Link copied!
Sign in / Sign up
128
Shares

ಜನರು ನಿಮ್ಮ ಬಗ್ಗೆ ತಪ್ಪು ತಿಳಿಯುವ ವಿಷಯಗಳು ಯಾವುದೆಂದು ನಿಮ್ಮ ರಾಶಿ ಹೇಳುತ್ತದೆ ನೋಡಿ

ನೀವು ಒಂದು ವ್ಯಕ್ತಿಯ ರಾಶಿಯ ಬಗ್ಗೆ ತಿಳಿದಾಗ, ನೀವು ಅವರ ಬಗ್ಗೆ ಇರುವ ಸಾಮಾನ್ಯೀಕರಣಗೊಂಡಿರುವ ಅಭಿಪ್ರಾಯಗಳ ಸಹಾಯದಿಂದ ಅವರ ಬಗ್ಗೆ ಕೆಲವು ವಿಷಯಗಳನ್ನ ಊಹಿಸಬಹುದು ಅಥವಾ ಇನ್ನೂ ಕೆಲವೊಮ್ಮೆ ನಿರ್ಧಾರಗಳನ್ನ ತೆಗೆದುಕೊಳ್ಳಬಹುದು ಎನ್ನುತ್ತಾರೆ ಖ್ಯಾತ ಜ್ಯೋತಿಷಿ ವಿಶ್ವಾದಿತ್ಯ ಅವರು. ಈ ಊಹೆಗಳು ವಿಚಿತ್ರ ಅನಿಸುವಷ್ಟು ನಿಜವಾಗಿರುತ್ತವೆ ಎನ್ನುತ್ತಾರೆ ಇವರು. ಆದರೆ ನಿಮ್ಮ ರಾಶಿಯ ಆಧಾರದ ಮೇಲೆ ನಿಮ್ಮ ಬಗ್ಗೆ ಜನರು ತಪ್ಪಾಗಿ ಅಂದುಕೊಳ್ಳುವುದು, ತಪ್ಪು ನಿರ್ಧಾರಗಳನ್ನ ತೆಗೆದುಕೊಳ್ಳುವುದು ಯಾವ ವಿಷಯಗಳಲ್ಲಿ ಎಂದು ಹೇಳಬಹುದೇ? ಹೌದು, ಅವುಗಳು ಹೀಗಿವೆ ನೋಡಿ.


೧. ಮೇಷ

ವಾದ ಮಾಡುತ್ತೀರಾ, ಎದುರು ಮಾತನಾಡುತ್ತೀರಾ ಮತ್ತು ಎಲ್ಲದನ್ನು ಸ್ಪರ್ಧೆಯಂತೆ ಪರಿಗಣಿಸುತ್ತೀರಿ. ನೀವು ಈ ರಾಶಿಯಲ್ಲಿ ಹುಟ್ಟಿದ್ದರೆ, ಜನರು ನಿಮ್ಮ ಬಗ್ಗೆ ಈ ಮೂರು ವಿಷಯಗಳನ್ನ ಅಂದುಕೊಳ್ಳುವುದರ ಬಗ್ಗೆ ಆಶ್ಚರ್ಯ ಪಡಬೇಡಿ. ಇದಕ್ಕೆ ಕಾರಣ ಏನು ಎಂದರೆ ನೀವು ನಿಮ್ಮ ಸಿಟ್ಟಿಗೆ, ಅಸಹನೆಗೆ ಮತ್ತು ದೊಡ್ಡ ರಿಸ್ಕ್ ಗಳಿಗೆ ಕೈ ಹಾಕುವುದಕ್ಕೇನೆ ಹೆಚ್ಚು ಗುರುತಿಸಿಕೊಂಡಿರುವುದು.


೨. ವೃಷಭ

ಭಂಡತನ, ನಿಧಾನ ಮತ್ತು ಸಂವೇದನಾಶೀಲತೆ. “ಗೂಳಿಯಷ್ಟು ಭಂಡ” ಎಂಬ ಮಾತು ಸುಮ್ಮನೆ ಬಳಕೆಯಲ್ಲಿ ಇರುವುದಲ್ಲ. ಜ್ಯೋತಿಷ್ಯದಲ್ಲಿ ಗೂಳಿ ಎಂದರೆ ಅದು ವೃಷಭ ರಾಶಿಯವರು. ಆದರೆ ಒಳ್ಳೆಯ ವಿಷಯ ಏನೆಂದರೆ ಇವರು ಸಂವೇದನಾಶೀಲರಾಗಿರುವ ಕಾರಣ, ಎಲ್ಲಾದರೂ ತೊಂದರೆ ಎದುರಾಗುತ್ತದೆ ಎಂದರೆ ಅದನ್ನ ಇವರು ಮೊದಲೇ ಗ್ರಹಿಸುತ್ತಾರೆ. ಇದು ಅವರಿಗೆ ದೊಡ್ಡ ಸಾಧನೆಗಳನ್ನ ಮಾಡಲು ಸಹಾಯ ಮಾಡುತ್ತದೆ.


೩. ಮಿಥುನ

ಹೆಚ್ಚು ಮಾತು, ಎರಡು ಸ್ವಭಾವ ಮತ್ತು ಜಾರಿಕೊಳ್ಳುವ ಬುದ್ದಿ. ಮಿಥುನ ರಾಶಿಯ ಚಿಹ್ನೆಯಲ್ಲಿ ಎರಡು ಮುಖಗಳಿರುವುದು ಇವರದ್ದು ಒಂದೊಂದು ಸಮಯದಲ್ಲಿ ಒಂದೊಂದು ಸ್ವಭಾವ ಇರುತ್ತದೆಯೆಂದು. ಆದರೆ ಒಳ್ಳೆಯ ವಿಷಯ ಏನೆಂದರೆ ನೀವು ಮಿಥುನ ರಾಶಿಯವರು ಆಗಿದ್ದರೆ, ನೀವು ಒಂದಕ್ಕಿಂತ ಹೆಚ್ಚು ದೃಷ್ಟಿಕೋನಗಳಿಂದ ಒಂದು ಸನ್ನಿವೇಶವನ್ನ ವಿಶ್ಲೇಷಿಸಬಹುದು.


೪. ಕಟಕ

ತುಂಬಾ ಭಾವುಕರು, ಸೆಂಟಿಮೆಂಟಲ್ ಮತ್ತು ಎಲ್ಲರನ್ನೂ ಹಚ್ಚಿಕೊಳ್ಳುವುದು. ಕಟಕ ರಾಶಿಯವರು ಪಾಪ ಎಲ್ಲಾ ಸಮಯದಲ್ಲೂ ಎಲ್ಲಾ ಭಾವನೆಗಳನ್ನ ಅನುಭವಿಸುವ ಜನರು. ಆದರೆ ಒಳ್ಳೆಯ ವಿಷಯ ಏನೆಂದರೆ ನೀವು ಇನ್ನೊಬ್ಬರ ನೋವಿಗೆ ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡು ಸ್ಪಂದಿಸುತ್ತೀರ.


೫. ಸಿಂಹ

ಶೋ-ಆಫ್ (ತೋರಿಕೆ), ಹೆಚ್ಚು ಭಾವುಕತೆ ಮತ್ತು ತುಂಬಾ ನಿಷ್ಠೆ. ಸಿಂಹ ರಾಶಿಯವರು ತುಂಬಾ ಅಹಂ ಉಳ್ಳವರು ಎಂಬ ಆಪಾದನೆ ಕೇಳಿ ಬರುತ್ತಲೇ ಇರುತ್ತದೆ, ಆದರೆ ತಿಳಿದಿರುವವರು ಹೇಳುವಂತೆ “ನಿನ್ನನ್ನು ನೀನು ಪ್ರೀತಿಸು, ಆಗ ಎಲ್ಲವೂ ತಾನಾಗಿಯೇ ಸರಿ ಹೋಗುತ್ತದೆ” ಎಂಬಂತೆ ಮೊದಲ ನಮ್ಮನ್ನು ನಾವು ಪ್ರೀತಿಸಿದಾಗಲೇ ಜಗತ್ತನ್ನು ಗೆಲ್ಲಲು ಸಾಧ್ಯ.


೬. ಕನ್ಯಾ

ಬೇಗ ತೃಪ್ತಿ ಹೊಂದುವುದಿಲ್ಲ, ತುಂಬಾ ಲೆಕ್ಕಾಚಾರ ಮತ್ತು ತುಂಬಾ ಅಚ್ಚುಕಟ್ಟುತನದ ಅಪೇಕ್ಷೆ. ಕನ್ಯಾ ರಾಶಿಯವರು ತುಂಬಾನೇ ಯೋಚಿಸುತ್ತಾರೆ ಮತ್ತು ತುಂಬಾ ಲೆಕ್ಕಾಚಾರ ಹಾಕುತ್ತಾರೆ. ಆದರೆ ಒಳ್ಳೆಯ ವಿಷಯ ಏನೆಂದರೆ, ಈ ಗುಣಗಳಿಂದಲೇ ಅವರು ಎಲ್ಲದರಲ್ಲೂ ಅಚ್ಚುಕಟ್ಟಾಗಿ ಇರುತ್ತಾರೆ.


೭. ತುಲಾ

ಜಾರಿಕೊಳ್ಳುವುದು, ಜನರನ್ನ ಮೆಚ್ಚಿಸಲು ಪ್ರಯತ್ನಿಸುವುದು ಮತ್ತು ಪರೋಕ್ಷ ಆಕ್ರಮಣಶೀಲತೆ. ನೀವು ತುಲಾ ರಾಶಿಯವರಾಗಿದ್ದರೆ, ನಿರ್ಧಾರ ತೆಗೆದುಕೊಳ್ಳುವುದೇ ನಿಮಗೆ ಒಂದು ದೊಡ್ಡ ಫಜೀತಿ. ಏಕೆಂದರೆ ನೀವು ತೆಗೆದುಕೊಳ್ಳುವ ನಿರ್ಧಾರ ಎಲ್ಲರನ್ನೂ ಖುಷಿಪಡಿಸಬೇಕು ಎಂಬ ಹಂಬಲ ನಿಮ್ಮದು. ಆದರೆ ನಿಮ್ಮ ನ್ಯಾಯಪರ ನಡೆ ನಿಮಗೆ ಪ್ರಶಂಸೆ ತಂದುಕೊಡುತ್ತದೆ.


೮. ವೃಶ್ಚಿಕ

ಜನರನ್ನ ಮರುಳು ಮಾಡುವುದು, ವಿಷಯಗಳನ್ನ ಗುಟ್ಟಾಗಿರಿಸುವುದು ಮತ್ತು ಎಲ್ಲದರಲ್ಲೂ ಲೆಕ್ಕಾಚಾರ ಹಾಕುವುದು. ಜ್ಯೋತಿಷ್ಯದಲ್ಲಿ ವೃಶ್ಚಿಕ ರಾಶಿಯವರ ಬಗ್ಗೆ ಒಂದು ಭಯಂಕರ ಅಭಿಪ್ರಾಯವಿದೆ, ಅದುವೇ ಜನರನ್ನ ಜಾಣ್ಮೆಯಿಂದ ಮರುಳು ಮಾಡುವುದು. ಆದರೆ ನಿಮ್ಮ ಯೋಚನೆಗಳು ಒಳ್ಳೆಯದಾಗಿದ್ದರೆ, ಈ ಶಕ್ತಿಯಿಂದಲೇ ನೀವು ಜಾಗವನ್ನ ಗೆಲ್ಲಬಹುದು.


೯. ಧನುರಾಶಿ

ಒರಟು, ಮಾತಿನ ಮೇಲೆ ಹಿಡಿತವಿಲ್ಲ ಮತ್ತು ಮೋಜು ಮಾಡುವುದು. ನಿಮ್ಮ ಸ್ನೇಹಿತರಲ್ಲಿ ಯಾರಿಗಾದರೂ ತೊಂದರೆಗಳು ಕಾಣಿಸಿಕೊಂಡರೆ, ಅವರು ಮೊದಲು ಬರುವುದು ನಿಮ್ಮ ಬಳಿಯೇ. ಏಕೆಂದರೆ ನೀವು ಇದ್ದದ್ದನ್ನು ಇದ್ದ ಹಾಗೆಯೇ ಹೇಳಿ ವಿವರಿಸಿ, ಸಾಂತ್ವಾನ ಹೇಳುತ್ತೀರಾ ಎಂದು. ಕೆಟ್ಟದ್ದು ಎನ್ನುವ ಗುಣಗಳನ್ನ ಪರಿಣಾಮಕಾರಿಯಾಗಿ ಬಳಸಿದರೆ, ಎಲ್ಲರೂ ನಿಮ್ಮ ಮೇಲೆ ನಂಬಿಕೆ ಇಡುವರು.


೧೦. ಮಕರ

ಯಾವಾಗಲು ಕೆಲಸದ ಬಗ್ಗೆ ಚಿಂತೆ ಮತ್ತು ಗುರಿಯ ಕಡೆಯೇ ಅತಿಯಾದ ಗಮನ. ಮಕರ ರಾಶಿಯವರು ಏನಾದರು ಮಾಡಬೇಕು ಎಂದುಕೊಂಡರೆ ಅವರನ್ನ ಹಿಡಿಯುವವರು ಯಾರು ಇಲ್ಲ. ಈ ಕಾರಣದಿಂದಲೇ ಜನರು ಕೆಲವೊಮ್ಮೆ ನಿಮಗೆ ಎಷ್ಟೊಂದು ಧೀಮಾಕು, ಎಷ್ಟೊಂದು ಭಂಡತನ ಎಂದು ಭಾವಿಸುತ್ತಾರೆ. ಆದರೆ ನಿಮ್ಮ ದಾರಿಗೆ ಅಡ್ಡ ಬರಬಾರದು ಎಂದು ಅವರಿಗೆ ತಿಳಿದಿರಬೇಕು !


೧೧. ಕುಂಭ

ತಾನು ನಡೆದದ್ದೇ ದಾರಿ ಎಂಬ ಭಾವನೆ, ಯಾವಾಗಲು ವೈಜ್ಞಾನಿಕವಾಗಿ ಯೋಚಿಸುವುದು ಮತ್ತು ಎಲ್ಲರೊಂದಿಗೂ ಹೋಗುವುದು. ನೀವು ಎಲ್ಲರೊಡನೆ ಬೆರೆಯುವಿರಿ ಎಂಬ ಮಾತು ಇದ್ದರೂ, ನೀವು ಯಾವಾಗಲೂ ಹೊಸತನ್ನ ಅನ್ವೇಷಿಸುವದರಲ್ಲಿ ನಿರತರಾಗಿರುತ್ತೀರಿ. ಈ ಸಮಯದಲ್ಲಿ ನೀವು ಯಾರು ಏನು ಅಂದುಕೊಳ್ಳುತ್ತಾರೆ ಎಂದು ಯೋಚಿಸುವುದೂ ಇಲ್ಲ. ಆದರೆ ಗೆಲ್ಲಲು ಬೇಕಿರುವುದೇ ಈ ಗುಣಗಳು ತಾನೇ.


೧೨. ಮೀನಾ

ಭಾವನಾತ್ಮಕ, ಯಾವಾಗಲೂ ಬೇಸರದಿಂದ ಇರುವುದು ಮತ್ತು ಕಲಾತ್ಮಕ ಮನೋಭಾವ. ಇವರು ಯಾವಾಗಲೂ ಬೇಸರದಿಂದ ಇರುವಂತೆ ಕಂಡು ಬರುತ್ತದೆ, ಆದರೆ ಅದಕ್ಕೆ ಕಾರಣ ಅವರು ಬೇಗ ಬೋರ್ ಆಗುವುದು. ಇವರು ತುಂಬಾ ಭಾವನಾತ್ಮಕ ಜೀವಿಗಳು ಆಗಿರುವುದರಿಂದ, ಇತರರಿಗೆ ಖುಷಿ ನೀಡುವ ಭೌತಿಕ ವಿಷಯಗಳು ಇವರಿಗೆ ಖುಷಿ ನೀಡುವುದಿಲ್ಲ. ಆದರೆ ಇವರು ಸೃಜನಶೀಲರು ಇರುತ್ತಾರೆ ಮತ್ತು ಇವರ ಯೋಚನೆಗಳು, ಯೋಜನೆಗಳು ದೊಡ್ಡದಿರುತ್ತವೆ.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon