Link copied!
Sign in / Sign up
3
Shares

ಗರ್ಭಾವಸ್ಥೆಯಲ್ಲಿ ನೀವು ಈ ಚಟುವಟಿಕೆಗಳನ್ನು ಮಾಡಲೇಬಾರದು!

ಮಗುವನ್ನು ಉದರದೊಳಗೆ ಇರಿಸಿಕೊಂಡು, ಮಗುವಿನ ಮುದ್ದಾದ ಮುಖವನ್ನು ನೋಡಲು ನಿರೀಕ್ಷಿಸುವುದು ಅಥವಾ ನಿರೀಕ್ಷಿಸುತ್ತಿರುವುದು ಮಹಿಳೆಯ ಜೀವನದ ಅತ್ಯಂತ ಸುಂದರವಾದ ಪದಗಳಲ್ಲಿ ಹೇಳಲಾಗದ ಸ್ಮರಣೀಯ ಕ್ಷಣಗಳು. ಆದರೆ ಗರ್ಭಾವಸ್ಥೆಯಲ್ಲಿ ತಾಯಿ ಮತ್ತು ಮಗುವು ಆರೋಗ್ಯವಾಗಿರುವಂತೆ ಮತ್ತು ಸುರಕ್ಷಿತವಾಗಿರುವಂತೆ ಎಚ್ಚರಿಕೆವಹಿಸುವುದು ಕೂಡ ಬಹಳ ಮುಖ್ಯವಾಗುತ್ತದೆ. ನೀವು ಗರ್ಭಿಣಿ ಆಗಿದ್ದರೆ, ಕೆಲವೊಂದು ಚಟುವಟಿಕೆಗಳನ್ನು ಮಾಡದೇ ಇರುವುದು ಉತ್ತಮ. ಇದು ನಿಮಗೆ ಮತ್ತು ನಿಮ್ಮ ಮಗುವಿಗೆ ಹೆಚ್ಚು ಅಪಾಯವನ್ನು ಉಂಟುಮಾಡಬಹುದು.

ಗರ್ಭಾವಸ್ಥೆಯಲ್ಲಿ ತಪ್ಪಿಸಬೇಕಾದ ದೈಹಿಕ ಚಟುವಟಿಕೆಗಳು

ವ್ಯಾಯಾಮ ಮತ್ತು ಕೆಲವು ಸರಳ ಚಟುವಟಿಕೆಗಳು ನಿಮ್ಮ ದೇಹ ಹೆರಿಗೆ ಎಂಬ ಅಗ್ನಿಪರೀಕ್ಷೆಗೆ ಒಳಗಾಗಲು ತಯಾರಿ ಅನ್ನು ಮಾಡುತ್ತವೆ. ಅದು ಏನೇ ಇದ್ದರು, ನಿಮ್ಮ ಮಗುವಿನ ಸುರಕ್ಷತೆಗಾಗಿ ನೀವು ಈ ದೈಹಿಕ ಚಟುವಟಿಕೆಗಳನ್ನು ಮಾಡಬಾರದು.

೧.ತೂಕವನ್ನು ಎತ್ತುಕೊಳ್ಳುವುದು

ಭಾರವನ್ನು ಎತ್ತುಕೊಳ್ಳುವುದರಿಂದ ನಿಮ್ಮ ಬೆನ್ನು ಮತ್ತು ಪೆಲ್ವಿಸ್ ಗೆ ಹಾನಿ ಅಥವಾ ಆಯಾಸವನ್ನು ಮಾಡಬಹುದು. ಇದರಿಂದ ಸೋರಿಕೆ ಅಥವಾ ಗರ್ಭಾಶಯ ಯೋನಿಯಲ್ಲಿ ಬೀಳುವ ಸಾಧ್ಯತೆಗಳು ಹೆಚ್ಚಿರುತ್ತದೆ. ನಿಮಗೆ ಈ ಮೊದಲೇ ಗರ್ಭಪಾತ ಸಂಭವಿಸಿದ್ದರೆ, ನೀವು ಖಂಡಿತವಾಗಿ ಭಾರ ಎತ್ತುವುದನ್ನು ನಿಲ್ಲಿಸುವುದು ಒಳ್ಳೆಯದು.

೨.ಕೆಲವು ವಿಧದ ಯೋಗಗಳು

ಯೋಗ ಮಾಡುವುದು ಒಂದು ಅದ್ಭುತ ಹವ್ಯಾಸ, ಆದರೆ ಗರ್ಭಾವಸ್ಥೆಯಲ್ಲಿ ಕೆಲವು ವಿಧದ ಯೋಗ ಭಂಗಿಗಳನ್ನು ಮಾಡಲು ದೇಹವನ್ನು ಹೆಚ್ಚು ಬಾಗಿಸಬೇಕಾಗುತ್ತದೆ, ಮತ್ತು ಕೆಲವು ತಿರುವುಗಳನ್ನು ಒಳಗೊಂಡಿರುತ್ತದೆ. ನೀವು ಯೋಗವನ್ನು ಹೊಸದಾಗಿ ಕಲಿಯುತ್ತಿರುವವರು ಆಗಿರಿ ಅಥವಾ ಯೋಗ ಕಲಿತು ದಿನ ಮಾಡುವ ಹಭ್ಯಾಸ ಉಳ್ಳವರಾಗಿರಿ, ಗರ್ಭಾವಸ್ಥೆಯಲ್ಲಿ ಯೋಗ ಮಾಡುವ ಮುನ್ನ ವೈದ್ಯರ ಜೊತೆ ಸಮಾಲೋಚಿಸುವುದು ಒಳ್ಳೆಯದು.

೩.ಹೊಟ್ಟೆಯ ಮೇಲೆ ಮಲಗುವುದು ಬೇಡ

ಉದರದ ಮೇಲೆ ಮಲಗಿಕೊಳ್ಳುವುದು ಅಥವಾ ಉದರದ ಮೇಲೆ ಮಲಗಿಕೊಂಡು ಮಾಡುವ ಕೆಲವು ವ್ಯಾಯಾಮಗಳು ನಿಮ್ಮ ಮಗುವಿಗೆ ಅಪಾಯವನ್ನು ಉಂಟುಮಾಡುವುದು. ಅದರಲ್ಲೂ ಪ್ರಮುಖವಾಗಿ ಮೊದಲನೇ ತ್ರೈಮಾಸಿಕ ಮುಗಿದ ನಂತರ, ನೀವು ಇಂತಹ ಪ್ರಯತ್ನಗಳನ್ನು ಮಾಡಲೇಬಾರದು. ಈ ಸಮಯದಲ್ಲಿ ನೀವು ಹೆಚ್ಚು ಆರಾಮದಾಯಕವಾಗಿರಿ.

೪.ಹಬೆ ಅಥವಾ ಬಿಸಿ ಬಿಸಿ ನೀರಿನ ಸ್ನಾನ

ಬಾತ್ ಟಬ್ ನಲ್ಲಿ ವಿಶ್ರಾಂತಿ ಪಡೆಯುವುದು ಕೂಡ ಅಪಾಯ, ಏಕೆಂದರೆ ಇದು ಜನನ ದೋಷಗಳನ್ನು ತರುವ ಮತ್ತು ಸೋಂಕಿನ ಅಸ್ವಸ್ಥೆಗಳನ್ನು ತರುವ ಸಾಧ್ಯತೆಗಳು ಹೆಚ್ಚಿರುತ್ತವೆ. ನೀವು ಸ್ನಾನ ಮಾಡಲು ಉಪಯೋಗಿಸುವ ನೀರಿನ ತಾಪಮಾನವು ನಿಮ್ಮ ದೇಹದ ತಾಪಮದಷ್ಟು ಇದ್ದರೆ ಉತ್ತಮ, ಅದಕ್ಕಿಂತ ಹೆಚ್ಚಾಗಿರುವ ನೀರಿನಲ್ಲಿ ಸ್ನಾನ ಮಾಡಬೇಡಿ.

೫.ಮನೋರಂಜನ ಅಥವಾ ಮೋಜಿನ ಸವಾರಿಗಳು

ಮನೋರಂಜನೆಗೆ ಎಂದು ಮಾಡಿರುವ ಅಮ್ಯೂಸೀಮೆಂಟ್ ಪಾರ್ಕ್ ನಲ್ಲಿ ಇರುವ ಆಟಗಳನ್ನು ಗರ್ಭಾವಸ್ಥೆಯಲ್ಲಿ ಖಂಡಿತವಾಗಿ ನೀವು ಆಡಲೇ ಬಾರದು. ರೋಲರ್-ಕೋಸ್ಟರ್ ಮತ್ತು ಮುಂತಾದ ಆಟಗಳು ನಿಮ್ಮ ಮಗುವಿಗೆ ಹಾನಿಯನ್ನು ಮಾಡುತ್ತವೆ.

೬.ಓಡುವುದು ಮತ್ತು ಜಾಗಿಂಗ್

ಓಡುವುದು ಮತ್ತು ಜಾಗಿಂಗ್ ಮಾಡುವುದು ನಿಮಗೆ ಮತ್ತು ದೇಹಕ್ಕೆ ಒಳ್ಳೆಯದೇ ಆದರೆ ನಿಮಗೆ ಮೊದಲಿನಿಂದಲೂ ಈ ಹಭ್ಯಾಸ ಇರದೇ ಗರ್ಭಾವಸ್ಥೆಯಲ್ಲಿ ಇದನ್ನು ಶುರುಮಾಡುವುದು ತುಂಬಾ ಅಪಾಯ. ನೀವು ಗರ್ಭಾವಸ್ಥೆಯಲ್ಲಿ ಓಡುವುದಕ್ಕಿಂತ ಅಥವಾ ಜಾಗ್ ಮಾಡುವುದಕ್ಕಿಂತ ನಡೆಯುವುದು ಉತ್ತಮ. ಅದು ಹೆಚ್ಚು ದೂರ ನಡೆಯುವಂತಿಲ್ಲ.

೭.ಸೈಕಲ್ ಮುಟ್ಟುವಂತಿಲ್ಲ

ಮಗುವನ್ನು ನಿರೀಕ್ಷಿಸುತ್ತಿರುವ ತಾಯಿಯಂದಿರಿಗೆ ಸೈಕಲ್ ಒಡೆಯುವುದು ಒಳ್ಳೆಯದಲ್ಲ. ಪ್ರತಿ ದಿನ ನೀವು ಸೈಕಲ್ ಒಡೆಯುತ್ತಿದ್ದರೆ ಮೊದಲನೇ ತ್ರೈಮಾಸಿಕ ಮುಗಿಯುವವರೆಗೆ ಮಾತ್ರ ಸೈಕಲ್ ಅನ್ನು ಒಡೆಯಬಹುದು. ಇಲ್ಲವಾದರೆ ನೀವು ಸೈಕಲ್ ಅನ್ನು ಮುಟ್ಟುವಂತಿಲ್ಲ. ನೀವು ಬೈಕ್ ಗಳನ್ನು ಓಡಿಸದೆ ಇರುವುದು ನಿಮ್ಮ ಮತ್ತು ಮಗುವಿನ ಸುರಕ್ಷತೆ ದೃಷ್ಟಿಯಿಂದ ಒಳ್ಳೆಯದು.

ಇದರ ಜೊತೆಗೆ ನೀವು ನಿಮಗೆ ಕಷ್ಟವಾಗುವಂತಹ ಯಾವುದೇ ಕಠಿಣ ಕೆಲಸಗಳನ್ನು ಮಾಡುವಂತಿಲ್ಲ. ಬೆಟ್ಟ ಗುಡ್ಡಗಳನ್ನು ಹತ್ತುವಂತಿಲ್ಲ. ನೀವು ಈ ಸಮಯದಲ್ಲಿ ಆದಷ್ಟು ಆರಾಮದಾಯಕವಾಗಿ ಇರುವುದು ಒಳ್ಳೆಯದು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon