Link copied!
Sign in / Sign up
93
Shares

ಇನ್ನೂ ಹುಟ್ಟೇ ಇರದ ಈ ಮಗು ತಾಯಿಗೊಂದು ಪತ್ರ ಬರೆದಿದೆ !

ಪ್ರೀತಿಯ ಅಮ್ಮ,

ನನಗೆ ಗೊತ್ತು ನಾವು ಇನ್ನು ಅಧಿಕೃತವಾಗಿ ಒಬ್ಬರನ್ನೊಬ್ಬರು ಭೇಟಿ ಮಾಡಿಲ್ಲ, ಆದರೆ ನಾನು ನಿನ್ನ ಒಂದು ಭಾಗ. ಮೊದಲನೆಯದಾಗಿ, ನಿನ್ನೊಳಗೆ ನಾನಿರಲು ನಾನು ತುಂಬಾ ಅದೃಷ್ಟ ಮಾಡಿದ್ದೆ. ನಾನು ನಿನ್ನೊಳಗೆ ಇರುವೆ, ಅಮ್ಮ!! ಇಲ್ಲಿ ತುಂಬಾ ಕತ್ತಲಿದೆ, ಆದರೆ ನನಗೆ ಬೆಚ್ಚಗೆ ತುಂಬಾ ಆರಾಮದಾಯಕವಾಗಿದೆ. ನಿನ್ನ ತೋಳುಗಳಿಂದ ನನ್ನನ್ನು ಅಪ್ಪಿಕೊಳ್ಳುವ ಸುಂದರ ಕ್ಷಣಕ್ಕೆ ನಾನು ಕಾಯುತ್ತಿದ್ದೇನೆ.

ನಿನಗೆ ಗೊತ್ತಾ, ರಕ್ತನಾಳಗಳ ಮೂಲಕ ನಮ್ಮಿಬ್ಬರಲ್ಲೂ ಒಂದೇ ರಕ್ತ ಹರಿಯುತ್ತಿದೆ, ಮತ್ತು ನಾವಿಬ್ಬರು ಮಾಂಸ ಖಂಡಗಳನ್ನು ಹಂಚಿಕ್ಕೊಳ್ಳುತ್ತಿದ್ದೇವೆ, ಇದು ನನ್ನನ್ನು ನಿನ್ನ ಭಾಗವಾಗಿಸಿದೆ. ನೀನು ತಿಂದ ಆಹಾರವನ್ನೇ, ನಾನು ತಿನ್ನುವುದು, ಏಕೆಂದರೆ, ನಿನ್ನೊಂದಿಗೆ ನಾನು ಹೊಕ್ಕುಳ(ಕರುಳ) ಬಳ್ಳಿಯನ್ನು ಹಂಚಿಕೊಂಡಿರುವೆ ಎಂದು ನನಗೆ ತಿಳಿದಿದೆ. ನೀವು ಸೇವಿಸುತ್ತಿರುವ ಪೌಷ್ಟಿಕಾಂಶವುಳ್ಳ ರುಚಿಕರ ಆಹಾರದಿಂದ ನಾನು ಇಲ್ಲಿ ಚೆನ್ನಾಗಿ ಪೋಷಣೆ ಪಡೆಯುತ್ತಿದ್ದೇನೆ.

ಅಮ್ಮ ಏನು ಗೊತ್ತಾ?... ನಿನ್ನ ಧ್ವನಿಯನ್ನು ನಾನು ಗುರುತಿಸಬಲ್ಲೆನು, ಮತ್ತು ನನಗೆ ಗೊತ್ತು ನೀವು ನನ್ನ ಜೊತೆ ಮಾತನಾಡುವಿರಿ ಮತ್ತು ನನಗಾಗಿ ಸುಂದರ ಒಳ್ಳೆಯ ಕಥೆ ಕವನಗಳನ್ನು ಓದುವಿರಿ ಎಂದು. ನಿಮ್ಮ ಧ್ವನಿಯನ್ನು ನಾನು ಕೇಳಬಲ್ಲೆನು, ನೀವು ಪ್ರತಿ ಬಾರಿಯೂ ನಿಮ್ಮ ಹೊಟ್ಟೆಯನ್ನು ಮುಟ್ಟಿಕೊಂಡಾಗ, ನನ್ನ ಹೃದಯ ಮಿಡಿಯುತ್ತದೆ, ಮತ್ತು ನಿಮ್ಮನ್ನು ನೋಡಲು ನನ್ನ ಮನಸ್ಸು ಹಾತೊರೆಯುತ್ತದೆ. ನೀವು ನಿಮ್ಮ ಹೊಟ್ಟೆಯನ್ನು ಮುಟ್ಟಿಕೊಳ್ಳುವ ರೀತಿಯಿಂದ ನನಗೆ ತಿಳಿಯಿತು ನೀವು ಆಗಲೇ ನನ್ನನ್ನು ಪ್ರೀತಿಯಿಂದ ಜೋಪಾನಮಾಡಲು ಸಿದ್ಧರಾಗಿರುವಿರಿ ಎಂದು.

ನಿಮ್ಮ ಬಗ್ಗೆ ಒಂದು ಉತ್ತಮವಾದ ಭಾಗವೆಂದರೆ, ನೀವು ನಗುವುದು. ಆದರೆ ಇದನ್ನು ನೀವು ಹೆಚ್ಚು ಮಾಡುವುದಿಲ್ಲ, ಇದಕ್ಕೆ ಏನು ಕಾರಣ ಎಂಬುದು ನನಗೆ ತಿಳಿದಿಲ್ಲ, ಆದರೆ ನೀವು ನಕ್ಕಾಗ, ನನಗೆ  ಅದ್ಭುತವಾದಂತೆ ಅನಿಸುತ್ತದೆ.ನಿಮ್ಮ ಹೊಟ್ಟೆಯೊಳಗೆ ಕುಲುಕುವಂತಹ ಅನುಭವವಾದ ದಿನಗಳನ್ನು ನೆನಪಿಸಿಕೊಳ್ಳಿ, ಅದು ನನಗೆ ಬಿಕ್ಕಳಿಕೆ ಬಂದ ಸಮಯ. ನನಗೆ ಖುಷಿಯಾದಾಗ, ಕೈ ಕಾಲುಗಳನ್ನು ಆಡಿಸಿದಾಗ, ಬಿಕ್ಕಳಿಸಿದಾಗ ನಿಮಗೆ ಆಗುವ ಅನುಭವವನ್ನು ಆನಂದಿಸಿ.

ನನಗೆ ಸರಿಯಾಗಿ ಎಲ್ಲಾ ಕೇಳಿಸದಿದ್ದರೂ, ನನಗೆ ತಿಳಿದಿರುವ ಪ್ರಕಾರ, ಹೊರಗಿನ ಪ್ರಪಂಚ ಸುಂದರವಾಗಿದೆ. ನಿಮ್ಮ ಬಗ್ಗೆ ಎಲ್ಲರು ಮಾತನಾಡುವುದು, ಅವರು ನಿಮ್ಮನ್ನು ನೋಡಿಕೊಳ್ಳುವ ರೀತಿ, ನನ್ನನ್ನು ನಿಜಕ್ಕೂ ಕುತೂಹಲಗೊಳ್ಳುವಂತೆ ಮಾಡುತ್ತದೆ, ಮತ್ತು ನಮ್ಮ ಜೀವನದ ಪಯಣದಲ್ಲಿ ನಮಗಾಗಿ ಇರುವವರನ್ನು ಆದಷ್ಟು ಬೇಗ ನೋಡಬೇಕು ಎಂದು ಅನಿಸುತ್ತದೆ.

ನನಗೆ ಗೊತ್ತು ನನ್ನ ಬಗ್ಗೆ ನಿನಗೆ ಎಷ್ಟು ಕಾಳಜಿ ಇದೆ ಎಂದು, ಹೊರಗಿನ ಪ್ರಪಂಚಕ್ಕೆ ಸಾಮಾನ್ಯವಾಗಿ ಕಂಡರು ನಿಮ್ಮ ಒಳಗೆ ನನ್ನ ಬಗ್ಗೆ ಬೆಟ್ಟದಷ್ಟು ಕಾಳಜಿಯ ಒತ್ತಡವಿದೆ ಎಂದು.

ನೀವು ಈಗ ಒಬ್ಬ ನಾವಿಕರಾಗಿರುವಿರಿ, ನಿಮ್ಮ ದಾರಿಗೆ ಬರುವ ಎಲ್ಲಾ ಅಲೆಗಳನ್ನು ಎದುರಿಸಿ ಮುಂದೆ ಸಾಗುವಿರಿ. ಆರೋಗ್ಯದ ತೊಂದರೆ ಇರಬಹುದು, ಸಾಮಾನ್ಯ ತೊಂದರೆ ಇರಬಹುದು ಎಲ್ಲವನ್ನು ಧೈರ್ಯದಿಂದ ಎದುರಿಸುವಿರಿ. ನೀವು ತುಂಬಾ ಧೈರ್ಯಶಾಲಿ ಮತ್ತು ನಿಸ್ವಾರ್ಥರು ನಿಮ್ಮ ಸಂಪೂರ್ಣ ಜೀವನವನ್ನು ನನಗಾಗಿ ಮುಡಿಪಾಗಿಟ್ಟಿರುವಿರಿ.

ಆದರೆ ನಾನು ನಿಮಗೆ ಪ್ರಮಾಣ ಮಾಡುತ್ತೇನೆ, ನಾನು ಇಂದಿಗೂ ನಿಮಗಾಗಿ ನಿಮ್ಮ ಜೊತೆಯಲ್ಲಿರುವೆನೆಂದು. ನಾನು ಯಾವುದೇ ಕ್ಷಣದಲ್ಲಿ, ಯಾವುದೇ ವಿಷಯಕ್ಕಾಗಿ ಸದಾ ನಿಮ್ಮ ಜೊತೆಗೆ ಇರುವೆ ಎಂದು ನಾನು ಪ್ರಮಾಣ ಮಾಡುತ್ತೇನೆ.

ನಿಮ್ಮ ಮುದ್ದು ಕಂದ

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon