Link copied!
Sign in / Sign up
80
Shares

ಜನರು ಮಾತಾಡಲು ಹೆದರುವ ಯೋನಿಯ ಬಗೆಗಿನ ೯ ಅಂಶಗಳು

“ಛೆ! ಅಂತದೆಲ್ಲ ಇನ್ನೊಬ್ಬರ ಮುಂದೆ ಮಾತಾಡಬಾರದು”,

“ಅದನ್ನೆಲ್ಲಾ ಯಾರಾದ್ರೂ ಬಾಯ್ಬಿಟ್ಟು ಮಾತಾಡ್ತಾರ?”

ನಮ್ಮ ದೇಶದಲ್ಲಿನ ಜನರ ಯೋಚನಾಲಹರಿಯ ವಿಶಾಲತೆ ಹೆಚ್ಚುತ್ತಿದ್ದರು, ನಮ್ಮ ದೇಶದಲ್ಲಿ ಸಹಸ್ರ ಸಹಸ್ರ ಹೆಣ್ಣುಮಕ್ಕಳು ಇದ್ದರೂ, ಹೆಣ್ಣುಮಕ್ಕಳ ಗುಪ್ತಾಂಗಗಳ ಬಗ್ಗೆ ಮಾತನಾಡುವುದು ಇರಲಿ, ಮಾಹಿತಿ ಹಂಚಿಕೊಂಡರೂ ಮೂಗು ಮುರಿಯುತ್ತಾರೆ. ಇದರಿಂದಾಗಿ ಎಷ್ಟೊಂದು ಹೆಣ್ಣುಮಕ್ಕಳಿಗೆ ತಮ್ಮ ದೇಹದ ಬಗ್ಗೆಯೇ ಅರಿವು ಇರುವುದಿಲ್ಲ. ನಿಮ್ಮ ಯೋನಿಯ ಬಗ್ಗೆ ನೀವು ತಿಳಿಯಬೇಕಾದ ಕೆಲವು ಸಂಗತಿಗಳು ಇಲ್ಲಿವೆ:

೧. ಕೆಲವು ಹೆಣ್ಣುಮಕ್ಕಳಿಗೆ ಹುಟ್ಟುತ್ತಲೇ ಹೈಮೆನ್ (hymen) ಇರುವುದಿಲ್ಲ

ಹೈಮೆನ್ ಅನ್ನುವುದು ಯೋನಿಯ ಮೇಲಿರುವ ಸಣ್ಣ ಗಂಟಿನಂತ ಭಾಗ ಎಂದು ನಾವೆಲ್ಲಾ ನಮ್ಮ ಹತ್ತನೇ ತರಗತಿ ಜೀವಶಾಸ್ತ್ರ ಕ್ಲಾಸ್ ನಲ್ಲಿ ಓದಿದ್ವಿ. ನಿಮ್ಮ ಮೊದಲ ಸಂಭೋಗದ ನಂತರ ಅಥವಾ ದಣಿಯುವಂತ ದೈಹಿಕ ಕಸರತ್ತುಗಳು ಮಾಡಿದಾಗ ಇದು ಹರಿಯಬಹುದು ಹಾಗು ಸ್ವಲ್ಪ ಮಟ್ಟಿನ ರಕ್ತಸ್ರಾವ ಕೂಡ ಆಗಬಹುದು. ಹೀಗಿದ್ದೂ, ಇದು ನಿಮ್ಮ ದೇಹದಲ್ಲಿ ಇಲ್ಲದಿದ್ದರೂ ಯೋಚಿಸುವಂತದ್ದು ಏನು ಇಲ್ಲ. ಏಕೆಂದರೆ, ಇದು ನಿಮ್ಮ ಲೈಂಗಿಕ ಜೀವನಕ್ಕೆ ಬೇಕಾಗಿಯೇ ಇಲ್ಲ.

೨. ಯೋನಿಯ ಗಾತ್ರ ಬದಲಾಗಬಹುದು

ಯೋನಿಯ ಸಂಭೋಗ ನಡೆಸುವಾಗ ಹಿಗ್ಗಬುದು, ಇದನ್ನು ಟೆಂಟಿಗ್ ಅನ್ನುವರು. ನೀವು ಲೈಂಗಿಕವಾಗಿ ಉದ್ರೇಕಗೊಂಡಾಗ, ನಿಮ್ಮ ಯೋನಿಯ ೧/೩ ರಷ್ಟು ಮೇಲಿನ ಭಾಗ ಹಿಗ್ಗುತದೆ. ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಾಗ ಇದು ಗಾತ್ರದಲ್ಲಿ ದ್ವಿಗುಣಗೊಳ್ಳುತ್ತದೆ. ಇದೇ ಕಾರಣದಿಂದ ನಿಮ್ಮ ಯೋನಿಯ ಒಳಗೆ ಶಿಶ್ನ ಹೋದಾಗ ಏನು ಕಷ್ಟ ಅನಿಸದಿದ್ದರೂ, ಅದೇ ಶಿಶ್ನ ಗಾತ್ರದ ಟ್ಯಾಂಪಾನ್ ಧರಿಸುವಾಗ ನಿಮಗೆ ಕಷ್ಟವಾಗುತ್ತದೆ.

೩.ನರದ ತುದಿಗಳು

ನಿಮ್ಮ ಯೋನಿಯಲ್ಲಿರುವ ಚಂದ್ರನಾಡಿ ಅಂದರೆ ಕ್ಲಿಟೋರಿಸ್ ಅಲ್ಲಿ ೮೦೦ ನರಗಳ ತುದಿಯಿರುತ್ತವೆ, ಅಂದರೆ ಅದು ಶಿಶ್ನದಲ್ಲಿರುವದಕ್ಕಿಂತ ದುಪ್ಪಟ್ಟು! ಶಿಷ್ಣದಲ್ಲಿ ಕೇವಲ ೪೦೦ ನರಗಳ ತುದಿಯಿರುತ್ತದೆ. ಇದರಿಂದಲೇ ಒಂದು ಹೆಣ್ಣಿನ ಸಂಭೋಗದ ಪರಾಕಾಷ್ಟೆ(orgasm) ಗಂದಿನದ್ದುಕಿಂತ ಹೆಚ್ಚು ತೀವ್ರವಾಗಿರುತ್ತದೆ. ಇದರಿಂದಲೇ ಉತ್ತೇಜನದ ಪರಿಣಾಮ ಹೆಂಗಸರಲ್ಲಿ ತುಂಬಾ ಪರಿಣಾಮಕಾರಿ ಆಗಿರುತ್ತದೆ.

೪. ವಾಸನೆ

 ಆ ಭಾಗದ ವಾಸನೆ, ನೀವು ತಿನ್ನುವ ಪದಾರ್ಥಗಳು ಮೇಲೆ ಅವಲಂಬಿತ ಆಗಿರುತ್ತದೆ. ಹೀಗಾಗಿ, ಕೆಲವೊಂದು ಆಹಾರ ಪದಾರ್ಥಗಳು ನಿಮ್ಮ ಗಂಡನಿಗೆ ಉಸಿರುಗತ್ತುವಂತೆ ಮಾಡಿದರೆ, ಇನ್ನು ಕೆಲವು ಪದಾರ್ಥಗಳು ನಿಮ್ಮ ಆ ಭಾಗವನ್ನು ವಾಸನೆಮುಕ್ತವಾಗಿ ಹಾಗು ಒಳ್ಳೆ ರುಚಿಯುಳ್ಳಂತೆ ಮಾಡುತ್ತದೆ. ಉದಾಹರಣೆಗೆ, ಅನಾನಸ್ ಹಣ್ಣು.

೫. ಯೋನಿಯೇ ತನ್ನನ್ನು ತಾನೇ ಶುಚಿಗೊಳಿಸಿಕೊಳ್ಳುವುದು

ನಿಮ್ಮ ಗುಪ್ತಾಂಗಗಳನ್ನೂ ಶುಚಿಯಾಗಿ ಇದಲಿಕ್ಕೆಯೇ ಈಗ ಮಾರುಕಟ್ಟೆಯಲ್ಲಿ ಹಲವಾರು ಉತ್ಪನ್ನಗಳು ಹೊರಬಂದಿವೆ. ಆದರೆ, ಕಲವರು ಮಾತ್ರವೇ ತಿಳಿದಿರುವ ಅಂಶ ಎಂದರೆ ಅದು ಒನಿಯು ತನ್ನನ್ನು ತಾನೇ ಶುಚಿ ಮಾಡಿಕೊಳ್ಳುತ್ತದೆ ಎಂದು. ಸಾಧಾರಣ ಸೋಪ್ ಹಾಗು ನೀರು ಎರಡೇ ಸಾಕು ಈ ಕಾರ್ಯಕ್ಕೆ ಹಾಗು ಶುಚಿಗೊಳಿಸುವ ಉತ್ಪನ್ನಗಳು ನಿಮಗೆ ಉಪಕಾರಿಯಾಗದೆ, ತೊಂದರೆ ಮಾಡುವ ಸಾಧ್ಯತೆಯೇ ಹೆಚ್ಚು. ನಿಜ ಹೇಳ್ಬೇಕಂದ್ರೆ, ನಿಮ್ಮ ಯೋನಿಗಿಂತ ನಿಮ್ಮ ಫೋನ್ ನ ಪರದೆ ಮೇಲೆಯೇ ಹೆಚ್ಚು ಕ್ರಿಮಿಗಳು ಇರುವೆ ಸಾಧ್ಯತೆ ಹೆಚ್ಚಿದೆ.

೬. ಸಡಿಲಗೊಳ್ಳುವುದು

ಹೆಚ್ಚಿನ ಜನರು ನಮ್ಬಿರುವುದಕ್ಕೆ ವಿರುದ್ದವಂತೆ, ನಿಮ್ಮ ಯೋನಿಯು ಹೆಚ್ಚು ಬಾರಿ ಸಂಭೋಗ ಮಾಡಿದ ತಕ್ಷಣ ಸಡಿಲವಾಗೋದಿಲ್ಲ. ನಿಮ್ಮ ಯೋನಿಯಲ್ಲಿನ ಮಾಂಸಖಂಡಗಳು, ವಯಸ್ಸಾದ ಕಾರಣಕ್ಕೆ ಅಥವಾ ಪ್ರಸವನಂತರ ಸಡಿಲವಾಗಬಹುದು. ಆದರೆ, ನೇವು ಎಷ್ಟು ಬಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತೀರ ಎಂಬುದು ಇದಕ್ಕೆ ಸಂಬಂಧ ಇರುವುದಿಲ್ಲ.

೭. ಯೋನಿಯ ನಿರ್ಬಂಧಿಸುವಿಕೆ

ಒಮ್ಮೊಮ್ಮೆ ಸಂಭೋಗ ನಡೆಸುವಾಗ ಆಗುವ ಒಂದು ವಿದ್ಯಮಾನ ಅಂದರೆ ಅದು ಯೋನಿಯ ನಿರ್ಬಂಧಿಸುವಿಕೆ. ನಿಮ್ಮ ಯೋನಿಯು ಉದ್ರೇಕಕ್ಕೆ ಒಳಗಾದಾಗ, ಒಳಗೆ ಇರುವ ಶಿಶ್ನವನ್ನು ಹಿಡಿದು ಇಟ್ಟಿಕೊಳ್ಳುವಂತೆ ಮಾಡುವ ಸಾಧ್ಯತೆ ಇರುತ್ತದೆ. ಇದರಿಂದ ನಿಮ್ಮ ಯೋನಿಯಿಂದ ಶಿಶ್ನ ಹೊರತೆಗೆಯುವುದು ಕಷ್ಟ ಆಗುತ್ತದೆ.

೮. ಕೆಲವೊಮ್ಮೆ ಸಿಕ್ಕಿ ಹಾಕಿಕೊಳ್ಳುತ್ತವೆ

ಸ್ತ್ರೀರೋಗಶಾಸ್ತ್ರದ ಮೊದಲ ನಿಯಮ ಎಂದರೆ ಅದು ನಾವು ವಿವೇಚನೆ ಮಾಡಬಾರದು ಎಂದು. ಹಾಗಾಗಿ, ನಿಮಗೆ ಆ ಭಾಗದ ಒಳಗೆ ಏನಾದರು ಸಿಲುಕಿಹಾಕಿಕೊಂಡಿದೆ ಎಂದರೆ, ಅದನ್ನು ನಾಚಿಕೆ ಪಟ್ಟುಕೊಂಡು ಗೌಪ್ಯವಾಗಿ ಇಡದೆ, ವೈದ್ಯರ ಸಲಹೆ ಪಡೆಯುವುದು. ಹೀಗೆ ಮಾಡದಿದ್ದಲ್ಲಿ, ಮುಂದೆ ತುಂಬಾ ತೊಂದರೆ ಆಗಬಹುದು. ಅದು ನಿಮ್ಮ ಟ್ಯಾಂಪಾನೇ ಆಗಿರಬಹುದು ಅಥವಾ ಒಂದು ಪೆನ್ ಮುಚ್ಚಳವೇ ಆಗಿರಬಹುದು. ಆದರೆ, ಒಂದು ಖುಷಿಯ ಸಂಗತಿ ಎಂದರೆ ಅದು ಸಿಲುಕಿಕೊಂಡ ವಸ್ತುವು ಯೋನಿಯ ಒಳಗೆ ಕಳೆದು ಹೋಗಲು ಸಾಧ್ಯವಿಲ್ಲ. ಏಕೆಂದರೆ, ಯೋನಿ ಏನು ತಳವೇ ಇಲ್ಲದ ರಂಧ್ರ ಅಲ್ಲವಲ್ಲ.

೯. ಎಷ್ಟು ವದ್ದೆಯಾಗುತ್ತೀರಿ  

ಜನನ ನಿರೋಧಕ ಮಾತ್ರೆಗಳಂತ ವಸ್ತುಗಳು ನೀವು ಉದ್ರೆಕಗೊಂಡಾಗ ಎಷ್ಟು ವದ್ದೆ ಆಗುತ್ತೀರಿ ಎನ್ನುವುದರ ಮೇಲೆ ಪರಿಣಾಮ ಬೀರುತ್ತವೆ. ನಿಮ್ಮ ಋತುಬಂಧ, ನಿಮ್ಮ ಮೇಲಿನ ಒತ್ತಡ ಹಾಗು ಇನ್ನಿತರೆ ಅಂಶಗಳು ನಿಮ್ಮ ಮದಜನಕದ (estrogen) ಮಟ್ಟಗಳನ್ನು ನಿಯಂತ್ರಿಸುತ್ತವೆ. ಈ ಮದಜನಕವೇ ನಿಮ್ಮ ಯೋನಿಯ ಹೊರಸೂಸುವಿಕೆಯನ್ನು ನಿರ್ಧರಿಸುತ್ತದೆ. ಬೇಕಾಗಿರುವಷ್ಟು ವದ್ದೆಯಾಗದೆ ಯೋನಿಯು ನಯವಾಗದೆ ಇದ್ದರೆ, ಲೈಂಗಿಕ ಕ್ರಿಯೆಯು ತುಂಬಾ ನೋವಿನಿಂದ ಕೂಡಿರುತ್ತದೆ. ಇಂತಹ ಸಮಯದಲ್ಲಿ ನೀವು ನಯವಾಗಿಸುವ ಸಾಮಗ್ರಿಗಳು (lubricants) ಉಪಯೋಗಿಸಬಹುದು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon