Link copied!
Sign in / Sign up
1
Shares

ಜನರನ್ನ ಲೈಂಗಿಕವಾಗಿ ಕೆರಳಿಸುವ ಜಗತ್ತಿನ 6 ವಿಚಿತ್ರ ಫೆಟಿಷ್ ಗಳು !

ನಿಜ ಒಪ್ಪಿಕೊಳ್ಳೋಣ ನಮಗೆ ನಮ್ಮದೇ ಆದ ಕೆಲವೊಂದು ಮೂಡ್ ಹುಟ್ಟಿಸುವಂತ ಇನ್ನೂ ಕೆಲವು ಮೂಡ್ ಹಾಲು ಮಾಡುವಂತ ವಿಷಯಗಳಿವೆ. ಈ ವಿಷಯಗಳಲ್ಲಿ ಕೆಲವೊಂದು ಉಳಿದವುಕ್ಕಿಂತ ಸ್ವಲ್ಪ ಕಮ್ಮಿ ಸಭ್ಯ ಹಾಗು ಹೆಚ್ಚು ವಿಭಿನ್ನ. ಇವುಗಳನ್ನೇ ನಾವು ಫೆಟಿಷ್ ಎನ್ನುವುದು. ಈ ಫೆಟಿಷ್ ಗಳು ನೀವು ಅಂದುಕೊಂಡಿರುವುದಕ್ಕಿಂತ ಸಾಮಾನ್ಯ! ಬೆಳಗ್ಗೆ ಹೊರಗಡೆ ನೋಡಲು ಎಲ್ಲರೂ ಸೌಮ್ಯವಾಗಿ ಕಾಣಬಹುದು, ಆದರೆ ಕತ್ತಲಾದೊಡನೆ, ಅವರ ಗುಟ್ಟುಗಳು ಹೊರಬರುತ್ತವೆ!

ಹಾಗಿದ್ರೆ ಫೆಟಿಷ್ ಮತ್ತು ಸಾಮಾನ್ಯ ಲೈಂಗಿಕ ಆಸಕ್ತಿಗೂ ವ್ಯತ್ಯಾಸ ಏನು? ಫೆಟಿಷ್ ಎಂದರೆ ಯಾವುದೋ ಒಂದು ವಸ್ತು ಅಥವಾ ದೇಹದ ಭಾಗವು ನಿಮಗೆ ಅಸಹಜವಾಗಿ ಲೈಂಗಿಕ ತೃಪ್ತಿ ಉಂಟು ಮಾಡುವುದು. ಇನ್ನೂ ಸುಲಭವಾಗಿ ಹೇಳಬೇಕೆಂದರೆ ಫೆಟಿಷ್ ಎಂದರೆ ಯಾವುದೋ ಒಂದು ವಿಷಯದಿಂದ ನಿಮಗೆ ಸಿಕ್ಕಾಪಟ್ಟೆ ಕಿಕ್ ಸಿಗುವುದು. ಉದಾಹರಣೆಗೆ ಕೆಲವರಿಗೆ ಮಲ್ಲಿಗೆ ಹೂವಿನ ವಾಸನೆಯು ಫುಲ್ ಮೂಡ್ ಬರಿಸುತ್ತದೆ, ಇನ್ನೂ ಕೆಲವರಿಗೆ ಕಾಫಿ ವಾಸನೆ ಮೂಡ್ ಬರಿಸುತ್ತದೆ, ಹೀಗೆ. ಆದರೆ ಇಲ್ಲಿ ನಾವು ಹೇಳ ಹೊರಟಿರುವುದು ಇನ್ನೂ ವಿಚಿತ್ರವಾದ ಫೆಟೀಷ್ ಗಳು. ನೋಡಿ ಯಾವು ಅವು ಅಂತ :

೧. ಒಡೊಂಟೊಫಿಲಿಯಾ

ನಾವು ಭೇಟಿ ಕೊಡುವ ಡೆಂಟಿಸ್ಟ್ ನೋಡುವುದಕ್ಕೆ ತುಂಬಾ ಚೆನ್ನಾಗಿದ್ದರೆ ಅವರ ಮೇಲೆ ಆಸೆ ಆಗಬಹುದು. ಇದು ಎಲ್ಲರಲ್ಲೂ ಸಾಮಾನ್ಯ. ಆದರೆ, ಒಡೊಂಟೊಫಿಲಿಯಾ ಎಂದರೆ ಹಲ್ಲುಗಳು, ಅವು ಯಾವುದೇ ರೀತಿ ಇರಬಹುದು, ಅವುಗಳನ್ನ ನೋಡಿ ಪ್ರಚೋದಿತರಾಗುವುದು!

೨. ಫಲ್ಲೂರ್ಖೊಲಗೋಲಾಗ್ನಿಯ !

ಏನಪ್ಪಾ ಇದು ಹೆಸರೇ ಹೀಗಿದೆ ಎಂದು ಅಂದುಕೊಂಡಿರಾ? ಇದರ ಅರ್ಥ ಇನ್ನೂ ವಿಚಿತ್ರವಾಗಿದೆ! ಈ ಫೆಟಿಷ್ ಏನು ಎಂದರೆ, ಈ ಫೆಟಿಷ್ ಇರುವವರಿಗೆ ತಮ್ಮ ಜನನಾಂಗಕ್ಕೆ ಗುದ್ದು ಅಥವಾ ಜೋರಾಗಿ ತಟ್ಟಿದರೆ, ಅತೀವವಾಗಿ ಲೈಂಗಿಕ ಪ್ರಚೋದನೆ ಉಂಟಾಗುತ್ತದೆ!

೩. ಮ್ಯಾಕ್ರೋ ಫಿಲಿಯಾ

ಇತ್ತೀಚಿನ ದಿನಗಳಲ್ಲಿ ಇದೊಂದು ದೊಡ್ಡ ಫೆಟಿಷ್ ಆಗಿ ಹೊರ ಹೊಮ್ಮುತ್ತಿದೆ, “ದೊಡ್ಡ”ದಾಗಿ. ಮ್ಯಾಕ್ರೋಫಿಲಿಯಾ ಎಂದರೆ ದೈತ್ಯ ವ್ಯಕ್ತಿಗಳೊಡನೆ ಲೈಂಗಿಕ ಕಾರ್ಯದಲ್ಲಿ ತೊಡಗಿಕೊಳ್ಳುವ ಯೋಚನೆ ಇಂದ ಪ್ರಚೋದಿತರಾಗುವುದು. ಒಹ್ ಹಾಗೆ ಇನ್ನೊಂದು ವಿಷಯ, ಇದು ಹೆಂಗಸರಿಗಿಂತ ಜಾಸ್ತಿ ಕಾಣಿಸಿಕೊಳ್ಳುವುದು ಗಂಡಸರಲ್ಲಿ !

೪. ಫೊರ್ನಿ ಫಿಲಿಯಾ

ಒಹ್ ನಿಮಗೆ ನಾವು ಚಿಕ್ಕವರಿದ್ದಾಗ “ಸ್ಟಾಚು” ಆಟ ಆಡ್ತಾ ಇದ್ದಿದ್ದು ನೆನಪಿದಿಯಾ? ಆಗ ಯಾರಾದರೂ “ಸ್ಟಾಚು” ಎಂದರೆ ನಾವು ಒಂದು ಪ್ರತಿಮೆ ರೀತಿ ಅಲುಗಾಡದೆ ನಿಂತು ಬಿಡುತ್ತಿದ್ದೆವು. ಈ ಫೊರ್ನಿ ಫಿಲಿಯಾ ಕೂಡ ಹೀಗೆಯೇ, ಆದರೆ ವ್ಯತ್ಯಾಸ ಇಷ್ಟೇ, ಇಲ್ಲಿ ಈ ಫೆಟಿಷ್ ಇರುವ ಜನರು ತಮ್ಮನ್ನು ತಾವೇ ಪೀಠೋಪಕರಣಗಳ ರೀತಿ ಅಲುಗಾಡದೆ ನಿಲ್ಲುವುದರಿಂದ ಲೈಂಗಿಕ ಖುಷಿ ಪಡುತ್ತಾರೆ!

೫. ಮೆಕ್ಯಾನೊ ಫಿಲಿಯಾ

ನಿಮ್ಮ ಮನೆಯವರಿಗೆ ಅವರ ಕಾರ್ ಎಂದರೆ ಪಂಚಪ್ರಾಣನಾ? ಇದು ಎಲ್ಲಾ ಗಂಡಸರಲ್ಲೂ ಸಾಮಾನ್ಯ ಬಿಡಿ. ಆದರೆ ಕೆಲವರು ಇದನ್ನು ಇನ್ನೂ ಒಂದು ಹಂತ ಮೇಲಕ್ಕೆ ತೆಗೆದುಕೊಂಡು ಹೋಗುತ್ತಾರೆ. ಇದರ ಅರ್ಥ, ನೀವು ಮೆಕ್ಯಾನೊ ಫಿಲಿಯಾ ಹೊಂದಿದ್ದರೆ, ನಿಮಗೆ ಮಷೀನ್ (ಕಾರ್, ಪ್ಲೇನ್, ಆಟೋಮೊಬೈಲ್ಸ್) ಗಳ ಮೇಲೆ ದೈಹಿಕವಾಗಿ ಮತ್ತು ಲೈಂಗಿಕವಾಗಿ ಆಕರ್ಷಣೆ ಆಗುತ್ತದೆ!

೬. ನಾಸೋಫಿಲಿಯಾ

ಈ ಹೆಸರು ನೋಡಿ ನಿಮಗೆ ಆಗಲೇ ಇದರ ಬಗ್ಗೆ ಒಂದು ಐಡಿಯಾ ಬಂದಿರಬೇಕು ಅಲ್ಲವೇ? ನಾಸೋಫಿಲಿಯಾ ಎನ್ನುವುದು ಒಂದು ವ್ಯಕ್ತಿ ಬೇರೆ ವ್ಯಕ್ತಿಯ ಮೂಗನ್ನು ನೋಡಿ ಲೈಂಗಿಕವಾಗಿ ಪ್ರಚೋದಿತನಾಗುವುದು. ಆದರೆ ಲೈಂಗಿಕ ಕ್ರಿಯೆಯಲ್ಲಿ ಮೂಗು ಹೇಗೆ ಮಧ್ಯ ಬರುತ್ತದೆ? ನಾಸೋಫಿಲಿಯಾ ಇರುವವರು ಅದಕ್ಕೂ ಒಂದು ದಾರಿ ಹುಡುಕಿರುತ್ತಾರೆ ಬಿಡಿ, ನಮಗ್ಯಾಕೆ!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon