಲ್ಲ. ನೀವು ತಿನ್ನುವ ಆಹಾರವು ಕೂಡ ಆರೋಗ್ಯಕರ ಮತ್ತು ಹೆಚ್ಚು ಪೌಷ್ಟಿಕಾಂಶಗಳಿಂದ ಕೂಡಿರಬೇಕು.
ಈ ವಿಡಿಯೋದಲ್ಲಿ ನಿಮ್ಮ ಮಗುವು ಹೇಗೆ ಬೆಳೆಯುತ್ತದೆ ಮಗುವಿನ ಮೂಳೆ ಹೇಗೆ ಬಲವಾಗುತ್ತದೆ, ಮಗುವಿನ ಉಗುರು ಬೆಳೆಯುದು, ಚರ್ಮ ಬೆಳೆಯುವುದು ಮುಂತಾದವುಗಳ್ನು ನಿಮಗೆ ಚಿತ್ರಣ ಸಹಿತ ಹೇಳಲಾಗಿದೆ.
ನಿಮ್ಮ ಗರ್ಭವಾಸ್ಥೆಯಲ್ಲಿ ನೀವು ಹಲವು ಬದಲಾವಣೆಗಳಿಗೆ ಖಂಡಿತವಾಗಿ ಒಳಗಾಗುತ್ತೀರಿ. ನೀವು ದಪ್ಪವಾಗಿ ಬೆಳೆಯುತ್ತಿರಿ, ನಿಮ್ಮ ಭಾವನೆಗಳಲ್ಲಿ ಬದಲಾವಣೆಯನ್ನು ನೋಡುವಿರಿ, ನೀವು ನಿಮ್ಮ ತಿನಿಸುಗಳ ಬಯಕೆಯನ್ನು ಪಡೆಯುವಿರಿ, ಮತ್ತು ಹೆಚ್ಚು ಶಕ್ತಿ ಇರುವಂತೆ ಅಥವಾ ಸುಸ್ತಾಗುವಂತೆ ಭಾಸವಾಗುತ್ತದೆ. ಆದರೆ ಇವೆಲ್ಲ ಗರ್ಭವಾಸ್ಥೆಯಲ್ಲಿ ಸಾಮಾನ್ಯ. ಆದರೆ ನೀವು ಮಾಡುವ ಪ್ರತಿಯೊಂದು ಕೆಲಸದಲ್ಲು ಎಚ್ಚರಿಕೆ ವಹಿಸುವುದು ಮುಖ್ಯ.