Link copied!
Sign in / Sign up
9
Shares

ನೀವು ಇವೆಲ್ಲವುಗಳಿಗೆ ರೆಡಿ ಇದ್ದರೆ ಮಾತ್ರ ಮಗುವನ್ನ ಮಾಡಿಕೊಳ್ಳಿ!

 

ಸ್ತ್ರೀಯರಿಗೆ ಗರ್ಭಧಾರಣೆಯ ಬಗ್ಗೆ ತಿಳಿಯಪಡಿಸುವ ಹಲವಾರು ತರಗತಿಗಳಿವೆ. ಆದರೆ ಪ್ರಸವದ ನಂತರ ಪರಿಸ್ಥಿತಿಗಳನ್ನು ಈ ತರಗತಿಯಿಂದ ಪಡೆಯಲು ಸಾಧ್ಯವಾಗದು. ಪ್ರಸವದ ನಂತರ ಪ್ರತಿ ತಾಯಿಯರು ಹಾದು ಹೋದ ಹಲವಾರು ಸನ್ನಿವೇಶಗಳು ಇವೆಯಾದರೂ, ಹೆಚ್ಚಾಗಿ ಯಾರೂ ಅದರ ಬಗ್ಗೆ ಚರ್ಚಿಸುವುದಿಲ್ಲ. ಕೆಲವು ಕಾಲಗಳ ನಂತರ ಹಲವರು ಮರೆತು ಹೋಗುವ ಕಾರಣದಿಂದಲೂ ಪ್ರಸವ ನಂತರದ ಅನುಭವಗಳ ಬಗ್ಗೆ ಯಾರೂ ಹೇಳಿಕೊಳ್ಳುವುದಿಲ್ಲ. 

 ಪ್ರಸವದ ನಂತರ ಅನುಭವಗಳ ಬಗ್ಗೆ ಮೊದಲೇ ತಿಳಿದುಕೊಂಡಿರುವುದರಿಂದ ಅದರ ಅನುಭವವಾಗುವ ಹೊತ್ತಿಗೆ ಅನುಭವಗಳ ಕಾಠಿಣ್ಯತೆ ಯನ್ನು ಕಡಿಮೆಗೊಳಿಸಬಹುದು. ಮೊದಲೇ ವೈದ್ಯರಿಂದ ಕೇಳಿ ತಿಳಿದುಕೊಳ್ಳಬಹುದು.            

ಸಾಧಾರಣವಾಗಿ ಎಲ್ಲಾ ಹೊಸ ತಾಯಿಯರು ಅನುಭವಿಸುವಂತಹ, ಆದರೂ ಹೆಚ್ಚಾಗಿ ಹೇಳಿಕೊಳ್ಳದಂತಹ ಕೆಲವು ಅನುಭವಗಳ ಬಗ್ಗೆ ತಿಳಿದುಕೊಳ್ಳೋಣ. 

 

 (ರಕ್ತಸ್ರಾವ 

 ಮಾಸಿಕ ರಕ್ತಸ್ರಾವ  ಹಾಗೂ ಪ್ರಸವಾನಂತರದ ಶರೀರದಿಂದ ನಷ್ಟವಾಗುವ ರಕ್ತವು ಬೇರೆ ಬೇರೆ ತರವಾಗಿರುವುದು. ಸ್ವಾಭಾವಿಕ ಯೋನೀ ಪ್ರಸವವಾಗಿದ್ದರೂ, ಪ್ಲೆಸೆಂಟಾವನ್ನು ಹೊರತೆಗೆಯುವುದರಿಂದ ನಂತರದ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ರಕ್ತಸ್ರಾವ ಉಂಟಾಗುವುದು. ಆದರೆ ಪ್ರತಿಯೊಬ್ಬ ಸ್ತ್ರೀಯರು ಕೂಡ ತಮ್ಮ ಶರೀರದಿಂದ ಮಾತ್ರ ತುಂಬಾ ರಕ್ತಸ್ರಾವ ಉಂಟಾಗುವುದೆಂದು ಆತಂಕಗೊಳ್ಳುತ್ತಾರೆ. 

 

(ಪ್ರೀತಿ ಾತ್ರ ಮೇಲಿನ  ಸಾಧನೆ 

ಅವರೆಷ್ಟು ಸಹಕಾರಿಯಾಗಿದ್ದರೂ, ನಮ್ಮನ್ನೆಷ್ಟೇ ಚೆನ್ನಾಗಿ ನೋಡಿಕೊಂಡರೂ, ಹೇಳಲಾರದಂತಹ ಅಸಹನೆ, ಸಿಟ್ಟು, ದ್ವೇಷ ಗಳಂತಹ ಭಾವನೆಗಳು ನಮ್ಮ ಸಂಗಾತಿಗಳತ್ತ ತೋರುವುದು ಕೂಡ ಸರ್ವೆಸಾಮಾನ್ಯ. ಶರೀರದಲ್ಲಾಗುವ ಬದಲಾವಣೆಗಳಿಂದ ಕಿರಿಕಿರಿ ಅನುಭವಿಸುವವರು ನೀವೇ ಹೊರತು, ನಿಮ್ಮ ಗಂಡನಲ್ಲವಲ್ಲ. 

 

(ನಿರಾಸೆ 

 ಹೊಸ ತಾಯಿಯರಿಗೆ ವೈದ್ಯರು ಕೆಲವು ಥೆರಪಿಗಳನ್ನು ಸೂಚಿಸುತ್ತಾರೆ. ಗರ್ಭಧಾರಣೆ ಹಾಗೂ ಪ್ರಸವದಿಂದ ಹಲವಾರು ಶಾರೀರಿಕ ಹಾಗೂ ಮಾನಸಿಕ ಬದಲಾವಣೆಗಳಾಗುವುದರಿಂದ ಕೇವಲ ಒಬ್ಬ ವ್ಯಕ್ತಿಯಿಂದ ಮಾತ್ರ ಈ ಮಾನಸಿಕಾವಸ್ಥೆಯಿಂದ ಹೊರ ಬರಲು ಸಾಧ್ಯವಾಗದು. ನಿರಾಸೆ, ಸಂಕಟ ಹಾಗೂ ದುಃಖದುಮ್ಮಾನವೆಂಬುದು ಸರ್ವೇಸಾಮಾನ್ಯ. ಅಗತ್ಯವೆನಿಸಿದರೆ ಇತರರ ಸಹಾಯವನ್ನು ಪಡೆಯಲು ಹಿಂಜರಿಯದಿರಿ. 

 

(ಶರೀರ ನೋವು 

ಪ್ರಸವದ ಸಹಿಸಲಾರದ ನೋವನ್ನು ನೀವು ದಾಟಿರಬಹುದು.ಆದರೆ ಪ್ರಸವ ನಂತರದ, ತಲೆಯಿಂದ ಕಾಲಿನವರೆಗೂ ವ್ಯಾಪಿಸುವ ಶರೀರ ನೋವನ್ನು ತಾಳುವುದು ಹೇಗೆ...? ಇದರಿಂದ ಮುಕ್ತಿ ಸಾಧ್ಯವೇ....? ಎಂದು ಹಲವು ಬಾರಿ ನಿಮ್ಮಲ್ಲಿ ನೀವೇ ಹೇಳಿಕೊಂಡಿರಬಹುದು. ಸ್ವಾಭಾವಿಕ ಹೆರಿಗೆಯಾಗಿರಲಿ ಅಥವಾ ಸಿಸೇರಿಯನ್ ಆಗಿರಲಿ ನೋವು ನಿವಾರಕ ಮಾತ್ರೆಗಳನ್ನು ನುಂಗುವುದರಿಂದ ಕೂಡಾ ಪರಿಹಾರವಾಗದ ಬೇನೆಯನ್ನು ಅನುಭವಿಸುವಂತಾಗುತ್ತದೆ. 

 

(ನಿಷ್ಕಿೃಯತೆ 

ಯಾವುದೇ ಕೆಲಸ ಕಾರ್ಯಗಳಿಗೂ ಕೈ ಹಾಕದೆ, ನಿಷ್ಕ್ರಿಯರಾಗಿ ಅನ್ಯ ಮನಸ್ಕರಾಗಿರುವುದು ಕೂಡ ಪ್ರಸವಾನಂತರ ಕಂಡುಬರುವ ಸಾಮಾನ್ಯ ಪ್ರಕಿೃಯೆ.ಸರಿಯಾದ ನಿದ್ರೆ ಇಲ್ಲದಿರುವಿಕೆ, ವಿಶ್ರಾಂತಿ ಮಗುವಿನ ಅಗತ್ಯಗಳನ್ನು ಪೂರೈಸಲಿರುವ ಪರದಾಟ, ಎದೆ ಹಾಲುಣಿಸುವಿಕೆ ಇವುಗಳನ್ನೆಲ್ಲಾ ನಿಭಾಯಿಸುವುದು ಅಷ್ಟು ಸುಲಭದ ಮಾತಲ್ಲ.  

 

(ಕೀಳರಿಮೆ 

೯೦%   ಸ್ತ್ರೀಯರು ಪ್ರಸವಾನಂತರದ ಹಲವಾರು ಬದಲಾವಣೆಗಳಿಂದ, ಬದಲಾಗುವ ತನ್ನ ಶರೀರ ರೂಪದ ಬಗ್ಗೆ ಕೀಳರಿಮೆಗಳಿಗೊಳಗಾಗುತ್ತಾರೆಂದು ಒಪ್ಪಿಕೊಂಡಿದ್ದಾರೆ. ಪ್ರಕೃತಿ ಸಹಜವಾದ ಈ ಬದಲಾವಣೆಗಳಿಂದ ಕೀಳರಿಮೆಗೆ ಒಳಪಡಬೇಕಾಗಿಲ್ಲ. ಸರಿಯಾದ ವ್ಯಾಯಾಮ ರೀತಿಗಳಿಂದ ಕಳೆದುಕೊಂಡ ತನ್ನ ಶರೀರ ಸೌಂದರ್ಯವನ್ನು ಮರಳಿ ಪಡೆಯಬಹುದೆಂದು ಸಂಗಾತಿಯು ಧೈರ್ಯ ತುಂಬುವುದು ಉತ್ತಮ. 

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon