Link copied!
Sign in / Sign up
18
Shares

IVF ಬಗ್ಗೆ ನೀವು ತಿಳಿದಿರಲೇಬೇಕಾದ ನೇರ ಸಂಗತಿಗಳು ಮತ್ತು ಮಾಹಿತಿ!

ನೀವು ಗರ್ಭಧರಿಸಲು ಸತತವಾಗಿ ಪ್ರಯತ್ನಿಸುತ್ತಿರುವಾಗ, ಈ ಜಗತ್ತಿನಲ್ಲಿ ಉಳಿದದ್ದು ಯಾವುದೂ ಮುಖ್ಯವೆಂದು ನಿಮಗೆ ಅನಿಸುವುದೇ ಇಲ್ಲ. ನೀವು ಎಷ್ಟೊಂದು ಕಾತುರ ಮತ್ತು ಆಶಾಭಾವನೆಯಿಂದ ತುಂಬಿಕೊಂಡಿರುತ್ತೀರಿ, ಆದರೆ ನೈಸರ್ಗಿಕವಾಗಿ ನಿಮಗೆ ಗರ್ಭತಾಳಲು ಅಸಾಧ್ಯವೇ ಎಂಬ ಯೋಚನೆಯೂ ನಿಮ್ಮಲ್ಲಿ ಇರುತ್ತದೆ. ಬಹಳಷ್ಟು ಜನರಿಗೆ ಈ ಯೋಚನೆ ವಾಸ್ತವವಾಗಿ ಬಿಡುತ್ತದೆ. ಆದರೆ ಅದೃಷ್ಟವಶಾತ್ IVF ಅಂತಹ ಚಿಕಿತ್ಸೆ ದಂಪತಿಗಳು ತಾವು ಕನಸು ಕಾಣುತ್ತಿರುವ ಮಗುವನ್ನು ಪಡೆದುಕೊಳ್ಳಲು ಸಹಾಯ ಮಾಡುವತ್ತ, ಅವರ ಕನಸುಗಳನ್ನು ನನಸು ಮಾಡುವತ್ತ ದಾಪುಗಾಲು ಇಡುತ್ತಿದೆ.

IVF ಎಂಬುದು ಕ್ಲಿಷ್ಟಕರ ಪ್ರಕ್ರಿಯೆ ಆಗಿರುವುದರಿಂದ, ಭವಿಷ್ಯದಲ್ಲಿ ಈ ಚಿಕಿತ್ಸೆಯನ್ನು ಪಡೆಯುವವರಿಗೆಂದು ನಾವು IVF ಬಗೆಗಿನ ನೇರ ಸಂಗತಿಗಳನ್ನು ನಾವು ನ್ಯೂ ಹೋಪ್ ಫರ್ಟಿಲಿಟಿ ಸೆಂಟರ್ ವೈದ್ಯರಾದ ಡಾ ।। ಜ್ಹಾಂಗ್ ಅವರ ಮಾತಿನಲ್ಲೇ ಇಲ್ಲಿ ತೆರೆದಿಡುತ್ತೇವೆ ಓದಿ :

೧. ಗರ್ಭತಾಳಲು ಪ್ರಯತ್ನಿಸುವಾಗ ಮಾಡಬೇಕಿರುವ ಮೊದಲ ಕೆಲಸವೇ IVF ಅಲ್ಲ

ಹೌದು, ನಿಖರವಾಗಿ ಗರ್ಭತಾಳಲು ಇರುವ ಸುಲಭ ದಾರಿ ಎಂದರೆ IVF, ಆದರೆ IVF ನಿಮ್ಮ ಮೊದಲ ಆಯ್ಕೆ ಆಗಿರಬಾರದು. ನ್ಯೂ ಹೋಪ್ ಫರ್ಟಿಲಿಟಿ ಸೆಂಟರ್ ವೈದ್ಯರಾದ ಡಾ ।। ಜ್ಹಾಂಗ್ ಅವರು “35  ವರ್ಷಗಳ ಕೆಳಗಿನ ದಂಪತಿಗಳಿಗೆ ನಾವು ಮೊದಲು 6 ತಿಂಗಳ ಕಾಲ ನೈಸರ್ಗಿಕವಾಗಿ ಗರ್ಭತಾಳಲು ಪ್ರಯತ್ನಿಸುವಂತೆ ಅಥವಾ 35 ಕ್ಕಿಂತ ಹೆಚ್ಚಿನ ವಯಸ್ಸಿನ ದಂಪತಿಗೆ 1 ವರ್ಷದವರೆಗೆ ನೈಸರ್ಗಿಕವಾಗಿ ಪ್ರಯತ್ನಿಸಲು ಶಿಫಾರಸು ಮಾಡುತ್ತೇವೆ” ಎನ್ನುತ್ತಾರೆ. ಒಂದು ವೇಳೆ ಇದರಲ್ಲಿ ವಿಫಲದಾರೆ ನಂತರ ದಂಪತಿಗಳು ಫರ್ಟಿಲಿಟಿ ಸ್ಪೆಷಲಿಸ್ಟ್ ಅನ್ನು ಭೇಟಿ ಮಾಡಬೇಕು. ನಂತರ ಇವರು ಕೂಲಂಕುಷವಾಗಿ ಪರಿಶೀಲಿಸಿ ಫಲವತ್ತತೆ ತೊಂದರೆ ಉಂಟು ಮಾಡುತ್ತಿರುವ ಸಂಗತಿ ಯಾವುದೆಂದು ಪತ್ತೆ ಮಾಡುತ್ತಾರೆ.

 

೨. ಎಲ್ಲಾ ಫರ್ಟಿಲಿಟಿ (ಫಲವತ್ತತೆ) ಸಮಸ್ಯೆಗಳು ಒಂದೇ ರೀತಿ ಇರುವುದಿಲ್ಲ

“ನಾವು ರೋಗಿಗಳನ್ನು ಪರಿಶೀಲಿಸಿದ ನಂತರ ಏನು ಪತ್ತೆ ಮಾಡುತ್ತೇವೆ ಎಂಬುದರ ಮೇಲೆ, ಮುಂದೆ ಕೃತಕ ವೀರ್ಯಧಾನ (artifical insemination) ಅಥವಾ ನಿಗದಿತ ಸಮಯಕ್ಕೆ ಸಂಭೋಗ (timed intercourse) ಅನ್ನು ಶಿಫಾರಸು ಮಾಡಬಹುದು” ಎನ್ನುತ್ತಾರೆ. “ಕೆಲವೊಮ್ಮೆ ದಂಪತಿಗಳು ಸರಿಯಾದ ಸಮಯದಲ್ಲಿ ಸಂಭೋಗದಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಕೆಲವಷ್ಟು ಔಷಧಿಗಳು ಮತ್ತು ಸರಿಯಾದ ಸಮಯಕ್ಕೆ ಸಂಭೋಗ ಮಾಡಿದರೆ ಸಮಸ್ಯೆ ಇರುವುದಿಲ್ಲ” ಎನ್ನುತ್ತಾರೆ ಜ್ಹಾಂಗ್. ಒಂದು ವೇಳೆ IVF ಇಂದಾನೆ ಇದು ಬಗೆ ಹರಿಯುವುದು ಎಂಬುದು ತಿಳಿದರೆ, ಆಗಿನಿಂದಲೇ ಪ್ರಕ್ರಿಯೆ ಶುರುವಾಗುತ್ತದೆ.

 

೩. IVF ಎಂದರೆ ಏನು?

IVF ಎಂದರೆ ಮೊದಲು ಹೆಣ್ಣಿನ ದೇಹದ ಅಂಡಾಶಯ(ovaries) ಇಂದ ಅಂಡಾಣುಗಳನ್ನ (eggs) ಅನ್ನು ಹೊರತೆಗೆದು ನಂತರ ಲ್ಯಾಬ್ ಅಲ್ಲಿ ಅದನ್ನು ವೀರ್ಯದೊಂದಿಗೆ ಕಸಿ ಮಾಡಿ, ಅದರಿಂದ ಲಭಿಸುವ ಭ್ರೂಣಾಂಕುರವನ್ನು (embryo) ಅನ್ನು ಹೆಣ್ಣಿನ ಗರ್ಭಕೋಶದೊಳಗೆ ವರ್ಗಾಯಿಸುವುದು. IVF ಎನ್ನುವುದು ನೈಸರ್ಗಿಕವಾಗಿ ನಡೆಯುವುದನ್ನೇ ಲ್ಯಾಬ್ ಅಲ್ಲಿ ಕೃತಕವಾಗಿ ಮಾಡುವುದು ಅಷ್ಟೇ. ಈ ಪ್ರಕ್ರಿಯೆಯು ಸಾಮಾನ್ಯವಾಗಿ ಮೊದಲಿಗೆ ಹೆಚ್ಚು ಅಂಡಾಣುಗಳನ್ನು ಉತ್ಪಾದಿಸುವಂತೆ ಅಂಡಾಶಯಗಳಿಗೆ ಪ್ರೇರೇಪಿಸುವುದು ಆಗಿರುತ್ತದೆ. ಹಾರ್ಮೋನುಗಳ ರೂಪದಲ್ಲಿನ ಔಷಧಿಗಳನ್ನು ಸಾಮಾನ್ಯವಾಗಿ ಈ ಕಾರಣಕ್ಕೆ ನೀಡಲಾಗುತ್ತದೆ.

 

೪. IVFಗೆ ಪದೇ ಪದೇ ತಪಾಸಣೆ ಬೇಕಾಗುತ್ತದೆ

ಅತ್ಯುತ್ತಮವಾದ ಅಂಡಾಣುವನ್ನು ಕಂಡು ಹಿಡಿಯಲು ಅತ್ಯುತ್ತಮವಾದ ಅವಕಾಶ ಯಾವಾಗಲಾದರೂ ಲಭಿಸಬಹುದು ಎಂಬ ನಂಬಿಕೆ ಇಂದ ರೋಗಿಗಳ ಆರೈಕೆಯನ್ನು ಬಹಳ ಕಾಳಜಿಯಿಂದ ಮಾಡಲಾಗುತ್ತದೆ. ಡಾ ।। ಜ್ಹಾಂಗ್ ಅವರ ಮಾತಿನಲ್ಲೇ “ರೋಗಿಯ ದೇಹದಲ್ಲಿ ಅಂಡಾಣು ಉತ್ಪಾದನೆಯು ಎಷ್ಟು ಪ್ರಮಾಣದಲ್ಲಿ ಆಗುತ್ತಿದೆ ಎಂಬುದರ ಪ್ರತಿ ಕ್ಷಣದ ಅಂಕಿಗಳನ್ನು ದಾಖಲಿಸಲಾಗುತ್ತದೆ. ಸರಿಯಾದ ಸಮಯ ನೋಡಿ, ಟ್ರಿಗರ್ ಅನ್ನು ರೋಗಿಗೆ ಪರಿಚಯಿಸಲಾಗುತ್ತದೆ. ಈ ಟ್ರಿಗರ್ ಹೆಣ್ಣಿನ ಅಂಡಾಶಯಗಳಿಗೆ ಅಂಡಾಣುಗಳನ್ನು ಬಿಡುಗಡೆ ಮಾಡಲು ಇದು ಸೂಕ್ತ ಸಮಯ ಎಂಬ ಸೂಚನೆ ರವಾನಿಸುತ್ತದೆ. ಆನಂತರ ರೋಗಿಯ ದೇಹದಿಂದ ಅಂಡಾಣುವನ್ನು ಅಲ್ಟ್ರಾಸೌಂಡ್ ನೆರವಿನಿಂದ ತೆಗೆಯಲಾಗುತ್ತದೆ”.

 

೫. ನೀವು ಒಂದು ರೀತಿಯ ಚುಚ್ಚಿಸಿಕೊಳ್ಳುವ ದಿಂಬು ಆಗುತ್ತೀರಿ

IVF ಬಗ್ಗೆ ಎಲ್ಲರೂ ತಿಳಿಸುವ ಮತ್ತು ನೀವು ತಿಳಿದಿರಲೇ ಬೇಕಾದ ಒಂದು ವಿಷಯ ಎಂದರೆ ಈ ಪ್ರಕ್ರಿಯೆಯ ಉದ್ದಕ್ಕೂ ಹಲವಾರು ಚುಚ್ಚುಮದ್ದುಗಳನ್ನು ನೀವು ಚುಚ್ಚಿಸಿಕೊಳ್ಳಬೇಕು. ಹೆಚ್ಚು ಅಂಡಾಣುಗಳ್ನ್ನು ಉತ್ಪತ್ತಿ ಮಾಡುವಂತೆ ಕೋಶಕಗಳನ್ನು ಪ್ರೇರೇಪಿಸುವ ಹಾರ್ಮೋನುಗಳನ್ನು ಇಂಜೆಕ್ಟ್ ಮಾಡಲಾಗುತ್ತದೆ. ಅಂಡಾಣುಗಳು ಬೆಳೆದಂತೆಲ್ಲಾ, ಅಂಡಾಶಯವು ಅವುಗಳನ್ನು ಬಿಡುಗಡೆ ಮಾಡಬೇಕು. ಹೀಗಾಗಿ ಅಂಡಾಶಯವು ಅಕಾಲಿಕವಾಗಿ ಅಂಡಾಣುಗಳನ್ನು ಬಿಡುಗಡೆ ಮಾಡಲು ಗೊನೆಡೋಟ್ರೋಪಿನ್ ಹಾರ್ಮೋನು ಇಂಜೆಕ್ಟ್ ಮಾಡಲಾಗುತ್ತದೆ. ವೈದ್ಯರು ನಿಮ್ಮ ಅಂಡಾಣುಗಳು ಸಿದ್ಧವಾಗಿವೇ ಎಂದು ಖಚಿತಪಡಿಸಿಕೊಂಡ ತಕ್ಷಣ ಟ್ರಿಗರ್ ಶಾಟ್ಸ್ ಎನ್ನುವ ಮತ್ತಷ್ಟು ಚುಚ್ಚುಮದ್ದುಗಳನ್ನು ನಿಮಗೆ ನೀಡಲಾಗುತ್ತದೆ. ಇಂತಹ ಸಮಯದಲ್ಲಿ ರೋಗಿಗಳಿಗೆ ತಾವು ಚುಚ್ಚಿಸಿಕೊಳ್ಳಲು ಇರುವ ದಿಂಬು ಎನ್ನುವಂತೆ ಭಾಸವಾಗುತ್ತದೆ. ಆದರೆ ಹೊಸ ಹೊಸ ಅನ್ವೇಷಣೆಗಳೊಂದಿಗೆ, ನೋವು ಮತ್ತು ವೆಚ್ಚ ಎರಡನ್ನೂ ಕಡಿಮೆ ಮಾಡಲು, ಈಗ ವಿವಿಧ ರೀತಿಯ IVF ಪ್ರಕ್ರಿಯೆಗಳನ್ನ ಪ್ರಯೋಗಿಸಲಾಗುತ್ತಿದೆ.

 

೬. ರೋಗಿಗಳು ಫಲಿತಾಂಶವನ್ನು ತಕ್ಷಣವೇ ನೋಡಿಕೊಳ್ಳಬಹುದು

ಅದ್ಭುತ ವಿಷಯ ಏನೆಂದರೆ, ನೀವು IVF ಫಲಿತಾಂಶವನ್ನು ತಕ್ಷಣವೇ ನೋಡಬಹುದು. “ಕೆಲವು ದಂಪತಿಗಳು ಕೇವಲ 1-3 ಸೈಕಲ್ ಅಲ್ಲೇ ಫಲಿತಾಂಶವನ್ನು ಕಾಣುತ್ತಾರೆ” ಎನ್ನುತ್ತಾರೆ ಡಾ ।। ಜ್ಹಾಂಗ್. ನೋವು ಕಡಿಮೆ ಮಾಡುವಂತಹ ಮಿನಿ-IVF ಪ್ರಕ್ರಿಯೆಯನ್ನು ಬಳಸಿದರೆ, ಪ್ರಕ್ರಿಯೆಯು 3 ತಿಂಗಳಗಳವರೆಗೆ ಆಗಬಹುದು. ಇಲ್ಲ ಸಾಂಪ್ರದಾಯಿಕ ಚುಚ್ಚುಮದ್ದುಗಳನ್ನು ಒಳಗೊಂಡ IVF ಪ್ರಕ್ರಿಯೆಯನ್ನು ಬಳಸಿದರೆ, ಪ್ರಕ್ರಿಯೆಯು 1 ತಿಂಗಳು ಆಗಬಹುದು ಎನ್ನುತ್ತಾರೆ ಡಾ ।। ಜ್ಹಾಂಗ್.

 

೭. IVF ಎಲ್ಲರಿಗೂ ಅಲ್ಲ

IVF ಕೆಲಸ ಮಾಡುತ್ತದೆ ಎಂಬುದು ಸಾಬೀತು ಆಗಿದ್ದರೂ, ಈ ಪ್ರಕ್ರಿಯೆ ಎಲ್ಲರಿಗೂ ಅಲ್ಲ. ಡಾ ।। ಜ್ಹಾಂಗ್ ಹೇಳುವಂತೆ “ಈ ಪ್ರಕ್ರಿಯೆಯು ನೈಸರ್ಗಿಕವಾಗಿ ಗರ್ಭತಾಳಲು ಸಾಧ್ಯವಾಗದ ಅಥವಾ ಸುಮ್ಮನೆ ವೀರ್ಯವನ್ನು ಗರ್ಭಕೋಶದ ಒಳಗೆ ಅಂಡಾಣುವಿಗೆ ತಲುಪಿಸಿದರೂ ಗರ್ಭತಾಳಲು ಸಾಧ್ಯವಾಗದ ದಂಪತಿಗಳಿಗೆ ಅಷ್ಟೇ”. ರೋಗಗ್ರಸ್ತ ಅಥವಾ ಕಳಪೆ ದೈಹಿಕ ಆರೋಗ್ಯ ಹೊಂದಿರುವವರು, ಋತುಚಕ್ರ ನಿಂತಿದ್ದರೂ ತಮ್ಮದೇ ಅಂಡಾಣುಗಳಿಂದ ಮಗು ಪಡೆಯಬೇಕು ಎಂಬ ಹೆಂಗಸರಿಗೆ, ಭಾವನತ್ಮಕ ಅಥವಾ ಮಾನಸಿಕ ಅಸ್ವಸ್ಥತೆ ಇರುವ ರೋಗಿಗಳಿಗೆ ಈ IVF ಪ್ರಕ್ರಿಯೆ ಅಲ್ಲ ಎಂದು ಹೇಳುತ್ತಾರೆ ವೈದ್ಯರು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon