Link copied!
Sign in / Sign up
3
Shares

20ರ ವಯಸ್ಸಿನಲ್ಲಿ ಮಗು ಮಾಡಿಕೊಂಡರೆ ಏನಾಗುತ್ತದೆ ಎಂದು ಯಾರೂ ಹೇಳದ ವಿಷಯಗಳು!

ನನಗೆ ಮಗುವಾದ ನಂತರ, ನಾನು ಪ್ರಸವನಂತರದ ಖಿನ್ನತೆ (ಪೋಸ್ಟ್ ಪಾರ್ಟಮ್ ಡಿಪ್ರೆಶನ್) ವಿರುದ್ಧ ಸೆಣೆಸಬೇಕಾಯಿತು. ಹೀಗೆ ಎದುರಿಸುತ್ತಲೇ ಒಂದು ಜೀವಿಗೆ ತಾಯಿ ಆಗಿರುವುದು ಹೇಗೆ ಎಂಬುದನ್ನು ಕಲಿತುಕೊಳ್ಳಬೇಕಾಯಿತು. ಈ ಪ್ರಕ್ರಿಯೆಯ ಮಧ್ಯದಲ್ಲೇ, ನನ್ನ ಕಾಳಜಿ ಕೂಡ ನಾನು ಮಾಡಿಕೊಳ್ಳುವುದು ಎಷ್ಟು ಮುಖ್ಯವೆಂಬುದು ತಿಳಿದುಕೊಂಡೆ. ನಾನು ನನ್ನ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಿನೋ, ಅಷ್ಟು ಕಾಳಜಿಯನ್ನ ಮಾತ್ರ ನಾನು ನನ್ನ ಮಗುವಿನ ಬಗ್ಗೆಯೂ ವಹಿಸಬಹುದು ಎಂಬುದು ನನಗೆ ಅರ್ಥವಾಯಿತು. ಎಲ್ಲಾ ಪೋಷಕರಂತೆ ನನ್ನ ಮಗುವಿಗೆ ಅತ್ಯುತ್ತಮವಾದ ಭವಿಷ್ಯವನ್ನೇ ನೀಡಬೇಕೆಂದು ನಾನು ಮತ್ತು ನನ್ನ ಪತಿ ಶ್ರಮಿಸಿದೆವು. ನಮ್ಮ ಆದ್ಯತೆಗಳು ಬದಲಾದವು. ಅದು ಸುಲಭವಾಗಿ ಅಂತೂ ಇರಲಿಲ್ಲ, ಆದರೆ ಅದನ್ನು ನೀನು ಪುನಃ ಇನ್ನೊಮ್ಮೆ ಮಾಡುವೆಯ ಎಂದು ನನಗೆ ಕೇಳಿದರೆ, ನಾನು ಖುಷಿಯಿಂದ ಒಪ್ಪಿಕೊಳ್ಳುತ್ತೇನೆ.

ಇವೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು, ನನಗೆ ನನ್ನ 20ರ ವಯಸ್ಸಿನಲ್ಲಿ ಮಗುವನ್ನ ಮಾಡಿಕೊಳ್ಳುವುದರ ಬಗ್ಗೆ ಯಾರು ಹೇಳದಿದ್ದ ಕೆಲವೊಂದು ವಿಷಯಗಳ ಪಟ್ಟಿ ಮಾಡಿದ್ದೇನೆ. ನೀವು ಕೂಡ ನಿಮ್ಮ 20ರ ವಯಸ್ಸಿನಲ್ಲಿ ತಾಯ್ತನ ಅನುಭವಿಸಬೇಕು ಎಂತಿದ್ದರೆ, ಇದು ನಿಮಗೆ ಉಪಯೋಗ ಆಗಬಹುದು.


೧. “ನಾನು ಇದಕ್ಕೆ 100% ತಯಾರಿದ್ದೇನೆ” ಎಂದು ನಿಮಗೆ ಎಂದಿಗೂ ಅನಿಸುವುದಿಲ್ಲ


ನನಗೆ ಅರ್ಥವಾದ ವಿಷಯ ಏನು ಎಂದರೆ, ನೀವೆಂದಿಗೂ 100% ಸಿದ್ಧರಿರಲು ಸಾಧ್ಯವೇ ಇಲ್ಲ. ಇದು ನನಗೆ ಭಯ ಹುಟ್ಟಿಸಿತು. ಏಕೆಂದರೆ ನನಗೆ ಒಂದು ವಿಷಯದಲ್ಲಿ 100% ವಿಶ್ವಾಸ ಇದ್ದರೆ ಮಾತ್ರ ಅದರಲ್ಲಿ ಸಫಲಳಾಗುತ್ತೀನಿ ಎಂಬ ನಂಬಿಕೆ. ಆದರೆ, ತಾಯ್ತನದ ವಿಶೇಷ ಎಂದರೆ, ನೀವು 100% ಸಿದ್ಧರಿಲ್ಲದಿದ್ದರೂ, ಅನುಭವಗಳಲ್ಲೇ ಕಲಿಕೆ ಆಗುತ್ತದೆ. ನೀವು ನಿಮ್ಮ ತಾಯ್ತನಕ್ಕೆ ಮತ್ತು ನಿಮ್ಮ ನಿರ್ಧಾರಗಳಿಗೆ ಬದ್ಧರಾಗಿರಬೇಕು ಅಷ್ಟೇ.


೨. ತುಂಬಾ ಖರ್ಚುಗಳು ಉಂಟಾಗುತ್ತವೆ


ಒಂದು ವೇಳೆ ನೀವು ಆಗರ್ಭ ಶ್ರೀಮಂತರಾಗಿದ್ದರೆ, ಇದು ನಿಮಗೆ ಅನ್ವಯಿಸುವುದಿಲ್ಲ. ಆದರೆ ನೀವು ತಿಂಗಳ ಸಂಬಳಕ್ಕೆ ದುಡಿಯುವ ಮಿಡಲ್ ಕ್ಲಾಸ್ ಫ್ಯಾಮಿಲಿ ಆಗಿದ್ದರೆ, ದುಡ್ಡಿನ ಸಮಸ್ಯೆ ಎದುರಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಹೊಸ ಸದಸ್ಯನೊಂದಿಗೆ, ಹೊಸ ಖರ್ಚುಗಳು ನಿಮ್ಮ ತಲೆಗೆ ಬರಲಿವೆ.


೩. ನೀವು ಮುಂಚೆ ತಲೆ ಕೆಡಿಸಿಕೊಳ್ಳುತ್ತಿದ್ದ ವಿಷಯಗಳಿಗೆ ಇವಾಗ ತಲೆ ಕೆಡಿಸಿಕೊಳ್ಳುವುದಿಲ್ಲ


ಚೆನ್ನಾಗಿ ಡ್ರೆಸ್ ಮಾಡಿಕೊಳ್ಳುವುದು, ಶಾಪಿಂಗ್, ಎಕ್ಸಿಬಿಷನ್ ಎಂದು ಹೊರಗಡೆ ಸುತ್ತಾಡಿಕೊಂಡು ಬರುವುದು ಮುಂಚೆ ನಿಮಗೆ ಅವಶ್ಯಕ ಎನಿಸುತಿತ್ತು. ಆದರೆ, ಮಗುವಾದ ಮೇಲೆ ನಿಮ್ಮ ಮಗುವಿನ ಕಣ್ಣಿನಲ್ಲಿ ಕಣ್ಣಿಟ್ಟು ಒಂದುಸಲ ನೋಡಿದ ಮೇಲೆ, ಇವುಗಳ್ಯಾವುದೂ ಬೇಡ ಎಂದು ನಿಮಗೆ ಅನಿಸುತ್ತದೆ. ಆಕೆ ಎಷ್ಟು ಹಾಲು ಕುಡಿದಳು, ಎಷ್ಟು ಹೊತ್ತು ನಿದ್ದೆ ಮಾಡಿದಳು ಎಂಬುದರಲ್ಲೇ ನೀವು ಸಮಯ ಕಳೆಯುತ್ತೀರಿ.


೪. ನಿಮ್ಮ ಸಂಬಂಧಗಳು ಮುಂಚಿನಂತೆ ಇರುವುದಿಲ್ಲ


ಇದು ನೀವು ನಿಮ್ಮ ಯಾವುದೇ ವಯಸ್ಸಿನಲ್ಲಿ ಮಗು ಮಾಡಿಕೊಂಡರೂ ನಿಜ. ಮಗುವಾದ ಮೇಲೆ ನಿಮ್ಮ ಸಂಬಂಧಗಳು ಬದಲಾಗುತ್ತವೆ. ಆದರೆ ನೀವಿನ್ನೂ ನಿಮ್ಮ 20ರ ವಯಸ್ಸಿನಲ್ಲಿ ಇದ್ದರೆ, ನಿಮ್ಮ ಹಲವಾರು ಸ್ನೇಹಿತರು, ಸ್ನೇಹಿತೆಯರು ಇನ್ನೂ ನಿಮ್ಮ ಸಂಪರ್ಕದಲ್ಲಿ ಇರುತ್ತಾರೆ. ಅವರನ್ನ ಮುಂಚಿನಂತೆ ಭೇಟಿ ಮಾಡಲು ಆಗಲಿಲ್ಲ ಎಂದರೂ, ಅವಾಗವಾಗ ನೀವು ಭೇಟಿ ಮಾಡಬಹುದು.


೫. ಕೆಲವೊಮ್ಮೆ ನೀವು ನಿಮ್ಮ ಹಳೆಯ ಜೀವನವನ್ನ ಮಿಸ್ ಮಾಡಿಕೊಳ್ಳುತ್ತೀರಿ


ಹೌದು, ನನ್ನ ಆದ್ಯತೆಗಳು ಬದಲಾದವು. ಈ ಬದಲಾವಣೆ ಬಗ್ಗೆ ನನಗೆ ಬೇಸರವಿರಲಿಲ್ಲ. ನಾನು ಅಷ್ಟು ಚಿಕ್ಕ ವಯಸ್ಸಿಗೆ ತಾಯಿ ಆಗಿದ್ದರ ಬಗ್ಗೆಯೂ ನನಗೆ ಬೇಸರವಿರಲಿಲ್ಲ. ಆದರೆ, ನಾನು ಕೆಲವೊಮ್ಮೆ ನನ್ನ ಹಳೆಯ ಜೀವನವನ್ನ ಮಿಸ್ ಮಾಡಿಕೊಳ್ಳುವುದಂತೂ ಸುಳ್ಳಲ್ಲ. ಆದರೆ ಅದರಲ್ಲಿ ತಪ್ಪೇನಿಲ್ಲ. ನೀವು ಹಳೆಯದನ್ನ ನೆನಪಿಸಿಕೊಳ್ಳುತ್ತೀರಾ ಎಂದ ಮಾತ್ರಕ್ಕೆ ಈಗಿನ ಸಮಯ ಕೆಟ್ಟದಾಗಿದೆ ಎಂದರ್ಥವಲ್ಲ. ಇದರ ಅರ್ಥ ನೀವು ಕೆಲವೊಂದು ವಿಷಯಗಳು ಬದಲಾಗಿರುವುದನ್ನ ಅರ್ಥೈಸಿಕೊಂಡಿದ್ದೀರಾ ಎಂದು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon