Link copied!
Sign in / Sign up
2
Shares

ಮಾಲೂರಿನಲ್ಲಿ ಇಂಜೆಕ್ಷನ್ ಮಾಡಿ ಸೂಜಿಯನ್ನು ಮಗುವಿನಲ್ಲೇ 3 ದಿನಗಳ ಕಾಲ ಮರೆತ ವೈದ್ಯರು!

ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಕೆಲವೊಮ್ಮೆ ಶಸ್ತ್ರಚಿಕಿತ್ಸೆಗೆ ಬಳಸಿದ ಉಪಕರಣಗಳಾದ ಸೂಜಿ, ಕತ್ತರಿ ಅಥವಾ ಚಾಕುವನ್ನು ರೋಗಿಯ ದೇಹದಲ್ಲೇ ಮರೆತಿರುವಂತಹ ಪ್ರಕರಣಗಳನ್ನ ಕೇಳಿರುತ್ತೇವೆ. ಆದರೆ ಮಾಲೂರಿನಲ್ಲಿ ಇಂತದ್ದೇ ಒಂದು ಪ್ರಕರಣದಲ್ಲಿ ಕೇವಲ ಹತ್ತೇ ಹತ್ತು ದಿನಗಳ ನವಜಾತ ಗಂಡು ಶಿಶುವೊಂದು ತನ್ನ ಪ್ರಾಣ ಬಿಟ್ಟಿದೆ. ಪೊಲೀಸರು ವೈದ್ಯರ ನಿರ್ಲಕ್ಷವೇ ತಮ್ಮ ಮಗುವಿನ ಸಾವಿಗೆ ಕಾರಣವಾಯಿತು ಎಂದು ಪೊಲೀಸರಿಗೆ ದೂರು ಕೂಡ ನೀಡಿದ್ದಾರೆ. ಆದರೆ ಅಲ್ಲಿ ಆಗಿದ್ದೇನು?

ಲಕ್ಕೂರು ಗ್ರಾಮದ ನಿವಾಸಿಗಳಾದ ಪ್ರವೀಣ್ ಮತ್ತು ಶೈಲಾ ಅವರ ಮಗು ಇದು. ಶೈಲಾಗೆ ಏಪ್ರಿಲ್ 11ರ ರಾತ್ರಿಯಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದೆ. ನಂತರ ಆಕೆಯನ್ನು ಪತಿ ಪ್ರವೀಣ್ ಮಾಲೂರಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಅಲ್ಲಿ ಆಕೆಗೆ ಗಂಡು ಮಗು ಜನಿಸಿತು.ಏಪ್ರಿಲ್ 13ಕ್ಕೆ  ಮನೆಗೆ ವಾಪಸ್ ಆಗಿದ್ದಾರೆ. ಆದರೆ ಮನೆಗೆ ವಾಪಸ್ ಆದ ಒಂದೇ ದಿನಕ್ಕೆ ಮಗುವಿಗೆ ಜ್ವರ ಕಾಣಿಸಿಕೊಂಡಿದೆ. ಆಗ ಪುನಃ ಮಗುವನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ, ಆದರೆ ಅವರು ಹೆಚ್ಚಿನ ಚಿಕಿತ್ಸೆಗೆ ಕೋಲಾರದ SNR ಆಸ್ಪತ್ರೆಗೆ ಕರೆದೊಯ್ಯಲು ಹೇಳಿದ್ದಾರೆ.

ಪೋಷಕರು ಹಾಗೆಯೇ ಮಾಡಿದ್ದಾರೆ. ಆ ಆಸ್ಪತ್ರೆಯಲ್ಲಿ ವೈದ್ಯರು ಮಗುವಿನ ಜ್ವರವನ್ನು ನಿಯಂತ್ರಣಕ್ಕೆ ತರಲೆಂದು ತೀವ್ರ ನಿಗಾ ಘಟಕದಲ್ಲಿ ಇರಿಸಿದ್ದಾರೆ. ಹೀಗೆ ಎರಡು ದಿನಗಳ ನಂತರ, ಅಂದರೆ ಏಪ್ರಿಲ್ 17ರಂದು ಆಸ್ಪತ್ರೆ ಸಿಬ್ಬಂದಿಯೊಬ್ಬರು ಮಗುವಿನ ಮೈ ಒರೆಸುವಾಗ, ಮಗುವಿನ ಸೊಂಟದಲ್ಲಿ ಸೂಜಿ ಹಾಗೆಯೇ ಉಳಿದುಕೊಂಡಿರುವುದನ್ನು ನೋಡಿದ್ದಾರೆ ಮತ್ತು ವೈದ್ಯರಿಗೆ ವಿಷಯ ತಲುಪಿಸಿದ್ದಾರೆ. ನಂತರ ವೈದ್ಯರು ಆ ಸೂಜಿಯನ್ನು ಹೊರತೆಗೆದರು, ಆಗ ಜ್ವರ ಹತೋಟಿಗೆ ಬಂದಿದೆ. ನಂತರ ಆಸ್ಪತ್ರೆಯವರು ಮಗುವನ್ನ ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸಿ ಕೊಟ್ಟಿದ್ದಾರೆ. ಆದರೆ ಮನೆಗೆ ಕರೆತಂದ ಮೇಲೆ ಮಧ್ಯರಾತ್ರಿ ಮಗುವು ಪ್ರಾಣ ಬಿಟ್ಟಿದೆ.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon