Link copied!
Sign in / Sign up
4
Shares

ಮಂಚದ ಮೇಲೆ ಅತ್ಯಂತ ಹೆಚ್ಚಾಗಿ ಜನರ ಮೂಡ್ ಆಫ್ ಮಾಡಿಸುವ 4 ವಿಷಯಗಳು!

“ಆ ಕೆಲಸದಲ್ಲಿ ವೀಕು” ಎಂಬ ಹಣೆಪಟ್ಟಿ ಪಡೆಯಲು ಯಾರಿಗೂ ಇಷ್ಟವಾಗುವುದಿಲ್ಲ. ಅದೃಷ್ಟವಶಾತ್, ಸಂಶೋಧನೆಗಳು ನೀವು ಏನು ಮಾಡದೆ ಇದ್ದರೆ, ಮಂಚದ ಮೇಲೆ ನೀವು ಭೇಷ್ ಎಣಿಸಿಕೊಳ್ಳುವಿರಿ ಎಂಬುದನ್ನು ಹೇಳುತ್ತದೆ. ನೀವು ಈ ಕೆಲವು ಕೆಲಸಗಳನ್ನ ಮಾಡದೇ ಇದ್ದರೆ, ಅದು ದೊಡ್ಡ ಬದಲಾವಣೆಯನ್ನೇ ತರುತ್ತದೆ ಎನ್ನುತ್ತದೆ ಒಂದು ಸಂಶೋಧನೆ.


ಮ್ಯಾಚ್.ಕಾಂ ಎಂಬ ವಿಶ್ವದ ಅತಿದೊಡ್ಡ ಡೇಟಿಂಗ್ ವೆಬ್ಸೈಟ್ ಗಳಲ್ಲಿ ಒಂದಾದ ವೆಬ್ಸೈಟ್ ನಡೆಸಿ, ಪ್ರಕಟಗೊಳಿಸಿದ ಅಧ್ಯಯನವೊಂದು 18ರ ವಯಸ್ಸಿನ ಗಡಿ ದಾಟಿರುವ 5000 ಮದುವೆಯಾಗಿರಿದ ಗಂಡಸರು, ಹೆಂಗಸರ ಅಭಿಪ್ರಾಯಗಳನ್ನ ಒಳಗೊಂಡಿತ್ತು. ಈ ಅಧ್ಯಯನದಲ್ಲಿ ಪಾಲ್ಗೊಂಡ ಅಷ್ಟೂ ಜನರಿಗೂ, ಅವರ ಪ್ರಣಯ ಜೀವನದ ಬಗೆಗಿನ ಇಂಚಿಂಚು ಮಾಹಿತಿ ಕೂಡ ಕಲೆ ಹಾಕಲಾಯಿತು. ಇದರಿಂದ ಅನೇಕ ಮಜಾಭರಿತ ಸಂಗತಿಗಳು ಹೊರಬಂದವಾದರೂ, ತಿಳಿದು ಬಂದ ಒಂದು ಮುಖ್ಯವಾದ ಸಂಗತಿ ಎಂದರೆ ಅದು ನಮ್ಮಲ್ಲಿ ಬಹುತೇಕರು ಸೆಕ್ಸ್ ಅನ್ನು ಸರಿಯಾಗಿ ಮಾಡುತ್ತಿಲ್ಲ ಎಂಬುದು!

ಈ ಅಧ್ಯಯನದಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಗಳಿಗೆ ತಮಗೆ ಮಂಚದ ಮೇಲೆ ಮೂಡ್ ಆಫ್ ಮಾಡುವ ವಿಷಯ ಯಾವುದೆಂದು ಕೇಳಲಾಯಿತು. ಆಗ ಅವರಿಂದ ಆಶ್ಚರ್ಯಕರ ಉತ್ತರಗಳು ಕೇಳಿ ಬಂದವು. ಹಾಗಿದ್ದರೆ, ಮಂಚದ ಮೇಲೆ ಜನರನ್ನ ಅತಿ ಹೆಚ್ಚಾಗಿ ಮೂಡ್ ಆಫ್ ಮಾಡಿಸುವ ತಮ್ಮ ಸಂಗಾತಿ ಮಾಡುವ ವಿಷಯಗಳು ಯಾವುದೆಂದು ತಿಳಿಯೋಣ ಬನ್ನಿ.

೧. ಅಧ್ಯಯನದಲ್ಲಿ ಪಾಲ್ಗೊಂಡ ವ್ಯಕ್ತಿಗಳಲ್ಲಿ ಸುಮಾರು 82% ಅಷ್ಟು ಜನರು “ಹೆಚ್ಚು ಮಾತಾಡುವುದು” ಸೆಕ್ಸ್ ಅನುಭವವನ್ನು ಹಾಳು ಮಾಡುತ್ತದೆ ಎಂದು ಹೇಳಿದರು.

೨. “ತಮ್ಮಷ್ಟೇ ಕಾತುರ, ಆತುರತೆ ಸಂಗತಿಯೂ ತೋರಿಸದೆ ಇರುವುದು” ತಮ್ಮ ಮೂಡ್ ಆಫ್ ಮಾಡುತ್ತದೆ ಎಂದು 74% ಅಷ್ಟು ಜನರು ಹೇಳಿಕೊಂಡರು.

೩. 63% ಅಷ್ಟು ಜನರು ತಮ್ಮ ಸಂಗತಿಯು “ಏನೂ ಚಲನೆ ಅಥವಾ ಮುಂದಾಳತ್ವ ತೋರಿಸದೆ ಇರುವುದು” ತಮ್ಮ ಮೂಡ್ ಆಫ್ ಮಾಡುತ್ತದೆ ಎಂದು ಬಿಚ್ಚಿಟ್ಟಿದ್ದಾರೆ.

೪. ಅಧ್ಯಯನದಲ್ಲಿ ಪಾಲ್ಗೊಂಡ 62% ಅಷ್ಟು ಜನರು “ಸಂಗಾತಿಗೆ ಮುತ್ತು ಕೊಡಲು ಸರಿಯಾಗಿ ಬರದೇ ಇರುವುದು” ತಮ್ಮ ಮೂಡ್ ಆಫ್ ಮಾಡುತ್ತದೆ ಎಂಬುದನ್ನ ತಿಳಿಸಿದ್ದಾರೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon