Link copied!
Sign in / Sign up
26
Shares

ನಿಮ್ಮ ಜನ್ಮ ದಿನ ನಿಮ್ಮ ಭವಿಷ್ಯದ ಬಗ್ಗೆ ಏನು ಹೇಳುತ್ತದೆ ಗೊತ್ತೇ ?

ಇತರ ಜೀವಿಗಳಿಗೆ ಹೋಲಿಸಿದರೆ ಮಾನವನ ಜೀವನವು ಬಹಳ ಸಂಕೀರ್ಣ ಮತ್ತು ಸವಾಲಿನಿಂದ ಕೂಡಿದೆ. ಜೀವನವು ನಿರೀಕ್ಷಿಸಲಾಗದ ಅನಿರೀಕ್ಷಿತ ನಿಗೂಢಗಳಿಂದ ಕೂಡಿದೆ. ನಿಮಗೆ ನಿಮ್ಮ ಭವಿಷ್ಯದ ಬಗ್ಗೆ ಮಾಹಿತಿ ಸಿಕ್ಕರೆ ಅದನ್ನು ತಡೆಯಲು, ಅದರಿಂದ ಹಾಗುವ ಮೋಸಗಳಿಗೆ ಮುನ್ನೆಚ್ಚರಿಕೆಗಳನ್ನು, ಅದರಿಂದ ತಪ್ಪಿಸಿಕೊಳ್ಳಲು ಉಪಾಯಗಳನ್ನು, ಅದರಿಂದ ಸಂಪೂರ್ಣ ದೂರವಾಗಲು ಸಾಧ್ಯವಾಗದೆ ಇದ್ದರು, ಅದರ ಅಪಾಯವನ್ನು ಕಡಿಮೆ ಮಾಡಿಕೊಳ್ಳಲು ಸಹಾಯವಾಗುತ್ತದೆ. ಅದಕ್ಕಾಗಿ ಪರಿಣಿತರಿಂದ ನಿಮ್ಮ ಜನ್ಮ ದಿನದ ಆಧಾರದ ಮೇಲೆ ನಿಮ್ಮ ಭವಿಷ್ಯದ ಒಂದು ಮುನ್ನೋಟಗಳನ್ನು ಇಲ್ಲಿ ವಿವರಿಸಲಾಗಿದೆ.

೧.ಜನವರಿ ೧೮ - ಫೆಬ್ರವರಿ ೧೮

ಇವರು ಯಾವುದೇ ಕೆಲಸವನ್ನು ಉತ್ಸಾಹದಿಂದ ಮಾಡುವರು. ಇವರು ಅಭಿವೃದ್ಧಿ ಇರುವ ವೃತ್ತಿ ಜೀವನವನ್ನು ಆಯ್ಕೆಮಾಡುಕೊಳ್ಳುವರು. ಇವರು ತುಂಬಾ ಪ್ರತಿಭಾವಂತರು ಮತ್ತು ಇವರ ಪ್ರತಿಭೆಯನ್ನು ಬೇರೆಯವರ ಜೊತೆ ಹಂಚಿಕೊಳ್ಳುವರು.

೨.ಫೆಬ್ರವರಿ ೧೯ - ಮಾರ್ಚ್ ೨೦

ಇವರು ಅರ್ಥಗರ್ಭಿತ ಕನಸು ಕಾಣುವ ವ್ಯಕ್ತಿಗಳು. ಇವರ ಕೌಶಲ್ಯಗಳನ್ನು ತೋರಿಸುವಲ್ಲಿ ಇವರು ತುಂಬಾ ಉತ್ಸುಕರಾಗಿದ್ದು, ಅದನ್ನು ಬೇರೆಯವರುಗೆ ಹೇಳಿಕೊಡುವಾಗ ಅಷ್ಟು ಉತ್ಸುಕರಾಗಿರುವುದಿಲ್ಲ. ಇವರಿಗೆ ಸಂಗೀತ, ಕಲೆ, ಮತ್ತು ಡಿಸೈನ್ ಕ್ಷೇತ್ರದಲ್ಲಿ ಸಾದಿಸಲು ಹೆಚ್ಚು ಅವಕಾಶಗಳಿವೆ.

೩.ಮಾರ್ಚ್ ೨೧ - ಏಪ್ರಿಲ್ ೧೯

ಈ ದಿನಾಂಕದ ಅಂತರದಲ್ಲಿ ಜನಿಸುವರು ಹೆಚ್ಚು ಮಹತ್ವಕಾಂಕ್ಷಿಗಳಾಗಿದ್ದು, ಕ್ರಿಯಾಶೀಲರಾಗಿರುತ್ತಾರೆ. ಇವರು ಕಠಿಣ ಶ್ರಮ ಪಡುವ ವ್ಯಕ್ತಿಗಳು ಮತ್ತು ಇವರು  ತಮ್ಮ ಕಷ್ಟದ ದಿನಗಳನ್ನು ಆತ್ಮ ವಿಶ್ವಾಸದಿಂದ ಮತ್ತು ಸಹಿಷ್ಣುತೆಯಿಂದ ಸಮರ್ಥವಾಗಿ ಎದುರಿಸುವರು. ಇವರು ಜಾಣರು ಮತ್ತು ತಮ್ಮ ಭವಿಷ್ಯದಲ್ಲಿ ಅಥವಾ ತುರ್ತು ಸಮಯದ ಅವಶ್ಯಕತೆಗಾಗಿ ಹಣವನ್ನು ಕೂಡಿಸುವರು. ಹಾಗಿದ್ದರೂ ಸಹ, ಇವರು ಭವಿಷ್ಯದ ಬಗ್ಗೆ ಹೆಚ್ಚು ಚಿಂತಿಸದೆ ವರ್ತಮಾನವನ್ನು ಖುಷಿಯಿಂದ ಅನುಭವಿಸುವರು.

೪.ಏಪ್ರಿಲ್ ೨೦ - ಮೇ ೨೦

ಸಾಮಾನ್ಯವಾಗಿ ಇವರು ವೃಷಭ ರಾಶಿಯವರಾಗಿರುತ್ತಾರೆ, ಮತ್ತು ಇವರು ಹಣವನ್ನು ಹೆಚ್ಚು ಇಷ್ಟ ಪಡುತ್ತಾರೆ.  ಇವರು ವೈಭೋಗದ ಜೀವನವನ್ನು ನಡೆಸಲು ಇಚ್ಛಿಸುವರು. ಹಣವನ್ನು ಗಳಿಸಲು ಇವರು ಕಷ್ಟ ಪಟ್ಟು ಕೆಲಸ ಮಾಡುವರು. ಇವರ ಕೆಲವು ವ್ಯಕ್ತಿತ್ವ ಗುಣಗಳು - ಇವರು ವಿಶ್ವಾಸಾರ್ಹರು, ಸಹನೆಯುಳ್ಳವರು, ಶ್ರಮ ಜೀವಿ, ಒಂದು ಕೆಲಸದ ಮೇಲೆ ಗಮನವನ್ನು ಕೇಂದ್ರೀಕರಿಸಿದಾಗ ಇವರನ್ನು ಅದರಿಂದ ಅಡಚಣೆಗೆ ಒಳಗಾಗುವುದಿಲ್ಲ. ಇವರ ಈ ಗುಣವನ್ನು ಇತರರು ಸಾಮಾನ್ಯವಾಗಿ ಅಹಂಕಾರ ಎಂದು ಭಾವಿಸುತ್ತಾರೆ.

೫.ಮೇ ೨೧ - ಜೂನ್ ೨೦

ಇವರಿಗೆ ತಮ್ಮ ಬುದ್ಧಿಶಕ್ತಿಯನ್ನು ಪ್ರಚೋದಿಸುವ ವಾತಾವರಣವು ಬೇಕು, ಇವರು ತಮ್ಮ ಮೆದುಳಿಗೆ ಸವಾಲು ನೀಡುವ ಕೆಲಸವನ್ನು ಮಾಡಲು ತುಂಬಾ ಉತ್ಸುಕರಾಗಿರುತ್ತಾರೆ. ಈ ಕಲಾತ್ಮಕ, ಕೌಶಲ್ಯಪೂರ್ಣ ಮತ್ತು ಸ್ಮಾರ್ಟ್(ಚತುರ) ವ್ಯಕ್ತಿಗಳು ಹೆಚ್ಚಿನ ಸಾಮಾಜಿಕ ಸಂಪರ್ಕಗಳನ್ನು ಬೆಳೆಸಿಕೊಳ್ಳುವರು ಮತ್ತು ಕ್ರಿಯಾತ್ಮಕ ಪರಿಸರದಲ್ಲಿ ಕೆಲಸ ಮಾಡುವರು.

೬.ಜೂನ್ ೨೧ - ಜೂಲೈ ೨೨

ಕೆಲಸವನ್ನು ಯಶಸ್ವಿಯಾಗಿ ಸಂಪೂರ್ಣಗೊಳಿಸುವಲ್ಲಿ ಇವರು ಮುಂದಿರುತ್ತಾರೆ. ಇವರು ಕೆಲಸವನ್ನು ಗುಂಪಿನಲ್ಲಿ ಮಾಡುವುದಕ್ಕಿಂತ ಒಬ್ಬರೇ ಮಾಡಲು ಇಚ್ಛಿಸುವರು. ಅವರ ಜೊತೆಗಾರರೊಂದಿಗೆ ತುಂಬಾ ನಿಷ್ಠಾವಂತರಾಗಿರುತ್ತಾರೆ. ಇವರು ಗಳಿಸಿದ ಹಣವನ್ನು ಕೂಡಿ ಇಟ್ಟು ಅದನ್ನು ಬೆಳೆಸಲು ಬೇರೆ ವ್ಯಾಪಾರ ಅಥವಾ ವ್ಯವಹಾರದಲ್ಲಿ ಹಾಕಲು ಮುಂದಾಗುತ್ತಾರೆ.

೭.ಜೂಲೈ ೨೩ - ಆಗಸ್ಟ್ ೨೨

ಶಕ್ತಿಯುತವಾದ ಇವರು ತಮ್ಮನ್ನು ತಾವು ಹೆಚ್ಚು ನಿರತವಾಗಿರುವಂತೆ ನೋಡಿಕೊಳ್ಳುತ್ತಾರೆ. ಇವರು ಆಶಾವಾದಿಗಳು, ವರ್ಚಸ್ವಿಗಳು, ಮಹತ್ವಕಾಂಕ್ಷಿಗಳು ಮತ್ತು ಇವರು ಬಾಸ್ ಆಗಬೇಕು ಮತ್ತು ಪ್ರಪಂಚವನ್ನು ಮುನ್ನೆಡೆಸಬೇಕು ಎಂಬುವರಷ್ಟು ಹೆಬ್ಬಕೆಯನ್ನು ಹೊಂದಿರುವವರು.

೮.ಆಗಸ್ಟ್ ೨೩ - ಸೆಪ್ಟೆಂಬರ್ ೨೨

ಪ್ರಾಯೋಗಿಕ ಮನಸ್ಸಿನ ಇವರು ಹೆಚ್ಚು ವಿಶ್ಲೇಷಣಾತ್ಮಕ ಮತ್ತು ಕಠಿಣ ಪರಿಶ್ರಮ ಪಡುವವರು. ಇವರು ಸಮಸ್ಯೆಯ ಆಳಕ್ಕೆ ಹೋಗಿ ಅದಕ್ಕೆ ಪರಿಹಾರವನ್ನು ಮೇಲಕ್ಕೆ ತರುವರು. ಅವರ ವೃತ್ತಿಪರ ಜೀವನದಲ್ಲಿ ಅವರು ಪ್ರಕಾಶಿಸುತ್ತಾರೆ ಮತ್ತು ಎಲ್ಲರ ಆಕರ್ಷಣೆಗೆ ಒಳಗಾಗಬೇಕು ಎಂಬುದು ಅವರ ಬಯಕೆ ಕೂಡ.

೯.ಸೆಪ್ಟೆಂಬರ್ ೨೩ - ಅಕ್ಟೋಬರ್ ೨೨

ಇವರ ಮೊದಲ ಆದ್ಯತೆ ಎಂದರೆ, ಜೀವನವನ್ನು ಸಮತೋಲನವಾಗಿ ಸಾಗಿಸಲು ಇವರು ಮೊದಲ ಆದ್ಯತೆಯನ್ನು ನೀಡುವುದು. ಇವರು ನಾಯಕತ್ವ ಗುಣ ಹೊಂದಿದ್ದು, ಶ್ರಮ ಜೀವಿ ಆಗಿರುವರು. ಆದರೆ ಇವರು ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದರು ಸತ್ಯ ಮತ್ತು ನ್ಯಾಯಕ್ಕೆ ಮೇಲುಗೈ ಆಗಲು ಇಚ್ಛಿಸುವರು. ಇವರ ಮನವೊಲಿಸುವುದು ಸುಲಭ ಮತ್ತು ಇವರು ಪ್ರೇರೇಪಕರು.

೧೦.ಅಕ್ಟೋಬರ್ ೨೩ - ನವೆಂಬರ್ ೨೧

ಇವರಿಗೆ ಕಾರ್ಯ ನಿರ್ವಹಿಸುವುದು, ಸೃಷ್ಟಿಸುವುದು ಮತ್ತು ಸಮಸ್ಯೆಯನ್ನು ಸರಿಪಡಿಸುವುದು ನೈಸರ್ಗಿಕವಾಗಿ ಬಂದಿರುತ್ತದೆ. ಒಮ್ಮೆ ಇವರು ಒಂದು ಕೆಲಸವನ್ನು ಮಾಡಲು ಶುರು ಮಾಡಿದರೆ ಹಿಂದೆ ತಿರುಗಿ ನೋಡುವುದಿಲ್ಲ ಮತ್ತು ಅದನ್ನು ಅರ್ಧಕ್ಕೆ ಬಿಡುವುದಿಲ್ಲ. ಅದರಲ್ಲಿ ಬರುವ ಅಡತಡೆಗಳನ್ನು ವೈಜ್ಞಾನಿಕವಾಗಿ ಮತ್ತು ಪ್ರಾಯೋಗಿಕವಾಗಿ ಸರಿಪಡಿಸಿಕೊಂಡು ಕೆಲಸವನ್ನು ಪೂರ್ಣ ಮಾಡುವರು.

೧೧.ನವೆಂಬರ್ ೨೨ - ಡಿಸೆಂಬರ್ ೨೧

ತಮ್ಮ ಗುರಿಯನ್ನು ಮನಸ್ಸಿನಲ್ಲೇ ದೃಶ್ಯಕರಿಸಿ, ಅದರ ಹಾಗುಹೋಗುಗಳನ್ನು ಗುರುತು ಮಾಡಿ ಅದನ್ನು ಸಾದಿಸುವರು. ಅದನ್ನು ಮಾಡಲು ತೀರ್ಮಾನಿಸಿದ ಮೇಲೆ ಅದನ್ನು ಯಾವುದೇ ಕಾರಣಕ್ಕೂ ಪೂರ್ಣವಾಗುವವರೆಗೂ ಬಿಡುವುದಿಲ್ಲ. ಕ್ರಿಯಾತ್ಮಕ ವಾತಾವರಣದಲ್ಲಿ ಮತ್ತು ವಿವಿಧ ಕಾರ್ಯಗಳನ್ನು ಮಾಡಲು ಅವರು ಇಚ್ಛಿಸುವರು.

೧೨.ಡಿಸೆಂಬರ್ ೨೨ - ಜನವರಿ ೧೯

ಇವರು ಏನನ್ನಾದರೂ ಸಾಧಿಸಬೇಕು ಎಂಬುದನ್ನು ಮನದಲ್ಲಿಟ್ಟುಕೊಂಡು ಜನಿಸುವರು. ತಮ್ಮ ಗುರಿಗಳನ್ನು ತಲುಪುವ ಪ್ರಕ್ರಿಯೆಯಲ್ಲಿ, ಅವರು ಪ್ರಾಮಾಣಿಕತೆ, ಸಮರ್ಪಣೆ ಮತ್ತು ಪರಿಶ್ರಮವನ್ನು ಪ್ರದರ್ಶಿಸುತ್ತಾರೆ. ಇವರ ಜೀವನದ ಪ್ರಮುಖ ಗುಣ ಎಂದರೆ ಕಠಿಣ ಶ್ರಮ ಮತ್ತು ನಿಯತ್ತು. ಇವರು ಒಳ್ಳೆ ವ್ಯಕ್ತಿಗಳನ್ನು ಇಷ್ಟಪಡುತ್ತಾರೆ, ಮತ್ತು ಇವರು ಕೆಳ ಜನ ಬುದ್ದಿ ಕಡಿಮೆ ಇದೆ ಎಂದು ಭೇದಿಸುವಿದಿಲ್ಲ ಅವರು ನಿಷ್ಠಾವಂತರು ಒಳ್ಳೆಯವರು ಆಗಿದ್ದರೆ, ಅವರನ್ನು ಇವರು ಪ್ರೀತಿಸುತ್ತಾರೆ. ಇವರು ನಂಬಿಕೆಗೆ ಅರ್ಹರಾದ ವ್ಯಕ್ತಿಗಳು.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon